ಹುಬ್ಬಳ್ಳಿ : ಉದ್ದೇಶ ಪೂರ್ವಕವಾಗಿ ತೆರವು ನಡೀತಿದೆ. ಟೆಕ್ನಾಲಜಿ ಬಳಸಿ ದರ್ಗಾ ಉಳಿಸಲು ಮನವಿ ಮಾಡಿದ್ವಿ. ಮಸ್ಜಿದ್ ತೆರವುಗೊಳಿಸಬಹುದು, ಆದರೆ ದರ್ಗಾದಲ್ಲಿ ಗೋರಿ ಇರುತ್ತೆ. ಅದನ್ನ ಸ್ಥಳಾಂತರ, ತೆರವು ಮಾಡುವುದು ಕಷ್ಟ. ಎಂದು ಕಾಂಗ್ರೆಸ್ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಹಿಂದೂ ಮುಸ್ಲಿಂ ಜನರನ್ನ ಒಡೆಯುತ್ತಿದ್ದಾರೆ.ಈ ದರ್ಗಾ ಭಾವೈಕ್ಯತೆಯ ಸಂಕೇತ. ಎಲ್ಲವನ್ನೂ ದೇವರು ನೋಡುತ್ತಿದ್ದಾನೆ. ಈ ಬಗ್ಗೆ ಸಿಎಂ ಜತೆ ಮಾತನಾಡಿದ್ದೇವೆ.ಆದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.ಮುಸ್ಲಿಂ ಸಂಸ್ಥೆಯಿಂದ ಗೋರಿ ಸ್ಥಳಾಂತರ ಮಾಡ್ತೇವಿ ಅಂದಿದ್ವಿ. ಗೋರಿ ಸ್ಥಳಾಂತರ ಮಾಡೋಕೆ ಸಾಧ್ಯ ಇದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

