Breaking News

ಕಾರವಾರ

ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ…..

ಕಾರವಾರ: ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೂ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿ ಎಂದು ಈಗ ಬೇಡಿಕೆ ಇಡಲಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲಾಗಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ಪ್ರಯಾಣಿಕರ ಬೇಡಿಕೆಯಂತೆ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. …

Read More »

ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ದೂರಸಂಪರ್ಕ…

ಕಾರವಾರ: ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದೇ ದೊಡ್ಡ ಸವಾಲು. ಅದರಲ್ಲಿಯೂ ಸರ್ಕಾರಿ ಯೋಜನೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ನೆಟ್‌ವರ್ಕ್‌ ಪ್ರಮುಖ ಸಾಧನವಾಗಿದ್ದರೂ ಸಂಪರ್ಕ ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್‌ ಟವರ್‌ಗಳನ್ನು ಮಂಜೂರು ಮಾಡಲಾಗಿತ್ತಾದರೂ ಇದೀಗ ಈ ಯೋಜನೆಗೂ ವಿಘ್ನ ಎದುರಾಗಿದೆ. ಬಹುಭಾಗ …

Read More »

80 ಪ್ರಯಾಣಿಕರು ಅಪಾಯದಿಂದ ಪಾರು….

ಕಾರವಾರ: ಕಾರವಾರ ಸಾರಿಗೆ ಸಂಸ್ಥೆಯ ಬಸ್​ವೊಂದರ ಟಯರ್ ಸ್ಫೋಟಗೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ 80 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರವಾರದ ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಬಳಿ ಇಂದು ಘಟನೆ ನಡೆಯಿತು.ಕೆಎ 31 ಎಫ್ 1252 ನೋಂದಣಿಯ ಬಸ್​ ಕಾರವಾರದಿಂದ ಮಲ್ಲಾಪುರ ಕದ್ರಾ ಮಾರ್ಗವಾಗಿ ಸಂಚರಿಸುತ್ತಿತ್ತು. ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಮೇಲೆ ಮುಂದಿನ ಟಯರ್ ಸ್ಪೋಟಗೊಂಡಿದೆ. ಚಾಲಕನ ಅಪಘಾತ ಸಂಭವಿಸುವ ಹಂತದಲ್ಲಿದ್ದ ಬಸ್ ಅನ್ನು ತಕ್ಷಣ ಮುಂದೆ ಹೋಗಿ ನಿಲ್ಲಿಸಿದ್ದಾರೆ. …

Read More »

ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷ…

ಕಾರವಾರ: ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷಗಳೇ ಕಳೆದಿವೆ. ಸ್ಥಳಕ್ಕೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿ ತೆರಳಿದ್ದರೂ ಇದುವರೆಗೂ ಸೇತುವೆ ಮರು ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗ್ರಾಮಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಸೇತುವೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಿತ್ಯ ಓಡಾಟ ನಡೆಸುವಂತಾಗಿದೆ. ನೂತನ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ. …

Read More »

ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ಸಾವು…

ಕಾರವಾರ: ಸ್ವಿಚ್ಡ್​​ ಬೋರ್ಡ್​ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವಯರ್​ಗೆ ಬಾಯಿ ಹಾಕಿದ ಪರಿಣಾಮ ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ಇಂದು ನಡೆದಿದೆ. ಸಿದ್ದರದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಗುಟಕರ್ ಮೃತಪಟ್ಟಿದೆ. ಇಂದು ಬೆಳಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್​ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಸ್ವಿಚ್​ ಆಫ್​ ಮಾಡಿರಲಿಲ್ಲ. ಆದರೆ, ಇದೇ ಸಮಯದಲ್ಲಿ ಮಗು …

Read More »

ಜೋಯಿಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಸಂಚಾರ ಸ್ಥಗಿತ….

ಕಾರವಾರ: ಉತ್ತರಕನ್ನಡದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜೋಯಿಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಕರಂಜೋಲ್ ರೈಲ್ವೆ ಮಾರ್ಗದಲ್ಲಿಯೇ ಭೂಕುಸಿತವಾಗಿದೆ. ಘಟನೆಯಿಂದ ಹುಬ್ಬಳ್ಳಿ-ಗೋವಾ ರೈಲು ಸಂಚಾರ ಸಂಪೂರ್ಣ ನಿಂತುಹೋಗಿದೆ. ಭೂಕುಸಿತದ ಸ್ಥಳದಲ್ಲಿ ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read More »

ಡಿವೈಡರ್​ಗೆ ಡಿಕ್ಕಿ, :ವಿಕಲಚೇತನ ಸಾವು

ಕಾರವಾರ: ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಓರ್ವ ವಿಕಲಚೇತನ ಸಾವನ್ನಪ್ಪಿದ್ದಾರೆ. ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ. ನಿಜಾಮುದ್ದಿನ್ (36) ಮೃತ ದುರ್ದೈವಿ. ನಿಯಂತ್ರಣ ತಪ್ಪಿದ ಕಾರು ಆಕಳಿಗೆ ಗುದ್ದಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಿಜಾಮುದ್ದಿನ್ ಹಾಗೂ ಅವರ ಸ್ನೇಹಿತ ಅಬಕಾರಿ ಇಲಾಖೆ ಜಪ್ತಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಕಾರು ಚಾಲಕ ಅಶೋಕ ಖೇಣಿಗೆ …

Read More »
Featured Video Play Icon

ಸರ್ಕಾರದ ಎಡವಟ್ಟು ರಸ್ತೆ ಇಲ್ಲದಿದ್ದರೂ ಇದೆ ಎಂದು ಸರ್ಕಾರ ಸುಳ್ಳು ಹೇಳಿದೆ- ನಂದಿಕಟ್ಟಾ ಗ್ರಾಮಸ್ಥರ ಆರೋಪ..?

ಮುಂಡಗೋಡ ಗ್ರಾಮೀಣ ಜನರಿಗೆ ಉಪಯೋಗ ಆಗುವ ಉದ್ದೇಶದಿಂದ ಸರ್ಕಾರ ಈ ಗ್ರಾಮಕ್ಕೆ ಪೆಟ್ರೋಲ್ ಬಂಕ್ ಮಂಜೂರು ಮಾಡಿದೆ‌.ಆದ್ರೆ ಇದೀಗ ಸರ್ಕಾರ ನಿಗಿದ ಪಡಿಸಿದ ಸ್ಥಳ ಬಿಟ್ಟು ಬೇರೆಡೆ ಬಂಕ್ ನಿರ್ಮಿಸಲು ತಯಾರಿ ನೆಡೆಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನತೆಗೆ ರೈತರಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಪೆಟ್ರೋಲ್ ಬಂಕ್ ಸೌಲಭ್ಯ ಮಂಜೂರು ಮಾಡಿರುವುದು ಖುಷಿಯ ಸಂಗತಿ‌. ಆದ್ರೆ ಸರ್ಕಾರ ನಿಗದಿ …

Read More »

ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ

ಕಾರವಾರ: 2 ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 500 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿರುವ ಘಟನೆ ಹೊನ್ನಾವರದ ಆರೊಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ. ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ ಹಾವೇರಿ ಜಿಲ್ಲೆಯ ಅಕ್ಕಿಆಲೂರು ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ, ತಪಾಸಣೆ ನಡೆಸಿ 500 ಕ್ವೀಂಟಲ್ ಅಕ್ಕಿ, ವಾಹನ ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. …

Read More »

ಹಳ್ಳದ ನೀರಲ್ಲಿ ನಿತ್ಯ ಸರ್ಕಸ್, ಮನ ಕಲಕುವಂತಿದೆ ವಿದ್ಯಾರ್ಥಿನಿಯ ಮನವಿ-ಕೆಳೋರ ಯಾರ ಈ ಗ್ರಾಮಸ್ಥರ ಮನವಿ

ವಿದ್ಯಾರ್ಥಿ ಕೈ ಮುಗಿದ ಮನವಿ ಮಾಡುತ್ತಿರೋ ಸಾಂದರ್ಭಿಕ ಚಿತ್ರ ಕಾರವಾರ: ಅದು ನದಿಯಂಚಿನ ಪುಟ್ಟ ಗ್ರಾಮ. ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕ ಕಳೆದುಕೊಳ್ಳುವ ಈ ಗ್ರಾಮಸ್ಥರ ಯಾತನೆ ಯಾರಿಗೂ ಬೇಡವೇ ಬೇಡ. ತುಂಬಿ ಹರಿಯುವ ಹಳ್ಳದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇದ್ದೂ ಇಲ್ಲದಂತಾಗಿದೆ. ಹೌದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದರೂ ಕೂಡ ಕೆಲ ಹಳ್ಳಿಗಳು ಕನಿಷ್ಠ …

Read More »