ಕಾರವಾರ: ಕಾರವಾರ ಸಾರಿಗೆ ಸಂಸ್ಥೆಯ ಬಸ್ವೊಂದರ ಟಯರ್ ಸ್ಫೋಟಗೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ 80 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರವಾರದ ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಬಳಿ ಇಂದು ಘಟನೆ ನಡೆಯಿತು.
ಕೆಎ 31 ಎಫ್ 1252 ನೋಂದಣಿಯ ಬಸ್ ಕಾರವಾರದಿಂದ ಮಲ್ಲಾಪುರ ಕದ್ರಾ ಮಾರ್ಗವಾಗಿ ಸಂಚರಿಸುತ್ತಿತ್ತು. ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಮೇಲೆ ಮುಂದಿನ ಟಯರ್ ಸ್ಪೋಟಗೊಂಡಿದೆ. ಚಾಲಕನ ಅಪಘಾತ ಸಂಭವಿಸುವ ಹಂತದಲ್ಲಿದ್ದ ಬಸ್ ಅನ್ನು ತಕ್ಷಣ ಮುಂದೆ ಹೋಗಿ ನಿಲ್ಲಿಸಿದ್ದಾರೆ. ಈ ಮೂಲಕ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





