Breaking News

bigtvnews22

ತೆನೆಯಲ್ಲಿ ಕಾಳು ಕಟ್ಟದ ಮೆಕ್ಕೆಜೋಳ: ಬೆಳೆ ನಾಶಪಡಿಸಿದ ರೈತ

ರಾಣೆಬೆನ್ನೂರು: ಆಳೆತ್ತರ ಬೆಳೆದರೂ ಒಂದು ಕಾಳು ಕೂಡ ಕಟ್ಟಲಿಲ್ಲ ಎಂದು ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಅವರು ತಾವು ಬೆಳೆದ 3 ಎಕರೆ ಮೆಕ್ಕೆಜೋಳದ ಬೆಳೆಯನ್ನು ಮಂಗಳವಾರ ಸಂಪೂರ್ಣ ನಾಶಪಡಿಸಿದ್ದಾರೆ. ತಾಲ್ಲೂಕಿನ ಕಾಕೋಳ ಗ್ರಾಮದ ರೈತ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು, ಕಾಕೋಳ ಗ್ರಾಮದಲ್ಲೇ ಖಾಸಗಿ ಕೃಷಿ ಕೇಂದ್ರದಲ್ಲಿ ಮೆಕ್ಕೆಜೋಳದ ಬೀಜ ಖರೀದಿಸಿ, ₹ 90 ಸಾವಿರ …

Read More »

ಗೃಹಲಕ್ಷ್ಮಿ ಹಣ ನಿತ್ಯ ಸತ್ಯ ನಿರಂತರ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ನಾನು ಈಗಾಗಲೆ ಹಲವು ಬಾರಿ ಗೃಹಲಕ್ಷ್ಮಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ, ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರ. ಕಳೆರಡು ತಿಂಗಳಿಂದ ಬರದಿರುವ ಹಣ ಒಂದೇ ಬಾರಿ ಅಕೌಂಟ್‌ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ …

Read More »

ಜನಗಣತಿ ಪ್ರಕ್ರಿಯೆಗೆ ಚಾಲನೆ: ಸದ್ಯದಲ್ಲೆ ಅಧಿಕೃತ ಘೋಷಣೆ

ನವದೆಹಲಿ : ಜನಗಣತಿ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಕುರಿತ ಅಧಿಕೃತ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್ ಸಾಂಕ್ರಾಮಿಕದಿಂದ ವಿಳಂಬವಾಗಿರುವ ಈ ಪ್ರಕ್ರಿಯೆಯಲ್ಲಿ ಜಾತಿ ಕಾಲಂ ಸೇರಿಸುವ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಸ್ಪಷ್ಟಪಡಿಸಿದೆ. ಜನಗಣತಿ ನಡೆಸುವ ಸಂಬಂಧ ಕೆಲಸಗಳು ಈಗಾಗಲೇ ಆರಂಭವಾಗಿವೆ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಲವು ವಿರೋಧ ಪಕ್ಷಗಳು ಮತ್ತು ಬಿಜೆಪಿ …

Read More »

ನಾಭಿರಾಜ ಸಾವು ಪ್ರಕರಣ : 11 ಜನ ಬಂಧನ

ಹುಬ್ಬಳ್ಳಿ: ಪ್ರೈ ಓವರ್ ಮೇಲಿಂದ ಕಬ್ಬಣದ ಬಾರ್ ಬಿದ್ದು ಎ ಎಸ್‌ಐ ನಾಭಿರಾಜ ದಯಣ್ಣವರ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನರನ್ನ ಹುಬ್ಬಳ್ಳಿ ಉಪನಗರ ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹರ್ಷಾ ಹೊಸಗಾಣಿಗೇರ..ಜಿತೇಂದ್ರಪಾಲ..ಭೂಪೇಂದ್ರ,.ಮೊಹಮ್ಮದ ಸೇರಿದಂತೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಉಪನಗರ ಪೋಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೈಓವರ್ ಕಾಮಗಾರಿಯನ್ನು ಮಾಡುತ್ತಿರುವ ಝಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾಕ್ರಮ ಕೈಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿಯ …

Read More »

ಗ್ರಾಮೀಣ ವಸತಿ ಯೋಜನೆಗೆ ಕೇಂದ್ರದಿಂದ 400 ಕೋಟಿ ರೂ. ಅನುದಾನ ಬಿಡುಗಡೆ: ಸಂಸದ ಕೋಟ

ಉಡುಪಿ: ಕೇಂದ್ರ ಸರಕಾರ, ಕರ್ನಾಟಕ ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಸತಿ ಯೋಜನೆಗೆ 400 ಕೋಟಿ ರೂ. ಹಾಗೂ ನಗರ ವಸತಿ ಯೋಜನೆಗೆ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆಸಿದ ಉಡುಪಿ ಜಿಲ್ಲೆಯ ನಗರ ಸ್ಥಳೀಯಾಡಳಿತದ ಪುರಸಭೆ, ಪಟ್ಟಣ ಪಂಚಾಯತ್ …

Read More »

ಮೈಸೂರು ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ

ಮೈಸೂರು: ಹೆಜ್ಜಾಲ-ಚಾಮರಾಜನಗರ, ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ಮೈಸೂರು ಭಾಗದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಮೈಸೂರು ಕೇಂದ್ರ ರೈಲು ನಿಲ್ದಾಣದಲ್ಲಿ ಬೆಂಗಳೂರಿನಂತೆಯೇ ಹಲವು ಸೌಲಭ್ಯಗಳು ದೊರೆಯುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿನ ಡಿಆರ್‌ಎಂ ಕಚೇರಿಯಲ್ಲಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. …

Read More »

ಚೀನಾದಲ್ಲಿ ಜನಸಂಖ್ಯೆ ಕುಸಿತ: ನೌಕರರ ನಿವೃತ್ತಿ ವಯಸ್ಸು ಏರಿಕೆ

ಬೀಜಿಂಗ್‌: ವೃದ್ಧರ ಸಂಖ್ಯೆ ವೃದ್ಧಿಸುತ್ತಿರುವ ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದ್ದು, ಕೆಲಸಗಾರರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. ಪರಿಣಾಮವಾಗಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಇಲ್ಲಿನ ಸಂಸತ್ತು ಅನುಮೋದನೆ ನೀಡಿದ್ದು, ಇದು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ. ಇದರ ಪ್ರಕಾರ ಪುರುಷರ ನಿವೃತ್ತಿ ವಯಸ್ಸನ್ನು 63 ವರ್ಷಕ್ಕೆ ಹಾಗೂ ಮಹಿಳೆಯರ ನಿವೃತ್ತಿಯನ್ನು ಅವರ ವೃತ್ತಿಗನುಗುಣವಾಗಿ 55 ಹಾಗೂ 58ಕ್ಕೆ ಏರಿಸಲಾಗುವುದು. ಪ್ರಸ್ತುತ ಪುರುಷರು 60ನೇ ವಯಸ್ಸಿಗೆ ನಿವೃತ್ತಿ ಆಗುತ್ತಿದ್ದಾರೆ. ಶ್ರಮದ (ಬ್ಲೂ …

Read More »

ಬಾರಾಮುಲ್ಲಾದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರ: ಬಾರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಗಿತ್ತು ಎಂದು ವರದಿಯಾಗಿದೆ. ನ್ಯೂಸ್ 18ಗೆ ಲಭ್ಯವಾದ ಡ್ರೋನ್ ದೃಶ್ಯಾವಳಿಗಳು ಬಾರಾಮುಲ್ಲಾದ ಎನ್‌ಕೌಂಟರ್ ಸ್ಥಳದ ಬಳಿ ಗಾಯಗೊಂಡ ಭಯೋತ್ಪಾದಕ ಅಡಗಿರುವುದನ್ನು ತೋರಿಸುತ್ತದೆ. ಬಾರಾಮುಲ್ಲಾದ ಚಕ್ ಟಪ್ಪರ್ ಕ್ರೀರಿ ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ ಎಂದು ಕಾಶ್ಮೀರ …

Read More »

ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ನೋಂದಾಯಿತ ಕಟ್ಟಡ ಕಾರ್ಮಿಕರು ಕಾರ್ಮಿಕರ ಕಾರ್ಡ್ ಗಳನ್ನು ನವೀಕರಿಸುವುದು ಕಡ್ಡಾಯವಾಗಿದ್ದು, ನವೀಕರಣಕ್ಕೆ ಕಾರ್ಮಿಕ ಇಲಾಖೆ ಅರ್ಜಿ ಆಹ್ವಾನಿಸಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಉದ್ಯೋಗ ದೃಢೀಕರಣ ಪತ್ರ, ಸ್ವಯಂ ದೃಢೀಕರಣ ಪತ್ರ, ಮಂಡಳಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್, ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

Read More »

ವಾರ್ಡ್ ಸಂಖ್ಯೆ 3ಕ್ಕೆ ವಿಶ್ವಬ್ಯಾಂಕ್ ತಂಡದ ಅಧಿಕಾರಿಗಳು ಭೇಟಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದ ವಿಶೇಷ ಯೋಜನೆಯಾದ 2025ಕ್ಕೆ ಪ್ರತಿ ಮನೆಗೂ 24X7 ನೀರು ಸರಬರಾಜು ಮಾಡುವ ವ್ಯವಸ್ಥೆ ಕುರಿತು, ಶುಕ್ರವಾರ ಧಾರವಾಡದ ವಾರ್ಡ್ ಸಂಖ್ಯೆ 3ಕ್ಕೆ ವಿಶ್ವಬ್ಯಾಂಕ್ ತಂಡದ ಅಧಿಕಾರಿಗಳು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಸಾರ್ವಜನಿಕರೊಂದಿಗೆ ಸಂವಾದ ಮಾಡಿ ಅಹವಾಲುಗಳನ್ನು ಆಲಿಸಿದರು. ಸಾರ್ವಜನಿಕರು ಪ್ರಸ್ತುತ ಜಾರಿಯಲ್ಲಿರುವ 24X7 ನೀರಿನ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ವಾರ್ಡನಲ್ಲಿ ಶೇ.90 ರಷ್ಟು ಕಾರ್ಯ ಮುಕ್ತಾಯವಾಗಿದ್ದು, ಇನ್ನುಳಿದ …

Read More »