Shaikh BigTv
June 23, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಬೈಕ್ ಸವಾರನೊಬ್ಬ ಸ್ಕಿಡ್ ಆಗಿ ಬಿದ್ದಿದ್ದು, ಹಿಂದೆ ಇದ್ದ ಸಾರಿಗೆ ಬಸ್ ಆತನ ತಲೆಯ ಮೇಲೆ ಹಾಸಿ ಹೋದ ಘಟನೆ ಹುಬ್ಬಳ್ಳಿಯ ಗೋಕುಲ ರೋಡ್ ದಿ ಫರ್ನ್ ಹೊಟೇಲೆ ಮುಂದೆ ನಡೆದಿದೆ. ಹೌದು,,, ಈ ಹೊಟೇಲ್ ಮುಂಭಾಗದಲ್ಲಿ ರಸ್ತೆ ತಗ್ಗು ಬಿದ್ದಿರುವ ಪರಿಣಾಮ, ಬೈಕ್ ಸವಾರ ಹೋಗುತ್ತಿರುವಾಗ ಸ್ಕಿಡ್ ಆಗಿ ಬಿದ್ದಿದ್ದಾನೆ. ಹಿಂದೆ ಇದ್ದ ಬಸ್ ಚಾಲಕ ಆತನ ತಲೆಯ ಮೇಲೆ ಗಾಲಿ ಹಾಯಿಸಿದ್ದ ಪರಿಣಾಮ, ಬೈಕ್ ಸವಾರ …
Read More »
Shaikh BigTv
June 21, 2025
Breaking News, Crime, ಕರ್ನಾಟಕ
ಮೈಸೂರಲ್ಲಿ ವ್ಯಕ್ತಿಯೊಬ್ಬರಿಗೆ ಇ ಸ್ವತ್ತು ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಸೇರಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 25,000 ಈ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಪಾಲಿಕೆ ವಲಯ ಕಚೇರಿಯ ಬಿಲ್ ಕಲೆಕ್ಟರ್ ರಜಾಕ್ ಹಾಗೂ ಕಂದಾಯ ಅಧಿಕಾರಿ ನಂದೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸ್ ಪಿ …
Read More »
BigTv News
June 21, 2025
Breaking News, Crime
ಐರ್ಲೆಂಡ್‌ನಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ ವತಿಯಿಂದ ನಡೆಸಲಾಗುತ್ತಿದ್ದ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಆಶ್ರಮದ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ 2014ರಲ್ಲಿ 796 ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈಗ 11 ವರ್ಷಗಳ ನಂತರ ಈ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಆಶ್ರಮದಲ್ಲಿ ಮಕ್ಕಳನ್ನು ಕೊಂದು ಹೂಳಲಾಗಿತ್ತು. ಈಗ ನಡೆಯುತ್ತಿರುವ ಉತ್ಖನನದಿಂದ ಅಲ್ಲಿನ ಅತ್ಯಂತ ಪ್ರಭಾವಶಾಲಿ ಚರ್ಚ್ ಎಂದು ಪರಿಗಣಿಸಲಾಗುವ ‘ಚರ್ಚ್ ಆಫ್ …
Read More »
BigTv News
June 20, 2025
Breaking News, Crime
ಬೆಂಗಳೂರಿನಲ್ಲಿ ಸಾಕಷ್ಟು ಆರೋಗ್ಯ ಸೇವೆ ಇದ್ದರೂ ಅದನ್ನು ಪಡೆಯದೆ, ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಹೋಗಿ ಯುವತಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮನೆಯೊಂದರಲ್ಲಿ ಹೆರಿಗೆಯಾದ ಯುವತಿಯೊಬ್ಬರು ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.ಯುವತಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಓರ್ವ ಯುವಕನ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದ ಯುವತಿಗೆ ನಿನ್ನೆ ರಾತ್ರಿ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೆರಿಗೆಯ …
Read More »
BigTv News
June 18, 2025
Breaking News, Crime
ನಕಲಿ ಖಾತೆ ಸೃಷ್ಟಿಸಿ ಮಹಿಳೆ ಹಾಗೂ ಯುವತಿಯರ ನಗ್ನ ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಕಾಮುಕ ಕೊನೆಗೂ ಬಳ್ಳಾರಿಯ ಸಂಡೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25) ಬಂಧಿತ ಆರೋಪಿ. ಆರೋಪಿಯು ಬೆತ್ತಲೆ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಮುಂಬೈ ಪೊಲೀಸರು, ಸಂಡೂರಿನಲ್ಲಿ ಕಾಮುಕ ಶುಭಂನನ್ನು ಬಂಧಿಸುವಲ್ಲಿ …
Read More »
BigTv News
June 17, 2025
Breaking News, Crime
ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10 ತಿಂಗಳ ಮಗು ಮೃತಪಟ್ಟಿದೆ.ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು, ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ.ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ತಿಳಿಸಿದ್ದರೂ ಕೇಳದ್ದಕ್ಕೆ ಮಗುವಿನ ಪ್ರಾಣ ಹೋಗಿದೆ ಎಂದು ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
Read More »
Shaikh BigTv
June 17, 2025
Breaking News, Crime, ಕರ್ನಾಟಕ, ಹಾವೇರಿ
ಹಾವೇರಿ ಜಿಲ್ಲೆ ಹಾನಗಲ್ ವೃತ್ತದ ಸಿಪಿಐ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ ಮಾಡಿದ ಹಿನ್ನಲೆ ದಾವಣಗೆರೆ ಪೂರ್ವ ವಲಯದ ಐಜಿಪಿಯವರು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಹಾನಗಲ್ ಠಾಣೆ CPI ಆಂಜನೇಯ NH ಅಮಾನತ್ತಿನಲ್ಲಿರಿಸಿ ಆದೇಶ ಮಾಡಿದ್ದು, ಮುಂದಿನ ಆದೇಶ ಆಗುವವರೆಗೆ ಹಾನಗಲ್ ಸಿಪಿಐ ಹೆಚ್ಚುವರಿ ಪ್ರಭಾರವನ್ನು ಶಿಗ್ಗಾಂವಿ ವೃತ್ತದ ಸಿಪಿಐ ಅನೀಲಕುಮಾರ ರಾಠೋಡ ಅವರಿಗೆ ಹಾವೇರಿ ಎಸ್ಪಿ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ ಸಿಪಿಐ ವೃತ್ತದಲ್ಲಿ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ …
Read More »
BigTv News
June 16, 2025
Breaking News, Crime
ಕರಿಬಸಪ್ಪ ಮತ್ತು ಮಗಳು ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ ನಡು ರಾತ್ರಿ ಕುಮಾರ್ ಎಂಬ ಆರೋಪಿ ಮನೆಗೆ ನುಗ್ಗಿ ಕತ್ತಿಯಿಂದ ಕರಿಬಸಪ್ಪ ನಿಗೆ ಹಲ್ಲೆ ನಡೆಸಿದ್ದಾನೆ ಈ ವೇಳೆ ಎಚ್ಚರಗೊಂಡ ಮಗಳು ಜೋರಾಗಿ ಕಿರುಚಿಕೊಂಡಿದ್ದಾಳೆ ಇದರಿಂದ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಹಲ್ಲೆಯಾಗಿರುವುದು ಗೊತ್ತಾಗಿದೆ ಕೂಡಲೇ ವಿಚಾರವನ್ನು ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ತಿಳಿಸಿದ್ದು ಬಳಿಕ ಬಂದ ಅವರು ಹಲ್ಲೆಗೊಳಗಾದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ …
Read More »
Shaikh BigTv
June 16, 2025
Breaking News, Crime, ಕರ್ನಾಟಕ
ಈತನ ಕಹಾನಿ ಕೇಳಿ ಪೊಲೀಸ್ ಇಲಾಖೆಯೇ ಶಾಕ್..! ಸುಂದರ ಯುವತಿಯರನ್ನ ಬಳಸಿಕೊಂಡು ಹನಿಟ್ರ್ಯಾಪ ದಂಧೆ..?? ಮೈಸೂರಶ್ರೀ ಬಿಟ್ಟು ಹನಿ ಹಿಂದಿನ ಕತರ್ನಾಕ್ ಪೊಲೀಸ್.. ಬೇಲಿಯೇ ಎದ್ದು ಹೋಲ ಮೇಯ್ದಂತೇ..!!! ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾನೂನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬಂತೆ, ಕಾನೂನು ಕಾಪಾಡಬೇಕಾದವರೇ ಅಪರಾಧದ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ಕೃತ್ಯದಲ್ಲಿ ಆರೋಪಿಗಳು ಕಂಪಲಾಪುರದ ದಿನೇಶ್ …
Read More »
BigTv News
June 16, 2025
Breaking News, Crime
ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಮಾತುಕತೆಗೆ ಕರೆಸಿ, ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ ದೀಪು (28) ಹಾಗೂ ಅರುಣ್ (27) ಅವರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »