Breaking News

Shaikh BigTv

ಈದ್ಗಾ ಮೈದಾನದಲ್ಲಿ ವಿಘ್ನ ವಿನಾಯಕನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ

ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ದಾ) ವಿಘ್ನ ವಿನಾಯಕನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ನಡೆದಿದೆ. ಪೊಲೀಸ್ ಬಿಗಿ ಭದ್ರತೆ ಕೂಡ ನಿಯೋಜಿಸಲಾಗಿದೆ. ರಾಮನ ಅವತಾರದಲ್ಲಿ ಗಣಪತಿ ಮೂರ್ತಿ ತಯಾರಾಗಿದೆ. ರಾಣಿ ಚನ್ನಮ್ಮ ಮಹಾಮಂಡಳಿ ಮೈದಾನದಲ್ಲಿ ಫೆಂಡಾಲ್ ಹಾಕಿ ಸಿದ್ಧತೆ ಕೂಡ ಮಾಡಿದೆ. ಮೂರು ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲು ಪಾಲಿಕೆ ಅವಕಾಶ ನೀಡಿದೆ. ವಿಜೃಂಭಣೆಯಿಂದ ಆಚರಿಸಲು ಮಹಾಮಂಡಳಿ ಕೂಡ ಭರ್ಜರಿ ತಯಾರಿ ನಡೆಸಿದೆ.

Read More »

ಗಣೇಶ ಹಬ್ಬದ ಶುಭಾಶಯ ತಿಳಿಸಿದ ಕೇಂದ್ರ ಸಚಿವ

ಹುಬ್ಬಳ್ಳಿ: ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಶ್ವೇಶ್ವರ ಎಲ್ಲರಿಗೂ ಆಯುಷ್ಯ, ಆರೋಗ್ಯ, ಸುಖ, ನೆಮ್ಮದಿ ನೀಡಲೆಂದು ಪ್ರಾರ್ಥಿಸುತ್ತೇನೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜನತೆಗೆ ಗೌರಿ ಗಣೇಶ ಹಬ್ಬದ ಶುಭ ಹಾರೈಸಿದ್ದಾರೆ.

Read More »

ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ಪೊಲೀಸ್ ಕಮಿಷನ‌ರ್

ಹುಬ್ಬಳ್ಳಿ: ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ಪೊಲೀಸ್ ಕಮಿಷನ‌ರ್ ಎನ್. ಶಶಿಕುಮಾ‌ರ್, ಹುಬ್ಬಳ್ಳಿ – ಧಾರವಾಡ ಅವಳಿನಗರದ ಒಂದು ಸಾವಿರ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪರವಾನಿಗೆ ನೀಡಲಾಗಿದೆ. ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಶಾಂತಿ – ಸುವ್ಯವಸ್ಥೆಗೆ ಧಕ್ಕೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು. ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗಣೇಶೋತ್ಸವಕ್ಕೆ …

Read More »

ಗಣೇಶ, ಈದಮಿಲಾದ್ ಹಬ್ಬದ ನಿಮಿತ್ತ ಆದೇಶ ಹೊರಡಿಸಿದ ಧಾರವಾಡ ಜಿಲ್ಲಾಧಿಕಾರಿ

ಧಾರವಾಡ : ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ) ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಗಣೇಶ ಹಬ್ಬ ಮತ್ತು ಈದ್-ಮಿಲಾದ್ ಹಬ್ಬದ ಮುನ್ನೆಚ್ಚರಿಕೆ ಕ್ರಮಗಳು, ಧಾರವಾಡ ಜಿಲ್ಲೆಯಾದ್ಯಂತ ಜಿಲ್ಲಾ ದಂಡಾಧಿಕಾರಿಗಳಾದ ದಿವ್ಯ ಪ್ರಭು (ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ) ಈ ಆದೇಶ ನೀಡಿದವರು, ಧಾರವಾಡ ಜಿಲ್ಲೆಯಾದ್ಯಂತ (ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ) ಸೆ. 10 ರಂದು ರಾತ್ರಿ 11.59 ರಿಂದ. …

Read More »

ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದೆ;ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್. 11ರವರೆಗೆ ಅವಕಾಶ

ಧಾರವಾಡ : 2024-25 ನೈಸರ್ಗಿಕ ವಿಕೋಪಗಳ ಪ್ರವಾಹದಿಂದಾಗಿ ಧಾರವಾಡ ತಾಲೂಕಿನಲ್ಲಿ ಒಟ್ಟು 1,410.95 ಹೆಕ್ಟೇರ್ ಕೃಷಿ ವಲಯ, ಅಳ್ನಾವರ ತಾಲೂಕಿನಲ್ಲಿ ಒಟ್ಟು 1,218.73 ಹೆಕ್ಟೇರ್ ಕೃಷಿ ಕ್ಷೇತ್ರ ಮತ್ತು ಕಲಗಿಯಲ್ಲಿ ಒಟ್ಟು 6,02 ಕಲಗಿಯಲ್ಲಿ 20 ಹೆಕ್ಟೇರ್ ಕೃಷಿ ವಲಯ. ತಾಲೂಕು , ಉಪವಿಭಾಗಾಧಿಕಾರಿಗಳ ಕಛೇರಿ, ತಹಸೀಲ್ದಾರ್ ಕಛೇರಿ, ಗ್ರಾಮ ಪಂಚಾಯತ್ ಮತ್ತು ರೈತ ಸಂಪರ್ಕ ಕೇಂದ್ರಗಳು ಮತ್ತು ಅಂತರ್ಜಾಲ (https://dharwad. Nic. ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ವಿಪತ್ತು …

Read More »

ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ ಜೋಶಿ ಅಧ್ಯಕ್ಷತೆಯಲ್ಲಿ 13ರಂದು ಎಸ್.ದಿಶಾ ಸಮಿತಿ ಸಭೆ

ಧಾರವಾಡ : ದಿಶಾ ಸಮಿತಿ ಅಧ್ಯಕ್ಷರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಧಾರವಾಡ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿ ಅವರನ್ನು ಸೆಪ್ಟೆಂಬರ್ 13, 2024 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ ಕೋರಿದ್ದಾರೆ. …

Read More »

ಪಜ್ರಾಪ್ರಭುತ್ವ ಎಲ್ಲರೂ ಸೇರಿ ಸಂಭ್ರಮಿಸೋಣ: ಸಚಿವ ಸಂತೋಷ ಲಾಡಲ

ಧಾರವಾಡ : ರಾಜ್ಯ ಸರಕಾರವು ಸೆಪ್ಟೆಂಬರ್ 15 ರ ಪ್ರಜಾಪ್ರಭುತ್ವದಿವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ಎಲ್ಲರೂ ಸೇರಿ ಸಂಭ್ರಮಿಸೋಣ. ಪ್ರತಿ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪ್ರಜಾಪ್ರಭುತ್ವದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು. ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ವಿವಿಧ ಸರ್ಕಾರೇತರ …

Read More »

ಶಿಕ್ಷಕ ಸಮೂಹ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ: ಸಚಿವ ಸಂತೋಷ ಲಾಡ್

ಧಾರವಾಡ : ಇಂದಿನ ಶೈಕ್ಷಣಿಕ ಪ್ರಗತಿ, ಗುಣಮಟ್ಟವನ್ನು ಪರಿಶೀಲಿಸಿದಾಗ, ಇಡೀ ಶಿಕ್ಷಕ ಸಮೂಹ ತಮ್ಮ ಆದರ್ಶತನ ಮತ್ತು ಕಾಯಕ ವೃತ್ತಿ ಮೌಲ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ. ರಾಜಕಾರಣಿಗಳ ಹಿಂಬಾಲಕರಾಗದೇ, ಅನಗತ್ಯ ತುಷ್ಟೀಕರಣ, ಓಲೈಕೆಗಳನ್ನು ಮಾಡದೇ, ಪೂಜ್ಯನೀಯ ಗುರು ಸ್ಥಾನದಲ್ಲಿರುವ ಶಿಕ್ಷಕರು ಬಸವಣ್ಣ, ಅಂಬೇಡ್ಕರ, ರಾಧಾಕೃಷ್ಣನ್ ಅವರು ಹೇಳಿದ ನೀತಿ ಮಾರ್ಗದಲ್ಲಿ ನಡೆದು ಶೈಕ್ಷಣಿಕ ಬದಲಾವಣೆ, ಆತ್ಮ ಸಂಸ್ಕಾರ ನೀಡುವ ಶಿಕ್ಷಣ ನೀಡುವಂತೆ ಆಗಬೇಕೆಂದು ಕಾರ್ಮಿಕ ಇಲಾಖೆ ಹಾಗೂ …

Read More »

ಜೈ ಭೀಮ್ ಬ್ರಿಗೇಡ್ ವತಿಯಿಂದ ಸಂವಿಧಾನ ಓದು ಅಭಿಯಾನ ಪುಸ್ತಕ ಯಶಸ್ವಿ

ಹುಬ್ಬಳ್ಳಿ: ಡಾ. ಬಿ ಆರ್ ಅಂಬೇಡ್ಕರ್ ಅವರ ರಚನೆ ಮಾಡಿರುವ ಭಾರತ ಸಂವಿಧಾನ ಓದು ಅಭಿಯಾನ ಪುಸ್ತಕ ಪೂರೈಸುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಾದ್ಯಂತ ಜೈ ಭೀಮ್ ಬ್ರಿಗೇಡ್‌ ಸಂಘಟನೆಯಿಂದ ಹಮ್ಮಿಕೊಂಡಿದ್ದು, ಈಗ ಸಂವಿಧಾನ ಓದು ಅಭಿಯಾನ ಯಶಸ್ವಿಗೊಂಡಿದೆ. ಜೈ ಭೀಮ್ ಬ್ರಿಗೇಡ್‌ ಸಂಘಟನೆಯ ಸಂಸ್ಥಾಪಕ ಬಿ. ಶಿವಕುಮಾ‌ರ್ ಅವರ ನೇತೃತ್ವದಲ್ಲಿ, ಸಂವಿಧಾನ ಓದು ಅಭಿಯಾನ ಪುಸ್ತಕಗಳನ್ನು ಸುಮಾರು ಮೂರು ವರ್ಷಗಳಿಂದ ನೂರಾರು ಪುಸ್ತಕಗಳನ್ನು ಪೂರೈಸುತ್ತ ಬಂದಿದ್ದಾರೆ.

Read More »

ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶಿಕ್ಷಕರ ದಿನ ಆಚರಣೆ

ಹುಬ್ಬಳ್ಳಿ: ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿಂದು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ (BEO) ಉಮೇಶ ಬೊಮ್ಮಕ್ಕನವರ, ಚುಳಕಿ, ಹೂಡಾ ಅಧ್ಯಕ್ಷರಾದ ಶಾಕಿರ ಸಣದಿ, ಹು-ಧಾ ಪೂಜಾ ಮಹಾಪೌರರಾದ ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯರಾದ ಎಂ ವೈ ನರಗುಂದ, ಬಿಜೆಪಿ ಮುಖಂಡರಾದ ಕಲಂದರ ಮುಲ್ಲಾ, ವೈ, ಎಚ್, ಬಣವಿ, ಶ್ರೀ …

Read More »