Breaking News

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ಸೇರಿ ಹಲವು ಮಸೂದೆ ಮಂಡಿಸಲು ಸಿದ್ಧತೆ

ನವದೆಹಲಿ: ದೇಶದಾದ್ಯಂತ ವಕ್ಫ್ ವಿವಾದ ಎದ್ದಿದ್ದು, ರೈತರಿಗೆ, ಮಠ ಮಂದಿರಗಳಿಗೆ ಸೇರಿರುವ ಜಮೀನುಗಳಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡಲಾಗುತ್ತಿದೆ. ಇದರ ಮಧ್ಯೆ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂದೆ ಮಂಡಿಸಲು ತಯಾರಿ ನಡೆದಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ವಸೂಸೆ ಮಂಡನೆ ಮಾಡುವ ಜೊತೆ ಐದು ಹೊಸ ಮಸೂದೆಗಳನ್ನು ಪರಿಚಯಿಸಲು ಸಜ್ಜಾಗಿದೆ.
ಇದರಲ್ಲಿ ಒಂದು ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ಧ್ವಜ ಹಡಗುಗಳನ್ನು ಪ್ರೋತ್ಸಾಹಿಸುವುದು ಮತ್ತು ಇನ್ನೊಂದು ಭಾರತೀಯ ಬಂದರುಗಳ ಸಂರಕ್ಷಣೆ ಕುರಿತಾದ ಮಸೂದೆ.
ಈ ವರ್ಷದ ಆಗಸ್ಟ್‌ನಿಂದ ಪ್ರಸ್ತಾವಿತ ಶಾಸನವನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಲ್ಲಿಸಿದ ನಂತರ ವಕ್ಸ್ (ತಿದ್ದುಪಡಿ) ಮಸೂದೆ 2024 ಅನ್ನು ಅಂಗೀಕರಿಸಲು ಯೋಜಿಸಿದೆ.
ಬಾಕಿ ಇರುವ 13 ಮಸೂದೆಗಳು ಸೇರಿದಂತೆ ಒಟ್ಟು 18 ಮಸೂದೆಗಳು ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯಗಳಿಗೆ ಸಲ್ಲಿಸಿದ ಮಸೂದೆಗಳ ತಾತ್ಕಾಲಿಕ ಪಟ್ಟಿಯ ಭಾಗವಾಗಿದೆ ಎಂದು ಉಭಯ ಸದನಗಳ ಸಂಸತ್ತಿನ ಬುಲೆಟಿನ್‌ಗಳು ತಿಳಿಸಿವೆ. ಲೋಕಸಭೆಯಲ್ಲಿ 15 ಮಸೂದೆಗಳ ಪಟ್ಟಿ ಇದ್ದರೆ, ರಾಜ್ಯಸಭೆಯಲ್ಲಿ ಕೆಳಮನೆಗಿಂತ ಮೂರು ಮಸೂದೆಗಳು ಹೆಚ್ಚು. ಹೊಸ ಮಸೂದೆಗಳಲ್ಲಿ ಕರಾವಳಿ ಹಡಗು ಮಸೂದೆ, 2024 ಸೇರಿದೆ, ಇದು ಕರಾವಳಿ ವ್ಯಾಪಾರವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ನಾಗರಿಕರ ಒಡೆತನದ ಮತ್ತು ನಿರ್ವಹಿಸುವ ಭಾರತೀಯ ಧ್ವಜ ಹಡಗುಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *