BigTv News
March 18, 2025
Breaking News, Crime, ಕಲಬುರಗಿ
ಲಾರಿಯೊಂದು ಬಾಲಕ ಮೇಲೆ ಹರಿದು ಸ್ಥಳದಲ್ಲೇ 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಲಬುರ್ಗಿಯ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲೂರ ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.
Read More »
BigTv News
March 18, 2025
Breaking News, Crime, ಹಾವೇರಿ
ಧುಂಡಶಿ ವಲಯದಲ್ಲಿ ಕಾಯ್ದಿಟ್ಟ ಅರಣ್ಯದ ಶ್ರೀಗಂಧ ನೆಡುತೋಪನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ನಾಗಪ್ಪ ರಾಮಪ್ಪ ಇಳಿಗೇರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಗ್ಗಾಂವ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಡಿ.ಮಣಕೂರ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರಾದ ಗಣಪತಿ ಶಿವಣ್ಣನವರ,ಯಂಕಪ್ಪ ಹೊಸುರ, ಮಹೇಶ ಕಲ್ಲಮ್ಮನವರ, ಮೋಹನ ಶಾಮನೂರ, ಪ್ರಕಾಶಕುಮಾರ ಬಂಕಾಪುರ ಭಾಗವಹಿಸಿದ್ದರು.
Read More »
BigTv News
March 18, 2025
Breaking News, Crime, ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದು, ಪತಿಗೆ ಕಲ್ಲಿನಿಂದ ಜಜ್ಜಿರುವ ಘಟನೆ ವರದಿಯಾಗಿದೆ. ಪತ್ನಿಯ ಸರ ಕದ್ದವನ್ನು ಬೆನ್ನಟ್ಟುತ್ತಿರುವಾಗ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಕಲ್ಲಿನಿಂದ ತಲೆಯನ್ನು ಜಜ್ಜಿ ಪರಾರಿಯಾಗಿದ್ದಾರೆ.ಎರಡು ಪಿಸ್ತೂಲ್‌ಗಳು, 10 ಗುಂಡುಗಳು, ಎರಡು ಚೀಲಗಳಲ್ಲಿ ಲೂಟಿ ಮಾಡಿದ ಆಭರಣಗಳು ಮತ್ತು ಪಲ್ಸರ್ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಇತರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
Read More »
BigTv News
March 18, 2025
Breaking News, Crime, ಉತ್ತರ ಪ್ರದೇಶ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಡಿಗ್ರಿ ಕಾಲೇಜಿನ ಹಿರಿಯ ಪ್ರಾಧ್ಯಾಪಕನ ವಿರುದ್ಧ ಕಳೆದ 20 ವರ್ಷಗಳಿಂದ ಮಹಿಳಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಶೋಷಣೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿನಿ ಪ್ರಾಧ್ಯಾಪಕರ ಚೇಷ್ಟೆಯ ವರ್ತನೆಗಳ ಫೋಟೋಗಳು ಮತ್ತು ವೀಡಿಯೊ ತುಣುಕುಗಳನ್ನು ಕಳುಹಿಸಿದಳು.ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಇನ್ನು ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಂತ್ರಸ್ತರನ್ನು ಗುರುತಿಸಿ, ಅವರ ಹೇಳಿಕೆ ದಾಖಲಿಸಲು ಪ್ರಯತ್ನಿಸುತ್ತಿದ್ದೇವೆ …
Read More »
BigTv News
March 18, 2025
Breaking News, Crime, ತಿರುಪತಿ, ಬೆಂಗಳೂರು
ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಹಣ್ಣು ವ್ಯಾಪಾರಿಯೊಬ್ಬನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಆರೋಪಿಯ ಆಕೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಬಳಿಕ ಮೂರು ದಿನ ಲಾಡ್ಜ್‌ನಲ್ಲಿ ಇದ್ದುಕೊಂಡು ಅತ್ಯಾಚಾರ ಮಾಡಿದ್ದಾನೆ. ಮಾ.16ರಂದು ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಬಳಿಕ ನೇರ ಮನೆಗೆ ತೆರಳಿದ ಅಪ್ರಾಪ್ರೆಯನ್ನು ತಾಯಿ ಪ್ರಶ್ನಿಸಿದಾಗ, …
Read More »
BigTv News
March 17, 2025
Breaking News, Crime, Dharwad, ಕರ್ನಾಟಕ
ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಧಾರವಾಡ ಹೊಯ್ಸಳ ನಗರದಲ್ಲಿ ಇಂದು ಸಂಭವಿಸಿದೆ ಕ್ಷಣ ಮಾತ್ರದಲ್ಲಿ ಪರಾರಿಯಾಗಿರುವ ವಾಹನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ . ಅಪಘಾತದಲ್ಲಿ ಮರಣ ಹೊಂದಿರುವ ವ್ಯಕ್ತಿಯ ತಪಾಸಣೆ ಮಾಡುತ್ತಿದ್ದು. ಆತನ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದಾರೆ.
Read More »
BigTv News
March 17, 2025
Breaking News, Crime, ಕರ್ನಾಟಕ
ಚಾಮರಾಜನಗರದಲ್ಲಿ ನಿಯಂತ್ರಣ ಕಳೆದುಕೊಂಡ ಸಿಫ್ಟ್ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಗಾಯಗೊಂಡಿರುವ ಘಟನೆ ಕಂಡು ಬಂದಿದೆ. ಮೃತರನ್ನು ನಂದನ್ ಹಾಗೂ ಜೀವನ ಎಂದು ಗುರುತಿಸಲಾಗಿದೆ. ಈ ಕುರಿತು ಚಾಮರಾಜನಗರ ದಲ್ಲಿ ದಾಖಲೆ ಪ್ರಕರಣವಾಗಿದೆ.
Read More »
BigTv News
March 17, 2025
Crime, Dharwad, ಕರ್ನಾಟಕ
ಧಾರವಾಡ ಉಪ್ಪಿನಬೆಟಿಗೇರಿ ಗ್ರಾಮದ ರೈತ ಮಡಿವಾಳ ಅವರ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಣಕಿ ಹೊಟ್ಟಿಗೆ ಭಾನುವಾರ ಬೆಂಕಿಗೆ ಆಹುತಿಯಾಗಿದೆ 9 ಟ್ರಾಕ್ಟರ್ ಕಣಕಿ ಹೊಟ್ಟನ್ನು ಬನವಿ ಒಟ್ಟಲೆಂದು ಗಂಗಪ್ಪನವರು ಹಾರು ಬೆಳವಡಿ ರಸ್ತೆಯ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದರು. ರಾತ್ರಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಹೊಲಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಕೂಡಲೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಿಂದಿಸಿದ್ದಾರೆ.
Read More »
BigTv News
March 17, 2025
Crime, ಕರ್ನಾಟಕ, ಹುಬ್ಬಳ್ಳಿ
ರಸ್ತೆ ಬಳಿ ಬೈಕ್ ನಿಂಲಿಸಿಕೊಂಡು ನಿಂತಿದ್ದ ರೈತನಿಗೆ ಓರ್ವನು ಕ್ಷುಲ್ಲಕ ವಿಷಯವಾಗಿ ಚಾಕುವಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ಕುಸುಗಲ ಗ್ರಾಮದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ನಿನ್ನೆ ನಡೆದಿದೆ. ಕುಸುಗಳು ಗ್ರಾಮದ ಶಿವರೆಡ್ಡಿ ಕುಸುಗಲ್ ಎಂಬಾತ ಹಲ್ಲೆ ಮಾಡಿದ್ದಾಗಿ ಕುಸುಗಲ್ ಗಂಗಾಧರ್ ನಗರದ ರೇವಣಸಿದ್ದೇಶ್ವರ ಸಂಕರಡ್ಡಿ ದೂರು ಕೊಟ್ಟಿದ್ದಾರೆ. ಎದುರಿನಿಂದ ಬೈಕ್ ನಿಂದ ಬಂದ ಶಿವರೆಡ್ಡಿ ಹಲೇ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಈ ವಿಚಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ …
Read More »
BigTv News
March 17, 2025
Crime, ಕರ್ನಾಟಕ, ಬೆಂಗಳೂರು
ರಾಜಧಾನಿ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಪ್ರೈ ಓವರಲ್ಲಿ ಭೀಕರ ಹಿಟ್ ಅಂಡ ರನ್ ಪ್ರಕರಣ ವರದಿಯಾಗಿದೆ. ಆಟೋ ಹಾಗೂ ಕಾರಿಗೆ ಗುದ್ಧಿ ಪರಾರಿಯಾದ ಪರಿಣಾಮ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಂಡು ಬಂದಿದೆ. ಈ ಘಟನೆಯಿಂದ ಆಟೋ ಜಜ್ಜಿನಜ್ಜಾಗಿದೆ ಹೀಗಾಗಿ ಆಟೋ ಚಾಲಕನ ಕಾಲು ಕಟ್ಟಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »