BigTv News
May 20, 2025
Breaking News, Crime
15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಹೊರವಲಯದ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ. ಸಾಕೀಬ್ ಎಂಬ ಆರೋಪಿ ಸೇರಿ ಇಬ್ಬರು ಅಪ್ತಾಪ್ತರು ಸೇರಿ ಮೂವರು ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಎನ್ನಲಾಗಿದೆ.ಬಾಲಕಿಯ ಸ್ನೇಹಿತ ಹೇಗೋ ಬಾಲಕಿಯನ್ನು ಪುಸಲಾಯಿಸಿ ರೆಸಾರ್ಟ್ ಗೆ ಕರೆ ತಂದಿದ್ದಾನೆ. ಸಾಕೀಬ್ ಮೊದಲೇ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಿದ್ದ. ನಂತರ ಬಾಲಕಿಯನ್ನು ರೆಸಾರ್ಟ್ ಗೆ ಕರೆತಂದು …
Read More »
Shaikh BigTv
May 20, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಅವಳಿ ನಗರದ ಜನರ ನಿದ್ದೆ ಗೆಡಿಸಿದ್ದ ಮನೆಗಳ್ಳರನ್ನ ಹಿಡಿಯುವಲ್ಲಿ ಕಸಬಾ ಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ,ಮನೆಯಲ್ಲಿ ಯಾರು ಇಲ್ಲದ ಸಮಯ, ಮನೆಯ ಹಿತ್ತಲ ಬಾಗಿಲು ಕೀಲಿ ಮುರಿದು, ಮನೆಯಲ್ಲಿ ಇದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಇಂದು ಪೊಲೀಸರ ಅತಿಥಿ ಆಗಿದ್ದಾನೆ. ಹುಬ್ಬಳ್ಳಿಯ ಇಸ್ಲಾಂಪೂರ್ ಗದಗಪುರ ಲೇಔಟ್ ನಲ್ಲಿ ವಾಸವಿರುವ ಶಬ್ಬೀರ್ ಗದಗ್ ಕರ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ 190 ಗ್ರಾಂ …
Read More »
Shaikh BigTv
May 20, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಪೋಲೀಸ ಬಗ್ಗೆ ಅವರ ಇಲಾಖೆಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರಂತೆ,ಹುಬ್ಬಳ್ಳಿಯಲ್ಲಿ ಎಲ್ಲಾ ಅಕ್ರಮ ದಂಧೆಗಳು ಸರಳವಾಗಿ ನಡೆದಿವೆಯಂತೆ.ಯಾರಿಗೋ ಒಬ್ಬರಿಗೆ ಗುಂಡು ಹೊಡೆಯೋದು.ಹತ್ತ ಮಂದಿಗೆ ಹೆದರಿಸಿ,ಗುಂಡು ಹೊಡಿತೇನಿ ಅಂತಾ ವಸೂಲಿ ಮಾಡೋದಂತೆ. ಮಟಕಾ,ಗಾಂಜಾ,ಕ್ರಿಕೆಟ್ ಬೆಟ್ಟಿಂಗ್..ರೀಯಲ್ ಎಸ್ಟೇಟ್ ಎಲ್ಲಾ ದಂಧೆಗಳು ಅರಾಮಾಗಿ ನಡೆದಿವೆಯಂತೆ. ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.. ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಮತ್ತು ಅವರ ಸಿಬ್ಬಂದಿ ವರ್ಗ ಸಂಪೂರ್ಣವಾಗಿ …
Read More »
BigTv News
May 20, 2025
Breaking News, Crime
ಬೆಳಗಾವಿಯಲ್ಲಿ ಭೀಕರವಾದ ಕೊಲೆಯಾಗಿದ್ದು, ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್ ಗ್ರಾಮದಲ್ಲಿ ನಡೆದಿದೆ.ಆರೋಪದ ಹಿನ್ನೆಲೆ ಪತಿ ಸಂತೋಷ , ಮಾವ ಕಾಮಣ್ಣ , ಅತ್ತೆ ಜಯಶ್ರೀ ಎನ್ನು ಅರೆಸ್ಟ್ ಮಾಡಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
May 20, 2025
Breaking News, Crime
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಯುವಕರಿಂದ ಸುಮಾರು ₹1. 82 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿದ ಪ್ರಕರಣದ ಅರೋಪಿಯನ್ನು ಇಲ್ಲಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮುಂಬೈ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್ ಬಂಧಿತ ಆರೋಪಿ.ಹೆಚ್ಚಿನ ತನಿಖೆ ಸಲುವಾಗಿ ಅರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ತವಾಲ್ ತಿಳಿಸಿದ್ದಾರೆ.
Read More »
BigTv News
May 20, 2025
Breaking News, Crime
ತುಮಕೂರು ಜಿಲ್ಲೆಯ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕರ್ನೂಲ್ ಬಳಿ ನಡೆದಿದೆ.ಕರ್ನೂಲ್ ಬಳಿ ನಿಯಂತ್ರಣ ತಪ್ಪಿದ ಪ್ರವಾಸಿಗರಿದ್ದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮೂವರು ಮೃತಪಟ್ಟರೇ, ಉಳಿದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ನವೀನ್, ಸಂತೋಷ್, ಲೋಕೇಶ್ ಎಂದು ಗುರುತಿಸಲಾಗಿದೆ.
Read More »
BigTv News
May 20, 2025
Breaking News, Crime
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಹಾಗೂ ಮತ್ತೊಂದು ಗ್ಯಾಂಗ್‌ನ ನಡುವೆ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ.ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನೌಶಾದ್ ಮೇಲೆ ಹಲವಾರು ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ಥೋರಟ್ ಜೈಲಿಗೆ ತಕ್ಷಣ ಆಗಮಿಸಿದ್ದು,ಗಲಾಟೆಯ ನಂತರ, ಪೊಲೀಸರು ಜೈಲಿನ ಆವರಣದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.ಈ ಘಟನೆಯ …
Read More »
BigTv News
May 20, 2025
Breaking News, Crime
ದೆಹಲಿಯಿಂದ ಆಸ್ಸಾಂಗೆ ವರ್ಗಾವಣೆಯಾದ ಹಿನ್ನೆಲೆ ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಹಲ್ಲೆ ನಡೆದಿದೆ. ಅಕ್ಕನ ಜಮೀನಿನ ಬದುವಿನ ವಿಚಾರದಲ್ಲಿ ಅಕ್ಕನ ಪರ ನ್ಯಾಯ ಕೇಳಿದ್ದರಿಂದ ಜಗಳವಾಗಿದ್ದು, ಪಕ್ಕದ ಜಮೀನಿನ ಅಮರೇಶ್, ಮಂಜುನಾಥ ಎಂಬುವವರು ಹಲ್ಲೆ ನಡೆಸಿದ್ದಾರೆ.ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ಬಂದ ಅಮರೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚನ್ನಬಸಪ್ಪ ತಪ್ಪಿಸಿಕೊಂಡು ಓಡಿದ್ದು, ಆದರೂ ಬಿಡದೇ ಬೆನ್ನಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯರು ಸಹಾಯಕ್ಕೆ ಮುಂದಾಗಿದ್ದಾರೆ. ಸದ್ಯ …
Read More »
BigTv News
May 20, 2025
Breaking News, Crime
ಗೋಣಿಕೊಪ್ಪ ರಸ್ತೆಯಲ್ಲಿನ ಉತ್ತೇನಹಳ್ಳಿ ಗೇಟ್ ಬಳಿ ಇರುವ ಖಾಸಗಿ ಹೊಟೇಲ್ ಮುಂಭಾಗ ಆರೋಪಿ ಮತೀನ್‌ಖಾನ್ ಭಾನುವಾರ ಮಧ್ಯಾಹ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಇಟ್ಟುಕೊಟ್ಟು ಸಾರ್ವಜನಿಕರಿಗೆ ₹ 150 ರಿಂದ ₹ 200ಗಳಿಗೆ ಮಾರಾಟ ಮಾಡುತ್ತಿದ್ದು ಈ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು, ಪಿಎಸ್‌ಐ ನವ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ತಪಾಸಣೆ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂ ಮಹಾದೇವಪ್ಪ, …
Read More »
BigTv News
May 20, 2025
Breaking News, Crime
ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿ ಯೊಬ್ಬ ಅನುತ್ತೀರ್ಣಗೊಂಡ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯ ಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದು ಮೇ 12ರಂದು ರಾತ್ರಿಯಿಂದ ಮೇ 18ರ ಬೆಳಗಿನ ಮಧ್ಯಾವಧಿಯಲ್ಲಿ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Read More »