Breaking News

Uncategorized

ಯಡಿಯೂರಪ್ಪ , ಅವರ ಪುತ್ರ ಕೂಡ ಜೈಲಿಗೆ ಹೋಗಲಿದ್ದಾರೆ : ಯತ್ನಾಳ್ ಹೊಸ ಬಾಂಬ್

ಹಾವೇರಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ  ಮಾತ್ರ ಜೈಲಿಗೆ ಹೋಗಲ್ಲ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ಅವರ ಪುತ್ರ ಬಿ.ವೈ ವಿಜಯೇಂದ್ರ ಕೂಡ ಜೈಲಿಗೆ ಹೋಗಲಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆಮಾತನಾಡಿದಂತ ಅವರು, ದೈಬೈ, ಮಾರಿಷ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಆಸ್ತಿ ಹೊಂದಿದ್ದಾರೆ. …

Read More »

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ಗೆ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ಗೆ ಭೇಟಿ ನೀಡಲಿದ್ದು, 21,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲದೇ, ನಾಳೆಯೂ ಕೂಡ ಮೋದಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ  ಪ್ರಕಟಣೆ ತಿಳಿಸಿದೆ. ಜೂನ್ 18 ರಂದು ಬೆಳಿಗ್ಗೆ 9:15 ಕ್ಕೆ, ಪಾವಗಡ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದಾರೆ, ನಂತರ …

Read More »

ಪೋಲಿಸ್ ಅಧಿಕಾರಿ 4 ಮನೆ ಮೇಲೆ ಎಸಿಬಿ ದಾಳಿ

ಗಂಗಾವತಿ :  ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಯಾಗಿದ್ದ ಪ್ರಸ್ತುತ ಪೊಲೀಸ್ ಗುಪ್ತಚರ ಇಲಾಖೆ ಅಧಿಕಾರಿ ಉದಯರವಿ ಅವರ ಗಂಗಾವತಿ ಮನೆ ಸೇರಿದಂತೆ ವಿವಿಧೆಡೆ ಇರುವ 4 ಮನೆಗಳ ಮೇಲೆ ಎಸಿಬಿ ಡಿವೈಎಸ್ಪಿ ಶಿವಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ . ಉದಯರವಿ ಅವರು ಗಂಗಾವತಿ ನಗರ ಠಾಣೆ ಗ್ರಾಮೀಣ ಠಾಣೆಗಳಲ್ಲಿ ಪಿ ಐ ಆಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿಗೆ …

Read More »

ಅನುಮಾನಾಸ್ಪದಕವಾಗಿ ಸಾವನ್ನಪ್ಪಿದ ಜ್ಞಾನಭಾಸ್ಕರ ಸ್ವಾಮೀಜಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ನಾನಕ್ಕೆ ನೀರು ಕಾಯಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳ ಪೈಕಿ ಜ್ಞಾನಭಾಸ್ಕರ ಸ್ವಾಮೀಜಿಯವರೂ ಪ್ರಮುಖರಾಗಿದ್ದರು.

Read More »

ಧಾರಕಾರ ಮಳೆಗೆ ಶಾಲೆಯಲ್ಲಿ ಸಿಲುಕಿದ 150 ವಿದ್ಯಾರ್ಥಿಗಳು : ಯಶಸ್ವಿಯಾಗಿ ಮಕ್ಕಳ ರಕ್ಷಣೆ

ಹುುಬ್ಬಳ್ಳಿ : 4 ಗಂಟೆ ಸುಮಾರು ಸುರಿದ ಧಾರಾಕಾರ ಮಳೆಗೆ ಹಳ್ಳವು ತುಂಬಿ ಹರಿದ ಪರಿಣಾಮ ಸರ್ಕಾರಿ ಪ್ರೌಢ ಶಾಲೆಯ  150 ವಿದ್ಯಾರ್ಥಿಗಳು ಸಿಲುಕಿದ್ದ ಘಟನೆ ನವಲಗುಂದ ತಾಲ್ಲೂಕಿನ ಅಮರಗೋಳದಲ್ಲಿ ನಡೆದಿದೆ. ಹಳ್ಳ ಉಕ್ಕಿ ಹರಿದು ಮಕ್ಕಳು ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಎಲ್ಲಾ ಮಕ್ಕಳನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಕ್ಕಳ ರಕ್ಷಣೆಗೆ ಮುಂದಾಗಿದ್ದರು .ತಹಶೀಲ್ದಾರ್ ಅನೀಲ್ ಬಡಿಗೇರ ಹಾಗೂ ಸಿಪಿಐ ಚಂದ್ರಶೇಖರ …

Read More »

ಮನೆಗೆ ಭೇಟಿ ನೀಡಿ ಹೊರಟ್ಟಿಗೆ ಶುಭಾಶಯ ಕೋರಿದ ಬೆಲ್ಲದ

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸತತವಾಗಿ 8 ನೇ ಬಾರಿಗೆ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಶಾಸಕ ಅರವಿಂದ್ ಬೆಲ್ಲದ್ ಭೇಟಿ ನೀಡಿ ಸನ್ಮಾನಿಸಿ , ಅಭಿನಂದಿಸಿದರು . ಈ ಸಂದರ್ಭದಲ್ಲಿ , ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಮುಖಂಡರಾದ ಸ್ವಾಮಿ ಮಹಾಜನಶೆಟ್ಟರ್ ಉಪಸ್ಥಿತರಿದ್ದರು .

Read More »

ಸುಗಮ ಸಂಚಾರಕ್ಕಾಗಿ ಶಾಸಕ ಅರವಿಂದ್ ಬೆಲ್ಲದ್ ಚಾಲನೆ

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 31 ರ ತಾರಿಹಾಳದಿಂದ ಸಿಬಿಟಿ ವರೆಗಿನ ಬಸ್ ಸೇವೆಯನ್ನು ಸಾರ್ವಜನಿಕರಿಗಾಗಿ ಮತ್ತು ಶಾಲಾ ಮಕ್ಕಳ ಸುಗಮ ಸಂಚಾರಕ್ಕಾಗಿ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಶಂಕರ್ ಹೊಸಮನಿ , ಮುಖಂಡರಾದ ಬಸಪ್ಪ ಉಣಕಲ್ , ಮಲ್ಲಿಕಾರ್ಜುನ ಕಾಡನಗೌಡರ , ಶಿವಪ್ಪಗೋಮಾಡಿ , ಹಣಮಂಪ್ಪಹಿಂಡಸಗೇರಿ , ಸಿದ್ದಪ್ಪ ಅರವಾಳ …

Read More »

ಹೊರಟ್ಟಿಗೆ ಡಾ . ಲಿಂಗರಾಜ ಹೊರಕೇರಿಯಿಂದ ಸನ್ಮಾನ

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ ಎಂಟನೇ ಬಾರಿ ವಿಜಯ ಸಾಧಿಸಿ ವಿಶ್ವ ದಾಖಲೆ ಮಾಡಿದ , ಸೊಲಿಲ್ಲದ ಸರದಾರ , ಬಸವರಾಜ ಹೊರಟ್ಟಿ ಅವರನ್ನು ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ . ಲಿಂಗರಾಜ ಹೊರಕೇರಿ ಮಾಲಾರ್ಪಣೆ ಮಾಡಿ , ಸಿಹಿ ತಿನ್ನಿಸಿ ಅಭಿನಂದಿಸಿದರು.ಪ್ರೊ.ವಿ.ಆರ್.ವಾಘಮೊಡೆ , ಕೌಜಲಗಿ , ಶಿಕ್ಷಕರು ಉಪಸ್ಥಿತರಿದ್ದರು .

Read More »

ಹೊರಟ್ಟಿ ಗೆಲುವು ಹಿನ್ನಲೆ ನವಲಗುಂದದಲ್ಲಿ ಸಂಭ್ರಮಾಚರಣೆ

ನವಲಗುಂದ :  ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ ಎಂಟನೇ ಬಾರಿ ದಾಖಲೆಯ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರವಾಗಿ ನವಲಗುಂದದ ಗಾಂಧಿ ಮಾರ್ಕೆಟಿನಲ್ಲಿ ಬಿಜೆಪಿ ಕಾರ್ಯಕರ್ತರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ , ಜಿಲ್ಲಾ ವಕ್ತಾರ ಗುರು ಪಾಟೀಲ , ತಾಲೂಕ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡ್ರ , ನಗರ ಘಟಕದ …

Read More »

ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಅಂಜುಮನ್ – ಎ – ಇಸ್ಲಾಂ ಸಂಸ್ಥೆ

ಧಾರವಾಡ : ಭಾರತ ಶಾಂತಿಯ ತೋಟ , ಶಾಂತಿಗೆ ಹೆಸರಾದ ದೇಶ ಇಂತಹ ದೇಶದಲ್ಲಿ ಶಾಂತಿ ಕದಡುವ ಕೆಲಸವಾಗುತ್ತಿದೆ ಆ ಮೂಲಕ ಉದ್ವಿಗ್ನತೆ ಉಂಟಾಗುವಂತೆ ಮಾಡಲಾಗುತ್ತಿದೆ . ಈ ಪರಿಸ್ಥಿತಿಯನ್ನು ಹತೋಟಿಗೆ ತರುವಂತೆ ಆಗ್ರಹಿಸಿ ಅಂಜುಮನ್ – ಎ – ಇಸ್ಲಾಂ ಸಂಸ್ಥೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು . ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರು ಪ್ರವಾದಿ ಮೊಹ್ಮದ್ ಕುರಿತು ವಿವಾದಾತ್ಮಕ ಹೇಳಿಕೆ …

Read More »