Breaking News

ಗದಗ

ಭರ್ಜರಿಯಾದ ಗಣೇಶ ಮೂರ್ತಿಗಳ ಮಾರಾಟ…..

ಗದಗ: ಗಣೇಶ ಹಬ್ಬ ಅಂದ್ರೆ ಸಡಗರ ಸಂಭ್ರಮ ಇದ್ದೇ ಇರುತ್ತೆ.‌ ನಗರದಲ್ಲಿ ಹಬ್ಬಕ್ಕೆ ಮುಂಚಿನ ದಿನವೇ ಖರೀದಿ ಭರಾಟೆ ಬಲು ಜೋರಾಗಿದೆ. ಮಾರ್ಕೆಟ್​ನತ್ತ ಬರುತ್ತಿರೋ ಜನ ತಮಗೆ ಇಷ್ಟವಾದ ಮೂರ್ತಿಗಳನ್ನ ಬುಕ್ ಮಾಡಿದ್ದಾರೆ. ಪರಿಸರ ಸ್ನೇಹಿ ಗಣಪತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಅನ್ನೋ ನಿಟ್ಟಿನಲ್ಲಿ ಗದಗ ಜಿಲ್ಲೆ ತಯಾರಕರು ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡೋದಕ್ಕೆ ಮುಂದಾಗಿದ್ದು, ಪರಿಸರ ಸ್ನೇಹಿ ಗಣಪಗಳ ಮಾರಾಟವೂ ಭರ್ಜರಿಯಾಗಿ ನಡೀತಿದೆ. ಗದಗ ನಗರದ ಎಪಿಎಂಸಿ …

Read More »

ನಾಳೆ ವರಮಹಾಲಕ್ಷ್ಮಿ ಹಬ್ಬ: ಭರ್ಜರಿ ವ್ಯಾಪಾರ

ಗದಗ: ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗದಗ ನಗರದ ಮಾರುಕಟ್ಟೆಯಲ್ಲಿ ಜನರಿಂದ ತುಂಬಿ ತುಳುಕ್ಕುತ್ತಿದೆ. ಬಾಳೇಹಣ್ಣು, ಹೂವಿನ ದರ ಗಗನಕ್ಕೇರಿದೆ. ದುಬಾರಿಯಾದ್ರೂ ಪರವಾಗಿಲ್ಲ‌ ಹಬ್ಬ ಆಚರಣೆ ಮಾಡಲೇಬೇಕಲ್ಲ, ಅಂತಿರೋ ಜನರಿಂದ ಹೂ, ಹಣ್ಣು, ಬಾಳೆ ದಿಂಡು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನೂ ಕೆಲವರು ಅವಶ್ಯಕತೆಗೆ ತಕ್ಕಷ್ಟೇ ಖರೀದಿ ಮಾಡ್ತಿದ್ದಾರೆ. ಭರ್ಜರಿ ವ್ಯಾಪಾರ ಮಾಡ್ತಿರೋ ವ್ಯಾಪಾರಿಗಳು ಫುಲ್‌ ಖುಷಿಯಾಗಿದ್ದಾರೆ. ಆ ಮೂಲಕ ಸಂಭ್ರಮದ ವರಮಹಾಲಕ್ಷ್ಮಿ‌ ಹಬ್ಬ ಆಚರಣೆಗೆ ಸಿಧ್ಧರಾಗಿದ್ದಾರೆ.

Read More »

ಮುಳಗುಂದದಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ…

ಮುಳಗುಂದ : ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋಲಾಟ, ಯುವಕರ ಹೆಜ್ಜೆ ಮೇಳ ಮೆರವಣಿಗೆಯೊಂದಿಗೆ ಶನಿವಾರ ಆಚರಿಸಲಾಯಿತು.ಸಂಪ್ರದಾಯದಂತೆ ಪಟ್ಟಣದ ದಾವಲ್ ಮಲ್ಲಿಕ ಪಹಾಡ, ನದಾಫ್ ಗಲ್ಲಿ ಕೌಲಪೇಟಿ, ಮಕಾನದಾರ ಮಸೀದಿ, ಚಿಂದಿಪೇಟಿ, ಸವಳಭಾವಿ, ತಿಗಡಿಕೇರಿ, ಬಂಡಿ ಓಣಿ, ಸಂಗನಪೇಟಿನಲ್ಲಿ ಪ್ರತಿಷ್ಠಾಪಿಸಲಾದ (ಪಂಜಾ) ಅಲೈದೇವರು, ಡೋಲಿ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಹಾಂತ ಶಿವಯೋಗಿಶ್ವರ ಮಠದ ಹತ್ತಿರ ಪರಸ್ಪರ ಎದರುಗೊಂಡ (ಅಲೈಬಲೈ) …

Read More »

ವಿದ್ಯುತ್ ಶಾರ್ಟಸರ್ಕ್ಯೂಟ ಮನೆಗೆ ಬೆಂಕಿ…

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೇರಿಯಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟದಿಂದ ಮನೆಗೆ ಬೆಂಕಿ ಬಿದ್ದು ಟಿವಿ,ಮೊಬೈಲ್ ಸೇರಿದಂತೆ ಅನೇಕ ಮನೆಯ ಸಾಮಗ್ರಿಗಳು ಹಾನಿಗೊಳಗಾದ ಘಟನೆ ಜರುಗಿದೆ.ಬಸ್ತಿಕೇರಿಯ ನಿವಾಸಿಯಾದ ಪರಮೇಶ್ವರಪ್ಪ ಮಹಾರುದ್ರಪ್ಪ ಯರ್ಲಗಟ್ಟಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಕ್ಕಪಕ್ಕದ ಮನೆಯವರು ಬಂದು ಬೆಂಕಿ ನಿಂದಿಸಿದ್ದಾರೆ‌.ಯಾವುದೇ ಪ್ರಾಣಹಾನಿಯಾಗಿಲ್ಲ.

Read More »

ಗೋವನಾಳ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ…

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜನಗೌಡ ನಿಂಗನಗೌಡ ಕೆಂಚನಗೌಡ್ರ ಮತ್ತು ಉಪಾಧ್ಯಕ್ಷೆಯಾಗಿ ನಿರ್ಮಲಾ ಚಂದ್ರಶೇಖರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೂರು ಗ್ರಾಮಗಳಾದ ಗೋವನಾಳ ಗುಲಗೊಂಜಿಕೊಪ್ಪ, ವಡೆಯರ ಮಲ್ಲಾಪುರ ಇರುವ ಪಂಚಾಯತಿಗೆ 8 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇಬ್ಬರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ …

Read More »

ಗದಗ ಜಿಲ್ಲೆಯಲ್ಲಿ ಪ್ರವಾಹದ ಭೀತಿ

ಗದಗ;- ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ನದಿ‌ ದಡದ ಗ್ರಾಮಗಳಿಗೆ ಪ್ರವಾಹದ ಆತಂಕ ಶುರುವಾಗಿದೆ. ಮಲಪ್ರಭಾ ನದಿಯ ದಡದ ಗ್ರಾಮಗಳಲ್ಲಿ ಧ್ವನಿವರ್ದಕ ಮೂಲಕ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಹಾಗೂ ಪೋಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ಮಲಪ್ರಭಾ ನದಿಯಲ್ಲಿ ದಿನದಿನೇ ನೀರನ ಮಟ್ಟ ಹೆಚ್ಚಾಗ್ತಿದೆ ನದಿಗೆ ಹೋಗಬಾರದು. ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳನ್ನೂ …

Read More »

ಕುರ್ತಕೋಟಿ ಗ್ರಾಮ ಪಂಚಾಯ್ತಿಗೆ ಅಶೋಕ ಅಧ್ಯಕ್ಷ..

ಮುಳಗುಂದ : ಸಮೀಪದ ಕುರ್ತಕೋಟಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಶೋಕ ವಿ.ಶಿರಹಟ್ಟಿ, ಉಪಾಧ್ಯಕ್ಷರಾಗಿ ಸರೋಜಾ ಮಾ.ಪ್ರಭಯ್ಯನಮಠ ಅವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಮುಖಂಡರಾದ ಅಪ್ಪಣ್ಣ ಇನಾಮತಿ ಗ್ರಾ.ಪಂ ಸದಸ್ಯರು,ಪಿಡಿಒ ರವಿ ಅಳವಂಡಿ, ಸಿಬ್ಬಂದಿ ಮೊದಲಾದವರು ಅಭಿನಂದಿಸಿದರು.

Read More »

ಚಿಂಚಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಯ್ಕೆ…

ಮುಳಗುಂದ : ಸಮೀಪದ ಚಿಂಚಲಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಕ್ಕ ಹೇಮರಡ್ಡಿ ಬಂಗಾರಿ, ಉಪಾಧ್ಯಕ್ಷರಾಗಿ ಲಲಿತಾ ಮಾಲತೇಶ ಕುರಹಟ್ಟಿ ಅವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷೆ,ಉಪಾಧ್ಯಕ್ಷರಿಗೆ ಗ್ರಾಮ ಪಂಚಾಯ್ತಿ ಸದಸ್ಯರು,ಮುಖಂಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ,ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಎಚ್.ವೈ.ಪೂಜಾರ, …

Read More »

ರಸ್ತೆ ದುರಸ್ತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯಲ್ಲಿ ಪ್ರತಿಭಟನೆ.

ಲಕ್ಷ್ಮೇಶ್ವರ: ಗದಗ ಹೌದು ಲಕ್ಷ್ಮೇಶ್ವರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ವಿದ್ಯಾರ್ಥಿಗಳು ಜಿಟಿಜಿಟಿ ಮಳೆ ಲೆಕ್ಕಿಸದೆ ರಸ್ತೆ ದುರಸ್ತಿ ಮಾಡಿಕೊಡಿ ಎಂದು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದರು.. ತಾಯಿ ಪಾರ್ವತಿ ಮಕ್ಕಳ ಬಳಗವು ಅನೇಕ ವರ್ಷಗಳಿಂದ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಅಕ್ಷರಜ್ಞಾನ ನೀಡುತ್ತಾ ಬಂದಿದೆ.ಇಲ್ಲಿ ಸುಮಾರು 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದೆ. ತೋಟದೇವರಮಠದಲ್ಲಿ ಬೃಹತ ಕಟ್ಟಡವನ್ನು ಹೊಂದಿದೆ ಇಲ್ಲಿಗೆ ಸಾವಿರಾರು ಮಕ್ಕಳು ವ್ಯಾಸಂಗ ಮಾಡಲು ಬರುತ್ತಾರೆ …

Read More »

ಗದಗನ ಹಳ್ಳಿಗುಡಿಯಲ್ಲಿ ಅಪಘಾತ

ತುರ್ತು ಸಹಾಯವಾಣಿಗೆ ಹಳ್ಳಿಗುಡಿ ಹತ್ತಿರ ಅಪಘಾತದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಎರಡು ಕಾರುಗಳ ನಡುವೆ ಅಪಘಾತವಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಸದರಿ ಪ್ರಕರಣ ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಘಟನೆ ಸಂದರ್ಭದಲ್ಲಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣಕ್ಕೇ ಸಂಭದಿಸಿದಂತೆ ಗದಗ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More »