ಧಾರವಾಡ ; ಕ್ಷೇತ್ರದ ಜೀವನ ನಿರ್ಮಾಣ, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್ಸೆಟ್ (ಗರಿಷ್ಠ 10 ಎಚ್ಪಿ), ಲಘು ನೀರಾವರಿ ಮತ್ತು ತಂತಿ ಬೇಲಿ ಘಟಕಗಳನ್ನು ಸ್ಥಾಪಿಸಲು ಬಯಸುವ ಅರ್ಹ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಅಕ್ಟೋಬರ್ 20, 2024 ರೊಳಗೆ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು …
Read More »ಸಿಎಂ ವಿಚಾರ ಕುರಿತು ಸ್ಪಷ್ಟನೆ ನೀಡಿದ ಡಿಕೆಶಿ
ಹುಬ್ಬಳ್ಳಿ: ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ. ಯಾವುದೇ ಲಾಭಿ ಇಲ್ಲ, ಯಾವುದೇ ಘೋಷಣೆ ಇಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕೈ ಕೆಳಗೆ ನಾವು ಕೆಲಸ ಮಾಡುತ್ತಿದ್ದೇವೆ. ತಾವು ಮುಖ್ಯಮಂತ್ರಿ ಆಗುವ ಅವಕಾಶ ಇದೇನಾ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಇದಾರಲ್ಲರೀ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ರು.
Read More »ಜಾತಿ ಜನಗಣತಿ ವಿಚಾರವಾಗಿ ಸ್ವಪಕ್ಷದಲ್ಲೇ ಅಪಸ್ವರ ಉಂಟಾಗಿದೆ : ಚೆಲುವರಾಯಸ್ವಾಮಿ
ಹುಬ್ಬಳ್ಳಿ: ಜಾತಿ ಜನಗಣತಿ ವಿಚಾರವಾಗಿ ಸ್ವಪಕ್ಷದಲ್ಲೇ ಅಪಸ್ವರ ಉಂಟಾಗಿದೆ.ಜಾತಿ ಗಣತಿ ವಿಚಾರದ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ. ಜಾತಿ ಜನಗಣತಿ ಹಳೆಯದಾಗಿದ್ದರಿಂದ ಕೆಲವೊಬ್ಬರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕೆಲವೊಬ್ಬರು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಈ ಸಮಿತಿಯಲ್ಲಿ ಚರ್ಚೆಯಾದ ನಂತರ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.
Read More »ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ದಾಟಿಲ್ಲ : ಚೆಲುವರಾಯಸ್ವಾಮಿ
ಹುಬ್ಬಳ್ಳಿ: ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ದಾಟಿಲ್ಲ. ಬಿಜೆಪಿಯವರು ಯಾವಾಗಾದ್ರೂ ಐದು ವರ್ಷ ಅಧಿಕಾರ ನಡೆಸಿರುವ ಉದಾಹರಣೆ ಇದೆಯಾ..? ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರೋ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಬಿಜೆಪಿಯವರು ಸರಿಯಾಗಿ ಅಧಿಕಾರ ಮಾಡಲ್ಲ. ಅಧಿಕಾರ ಕಳೆದುಕೊಂಡಾಗ ಅಧಿಕಾರ ಬೇಕು ಅಂತಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
Read More »ಜೂಜಾಟದ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ : 7 ಜನ ಬಂಧನ
ಹುಬ್ಬಳ್ಳಿ: ತಾಲೂಕಿನ ಬೆಳಗಲಿ ಗ್ರಾಮದಲ್ಲಿ ಜೂಜಾಟದ ಆಡುತ್ತಿದ್ದ ಅಡ್ಡೆ ಮೇಲೆ, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪಿಎಸ್.ಐ ಚಾಮುಂಡಿ ನೇತೃತ್ವದಲ್ಲಿ ದಾಳಿ ನಡೆಸಿ ಎಳು ಜನರ ಜೊತೆಗೆ 19850 ರೂ.ನಗದು ಮತ್ತು ಇಸ್ಪೀಟು ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಡಿಕೆಶಿ ನೇತೃತ್ವದಲ್ಲಿ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಹತ್ವದ ಸಭೆ
ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಹತ್ವದ ಸಭೆ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಗುಪ್ತ ಸಭೆಯನ್ನು ಮಾಡಲಾಗಿದೆಂದು ತಿಳಿದು ಬಂದಿದ್ದು, ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್, ಶಾಸಕ ಎನ್.ಹೆಚ್. ಕೋನರೆಡ್ಡಿ, ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
Read More »ಹರಿಯಾಣದಲ್ಲಿ ಬಿಜೆಪಿ ಗೆಲುವು : ಧಾರವಾಡದಲ್ಲಿ ವಿಜಯೋತ್ಸವ
ಧಾರವಾಡ: ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಧಾರವಾಡದಲ್ಲೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಧಾರವಾಡದ ಸುಭಾಷ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
Read More »18 ಕ್ಕೂ ಅಧಿಕ ಜನರನ್ನೂ ಕಚ್ಚಿದ ನಾಯಿ ಸಾವು
ಕುಂದಗೋಳ : ಸಂಶಿ ಗ್ರಾಮದಲ್ಲಿ 18 ಕ್ಕೂ ಅಧಿಕ ಜನರನ್ನೂ ಕಚ್ಚಿ ಜನ ಮನೆ ಬಿಟ್ಟು ಹೊರಬರಲು ಭಯ ಬೀಳುವಂತೆ ಮಾಡಿದ್ದ ಹುಚ್ಚು ನಾಯಿ ಕೊನೆಗೂ ಪ್ರಾಣ ಬಿಟ್ಟಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಕಳೆದ ಭಾನುವಾರ ಬಿಡು ಬಿಟ್ಟಿದ್ದ ಹುಚ್ಚು ನಾಯಿ 18ಕ್ಕೂ ಅಧಿಕ ಜನರಿಗೆ ಕಚ್ಚಿ ಗಾಯ ಮಾಡಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಜನರಲ್ಲಿ ಜಾಗೃತಿ ಮೂಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ನಾಯಿಯನ್ನು ಪತ್ತೆ ಮಾಡಿ ಹಿಡಿಯಲು …
Read More »ಕರ್ನಾಟಕದಲ್ಲೂ ಎಕ್ಸಿಟ್ ಪೋಲ್ ಸುಳ್ಳಾಗಿತ್ತು : ಡಿಕೆಶಿ
ಹುಬ್ಬಳ್ಳಿ: ಎಕ್ಸಿಟ್ ಪೋಲ್ ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ.ಕರ್ನಾಟಕದಲ್ಲೂ ಎಕ್ಸಿಟ್ ಪೋಲ್ ಸುಳ್ಳಾಗಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಹರಿಯಾಣ ಜಮ್ಮು ಕಾಶ್ಮೀರ ಚುನಾವಣೆ ಫಲಿತಾಂಶ ವಿಚಾರಕ್ಕೆ ಪ್ರತಿಕ್ರಿಯಿಸಿ,ಹರಿಯಾಣದಲ್ಲಿ ಯಾಕೆ ಹಿನ್ನಡೆಯಾಗಿದೆ ಪಕ್ಷದ ಒಳಗೆ ಚರ್ಚೆಯಾಗುತ್ತೆ ಹರಿಯಾಣ ದಿಲ್ಲಿಗೆ ಹತ್ತಿರವಿರುವ ರಾಜ್ಯ. ರಾಜಕೀಯವಾಗಿ ಸಾಕಷ್ಟು ಮಹತ್ವ ಇದೆ.ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು, ಆದ್ರೆ ಹುಸಿಯಾಗಿದೆ. ಜಮ್ಮುಕಾಶ್ಮೀರಲ್ಲಿ ಇಂಡಿಯಾ ಒಕ್ಕೂಟಕ್ಕೆ ಗೆಲುವಾಗಿದೆಬಹಳ ದಿನದ ನಂತರ …
Read More »ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ : ಚೆಲುವರಾಯಸ್ವಾಮಿ
ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ದಲಿತ ಸಿಎಂ ಚರ್ಚೆ ವಿಚಾರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಚರ್ಚೆ ಇಲ್ಲ.ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ. ಎಐಸಿಸಿ, ಮಂತ್ರಿಮಂಡಲ ಈ ಬಗ್ಗೆ ಸ್ಪಷ್ಟತೆ ನೀಡಿದೆಸಿಎಂ ರಾಜೀನಾಮೆ ನೀಡುವಂತೆ ಎಐಸಿಸಿ ಕೇಳಿಯೂ ಇಲ್ಲ ಎಂದರು. ಹುಬ್ಬಳ್ಖಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನಖಾಲಿ ಇಲ್ಲ.ಇದೆಲ್ಲ ಕೇವಲ ಊಹಾಪೋಹವಷ್ಟೇ. ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ದಾಟಿಲ್ಲ.ಬಿಜೆಪಿಯವರು ಯಾವಾಗಾದ್ರೂ ಐದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





