ಧಾರವಾಡ : ಸರಕಾರ ಅನುಷ್ಠಾನ ಮಾಡಿರುವ 5 ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು. ಹಳ್ಳಿಗಳಿಗೆ ಸರಿಯಾದ ಬಸ್ …
Read More »ಹುಬ್ಬಳ್ಳಿಯಲ್ಲಿ ಕಾಮುಕನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ
ಹುಬ್ಬಳ್ಳಿ: ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಎಂಬ ಆರೋಪದಡಿ, ಕಾಮುಕನೊಬ್ಬನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಡುಗಿಯರಿಗೆ ತನ್ನ ಮರ್ಮಾಂಗ ತೋರಿಸಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಗದಗ ರಸ್ತೆಯಲ್ಲಿ ಸಿಕ್ಕ ಸಿಕ್ಕ ಹುಡುಗಿಯರಿಗೆ ತನ್ನ ಮರ್ಮಾಂಗ ತೋರಿಸುತ್ತ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆಂದು ಆರೋಪಿಸಿ, ಆತನನ್ನು ಎಳೆದು ಹಿಗ್ಗಾಮುಗ್ಗ ಥಳಿಸಿ ಕೇಶ್ವಾಪುರ ಪೊಲೀಸ್ ಠಾಣೆಗೆ ಎಳೆದೊಯ್ದ ಘಟನೆ ನಡೆದಿದೆ.
Read More »ಅನಗತ್ಯ ಆರೋಪ : ಅರಣ್ಯಾಧಿಕಾರಿ ಅಮಾನತು
ಧಾರವಾಡ: ಅನಗತ್ಯ ಆರೋಪ ಮಾಡಿ ದೂರರ್ಜಿಯನ್ನು ಸಲ್ಲಿಸಿದ್ದ ಧಾರವಾಡದ ಸಾಮಾಜಿಕ ವಲಯ ಅರಣ್ಯಾಧಿಕಾರಿ (ಆರ್ಎಫ್ಓ) ಪ್ರಸನ್ನ ಸುಬೇದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶಕುಮಾರ ದೀಕ್ಷಿತ್ ಆದೇಶ ಹೊರಡಿಸಿದ್ದಾರೆ. ತಮ್ಮದೇ ಇಲಾಖೆಯ ತಮ್ಮದೇ ಕೆಡರ್ನ ಅಧಿಕಾರಿಗಳ ಮೇಲೆ ಮೂರನೇ ವ್ಯಕ್ತಿಯ ಹೆಸರಿನಲ್ಲಿ ಅನಗತ್ಯ ಆರೋಪ ಮಾಡಿದರು.03-09-2024ರಿಂದ ಕೂಡಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಧಾರವಾಡ ಸಾಮಾಜಿಕ ವಲಯ ಆರ್ಎಫ್ಓ ಸುಬೇದಾರ ತಮ್ಮ ಸಹೋದ್ಯೋಗಿ ಅಧಿಕಾರಿಗಳ …
Read More »ಗುರುಗಳನ್ನು ನೆನೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ; ಮಾಬುಸಾಬ ಯರಗುಪ್ಪಿ ಅಭಿಪ್ರಾಯ
ನವಲಗುಂದ: ಅಕ್ಷರ ಕಲಿಸಿದ ಗುರುವನ ಸ್ಥಾನ ದೊಡ್ಡಡಿದ್ದು ಗುರುಗಳನ್ನು ನೆನೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಗುರು ಎನ್ನುವ ಎರಡು ಅಕ್ಷರದಲ್ಲಿ ಅದ್ಭುತವಾದ ಶಕ್ತಿ ಅಡಗಿದ್ದು, ಪುರಂದರ ದಾಸರು ಹೇಳಿದ ಹಾಗೆ ಗುರುವಿನ ಗುಲಾಮನಾಗಿ ವಿದ್ಯೆಯನ್ನು ಕಲಿಯಬೇಕು, ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ …
Read More »ಭಾರತದ ಸಂಸ್ಕೃತಿ ಆಚಾರ ವಿಚಾರ ವಿರೋಧಿಸುವವರ ಪರವಾಗಿಯೇ ಕಾಂಗ್ರೆಸ್ ಇರುತ್ತದೆ : ಬೆಲ್ಲದ
ಹುಬ್ಬಳ್ಳಿ: ಒಬ್ಬರು ಉತ್ತಮ ಶಿಕ್ಷಕರು ಅಂದರೆ ಅವರು ಉತ್ತಮ ಶಿಕ್ಷಕರೇ. ಶಿಕ್ಷಕರ ವೈಯಕ್ತಿಕ ವಿಚಾರ ಇಟ್ಟುಕೊಂಡು ಪ್ರಶಸ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ್ ವೈಯಕ್ತಿಕ ನಂಬಿಕೆಯ ಮೇಲೆಯೇ ಪ್ರಶಸ್ತಿ ನೀಡುತ್ತಾ ಬಂದಿದೆ. ಮೊದಲಿನಿಂದಲೂ ಕಾಂಗ್ರೆಸ್ ಲೆಪ್ಟಿಸ್ಟ್ ಪರವಾಗಿಯೇ ಇದೆ. ಭಾರತದ ಸಂಸ್ಕೃತಿ ಆಚಾರ ವಿಚಾರ ವಿರೋಧಿಸುವವರ ಪರವಾಗಿಯೇ ಕಾಂಗ್ರೆಸ್ ಇರುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿ ಕಾರಿದರು. ಹಿಜಾಬ್ ಪ್ರಕರಣದಲ್ಲಿ ಭಾಗಿಯಾದ ಕಾರಣ ಉಡುಪಿ ಪ್ರಾಂಶುಪಾಲ ರಾಮಕೃಷ್ಣ …
Read More »ಕಾಂಗ್ರೆಸ್ ಟೀಕೆ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ : ಸಚಿವ ಸಿ.ಎಂ.ಇಬ್ರಾಹಿಂ ಆಕ್ರೋಶ
ಹುಬ್ಬಳ್ಳಿ: ರಾಜ್ಯದಲ್ಲಿ ವಿರೋಧ ಪಕ್ಷ ವಿರೋಧಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ, ನಿರುದ್ಯೋಗ, ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಮಾತನಾಡದೇ ಬಿಜೆಪಿಯವರು ಬೇರೆಯದೇ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ದಿನಕ್ಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಏನು ಮಾಡಿ ಬಂದಿದ್ದೀರಾ? ನಿಮ್ಮ …
Read More »ಬಿಜೆಪಿ ವಿರುದ್ಧ ಕಿಡಿಕಾರಿದ ಸಚಿವ ಸಿಎಂ ಇಬ್ರಾಹಿಂ
ಹುಬ್ಬಳ್ಳಿ: ಯಾರಾದರೂ ಹೇಳಲಿ ಸಿ.ಎಂ. ಇಬ್ರಾಹಿಂ ಒಂದು ರೂಪಾಯಿ ತಿಂದಿದ್ದಾರೆ ಎಂದು, ಬಿಜೆಪಿಯವರೇ ನಿಮಗೆ ಯಾಕಪ್ಪ ಸಾಬರಿಗೆ ದಾನ ಕೊಡುವ ಚಿಂತೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಒಬ್ಬರು ಹೇಳಲಿ ಒಂದು ರೂಪಾಯಿ ತಿಂದಿದ್ದೇವೆ ಎಂದು, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ ಹೀಗಾಗಿ ಸಾಬರು ಕೊಡುವ ದೇಣಿಗೆ, ದಾನದ ಬಗ್ಗೆ ರೂಲ್ಸ್ ಮಾಡ್ತಾರೆ ಎಂದರು. ನನ್ನ …
Read More »2024-25ನೇ ಸಾಲಿನ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ
ನವಲಗುಂದ: ತಾಲೂಕಿನ ಬೆಳಹಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 2024-25ನೇ ಸಾಲಿನ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಜರುಗಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಪಾಟೀಲ ನೋಡಲ್ ಅಧಿಕಾರಿಗಳಾಗಿ ಭಾಗವಹಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಯ್ಯ ಮಠಪತಿ, ಉಪಾಧ್ಯಕ್ಷರಾದ ಯಲ್ಲವ್ವ ದ್ಯಾವನೂರ, ಸದಸ್ಯರಾದ ರುದ್ರಪ್ಪ ಬೆಳಗಲಿ, ಭೀಮರೆಡ್ಡಿ ನೀಲಗುಂದ, ದ್ರಾಕ್ಷಾಯಿಣಿ ಚಲವಾದಿ, ಚೆನ್ನಮ್ಮ ಬೀರಣ್ಣವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಸಿದ್ದಪ್ಪ ಮಡಿವಾಳರ, ಪಂಚಾಯಿತಿ ಸಿಬ್ಬಂದಿ, ಬೆಳಹಾರ, ಚಿಲಕವಾಡ ಗ್ರಾಮಸ್ಥರು ಭಾಗವಹಿಸಿದ್ದರು.
Read More »ತಾಲೂಕು ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ
ನವಲಗುಂದ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪಟ್ಟಣದ ಪಿ ಎಲ್ ಡಿ ಬ್ಯಾಂಕ್ ಹಾಲ್ನಲ್ಲಿ ನವಲಗುಂದ ತಾಲೂಕು ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ ನಡೆಯಿತು ಇದೇ ಸಂದರ್ಭದಲ್ಲಿ ಸಮಿತಿ ರಚನೆ ಮಾಡಲಾಯಿತು. ಸಂಘಟನೆಯ ಧಾರವಾಡ ಜಿಲ್ಲಾ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿದರು.ತಾಲೂಕುಮಟ್ಟದ ಆಶಾ ಕಾರ್ಯಕರ್ತೆಯರ ಸಮಿತಿಯ ಅಧ್ಯಕ್ಷರಾಗಿ ಸರೋಜಾ ಮಡಿವಾಳರ, ಉಪಾಧ್ಯಕ್ಷರಾಗಿ ರೇಣುಕಾ ಬೋಗಾರ್, ರೇಣುಕಾ ಹಣಸಿ, ರೇಣುಕಾ ಕುಂಬಾರ, ವಿಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು.
Read More »ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಆಗಮನಕ್ಕೆ ಸಜ್ಜು
ಧಾರವಾಡ: ವಿಘ್ನನಿವಾರಕನಾದ ಗಣೇಶ ಎಲ್ಲರ ಮನೆ, ಮನಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಈಗಾಗಲೇ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದ್ದು, ಗಣೇಶನ ಮೂರ್ತಿ ತಯಾರಕರು ತಾವು ಸಿದ್ಧಪಡಿಸಿದ ಗಣೇಶನ ಮೂರ್ತಿಗಳಿಗೆ ಅಂತಿಮ ಹಂತದ ಬಣ್ಣ ಬಳಿಯುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರಸಕ್ತ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಧಾರವಾಡ ಜಿಲ್ಲಾಡಳಿತ ಒತ್ತು ನೀಡಿದೆ. ಪಿಓಪಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡದಂತೆ ನಿಷೇಧ ಹೇರಲಾಗಿದ್ದು, ಅಂತಹ ಮೂರ್ತಿ ಮಾರಾಟಗಾರರ ಮೇಲೆ ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಅನೇಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





