Breaking News

Uncategorized

ಪ್ರತಿ ಮನೆಗಳಿಗೆ ಬಿಪಿ ಶುಗರ್ ಚೆಕ್ ಮಾಡಿಕೊಳ್ಳುವ ಕಿಟ್ ವಿತರಣೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಪ್ರತಿ ಮನೆಗಳಿಗೂ ಬಿಪಿ ಹಾಗೂ ಶುಗರ್ ಚೆಕ್ ಮಾಡಿಕೊಳ್ಳುವ ಕಿಟ್ ವಿತರಣೆ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗಂಡೂರಾವ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮನುಷ್ಯರಿಗೆ ಸಕ್ಕರೆ ಕಾಯಿಲೆ ಹಾಗೂ ಬಿಪಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿದ್ದು,ಅವುಗಳನ್ನು ನಿತ್ಯವೂ ಸರಿಯಾಗಿ ಎದುರಿಸಿದರೆ ಮಾತ್ರ ನೆಮ್ಮದಿಯಾಗಿ ಜೀವನ ನಡೆಸಬಹುದು ಅಥವಾ ವೃದ್ಧಾಪ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಅದಕ್ಕಾಗಿ, ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರತಿ ಮನೆಗೆ …

Read More »

10 ವರ್ಷಗಳಲ್ಲಿ 19 ದೇಶಗಳಿಂದ ಸನ್ಮಾನ, 14 ಭಾಷಣ: ಹೊಸ ಇತಿಹಾಸ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 10 ವರ್ಷಗಳಲ್ಲಿ 19 ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿವೆ. ಅಲ್ಲದೆ, ಈ ಅವಧಿಯಲ್ಲಿ ಅವರು 14 ಬಾರಿ ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ಗೌರವಿಸಿದ ದೇಶಗಳಲ್ಲಿ ಮುಸ್ಲಿಂ ಜಗತ್ತಿನ ದೇಶಗಳೂ ಸೇರಿವೆ. ರಾಜತಾಂತ್ರಿಕ ದೃಷ್ಟಿಯಿಂದ ಇದು ದೊಡ್ಡ ವಿಷಯ ಎಂದು ಬಿಜೆಪಿ ಹೇಳಿದೆ. ಭಾರತವನ್ನು ಅಮೆರಿಕ ಮತ್ತು ರಷ್ಯಾ ಗೌರವಿಸುತ್ತದೆ, ಆದರೀಗ ಗಯಾನಾ, ಅಫ್ಘಾನಿಸ್ತಾನ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಕೂಡಾ ಭಾರತದ ಮಾತು …

Read More »

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ಸೇರಿ ಹಲವು ಮಸೂದೆ ಮಂಡಿಸಲು ಸಿದ್ಧತೆ

ನವದೆಹಲಿ: ದೇಶದಾದ್ಯಂತ ವಕ್ಫ್ ವಿವಾದ ಎದ್ದಿದ್ದು, ರೈತರಿಗೆ, ಮಠ ಮಂದಿರಗಳಿಗೆ ಸೇರಿರುವ ಜಮೀನುಗಳಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡಲಾಗುತ್ತಿದೆ. ಇದರ ಮಧ್ಯೆ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂದೆ ಮಂಡಿಸಲು ತಯಾರಿ ನಡೆದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂಸೆ ಮಂಡನೆ ಮಾಡುವ ಜೊತೆ ಐದು ಹೊಸ ಮಸೂದೆಗಳನ್ನು ಪರಿಚಯಿಸಲು ಸಜ್ಜಾಗಿದೆ. ಇದರಲ್ಲಿ ಒಂದು ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ …

Read More »

ಜಾತಿಗಣತಿ ವರದಿ ಸದ್ಯದಲ್ಲೇ ಪ್ರಕಟ: ಸಚಿವ ಡಾ.ಜಿ.ಪರಮೇಶ್ವರ್

ಮೈಸೂರು : ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿರುವ ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಪ್ರಕಟ ಮಾಡಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಬಂದಿದ್ದರಿಂದ ವರದಿ ಪ್ರಕಟ ಮುಂದಕ್ಕೆ ಹೋಗಿದೆ. ವರದಿ ಪ್ರಕಟಕ್ಕೆ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ ಎಂದರು. ಜಾತಿಗಣತಿ ಜಾರಿಯಾಗಬೇಕಾ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾವ ಸಮುದಾಯ …

Read More »

ದಲಿತ ಸಿಎಂ ಪ್ರಸ್ತಾಪ ಬಂದರೆ ಮಲ್ಲಿಕಾರ್ಜುನ ಖರ್ಗೆ ನಂತರ ನಾನೇ ಹಿರಿಯ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ದಲಿತರನ್ನು ಸಿಎಂ ಮಾಡುವ ಪ್ರಸ್ತಾಪ ಬಂದರೆ ಪರಿಶಿಷ್ಟ ಜಾತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಂತರ ನಾನು ಹಿರಿಯನಿದ್ದೇನೆ. ಮುಖ್ಯಮಂತ್ರಿ ಆಯ್ಕೆ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ವಿಧಾನಸೌಧದಲ್ಲಿ ಸಿಎಂ ಯಾವಾಗ ಆಗುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟ ಜಾತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಂತರ ನಾನು ಹಿರಿಯನಿದ್ದೇನೆ. ಖರ್ಗೆ …

Read More »

ಕೃಷಿಯೇತರ ಅಭಿವೃದ್ಧಿಯಾಗದ ಜಮೀನು ನೋಂದಣಿಗೆ ಸೂಚನೆ

ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಗೊಂಡು ಅಭಿವೃದ್ಧಿಯಾಗದೇ ಇರುವ ಜಮೀನುಗಳ ನೋಂದಣಿ ಪ್ರಕ್ರಿಯೆಗೆ ಇದ್ದ ತೊಡಕುಗಳನ್ನು ಕಂದಾಯ ಇಲಾಖೆ ನಿವಾರಿಸಿದ್ದು, ಅಂತಹ ಜಮೀನುಗಳನ್ನು ಕೃಷಿಯೇತರ ಅಭಿವೃದ್ಧಿಯಾಗದ ಜಮೀನು ಎಂದು ಪರಿಗಣಿಸಲು ಸೂಚಿಸಿದೆ. ಕಾವೇರಿ-2 ತಂತ್ರಾಂಶ ಹಾಗೂ ಇ-ಖಾತೆ ಸಂಯೋಜನೆಗೊಂಡ ನಂತರ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿದ್ದರೂ, ನಿವೇಶನ ಇತ್ಯಾದಿ ಆಸ್ತಿ ಸಂಖ್ಯೆ ಪಡೆಯದೆ (ಇ-ಖಾತಾ) ಜಮೀನಿನ ಸ್ವರೂಪದಲ್ಲೇ ಉಳಿದಿದ್ದ ಭೂಮಿಯನ್ನು ಪಹಣಿ ಅಥವಾ ಇ-ಖಾತಾ ಆಧಾರದ ಮೇಲೆ ನೋಂದಣಿ ಮಾಡಲು ಸಾಧ್ಯವಾಗದೇ, ಯಾವುದೇ …

Read More »

ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದತಿಗೆ ಆಗ್ರಹಿಸಿ ಬೀದರ್ ನಲ್ಲಿ ಬಿಜೆಪಿಯಿಂದ ಧರಣಿ

ಬೀದರ್: ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಲಾಗುತ್ತಿದೆ. ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಜಿಲ್ಲೆಯ ವಿವಿಧ ಸ್ವಾಮೀಜಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆಗಳವರು ಪಾಲ್ಗೊಂಡಿದ್ದಾರೆ. ವಕ್ಫ್ ವಿವಾದ, ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.ವಕ್ಫ್ ಅದಾಲತ್ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬೇಕು. ಬಿಪಿಎಲ್ ಕಾರ್ಡ್ …

Read More »

ಕಲಬುರಗಿ: ನಾಳೆ(ನ.23) ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ.ಉಪಚುನಾವಣೆ ಹಿನ್ನಲೆ ಪ್ರತಿಬಂಧಕಾಜ್ಞೆ ಜಾರಿ

ಕಲಬುರಗಿ : ವಿವಿಧ ಕಾರಣಗಳಿಂದ ತೆರವಾಗಿರುವ ಕಲಬುರಗಿ ನಗರ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯತಿ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ (ನ.23 ರಂದು) ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಉಪಚುನಾವಣೆ ನಡೆಯಲಿರುವ ಮತಗಟ್ಟೆಗಳ 200 ಮೀಟರ್ ಸುತ್ತಲೂ ನ.23ರ ಬೆಳಿಗ್ಗೆ 6 ರಿಂದ ನ.24ರ ಬೆಳಿಗ್ಗೆ 6 ಗಂಟೆಯವರೆಗೆ 2023 ಬಿ.ಎನ್.ಎಸ್.ಎಸ್ ಸೆಕ್ಷನ್ 163 ರನ್ವಯ ಕೆಳಕಂಡ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆಯನ್ನು …

Read More »

ದಲಿತ ಮಹಿಳೆ ಕೊಲೆ ಪ್ರಕರಣ: 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ

ತುಮಕೂರು: 2010ರಲ್ಲಿ ಇಡೀ ಕರ್ನಾಟಕದಾದ್ಯಂತ ಭಾರೀ ಸುದ್ದಿಯಾಗಿದ್ದ ತುಮಕೂರು ಜಿಲ್ಲೆಯ ಗೋಪಾಲಪುರ ಗ್ರಾಮದಲ್ಲಿ ನಡೆದಿದ್ದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2010ರ ಜೂನ್ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆ ಕೊಲೆಯಾಗಿದ್ದು, ಇದೀಗ 14 ವರ್ಷಗಳ ಬಳಿಕ ಒಂದೇ ಗ್ರಾಮದ ಬರೋಬ್ಬರಿ 21 ಆರೋಪಿಗಳಿಗೆ ತುಮಕೂರು 3ನೇ ಅಧಿಕ ಜಿಲ್ಲಾ ಸತ್ರ …

Read More »

ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಧಾರವಾಡ : 2024-25 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಉಳಿದ ಸೀಟುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಸ್ನಾತಕ ಪದವಿ ಹೊಂದಿದ ಆಸಕ್ತರು ಅರ್ಜಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಜಾಲತಾಣ www.kud.ac.in ದಿಂದ ಡೌನಲೋಡ ಮಾಡಿಕೊಂಡು ಡಿಸೆಂಬರ 3, 2024 ರೊಳಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಕವಿವಿ ಪತ್ರಿಕೋಧ್ಯಮ ವಿಭಾಗದಲ್ಲಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯನ್ನು ಡಿಸೆಂಬರ 5, 2024 ರಂದು 11.30 ಗಂಟೆಗೆ ಪತ್ರಿಕೋದ್ಯಮ …

Read More »