Breaking News

ಮೈಸೂರು

ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ….

ಮೈಸೂರು: ಜಂಬೂಸವಾರಿಗೆ ಕೆಲ ಗಂಟೆಗಳು ಬಾಕಿ ಇದ್ದು, ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 11 ಐಪಿಎಸ್ ಅಧಿಕಾರಿಗಳು ಸೇರಿ 4,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಅರಮನೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಪೂಜೆ ನಡೆಯಲಿದೆ. ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿಯಲ್ಲಿನ ತಾಯಿ …

Read More »

ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿದೆ….

ಮೈಸೂರು: ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗಕ್ಕೆ ತಯಾರಿ ನಡೆದಿದೆ. ಜಟ್ಟಿ ಕಾಳಗಕ್ಕೆ ಎರಡು ಜೋಡಿ ಜಟ್ಟಿಗಳು ಸಿದ್ಧರಾಗಿದ್ದಾರೆ. ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ನಡುವೆ ಕಾಳಾಗ ನಡೆಯಲಿದೆ. ಮತ್ತು ಬೆಂಗಳೂರಿನ ಪ್ರಮೋದ್ ಜಟ್ಟಿ , ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿದೆ. ವಿಜಯದಶಮಿ ದಿನ ಜಟ್ಟಿಗಳು ಚಾಮುಂಡೇಶ್ವರಿ ದೇವಿಗೆ ಶಿರಭಾಗದಿಂದ ರಕ್ತಾರ್ಪಣೆ ಮಾಡಲಿದ್ದಾರೆ. ಮಟ್ಟಿ‌ ಮೇಲೆ ಜಟ್ಟಿ …

Read More »

ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಇತಿಹಾಸವೇ ಬಲು ರೋಚಕ…..

ಮೈಸೂರು: ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಇತಿಹಾಸವೇ ಬಲು ರೋಚಕ. ಅಭಿಮನ್ಯು ಅಂಬಾರಿ ಹೊರಲು ಸೈ ಕೂಂಬಿಂಗ್ ಮಾಡಲೂ ಬದ್ದನಾಗಿದ್ದಾನೆ. ಒಮ್ಮೆ ಅಭಿಮನ್ಯು ಕೂಂಬಿಂಗ್​​ಗೆ ಇಳಿದರೇ ಇದುವರೆಗೂ ಸೋತಿಲ್ಲ. ಅಭಿಮನ್ಯು ಹುಲಿ ಹಾಗೂ ಒಂಟಿ ಸಲಗವನ್ನ ಖೆಡ್ಡಾಗೆ ಕೆಡುವುದರಲ್ಲಿ ನಿಸ್ಸೀಮನಾಗಿರುವ ಚತು ಅಭಿಮನ್ಯು ಹಾಗೂ ಮಾವುತ ವಸಂತನ ಕಾಂಬಿನೇಷನ್​ಗೆ ಅರಣ್ಯಾಧಿಕಾರಿಗಳು ಫುಲ್ ಫಿದಾ ಆಗಿದ್ದಾರೆ. ಯಾವುದೇ ಕೂಂಬಿಂಗ್​ಗೆ ತೆರಳ ಬೇಕಿದ್ದರೂ ಅಭಿಮನ್ಯುನೇ ಬೇಕು. 1970 ರಲ್ಲಿ ಕೊಡುಗಿನಲ್ಲಿ …

Read More »

ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿ….

ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ ಮತ್ತು ಬನಶಂಕರಿ ದೇವಿ, ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ, ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್​ ಫಾಲ್ಸ್​, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3, ಬೀದರ್- ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ, ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ …

Read More »

ಫಲಪುಷ್ಟ ಪ್ರದರ್ಶನ ಹಾಗೂ ಆಹಾರ ಮೇಳ ವೀಕ್ಷಿಸಿದ ಡಾ.ಹೆಚ್.ಸಿ.ಮಹದೇವಪ್ಪ….

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಟ ಪ್ರದರ್ಶನ ಹಾಗೂ ಸೌಟ್ಸ್ ಮತ್ತು ಗೈಡ್ ಮೈದಾನದಲ್ಲಿನ ಆಹಾರ ಮೇಳಕ್ಕೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು. ಮೊದಲಿಗೆ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಫಲಪುಷ್ಟ ಪ್ರದರ್ಶನಕ್ಕೆ ಭೇಟಿ ನೀಡಿದ ಸಚಿವರು, ಗಾಜಿನ ಮನೆಯಲ್ಲಿ ಸಾವಿರಾರು ಹೂಗಳಿಂದ ಅರಳಿರುವ ಇಸ್ರೋ ವಿಜ್ಞಾನಿಗಳ ಸಾಧನೆಯಾದ ಚಂದ್ರಯಾನ-3 …

Read More »

ಒಕ್ಕಲಿಗರ ವಿರುದ್ಧ ಪ್ರೊ.ಭಗವಾನ್ ನೀಡಿದ್ದ ಹೇಳಿಕೆ ದಿನಕ್ಕೊಂದು ವಿವಾದ ಪಡೆದುಕೊಳ್ಳುತ್ತಿದೆ…..

ಮೈಸೂರು: ಒಕ್ಕಲಿಗರ ವಿರುದ್ಧ ಪ್ರೊ.ಭಗವಾನ್ ನೀಡಿದ್ದ ಹೇಳಿಕೆ ದಿನಕ್ಕೊಂದು ವಿವಾದ ಪಡೆದುಕೊಳ್ಳುತ್ತಿದ್ದು, ಇದೀಗ ಖಾಸಗಿಯಾಗಿ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ದಸರಾ ಯುವ ಕವಿಗೋಷ್ಠಿಯಿಂದ ಭಗವಾನ್‌ಗೆ ಕೊಕ್ ನೀಡಲಾಗಿದೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಇಂದು (ಅಕ್ಟೋಬರ್‌ 16ರಂದು) ‘ದಸರಾ ಯುವ ಕವಿಗೋಷ್ಠಿ’ಯ ಉದ್ಘಾಟನೆಯನ್ನು ವಿಚಾರವಾದಿ ಕೆ.ಎಸ್.ಭಗವಾನ್ ಅವರ ಬದಲಿಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ …

Read More »

ಪೊಲೀಸ್ ನಿಷೇಧಾಜ್ಞೆ ನಡುವೆಯೂ ಮಹಿಷ‌ ಉತ್ಸವ ಶುಕ್ರವಾರ ಯಶಸ್ವಿ…

ಮೈಸೂರು: ಪೊಲೀಸ್ ನಿಷೇಧಾಜ್ಞೆ ನಡುವೆಯೂ ಮಹಿಷ‌ ಉತ್ಸವ ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಈ ನಡುವೆ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ. ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಉತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 500 ಪೊಲೀಸರ ಬಿಗಿಭದ್ರತೆಯಲ್ಲಿ ಮಹಿಷ ಉತ್ಸವ ನಡೆಯಿತು. ಆದರೆ, ಇದೀಗ ಪ್ರೊ.ಕೆ.ಎಸ್.ಭಗವಾನ್ ಅವರು ಕುವೆಂಪು ನೀಡಿದ್ದಾರೆ ಎಂಬ ಹೇಳಿಕೆ …

Read More »

ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದು, ಜಾತಿ ಗಣತಿ ಬಗ್ಗೆ ಒಂದು ಸ್ಪಷ್ಟನೆ ನೀಡಿದ್ದಾರೆ….

ಮೈಸೂರು: ಬಿಹಾರ ಜಾತಿ ಗಣತಿ ಬಿಡುಗಡೆ ಬಳಿಕ ಕರ್ನಾಟಕದಲ್ಲಿ ಜಾತಿ ಗಣತಿ ರಿಲೀಸ್ ಆಗುತ್ತೆ ಅನ್ನೋ ಮಾತು ಬಲವಾಗಿ ಕೇಳಿಬರ್ತಿದೆ. ಈ ಬಗ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದು, ಜಾತಿ ಗಣತಿ ಬಗ್ಗೆ ಒಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ತಿಳಿಸಿದ ಮಾಹಿತಿ ಏನು? ಕರ್ನಾಟಕದಲ್ಲಿ ಕೂಡ ಬಿಹಾರದ ರೀತಿ ಜಾತಿ ಗಣತಿ ವರದಿ ಬಿಡುಗಡೆ ಆಗುತ್ತಾ?ಅಂದಹಾಗೆ ಇಡೀ ದೇಶದ ಗಮನ …

Read More »

ಈ ಬಾರಿ ದಸರಾಕ್ಕೆ ಹೊಸ ಮೆರಗು ತರಲೆಂದೇ ಏರ್ ಶೋವನ್ನು ಸೇರ್ಪಡೆ….

ಮೈಸೂರು: ಸಾಂಸ್ಕೃತಿಕ, ಕ್ರೀಡಾ ಮತ್ತು ಧಾರ್ಮಿಕ ಆಚರಣೆಗಳಿಂದ ಮೈಸೂರು ದಸರಾ ಹೆಚ್ಚಿನ ಆಕರ್ಷಣೆ ಪಡೆಯುತ್ತದೆ. ಅದರಲ್ಲೂ ದಸರಾದ ಹತ್ತು ದಿನಗಳ ಕಾಲ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿ ಪಡುವುದೇ ಮರೆಯಲಾಗದ ಅನುಭವ. ಈ ಬಾರಿ ದಸರಾಕ್ಕೆ ಹೊಸ ಮೆರಗು ತರಲೆಂದೇ ಏರ್ ಶೋವನ್ನು ಸೇರ್ಪಡೆ ಮಾಡುತ್ತಿರುವುದು ಎಲ್ಲರ ಗಮನಸೆಳೆದಿದೆ. 3 ವರ್ಷಗಳ ಬಳಿಕ ಮೈಸೂರು ದಸರಾಕ್ಕೆ ಲೋಹದ ಹಕ್ಕಿಗಳು ಪ್ರದರ್ಶನ ನೀಡಲು ಬರುತ್ತಿದ್ದು, ಪ್ರೇಕ್ಷಕರಲ್ಲಿ ಸಂಭ್ರಮದ ಧೂಳೆಬ್ಬಿಸಲಿವೆ. 2019ರಲ್ಲಿ …

Read More »

ಅರಮನೆಯ ವಿದ್ಯುದ್ದೀಪಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ….

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ವಿದ್ಯುತ್‌ ದೀಪಗಳಿಂದ ಜಗಮಗಿಸುವ ಅರಮನೆ. ಈ ಅರಮನೆ ದಸರಾ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ರಾತ್ರಿ ವೇಳೆ ನಿಗದಿತ ಅವಧಿಯಲ್ಲಿ ವಿದ್ಯುದ್ದೀಪಗಳಿಂದ ಮಿನುಗುತ್ತಾ ಗಮನಸೆಳೆಯುತ್ತದೆ. ಈ ಸುಂದರ ದೃಶ್ಯಗಳನ್ನು ಸವಿಯಲೆಂದೇ ಪ್ರವಾಸಿಗರು ಅರಮನೆಯತ್ತ ನೆರೆಯುತ್ತಾರೆ. ಅರಮನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡಿದ್ದು, ಈ ಬಲ್ಬ್‌ಗಳು ಹಲವು ಕಾರಣಗಳಿಗೆ ಹಾಳಾಗುತ್ತವೆ. ಅಂತಹ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ …

Read More »