Breaking News

Crime

ಮಂಡ್ಯ :ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ.!

ಹೆಲ್ಮೆಟ್ ತಪಾಸಣೆಗಾಗಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸವಾರ ಬಿದ್ದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.ವಾಣಿ-ಅಶೋಕ್ ದಂಪತಿಯ ಮೂರುವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ವೇಳೆ ಆಯತಪ್ಪಿ ಬೈಕ್ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

Read More »

ಗ್ರಾಹಕನಮೇಲೆ ಹಲ್ಲೆ ನಡೆಸಿದ ಜೆಪ್ಟೋ ಡೆಲಿವರಿ ಬಾಯ್‌ ಅರೆಸ್ಟ್!!

ಆರ್ಡರ್‌ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಈ ವೇಳೆ ಮಹಿಳೆಗೆ ಯಾಕೆ ತಪ್ಪಾದ ವಿಳಾಸ ನೀಡಿದಿರಿ ಎಂದು ಕೇಳಿದೆ. ಆಗ ಶಶಾಂಕ್‌ ಎಂಬಾತ ಹೊರಬಂದು ನನ್ನ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ನಾನು ಕೋಪಗೊಂಡು ಹಲ್ಲೆ ಮಾಡಿದ್ದಾಗಿ ವಿಷ್ಣುವರ್ಧನ್‌ ಹೇಳಿದ್ದಾನೆ.ವಿಷ್ಣುವರ್ಧನ್‌ ಶಶಾಂಕ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಶಶಾಂಕ್‌ ಕಣ್ಣಿಗೆ ಗಂಭೀರವಾದ ಗಾಯವಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಿಷ್ಣುವರ್ಧನ್‌ನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

Read More »

ಪತಿಯನ್ನೇ ಪ್ರಿಯಕರನ ಮೂಲಕ ಕೊಲೆ ಮಾಡಿಸಿದ ಪತ್ನಿ!!

ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದರಿಂದ ಸುದರ್ಶನ್, ಈ ಕುರಿತು ಪತ್ನಿಗೆ ಎಚ್ಚರಿಕೆ ನೀಡಿದ್ದ. ತಮ್ಮ ಸಂಬಂಧಕ್ಕೆ ಅಡ್ಡಯಾದ ಈತನನ್ನು ಕೊಲ್ಲಲು ಸುದರ್ಶನ್‌ಗೆ ನಿದ್ರೆ ಮಾತ್ರೆ ನೀಡಿದ್ದಾಳೆ. ಸುದರ್ಶನ್‌ ಗಾಢ ನಿದ್ರೆ ಹೋದಾಗ ಪ್ರಿಯಕರ ಶಿವರಾಜ್‌ ಜೊತೆ ಸೇರಿ ಸುದರ್ಶನ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಅಸಹಜ ಸಾವಿನ ಬೆನ್ನು ಬಿದ್ದ ಪೊಲೀಸರಿಗೆ ಈ ಅನೈತಿಕ ಸಂಬಂಧದ ಸುಳಿವು ಸಿಕ್ಕಿದ್ದು, ಪ್ರಕರಣವನ್ನು ಭೇದಿಸಿದ್ದಾರೆ. ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್ ಶಿವರಾಜ್ …

Read More »

ಮಚ್ಚಿನಿಂದ ತನ್ನನೇ ಕತ್ತರಿಸಿಕೊಂಡ ವ್ಯಕ್ತಿ, ಆಸ್ಪತ್ರೆಗೆ ದಾಖಲು!

ರೈಲ್ವೆ ನಿಲ್ದಾಣದ ಹತ್ತಿರ ಪಿಎಸ್‌ಎಸ್‌ಕೆ ಪ್ರೌಢಶಾಲೆ ಮುಂಭಾಗ ಅಪರಿಚಿತ ವ್ಯಕ್ತಿಯೊಬ್ಬ ಭಾನುವಾರ ಮಚ್ಚಿನಿಂದ ತನ್ನ ಕತ್ತನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ.ಇದಕ್ಕೂ ಮೊದಲು ಈತ ಪಾಂಡವಪುರ ರೈಲ್ವೆ ಮೇಲ್ಸೆತುವೆಯಿಂದ ಕೆಳಗೆ ಹಾರಿದ್ದ ಎಂದು ಸ್ಥಳೀಯರು ತಿಳಿಸಿದರು.ಆಂಬುಲೆನ್ಸ್‌ ಮೂಲಕ ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ವಿಜಯಪುರ: ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ, ದೂರು ದಾಖಲು!

ಭಾನುವಾರದ ರಜೆ ಇರುವ ಕಾರಣ ಇಂದು ಸಿಬ್ಬಂದಿ ರಜೆ ಇರುತ್ತಾರೆ ಎಂದು ಖತರ್ನಾಕ್ ಪ್ಲ್ಯಾನ್ ಮಾಡಿಯೇ ಕಳ್ಳರು ಕೃತ್ಯ ಎಸಗಿದ್ದಾರೆ.ಮೊದಲಿಗೆ ಕೆನರಾ ಬ್ಯಾಂಕ್ ಮುಂಭಾಗದ ಬಾಗಿಲಿನ ಕೀ ಮುರಿದು ಒಳ ಹೋಗಿದ್ದಾರೆ. ಬಳಿಕ ಕೃತ್ಯ ಎಸಗಿದ್ದಾರೆ. ಏನೇನೂ ಕಳ್ಳತನ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ.ಬ್ಯಾಂಕ್ ಕಳ್ಳತನ ವಾದ ಕಾರಣ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಸ್ಥಳದಲ್ಲಿ ಶ್ವಾನದಳದ ಸಿಬ್ಬಂದಿ ಹಾಗೂ ಪೋಲಿಸರಿಂದ ಪರಿಶೀಲನೆ ನಡೆದಿದೆ. ಹಾಗೂ ಬ್ಯಾಂಕ್ …

Read More »

ಬೆಂಗಳೂರು :ರಾಯರ ಮಠದ ಒಳಗೆ ಚಪ್ಪಲಿ ಎಸೆದ ಮಹಿಳೆ!

ಬೆಳಗಿನ ಜಾವ ಮಠಕ್ಕೆ ಬಂದಿರುವ ಅಪರಿಚಿತ ಮಹಿಳೆಯೊಬ್ಬಳು ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆಾದಲ್ಲಿ ಸೆರೆಯಾಗಿದೆ.ಘಟನೆಯಿಂದ ಭಕ್ತರ ಮನಸ್ಸಿಗೆ ಧಕ್ಕೆಯುಂಟಾಗಿದ್ದು, ರಾಯರ ಮಹಾತ್ಮೆಯ ಬಗ್ಗೆ ಚರಿತ್ರೆಗಳು ಮತ್ತು ಭಕ್ತರ ಅನುಭವಗಳು ಇಂದಿಗೂ ಸ್ಫೂರ್ತಿಯಾಗಿರುವಾಗ ಇಂತಹ ಕೃತ್ಯವು ಸಮಾಜದಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಮಠದ ಪಾವಿತ್ರ್ಯತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read More »

ಬಿಹಾರ: ಮರಳುಗಾರಿಕೆ ವಿವಾದ, ಮೂವರು ಸಹೋದರರನ್ನು ಗುಂಡಿಕ್ಕಿ ಕೊಲೆ!

ಜಮೀನಿನಲ್ಲಿ ಮರಳು ಮತ್ತು ಕಲ್ಲಿನ ಚೂರುಗಳನ್ನು ರಾಶಿ ಹಾಕುವ ಬಗ್ಗೆ ಧೀರ್ಘ ಕಾಲದಿಂದ ಇದ್ದ ವಿವಾದ ಮೂವರು ಸಹೋದರರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ಬಿಹಾರದ ಬಕ್ಸರ್ ನ ಅಹಿಯಾಪುರ ಗ್ರಾಮದಲ್ಲಿ ನಡೆದಿದೆ.ಈ ದಾಳಿಗೆ ಬಳಸಿದ ಕಾರು ಜಿಲ್ಲಾ ಮಂಡಳಿಯ ಮಾಜಿ ಸದಸ್ಯರೊಬ್ಬರಿಗೆ ಸೇರಿದ್ದು, ಈ ಗುಂಡಿನ ಕಾಳಗದಲ್ಲಿ ರಾಜಕೀಯ ಕೈವಾಡದ ಶಂಕೆ ಇದೆ. ಹರಳು ಮತ್ತು ಮರಳು ರಾಶಿ ಹಾಕುವ ಸಂಬಂಧ ಘರ್ಷಣೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ …

Read More »

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ!

ಡೆಲಿವರಿ ಕೊಡಲು ಡೆಲಿವರಿ ಬಾಯ್ ವಿಷ್ಣುವರ್ಧನ್, ಶಶಾಂಕ್ ಅವರ ಮನೆ ಬಳಿ ಬಂದಿದ್ದಾನೆ. ಈ ವೇಳೆ ಶಶಾಂಕ್ ಅವರ ನಾದಿನಿ ಆ ವಸ್ತುಗಳನ್ನು ಪಡೆದುಕೊಳ್ಳಲು ಹೋಗಿದ್ದು, ಆಗ ಸರಿಯಾದ ವಿಳಾಸ ನೀಡಲು ಆಗುವುದಿಲ್ಲವೇ ಎಂದು ಶಶಾಂಕ್ ಅವರ ನಾದಿನಿಗೆ ವಿಷ್ಣುವರ್ಧನ್ ಜೋರಾಗಿ ಬೈಯಲು ಆರಂಭಿಸಿದ್ದ. ಇದನ್ನು ಕೇಳಿಸಿಕೊಂಡ ಶಶಾಂಕ್ ಮಧ್ಯ ಪ್ರವೇಶಿಸಿ, ಏಕೆ ಇಷ್ಟು ಜೋರಾಗಿ ಮಾತನಾಡುತ್ತಿದ್ದೀರಾ? ಹೆಣ್ಣು ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವಿಷ್ಣುವರ್ಧನ್, …

Read More »

ದೇವನಹಳ್ಳಿ :ರೇವ್ ಪಾರ್ಟಿ ಮೇಲೆ ದಾಳಿ, 30ಕ್ಕೂ ಹೆಚ್ಚು ಯುವಕ-ಯುವತಿಯರು ವಶಕ್ಕೆ!

ನಿನ್ನೆ ರಾತ್ರಿಯಿಂದ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿಯಾಗಿದ್ದು, ಕುಡಿದ ಮತ್ತಿನಲ್ಲಿ ತೇಲಾಡಿದ್ದಾರೆ.ಇನ್ನು ದಾಳಿ ವೇಳೆ ಕೊಕೇನ್, ಹೈಡ್ರೋ ಡ್ರಗ್ಸ್ ಮತ್ತು ಗಾಂಜಾ ಪತ್ತೆ ಆಗಿದ್ದು, ವಶಕ್ಕೆ ಪಡೆಯಲಾಗಿದೆ. ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 10 ಯುವತಿಯರು, 20 ಯುವಕರ ತಪಾಸಣೆ ಮಾಡಲಾಗಿದ್ದು, ಸದ್ಯ ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದಲ್ಲಿ ಎಲ್ಲರನ್ನೂ ವಿಚಾರಣೆ …

Read More »

ಸಾಯಿ ಎಂದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ!

ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅಮ್ರಿನ್ ಜಹಾನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಅಮ್ರಿನ್ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ.ತನ್ನ ಕುಟುಂಬದ ಜೊತೆಗೆ ಮೊರಾದಾಬಾದ್ ನಲ್ಲಿ ವಾಸವಾಗಿದ್ದಳು. ಅತ್ತೆ-ಮಾವ ಹಾಗೂ ಅತ್ತಿಗೆ ಅಮ್ರಿನ್ ಜಹಾನ್ ಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಂತೆ.ಅತ್ತೆ-ಮಾವ ಎಲ್ಲರೂ ನನ್ನನ್ನು ಸಾಯಿ ಎನ್ನುತ್ತಿದಾರೆ. ಪತಿ ನನ್ನನ್ನು ನಿನ್ಯಾಕೆ ಸಾಯಬಾರದು? ಎಂದು ಕೇಳಿದ್ದಾನೆ. ನನಗೆ ಸಾಯುವಂತೆ ಒತ್ತಡ ಹೇರುತ್ತಿದ್ದಾರೆ. ಹುಷಾರಿಲ್ಲದಾಗ ಚಿಕಿತ್ಸೆಗೆ ಹಣಕೊಟ್ಟು ತಪ್ಪು ಮಾಡಿದ್ದೇವೆ. ಆ ಹಣವನ್ನು …

Read More »