Breaking News

ರಾಯಚೂರು

ರೈತರಿಗಾಗಿ ಕ್ಯೂಆರ್‌ಕೋಡ್‌ ಅಭಿವೃದ್ಧಿಪಡಿಸಿದ ರಾಯಚೂರು ಕೃಷಿ ವಿವಿ

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಕೃಷಿ ಘಟಕವು ರೇಷ್ಮೆ ಬೆಳೆಗಾರರು ಸುಲಭವಾಗಿ ಹೊಸ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದುಕೊಳ್ಳುವಂತಾಗಲು ಕ್ಯೂಆರ್‌ಕೋಡ್‌ ಅಭಿವೃದ್ಧಿ ಪಡಿಸಿದೆ. ರೇಷ್ಮೆ ಹುಳುವಿನ ಜೀವನ ಚಕ್ರ, ಅವುಗಳ ಸೋಂಕು ರೋಗ, ಬ್ಯಾಕ್ಟೇರಿಯಾದಿಂದ ಬರುವ ರೋಗ, ಬೂದಿರೋಗ ಹಾಗೂ ಚುಕ್ಕೆ ರೋಗಗಳ ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ಯೂಆರ್‌ಕೋಡ್‌ ಸಿದ್ಧಪಡಿಸಿ ಮಾಹಿತಿ …

Read More »

ಅಭಿವೃದ್ದಿ ಕಾಮಗಾರಿಗಳಲ್ಲಿ ಸುರಕ್ಷತೆಗೆ ಒತ್ತು ನೀಡಿ: ಸಚಿವ ಸತೀಶ್ ಜಾರಕಿಹೊಳಿ

ರಾಯಚೂರು: ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ ಲಿಂಗಸುಗೂರು ರಸ್ತೆ ವೃತ್ತದವರೆಗಿನ 78 ಕಿಲೋಮೀಟರ್‌ ರಸ್ತೆಯ ಅಭಿವೃದ್ದಿ ಕಾಮಗಾರಿಯಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು, ಗುಣಮಟ್ಟದ ಹಾಗೂ ಕ್ಷಿಪ್ರಗತಿಯಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಅಧಿಕಾಗಳಿಗೆ ಸೂಚನೆ ನೀಡಿದರು. ವಿಕಾಸ ಸೌಧದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸಚಿವರಾದ ಎನ್‌ ಎಸ್‌ ಭೋಸರಾಜು, ಶರಣಪ್ರಕಾಶ್‌ ಪಾಟೀಲ್‌, ಶಾಸಕರಾದ …

Read More »

ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ವಿಚಾರಗೋಷ್ಠಿ

ರಾಯಚೂರು: ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ರಾಯಚೂರು ಹಾಗೂ ಶ್ರೀ ಆದಿ ಜಾಂಬವ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ರಂಗಮಂದಿರ ಹಿಂದಿರುವ ಮಾದರ ಚೆನ್ನಯ್ಯ ಭವನದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ವಿಚಾರಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಡೆಯಿತು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ತಳ ಸಮುದಾಯದ ವಿದ್ಯಾವಂತರು ಹಾಗೂ ನೌಕರರು ಜಾಗೃತರಾಗಿ ಒಳ ಮೀಸಲಾತಿ ಪಡೆದುಕೊಳ್ಳಲು ಅಗತ್ಯ ಸಹಕಾರ ನೀಡಬೇಕು …

Read More »

5 ತಿಂಗಳಲ್ಲಿ 597 ಕೆ.ಜಿ ಚಿನ್ನ ಉತ್ಪಾದಿಸಿದ ಹಟ್ಟಿ ಚಿನ್ನದ ಗಣಿ

ಹಟ್ಟಿಚಿನ್ನದಗಣಿ: ಪ್ರಸಕ್ತ ಆರ್ಥಿಕ ವರ್ಷದ ಮೊದಲ 5 ತಿಂಗಳಲ್ಲಿ ಹಟ್ಟಿಚಿನ್ನದಗಣಿ ಕಂಪನಿ 613.686 ಕೆಜಿ ಗುರಿ ಪೈಕಿ 597.772 ಕೆಜಿ ಚಿನ್ನ ಉತ್ಪಾದಿಸಿದೆ. ಪ್ರತಿ ಟನ್ ಅದಿರಿನಲ್ಲಿ 2.23 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದು, 2.74 ಗ್ರಾಂ. ಹಳದಿ ಲೋಹ ಉತ್ಪಾದನೆಯಾಗಿದೆ. ಏಪ್ರಿಲ್‌ನಲ್ಲಿ 118, ಮೇ 90, ಜೂನ್ 110, ಜುಲೈ 150, ಅಗಸ್ಟ್‌ನಲ್ಲಿ 127 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಜುಲೈನಲ್ಲಿ 133 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಲಾಗಿತ್ತು. …

Read More »

ಕೆರೆಯಲ್ಲಿನ ಮೊಸಳೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ರಾಯಚೂರು: ಕೃಷ್ಣಾ ನದಿ ಮೂಲಕ ತಾಲ್ಲೂಕಿನ ಡಿ.ರಾಂಪುರ ಕೆರೆ ಸೇರಿಕೊಂಡಿದ್ದ ಭಾರೀ ಗಾತ್ರದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗ್ರಾಮದ ಕೆರೆಗೆ ನೀರು ಕುಡಿಯಲು ಹೋದ ಕುರಿಗಳನ್ನು, ಹಂದಿಗಳನ್ನು ಮೊಸಳೆ ತಿಂದು ಹಾಕುತ್ತಿತ್ತು. ಇದನ್ನು ಗಮನಿಸಿದ್ದ ಗ್ರಾಮಸ್ಥರು ರಾಯಚೂರು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್‌ ಮೂಲಕ ತಿಳಿಸಿದ್ದರು. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿರಲಿಲ್ಲ. ಸಾಕು ಜಾನುವಾರುಗಳ ಮೇಲೆ ದಾಳಿ ನಡೆಸಿ …

Read More »

ಖಾಸಗಿ ಬಸ್ ಹರಿದು 150 ಕುರಿಗಳ ಸಾವು

ರಾಯಚೂರು: ಸಮೀಪದ ಯರಮರಸ್ ಬೈಪಾಸ್ ನಲ್ಲಿ ಖಾಸಗಿ ಬಸ್ ಹರಿದು 150ಕ್ಕೂ ಹೆಚ್ಚು ಕುರಿಗಳ ಮಾರಣಹೋಮ ನಡೆದಿದ್ದು, ಅಂದಾಜು 15 ಲಕ್ಷ ಹಾನಿ ಸಂಭವಿಸಿದೆ. ತೆಲಂಗಾಣದ ನಾರಾಯಪೇಟೆ, ಹೊಳಪುರ ಮೂಲದ ಕುರಿಗಾಹಿಗಳು ಕುರಿ ಹೊಡೆದುಕೊಂಡು ಹೊಗುವಾಗ ವೇಗದಲ್ಲಿ ಬಂದ ಬಸ್ ಮೇಲೆ ಹರಿದಿದೆ. ಪರಿಣಾಮ 150ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಅಪ್ಪಚ್ಚಿಯಾದರೆ 30 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ ಗಂಟೆ ಮಲ್ಲೇಶ, ಪೂಜಾರಿ ಚಿನ್ನಪ್ಪ, ಬಾಲರಾಜ್ ಎಂಬುವವರಿಗೆ ಸೇರಿದ ಕುರಿಗಳು …

Read More »

ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬೋಸರಾಜು

ರಾಯಚೂರು: ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69 ರಲ್ಲಿ 9 ಅಡಿ, ಮೈಲ್ 47 ರಲ್ಲಿ 12 ಅಡಿ ನೀರು ಸರಬರಾಜು ಆಗುವದರಿಂದ ಕೆಳಭಾಗದ ಮಾನ್ವಿ, ಸಿರವಾರ, ರಾಯಚೂರಿಗೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ ಶೀಘ್ರ ಮೈಲ್ 69, 47 ರಲ್ಲಿ ಸರಿಯಾದ ನೀರಿ‌ನ ಪ್ರಮಾಣವನ್ನು ಕಾಯ್ದಿರಿಸುವಂತೆ ಸಚಿವ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು‌. ಕೆಳಭಾಗಕ್ಕೆ ಸಮರ್ಪಕವಾಗಿ‌ ನೀರು ಸರಬರಾಜಾಗದ ಹಿನ್ನಲೆ‌ ಸಚಿವ ಎನ್‌ಎಸ್ ಬೋಸರಾಜು, …

Read More »

ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ರಾಜ್ಯ ಸರ್ಕಾರ ಆದೇಶ

ರಾಯಚೂರು: ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಂದು ಮೇಲ್ದರ್ಜೆಗೆ ಏರಿಸಿ ಆದೇಶ ಹೊರಡಿಸಿದೆ. ಇಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಕೂಗು ಹಲವು ವರ್ಷಗಳಿಂದಲೇ ಇತ್ತು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿ ಕಾರ್ಯಯೋಜನೆ ರೂಪಿಸಲಾಗಿತ್ತು. ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ನಗರಸಭೆಯನ್ನು ಮಹಾನಗರ …

Read More »

ಹಳೆ ವೈಷಮ್ಯದ ಹಿನ್ನಲೆ ಎರಡು ಗುಂಪುಗಳ ನಡುವೆ ಗಲಾಟೆ: ಓರ್ವ ಸಾವು, 8 ಮಂದಿಗೆ ಗಂಭೀರ ಗಾಯ

ರಾಯಚೂರು: ಜಿಲ್ಲೆಯಲ್ಲಿ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಅಂತ್ಯಸಂಸ್ಕಾರದ ವೇಳೆಯಲ್ಲೇ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಕೈಕೈ ಮಿಲಾಯಿಸಿ ಎರಡು ಗುಂಪುಗಳು ಬಡಿದಾಡಿಕೊಂಡ ಪರಿಣಾಮ, ಓರ್ವ ಸಾವನ್ನಪ್ಪಿ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯಚೂರು ತಾಲ್ಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಭೀಮೇಶ ನಾಯಕ(38) ಎಂಬುವರು ಸಾವನ್ನಪ್ಪಿದ್ದಾರೆ. ರಾಮಲಮ್ಮ, ಅಲಾರಿ ನಾಯಕ್, ದೋಳಯ್ಯ ಸೇರಿದಂತೆ 8 ಮಂದಿ ಹೊಡೆದಾಟದಲ್ಲಿ ಗಂಭೀರವಾಗಿ …

Read More »

ಮನೆ ಮಾಲೀಕರನ್ನು ಕಟ್ಟಿಹಾಕಿ ದುಷ್ಕರ್ಮಿಗಳಿಂದ ಕಳ್ಳತನ

ರಾಯಚೂರು: ಇಲ್ಲಿನ ಲಕ್ಷ್ಮೀ ನರಸಿಂಹ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ ಮನೆ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರು ಮನೆ ಮಾಲೀಕರನ್ನು ಕಟ್ಟಿಹಾಕಿ 22 ತೊಲೆ ಬಂಗಾರ, 2 ಕೆ.ಜಿ ಬೆಳ್ಳಿ ಹಾಗೂ ₹2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಕಪ್ಪು ಬಣ್ಣದ ಬಟ್ಟೆ ಧರಿಸಿದ ದರೋಡೆಕೋರರ ಗ್ಯಾಂಗ್ ಮನೆಗೆ ನುಗ್ಗುವ ಮುಂಚೆ ಬಡಾವಣೆಯ ಅಕ್ಕಪಕ್ಕದ ಮನೆಗಳಿಗೆ ಹೊರಗೆ ಬೀಗ ಹಾಕಿದ್ದಾರೆ. ಸುತ್ತಮುತ್ತಲಿನ ಬೀದಿ ದೀಪಗಳನ್ನು ಆಫ್ ಮಾಡಿದ್ದಾರೆ ನಂತರ …

Read More »