Breaking News

Shaikh BigTv

ಲಾರಿ,ಬಸ್ ನಡುವೆ ಭೀಕರ ಅಪಘಾತ : ಚಾಲಕರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಲಾರಿ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು, ಪರಿಣಾಮ ಎರಡೂ ವಾಹನದ ಚಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಕುಸುಗಲ್‌ ಗ್ರಾಮದ ಹೊರ ವಲಯದಲ್ಲೇ ನಡೆದಿದೆ. ಹುಬ್ಬಳ್ಳಿಯಿಂದ ಗುಲ್ಬರ್ಗಾಗೆ ತೆರಳುತ್ತಿದ್ದ ಎಸ್ ಆರ್ ಎಸ್ ಖಾಸಗಿ ಬಸ್ ಹಾಗೂ ನರಗುಂದ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಎರಡೂ ವಾಹನಗಳ ಚಾಲಕರ ಕಾಲುಗಳು ಕಟ್ ಆಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 10ಕ್ಕೂ …

Read More »

ಎರಡು ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸಾವು

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿನ ಬಂಡಿವಾಡ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ನಡೆದಿದೆ. ಸ್ಥಳದಲ್ಲೇ ಬೈಕ್ ಸವಾರ ಶಂಕರ ಕೊರವರ ಸಾವನ್ನಪ್ಪಿದ್ದು, ಶಂಕರ ಕೊರವರ ಮಂಟೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಇನ್ನೊಂದು ಬೈಕ್‌ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನು ಅಪಘಾತದಲ್ಲಿ ಗಾಯಗೊಂಡ ಮೂವರು ನಾಗರಳ್ಳಿ ಗ್ರಾಮದವರು ಎಂದು ತಿಳಿದು ಬಂದಿದ್ದು, …

Read More »

ಟ್ರೈನ್ ಗಳಲ್ಲಿ ಊಟ ವಿತರಣೆ ವಿಚಾರ : ವ್ಯಕ್ತಿಗೆ ಜೀವ ಬೆದರಿಕೆ

ಹುಬ್ಬಳ್ಳಿ: ರೈಲ್ವೆ ಸ್ಟೇಶನ್ ಗೆ ಬರುವ ಟ್ರೈನ್ ಗಳಲ್ಲಿ ಊಟ ವಿತರಣೆ ಮಾಡುವ ಟೆಂಡರ್ ವಿಚಾರಕ್ಕೆ ವ್ಯಕ್ತಿಯೊಬ್ಬನಿಗೆ ನಿನ್ನನ್ನು ಕೊಲೆ ಮಾಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾನೆ. ಸಲೀಂ‌ ,ನಾನು ಎರಡು ದಿನಗಳಿಂದ ಮನೆಗೆ ಹೋಗಿಲ್ಲ. ನನಗೆ ಎರಡು ಮಕ್ಕಳು ಇದ್ದಾರೆ. ನನ್ನ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅದಕ್ಕೆ ಬಿಲ್ಡರ್ ಜಾಫರ್ ಕಾರಣ ಎಂದು ಮಾಧ್ಯಮದ ಮುಂದೆ …

Read More »

ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

ಹುಬ್ಬಳ್ಳಿ: ವ್ಯಕ್ತಿಯೊಬ್ಬನಿಗೆ ಯುವಕನೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕೊಟಗುಂಡಹುಣಸಿ ಮತ್ತು ಕುಂದಗೋಳ ಕ್ರಾಸ್ ಬಳಿ ನಡೆದಿದೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದೆ. ಕೊಟಗುಂಡಹುಣಸಿ ಗ್ರಾಮದ ನಿವಾಸಿ ಯಲ್ಲಪ್ಪ ಸಿದ್ದಪ್ಪ ಹಂಚಿಕಟ್ಟಿ ಹಲ್ಲೆಗೊಳಗಾದ ವ್ಯಕ್ತಿ. ಇತ ಮತ್ತು ಪಕ್ಕಿರೇಶ ರಂಗಣ್ಣನವರ ನಡುವೆ ಹಣದ ವಿಚಾರಕ್ಕೆ ಜಗಳ ಆಗಿದೆ. ಇನ್ನು ಮಾತಿಗೆ ಮಾತು ಬೆಳೆದು ಯಲ್ಲಪ್ಪನ ಮೇಲೆ ಫಕ್ಕಿರೇಶ ಎಂಬಾತ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನಂತೆ.ಈ ಘಟನೆಯಲ್ಲಿ ಯಲ್ಲಪ್ಪ …

Read More »

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ಕಾರ್ಯಾಚರಣೆ; 4 ವಾಹನಗಳ ಜಪ್ತಿ

ಹುಬ್ಬಳ್ಳಿ: ಇಂದು ಗಬ್ಬೂರ ಕ್ರಾಸ್‌‌ನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನಧಿಕೃತ ಮರಳು ಸಾಗಾಣಿಕೆ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದವು. ಕಾರ್ಯಾಚರಣೆ ವೇಳೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ, ಪರವಾನಗಿ ಇಲ್ಲದ 4 ವಾಹನಗಳನ್ನು ಜಪ್ತಿ ಮಾಡಲಾಯಿತು. ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು…

Read More »

ಸ್ಕೂಟಿ ವೀಲಿಂಗ್ : ಯುವಕ ಅರೇಸ್ಟ್

ಹುಬ್ಬಳ್ಳಿ: ಯುವಕನೊಬ್ಬ ಸ್ಕೂಟಿ ವೀಲಿಂಗ್ ಮಾಡ್ತಿದ್ದನ್ನು ಗಮನಿಸಿದ ಗ್ರಾಮಿಣ ಪೊಲೀಸ್ ಠಾಣೆ ಪೊಲೀಸರು, ಆತನನ್ನು ಅರೆಸ್ಟ್ ಮಾಡಿ ಸ್ಕೂಟ‌ನ್ನು ಸೀಜ್ ಮಾಡಿದ್ದಾರೆ. ಆಯಾನ್ ಎಂಬ ಯುವಕ ತನ್ನ ಸ್ಕೂಟರ್ ತೆಗೆದುಕೊಂಡು ಕಾರವಾರ ರೋಡ್ ನೀಯರ್ ಅಂಚಟಗೇರಿ ಗ್ರಾಮದ ಬಳಿ ವೀಲಿಂಗ್ ಮಾಡುತ್ತಿದ್ದ. ಇದರಿಂದ ಸಾರ್ವಜನಿಕರಿಗೂ ಕೂಡ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮೀಣ ಠಾಣೆ ಇನ್ಸೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಸ್ಕೂಟರ್ ಸೀಜ್ ಮಾಡಿದ್ದಾರೆ.

Read More »

ಮಾಜಿ ಸಿಎಂ ಅಶ್ಲೀಲ ಸಿಡಿ : ಇದು ಬ್ಲ್ಯಾಕ್ ಮೇಲ್ : ಜೋಶಿ

ಹುಬ್ಬಳ್ಳಿ : ಮಾಜಿ ಸಿಎಂ ಅಶ್ಲೀಲ ಸಿಡಿ ಬರತ್ತೆ ಅನ್ನೋ ವಿಚಾರವೂ ಇದು ಬ್ಲ್ಯಾಕ್ ಮೇಲ್ ತಂತ್ರ. ಇದಕ್ಕೆಲ್ಲ ರಿಯಾಕ್ಷನ್ ಕೊಡೋ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಇದು ಅರ್ಥವಿಲ್ಲದ ಮಾತು. ವಿಡಿಯೋ ಇದ್ರೆ ಕಂಪ್ಲೆಂಟ್ ಕೊಡಬೇಕು ಇಲ್ಲವಾದ್ರೆ ರಿಲೀಸ್ ಆದ್ರು ಮಾಡಬೇಕು. ಬಿಜೆಪಿದವರು ಹೋರಾಟ ಮಾಡ್ತಿರೋದಕ್ಕೆ ಈ ರೀತಿ ಬ್ಲ್ಯಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಯಾವ ಮುಖ್ಯಮಂತ್ರಿ, …

Read More »

ಮಗಳ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಕಾಮುಕನ ಅತ್ಯಾಚಾರ

ಹುಬ್ಬಳ್ಳಿ: ಡ್ರೈವರ್ ಕೆಲಸ ಮಾಡುತ್ತಿದ್ದ 54 ವರ್ಷದ ಕಾಮುಕ 7 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿ ಆರೋಪಿ ವಿರುದ್ಧ ಪೋಕ್ಸ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಬಂಧಿತ ಆರೋಪಿ ಹೆಸರು ನೂರ್ ಅಹ್ಮದ್ . ಈತನ ಮನೆಯಲ್ಲಿಯೇ ಬಾಡಿಗೆಗೆ ಇದ್ದ ಕುಟುಂಬವೊಂದರ 7 ವರ್ಷದ ಮಗುವನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಯತ್ನಿಸಿದ್ದ. ಕೂಡಲೇ ಮಗುವಿನ ಮನೆಯವರು …

Read More »

ಅಣ್ಣಿಗೇರಿಯಲ್ಲಿ ಪೊಲೀಸರಿಂದ ಗಣೇಶ್ ಚತುರ್ಥಿ ಹಿನ್ನೆಲೆ ಪತಸಂಚಲನ

ಅಣ್ಣಿಗೇರಿ: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 97 ಬೆಟಾಲಿಯನ್ ಆರ್ ಎ ಎಫ್ (ರಾಪಿಡ್ ಆಕ್ಷನ್ ಫೋರ್ಸ್) ಸಿಬ್ಬಂದಿಯೊಂದಿಗೆ ರೂಟ್ ಮಾರ್ಚ್‌ ನಡೆಸಿದರು. ಈ ವೇಳೆ ಪಿಎಸ್‌ಐ ಸಿದ್ದಾರೂಢ ಆಲದಕಟ್ಟಿ, ಯು.ಸಿ. ಪಾಟೀಲ ಇತರರು ಭಾಗವಹಿಸಿದ್ದರು

Read More »

ದಲಿತರ ರಕ್ಷಣೆ ಮಾಡುವಲ್ಲಿ ಗೃಹ ಸಚಿವರು ಸಂಪೂರ್ಣ ದಕ್ಷತೆ ಮರೆತಿದ್ದಾರೆ: ಮಾಜಿ ಶಾಸಕ ಪಿ. ರಾಜೀವ್‌

ಹುಬ್ಬಳ್ಳಿ: ಉಡುಪಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಆಯ್ತು, ಈ ಕುರಿತು ಗೃಹ ಮಂತ್ರಿಗಳು ಇದು ಸಾಮೂಹಿಕ ಅತ್ಯಾಚಾರ ಅಲ್ಲ ಎಂದು ಪ್ರತಿಕ್ರಿಯಿಸಿದರು. ನಂಜನಗೂಡಿನಲ್ಲಿ ಒಬ್ಬ ದಲಿತ ಹೆಣ್ಣುಮಗಳ ಶವ ನೇತಾಡಿದ್ರೂ ದಲಿತರಿಗೆ ರಕ್ಷಣೆ ಸಿಗುತ್ತಿಲ್ಲ. ದಲಿತರ ರಕ್ಷಣೆ ಮಾಡುವಲ್ಲಿ ಗೃಹ ಸಚಿವರು ಸಂಪೂರ್ಣ ದಕ್ಷತೆ ಮರೆತಿದ್ದಾರೆ. ರಾಜ್ಯದಲ್ಲಿ ದಲಿತರ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಪಿ. ರಾಜೀವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ …

Read More »