Breaking News

Crime

ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ

ಸಾದ್ಯಾಪುರ ಗ್ರಾಮದ ಬಳಿ ಎರಡು ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನನ್ನು ಹತ್ಯೆ ಮಾಡಲಾಗಿತ್ತು. 11 ವರ್ಷಗಳ ಹಿಂದೆ ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.ಮಾರ್ಚ್ 16 ರಂದು ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಕ್ರಾಸ್ ಬಳಿ ಡಬಲ್ ಮರ್ಡರ್ ನಡೆದಿತ್ತು. ಕಟಿಂಗ್ ಮಾಡಿಸಿಕೊಂಡು ಹೋಗ್ತಿದ್ದಾಗ ಮಾಪಣ್ಣನನ್ನು ಸುಪಾರಿ ಪಡೆದಿದ್ದ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

ಉತ್ತರ ಪ್ರದೇಶ:ಹಾಡಹಗಲೇ ಡಾಕ್ಟರ್ ಸರ ಕಳ್ಳತನ.!

ಡಾ.ತೋಮರ್ ಅವರು ತಮ್ಮ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ಕಳ್ಳ ಸರ ಕಿತ್ತುಕೊಂಡು ವೇಗವಾಗಿ ಪರಾರಿಯಾಗುತ್ತಿದ್ದಂತೆ ಡಾಕ್ಟರ್ ಕುಸಿದು ಬೀಳುವುದು ವಿಡಿಯೋದಲ್ಲಿ ಕಂಡುಬಂದಿದೆ. ಸ್ಥಳೀಯರು ಕೂಡಲೇ ಅವರಿಗೆ ನೆರವಾದರು. ಹಗಲು ಹೊತ್ತಿನಲ್ಲಿ ನಡೆದ ಈ ದರೋಡೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪೊಲೀಸರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Read More »

ಪತ್ರ ಬರೆದಿಟ್ಟು ಸಾವಿಗೆ ಶರಣಾದ ಮಹಿಳೆ!ಕಾಫಿನಾಡಲ್ಲಿ ಘೋರ ಘಟನೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಜಯಂತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ದುರ್ದೈವಿಯಾಗಿದ್ದಾರೆ.ಜಯಂತಿ ವಿರುದ್ಧ ಗ್ರಾಮದ ಇಬ್ಬರು ಮಾಟಮಂತ್ರ ಮಾಡಿರುವ ಆರೋಪ ಮಾಡಿದ್ದಾರೆ.10 ವರ್ಷದ ಹಿಂದೆ ಮಂಜುನಾಥ್ ನನ್ನು ಮದುವೆಯಾಗಿದ್ದ ಜಯಂತಿ ಇದೀಗ ವಾಮಾಚಾರದ ಆರೋಪದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸೂಸೈಡ್‌ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಿತ್ರದುರ್ಗ:ಬಸ್ ಡಿಕ್ಕಿ ವಿದ್ಯಾರ್ಥಿಗಳ ಸಾವು

ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸರ್ವಿಸ್ ರಸ್ತೆ ವೃತ್ತದಲ್ಲಿ ಇಂದು ಸಂಭವಿಸಿದೆ. ಇದರಲ್ಲಿ ನಬೀಲ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಚಿತ್ರದುರ್ಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೇರಳ: ಮಾದಕ ವ್ಯಸನಕ್ಕೆ ದಾಸನಾಗಿದ್ದ ಮಗನನ್ನು ಬೇಸತ್ತು ಪೋಲೀಸರಿಗೆ ಒಪ್ಪಿಸಿದ ತಾಯಿ.

ಚೆಟ್ಟಿಕುಲಂ ಮೂಲದ ರಾಹುಲ್ ಎಂಬ ಯುವಕ ಮಾದಕ ವ್ಯಸನಕ್ಕೆ ದಾಸನಾಗಿದ್ದು, ಇದರಿಂದ ಆತನ ತಾಯಿ ಮಿನಿ ಅವರು ತೀವ್ರವಾಗಿ ನೊಂದಿದ್ದಾರೆ. ರಾಹುಲ್ ನನ್ನು ಈ ವ್ಯಸನದಿಂದ ಹೊರತರಲು ಮಿನಿ ಅವರು ಸಾಕಷ್ಟು ಪ್ರಯತ್ನಪಟ್ಟರೂ ಅದ್ಯಾವುದೂ ಫಲ ನೀಡಲಿಲ್ಲ. ಇದರಿಂದ ಬೇಸತ್ತ ಮಿನಿ, ರಾಹುಲ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಹುಲ್ ತನ್ನ ತಂದೆ, ತಾಯಿ ಮತ್ತು ತಂಗಿಯ ಮೂರುವರೆ ವರ್ಷದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾರಣ ಮಿನಿ ಅವರು ಪೊಲೀಸರಿಗೆ …

Read More »

ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ದಂಪತಿಯ ಬಂಧನ.

‘ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಭಾಗ್ಯ ಗುಡಿಗಾರ ಹಾಗೂ ಅವರ ಪತಿ ರಮೇಶನನ್ನು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 7 ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಖ್ವಾಜಾಮುದ್ದೀನ್, ಸ್ಥಳೀಯ ಬ್ಯಾಂಕ್‌ವೊಂದರಲ್ಲಿ ಫಿಗ್ಮಿ ಕಲೆಕ್ಟರ್ ಆಗಿದ್ದಾರೆ. ಮದುವೆ ಬಾಸಿಂಗ ತಯಾರಿ ಕೆಲಸ ಮಾಡುತ್ತಿದ್ದ ದಂಪತಿ, ವಿವಿಧ ಸಂಘಗಳಲ್ಲಿ ಸಾಲ ಪಡೆದು ಖ್ವಾಜಾಮುದ್ದೀನ್‌ಗೆ ನೀಡಿದ್ದರೆಂಬ ಮಾಹಿತಿ ಇದೆ. ಇಬ್ಬರ ನಡುವೆಯೂ ಹಲವು ಬಾರಿ ಹಣದ …

Read More »

ಮದುವೆ ಸಿದ್ಧತೆಯಲ್ಲಿದ್ದ ವರನ ಬರ್ಬರ ಹತ್ಯೆ: ಗನ್ ಮ್ಯಾನ್ ವಶಕ್ಕೆ ಪಡೆದ ಪೊಲೀಸ್.

ಮದುವೆಯ ಸಿದ್ಧತೆಯಲ್ಲಿದ್ದ ಲೋಕನಾಥ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ಲೋಕನಾಥ್ ಗನ್ ಮ್ಯಾನ್ ನಾಪತ್ತೆಯಾಗಿದ್ದ. ಆದರೆ ಇದೀಗ ಗನ್ ಮ್ಯಾನ್ ಏಕಾಏಕಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಲೋಕನಾಥ್ ಸಿಂಗ್ ಕೊಲೆಯಾಗಿರುವ ಉದ್ಯಮಿ. ಈತಿಂಗಳಾಂತ್ಯಕ್ಕೆ ಲೋಕನಾಥ್ ಸಿಂಗ್ ವಿವಾಹ ನಿಶ್ಚಯವಾಗಿತ್ತು. ಆತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read More »

ಧಾರವಾಡ. ತಳ್ಳುವ ಸ್ವೀಟ್ ಕಾರ್ನರ್ ಗಾಡಿಗೆ ಬೆಂಕಿ

ಸ್ವೀಟ್ ಕಾರ್ನ್ ಮಾಡುವ ತಳ್ಳುವ ಗಾಡಿಗೆ ಬೆಂಕಿ ತಗೊಳ್ಳಿ ಗಾಡಿ ನಡು ರಸ್ತೆಯಲ್ಲಿ ಹೊತ್ತು ಉರಿದಿದೆ ಇದು ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದಿದೆ. ತಳ್ವಗಾಡಿಗೆ ಗ್ಯಾಸ್ ಪಿಟ್ ಮಾಡಲಾಗಿದ್ದು. ಆ ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿಕೊಂಡಿದೆ ನಡು ರಸ್ತೆಯಲ್ಲಿ ತಳ್ಳುವ ಗಾಡಿ ಹತ್ತಿ ಉರಿದಿರುವ ದೃಶ್ಯವನ್ನು ಕಂಡು ಜನ ಭಯ ಬಿತಿ ಹೊಂದಿದ್ದಾರೆ. ಕೂಡಲೆ ಸ್ಥಳೀಯರು ಬೆಂಕಿಯನ್ನು ನಿಂದಿಸಿದ್ದಾರೆ.

Read More »

ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಶಿಕ್ಷಕರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯಲಿ ಔಟ್ ನ ಪ್ರಾಥಮಿಕ ಶಾಲೆ, ಮಕ್ಕಳ ಬಳಿ ಸೌಚಾಲಯವನ್ನು ಕ್ಲೀನ್ ಮಾಡಿಸಿದ್ದಾರೆ. ಕೂಡಲೆ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತನ್ನ ಮಕ್ಕಳ ಕೈಯಿಂದ ಶಾಲೆಯ ಮಲಮೂತ್ರದ ಶೌಚಾಲೆಗಳನ್ನು ಶಿಕ್ಷಕರು ಮಕ್ಕಳಿಂದ ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛ ಮಾಡುತ್ತಿರುವ ದೃಶ್ಯ ತುಂಬಾ ವೈರಲ್ ಆಗಿದ್ದು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

Read More »

ಉದ್ಯೋಗ ಅರಸಿ ಮಧ್ಯ ಆಫ್ರಿಕಾಕ್ಕೆ ತೆರಳಿರುವ ಕರ್ನಾಟಕದ ನಾಟಿ ವೈದ್ಯರು ಸಂಕಷ್ಟದಲ್ಲಿ.

ಉದ್ಯೋಗ ಅರಸಿ ಮಧ್ಯ ಆಫ್ರಿಕಾದ ಗಬಾನ್ ​ ದೇಶಕ್ಕೆ ತೆರಳಿರುವ ಚನ್ನಗಿರಿ ತಾಲೂಕಿನ ಗೋಪನಾಳ್-ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಹಕ್ಕಿ-ಪಿಕ್ಕಿ ಜನಾಂಗದ ನಾಟಿ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಪಾಸ್​ಪೋರ್ಟ್ ವಶಕ್ಕೆ ಪಡೆದು ತೊಂದರೆ ನೀಡುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಇಲ್ಲಿನ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಇಲಾಖೆ ಗಮನ ಹರಿಸುವಂತೆ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಸ್ಥರು ಮನವಿ …

Read More »