ಹುಬ್ಬಳ್ಳಿ: ಕರ್ನಾಟಕದ ವಿವಿಧ ಭಾಗಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿನ ಪೈಕಿ ಹುಬ್ಬಳ್ಳಿ ರೈಲು ಸೇವೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನಿಲುಗಡೆ, ಸಮಯ ಸೇರಿದಂತೆ ವೇಳಾಪಟ್ಟಿ ಬದಲಾಗಿದೆ. ಪ್ರಮುಖವಾಗಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿನ ಸಮಯ, ನಿಲುಗಡೆಯಲ್ಲಿ ಕೆಲ ಬದಲಾವಣೆಯಾಗಿದೆ. ಬದಲಾದ ಸಮಯ ಇಲ್ಲಿದೆ ಹುಬ್ಬಳ್ಳಿಯಿಂದ ಪುಣೆ ವಂದೇ ಭಾರತ್ ಹುಬ್ಬಳ್ಳಿಯಿಂದ ಹೊರಡುವ ಸಮಯ ಬೆಳಗ್ಗೆ 5 ಗಂಟೆ ಪುಣೆ ತಲುಪುವ ಸಮಯ ಮಧ್ಯಾಹ್ನ 1.30, ಪುಣೆಯಿಂದ ಹುಬ್ಬಳ್ಳಿ …
Read More »ಪೊಲೀಸ್ ಇಲಾಖೆಯಿಂದ ಹಾಗೂ ಕಾಂಗ್ರೆಸ್ ಮುಖಂಡರಿಂದ ಜಿ.ಪರಮೇಶ್ವರಗೆ ಅದ್ಧೂರಿ ಸ್ವಾಗತ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನಕ್ಕೆ ಆಗಮಿಸುತ್ತಿದ್ದಂತೆಯೇ ಪೊಲೀಸ್ ಇಲಾಖೆಯಿಂದ ಹಾಗೂ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು. ಇನ್ನೂ ಹುಬ್ಬಳ್ಳಿಗೆ ಆಗಮಿಸಿದ ಗೃಹ ಸಚಿವರು, ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ್ದು, ಇದೇ ವೇಳೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಗಾಡ್ ಆಫ್ ಹಾನರ್ ಮೂಲಕ ಗೃಹ ಸಚಿವರಿಗೆ ವಿಶೇಷ ಗೌರವ ನೀಡಲಾಯಿತು. ಬೆಳಿಗ್ಗೆ 10 ಗಂಟೆಗೆ ಧಾರವಾಡದ ರಾಷ್ಟ್ರೀಯ …
Read More »ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದ ಜಿ.ಪರಮೇಶ್ವರ್
ಹುಬ್ಬಳ್ಳಿ: ನಮಗೂ ರಾಜಕಾರಣ ಮಾಡೋಕೆ ಬರುತ್ತೆ. ಇನ್ನು ಮುಂದೆ ನಾವೂ ರಾಜಕಾರಣ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದರು. ಮುಡಾ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪದೇ ಪದೇ ರಾಜಕಾರಣ ಮಾಡುತ್ತಿವೆ. ಪ್ರಕರಣ ದಾಖಲಾಗಿದೆ, ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ನಿತ್ಯ ರಾಜಕಾರಣ ಮಾಡೋದು ಸರಿಯಲ್ಲ …
Read More »ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ : ಜೋಶಿ
ಹುಬ್ಬಳ್ಳಿ: ಗೃಹ ಮಂತ್ರಿ ಜಿ.ಪರಮೇಶ್ವರ್ ಬೇಜವಬ್ದಾರಿಯಿಂದ ಹೇಳಿಕೆ ಕೊಡುವುದು ಸರಿಯಲ್ಲ. ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದಿದ್ದರು. ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ? ಎಲ್ಲಲ್ಲಿ ಬಾಂಬ್ ಬ್ಲಾಸ್ಟ್ಗಳಾಗಿವೆ ಎಂಬುದನ್ನು ತಿಳಿದು ಮಾತನಾಡಲಿ. ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹ ಮಂತ್ರಿಯಾಗಿ ಜೆ.ಪರಮೇಶ್ವರ …
Read More »ಬಿಜೆಪಿಯವರೇ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ : ಜಿ.ಪರಮೇಶ್ವರ್
ಹುಬ್ಬಳ್ಳಿ: ಜಾತಿ ಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಯಾರ ಮೇಲೂ ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರೇ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ ಪ್ರೈ ಓವರ್ ಅವಘಡದಲ್ಲಿ ಪೊಲೀಸ್ ಅಧಿಕಾರಿ ಸಾವಿನ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಇಂದು ಮಾಹಿತಿ ಪಡೆಯುತ್ತೇನೆ. ಪ್ರತಿ ಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ಕೊಡಬೇಕು. ಅದನ್ನು ಮೀರಿ …
Read More »ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಕಾಲದಲ್ಲಿ ವೇತನ ನೀಡುವುದು, ಸೇವಾ ಹಿರಿತನ ಭತ್ಯೆ ನೀಡುವುದು, ಕಾಯಂ ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳುವುದು, ಕನಿಷ್ಠ ವೇತನ, ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್ಐ, ನಿವೃತ್ತಿ ಪಿಂಚಣಿ, ಹೆರಿಗೆ ರಜೆ ಸೌಲಭ್ಯ ನೀಡುವುದು, ಎಪ್ರೀಲ್, ಮೇ ತಿಂಗಳ ಬಾಕಿ ಗೌರವ ಧನ ಪಾವತಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ …
Read More »ಮತ್ತೊಂದು ಸಾಧನೆಗೈದ ಕೆಎಮ್ ಸಿ ವೈದ್ಯರು
ಹುಬ್ಬಳ್ಳಿ: ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಎದೆಯ ಎಡಭಾಗದ ಒಳಗೆ ಪೈಪ್ ರಾಡ್ ಒಳಗೆ ಹೊಕ್ಕಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ, ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದವನನ್ನು ಕೆಎಂಸಿ ಆಸ್ಪತ್ರೆ ವೈದ್ಯರು ಜೀವನ ಉಳಿಸಿದ್ದಾರೆ. ಆ ಯುವಕನ ಶಸ್ತ್ರಚಿಕಿತ್ಸೆಯ ದೃಶ್ಯ ನೋಡಿದ್ರೆ ಮೈ ಜುಂ ಎನಿಸುತ್ತೆ. ಇತ ಶಿರಸಿ ತಾಲೂಕಿನ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ ಎಂಬ ಯುವಕನೇ ಮರುಜನ್ಮ ಪಡೆದ ಯುವಕ. ಅದೊಂದು ಭಯಾನಕ ಅಪಘಾತ. ಬೇರೆ ಅಂತಹ …
Read More »ವಾರ್ಡ್ ನಂ. 50 ರಲ್ಲಿ ಮನೆ ಒಳಗೆ ನುಗ್ಗಿ ಚರಂಡಿ ನೀರು
ಹುಬ್ಬಳ್ಳಿ: ಚರಂಡಿ ನೀರು ಏಕಾಏಕಿಯಾಗಿ ಮನೆ ಒಳಗೆ ನುಗ್ಗಿದ್ದು, ಜನಜೀವನಕ್ಕೆ ಅಸ್ತವ್ಯಸ್ತವಾದ ಘಟನೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 50 ರಲ್ಲಿ ಬರುವ ಕಾರವಾರ ರೋಡ್ ಮಂಗಳಾ ಓಣಿಯಲ್ಲಿ ನಿನ್ನೆ ರಾತ್ರಿವೇಳೆ ನಡೆದಿದೆ. ಮಳೆ ಇಲ್ಲದಿದ್ದರು ಕೂಡ ಚರಂಡಿ ಬ್ಲಾಕ್ ಆಗಿ ಚರಂಡಿ ನೀರು ಮನೆ ಒಳಗೆ ನುಗ್ಗಿದೆ. ಶೌಚಾಲಯದ ಒಳಗಿಂದ ಚರಂಡಿ ನೀರು ಮನೆ ಒಳಗೆ ನುಗ್ಗುತ್ತಿದೆ. ಈ ಸಮಸ್ಯೆ ಬಗ್ಗೆ ಅಲ್ಲಿನ ಕಾರ್ಪೊರೇಟರ್, ಪಾಲಿಕೆಗೆ …
Read More »ಪೊಲೀಸ್ ಪೇದೆ ಮೇಲೆ ಹಲ್ಯೆ; ಅರೆಸ್ಟ್ ಮಾಡಿದ ಪೊಲೀಸರು
ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದ ಹಿನ್ನೆಲೆಯಲ್ಲಿ, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಮ್ಸ್ ನ ಹೊರ ರೋಗಿಗಳ ಆಸ್ಪತ್ರೆ ಬಳಿ ಶೇಂಗಾ ಮಾರುತಿದ್ದ ವ್ಯಕ್ತಿಯ ಜೊತೆ ಯುವಕನೊಬ್ಬ ಏರು ದ್ವನಿಯಲ್ಲಿ ವಾಗ್ವಾದ ಮಾಡುತಿದ್ದ. ಈ ಸಂದರ್ಭದಲ್ಲಿ ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಆತನನ್ನ ಪ್ರಶ್ನೆ ಮಾಡಿದಕ್ಕೆ ಅವರ …
Read More »ಧಾನ್ಯದ ಚೀಲಗಳು ಕಳುವು ಆರೋಪ : ಐಜಿಪಿ ವಿಕಾಸ್ಕುಮಾರ್ ವಿಕಾಸ್ ಪ್ರತಿಕ್ರಿಯೆ
ಧಾರವಾಡ: ಅಣ್ಣಿಗೇರಿ ಎಪಿಎಂಸಿಯಲ್ಲಿ ದಾಸ್ತಾನು ಮಾಡಲಾಗಿದ್ದ ಧಾನ್ಯದ ಚೀಲಗಳು ಕಳುವು ಆಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್ಕುಮಾರ್ ವಿಕಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಣ್ಣಿಗೇರಿ ಎಪಿಎಂಸಿ ಗೋದಾಮಿನಲ್ಲಿ ರೈತರು ಬೆಳೆದ ಕಡಲೆ-ಹೆಸರು ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 4141 ಚೀಲ ಕಡಲೆ ಮತ್ತು ಹೆಸರು ನಾಪತ್ತೆಯಾಗಿದ್ದವು. ಈ ಸಂಬಂಧ ಮೇಲಾಧಿಕಾರಿಗಳು ಅಣ್ಣಿಗೇರಿ ಠಾಣೆಯಲ್ಲಿ ದೂರು ಸಹ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





