Breaking News

Crime

ಹುಬ್ಬಳ್ಳಿ : ಬಾಲಕಿ ಅತ್ಯಾಚಾರ,ಹತ್ಯೆ ಆರೋಪಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ಹಂತಕ ರಿತೇಶಕುಮಾರ್..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಣ್ಣೀರು ಹಾಕಿದ್ದ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಯ ಶವವನ್ನು ಮಣ್ಣು ಮಾಡಲಾಗಿದೆ. ಐದು ವರ್ಷದ ಬಾಲಕಿ ರೇಪ್ ಆಂಡ್ ಮರ್ಡರ್ ಕೇಸ್ ನಲ್ಲಿ ಎನ್‌ಕೌಂಟರ್ ಗೆ ಬಲಿಯಾದ ಅನಾಥ ಶವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಪೊಲೀಸರ ಗುಂಡಿಗೆ ಬಲಿಯಾದ ಹಂತಕ ರಿತೇಶಕುಮಾರನ ಅಂತ್ಯಸಂಸ್ಕಾರ. ತಹಶಿಲ್ದಾರರ ಹಾಗೂ ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ. ಹೌದು.. ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಹಂತಕ …

Read More »

ಗೋವಾ: ದೇವಸ್ಥಾನದಲ್ಲಿ ಕಾಲ್ತುಳಿತ, ಏಳು ಜನರ ಸಾವು!!

ಉತ್ತರ ಗೋವಾದ ಶಿರ್ಗಾವ್ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ೭ ಜನರು ದುರ್ಮರಣ ಹೊಂದಿದ್ದು, 30ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿದೆ. ತಕ್ಷಣ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಕಲಿಸಲಾಗಿದೆ. ಪೊಲೀಸರು ಘಟನೆಯನ್ನು ಹತೋಟಿ ತೆಗೆದುಕೊಳ್ಳಲು ಕಾರ್ಯಾಚರಣೆ ನಡೆಸಿದ್ದಾರೆ.

Read More »

ಹಾವೇರಿ : ಚಾಲಕ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ; ಪ್ರಯಾಣಿಕನ ಕಾಲು ಕಟ್!

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಖಾಸಗಿ ಬಸ್ ಪಲ್ಟಿಯಾಗಿದ್ದು, 7 ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಈ ಅವಘಡದಲ್ಲಿ ಓರ್ವ ಪ್ರಯಾಣಿಕನ ಕಾಲು ಕಟ್ ಆಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ್ಟಿತ್ತು. ಚಾಲಕನ ನಿದ್ರೆಯ ಮಂಪರಿನಲ್ಲಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇನ್ನೂ ಗಾಯಾಳುಗಳನ್ನು ರಾಣೇಬೆನ್ನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ನಲ್ಲಿದ್ದ 23 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More »

ಹನೂರು: ಅಪರಿಚಿತ ವಾಹನ ಡಿಕ್ಕಿ, ಜಿಂಕೆ ಸಾವು!

ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಶುಕ್ರವಾರ ಜಿಂಕೆಯೊಂದು ಮೃತಪಟ್ಟಿದೆ. ಹನೂರು ಪಟ್ಟಣದ ಹೊರವಲಯದ ಮಹದೇಶ್ವರಬೆಟ್ಟ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿ ಜಿಂಕೆ ಗಾಯಗೊಂಡು ನರಳಾಡಿದೆ. ಈ ವಿಷಯವನ್ನು ಪ್ರಯಾಣಿಕರು ಅದೇ ಮಾರ್ಗದಲ್ಲಿದ್ದ ತುರ್ತುವಾಹನ 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆಗೆ ನೀರುಣಿಸಿ ಹಾರೈಕೆ ಮಾಡಿದ್ದಾರೆ. ಅರಣ್ಯ ಇಲಾಖೆಯವರು …

Read More »

ಮಧ್ಯಪ್ರದೇಶ:ಮದುವೆಗೆ ಹೊರಟಿದ್ದ ವಾಹನ ಪಲ್ಟಿಯಾಗಿ ನಾಲ್ವರು ಸಾವು, 13 ಮಂದಿಗೆ ಗಾಯ!

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಮದುವೆ ತಂಡವನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ನಂತರ, ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಬಿಜೆಪಿ ಶಾಸಕ ಉಮಾಕಾಂತ್ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಿದರು. ಘಟನೆಯ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ದುಃಖ …

Read More »

ಬಾಗಲಕೋಟ : ಪಲ್ಯ-ಸಾಂಬಾರ್ ಚೆನ್ನಾಗಿಲ್ಲವೆಂದು ಪತ್ನಿಯ ಹತ್ಯೆ!

ಮದುವೆಯಾದ ಬಳಿಕ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಿದ್ದ ಗಂಡ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನು. ಇನ್ನು ಹೆಂಡತಿ ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡುತ್ತಿಲ್ಲ ಎಂಬ ಕಾರಣಕ್ಕೂ ಜಗಳ ಮಾಡುತ್ತಿದ್ದನು. ಇದೀಗ ನಿನ್ನೆ ಹೆಂಡತಿ ಸಾಂಬರ್, ಪಲ್ಯ ಚೆನ್ನಾಗಿ ಮಾಡಿಲ್ಲವೆಂದು ಜಗಳ ಮಾಡಿದ್ದಾನೆ. ಈ ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಿರಿಯರು ಕೇಳಿದಾಗ ಪತ್ನಿ ಸಾಕ್ಷಿತಾ ಸಾಂಬಾರ್ ಪಲ್ಯ ಸರಿಯಾಗಿ …

Read More »

ಮುಂಬೈ :ಹಾಡಹಗಲೇ ಅಣ್ಣನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ ತಮ್ಮ!!

ಮಹಾರಾಷ್ಟ್ರದ ಪಿಂಪಲ್‍ಗಾಂವ್‍ನಲ್ಲಿ ಭಯಾನಕವಾದ ಘಟನೆಯೊಂದು ನಡೆದಿದ್ದು, ಯವತ್ಮಾಲ್ ಪಟ್ಟಣದ ರಸ್ತೆಯ ಮಧ್ಯದಲ್ಲಿ ಹಾಡಹಗಲೇ ಸಹೋದರನೊಬ್ಬ ತನ್ನ ಹಿರಿಯ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕ್ರೂರವಾಗಿ ಕೊಂದಿದ್ದಾನೆ. ಆದರೆ ರಸ್ತೆಯಲ್ಲಿ ಹೋಗುತ್ತಿದ್ದವರು ಯಾರೂ ಕೂಡ ಈ ಕೃತ್ಯವನ್ನು ತಡೆಯಲು ಮುಂದೆ ಬರಲಿಲ್ಲವಂತೆ. ವರದಿ ಪ್ರಕಾರ ಮೃತನನ್ನು 35 ವರ್ಷದ ಪ್ರಮೋದ್ ಪೆಂಡೋರ್ ಹಾಗೂ ಆರೋಪಿಯನ್ನು 34 ವರ್ಷದ ಕವಿವರ್‌ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ನಗರ ಪೊಲೀಸರು ಆರೋಪಿಗಳನ್ನು …

Read More »

ಸೇಡಿನ ಕೊಲೆಯೇ! ಸುರತ್ಕಲ್‌ನಲ್ಲಿ ಎರಡು ವರ್ಷ ಹಿಂದೆ ನಡೆದ ಫಾಝಿಲ್‌ ಕೊಲೆಗೆ ಪ್ರತೀಕಾರದ ಹತ್ಯೆ!!

ತಮ್ಮನ ಮಗಳ ಮದುವೆಯ ಬಳಿಕದ ಕಾರ್ಯಕ್ರಮದಲ್ಲಿ ನಾವು ಗುರುವಾರ ರಾತ್ರಿ ಊಟ ಬಡಿಸುತ್ತಿದ್ದೆವು. ಆತನ ಮಗನ ಸ್ನೇಹಿತರಿಗೆ ಫೋನ್ ಕರೆ ಬಂತು. ಹಲ್ಲೆಯಿಂದ ಗಾಯಗೊಂಡ ಮಗನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆತ ಹುಷಾರಾಗಿದ್ದಾನೆ ಎಂದರು. ಆದರೆ ರಾತ್ರಿ 11 ಗಂಟೆಗೆ ಸುಮಾರಿಗೆ ಆತ ಮೃತಪಟ್ಟಿದ್ದು ಗೊತ್ತಾಯಿತು’ ಎಂದು ಅವರು ತಿಳಿಸಿದರು. ಮಗನದ್ದೂ ಸೇಡಿನ ಕೊಲೆಯೇ. ಸುರತ್ಕಲ್‌ನಲ್ಲಿ ಎರಡು ವರ್ಷ ಹಿಂದೆ ನಡೆದ ಫಾಝಿಲ್‌ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ …

Read More »

ಬೆಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಉದ್ಯಮಿ ಕಿರಣ್ ಜೈನ್ ಬಂಧನ!

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದ ಅಡಿ ಉದ್ಯಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧೆಡೆ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದರು. ದಾಳಿ ವೇಳೆ ಎಂಟು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲೇ ಎಂಟು ಮಧ್ಯವರ್ತಿಗಳನ್ನು ಬಂಧಿಸಿದ್ದರು. ರಕ್ಷಣೆಯಾದ ಯುವತಿಯರ ಪೈಕಿ ಒಬ್ಬ ಬಾಲಕಿಯಿದ್ದಳು. ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಾಗ ಆರೋಪಿ ಕಿರಣ್ ಜೈನ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು …

Read More »

ಮಧ್ಯ ಪ್ರದೇಶ: ಸಂತ್ರಸ್ತೆಯ ಮೇಲೆ ಎರಡು ದಿನ ನಾಲ್ವರಿಂದ ಅತ್ಯಾಚಾರ; ಆರು ಮಂದಿ ಬಂಧನ!!

ಏಪ್ರಿಲ್ 29 ರಂದು ನಾಪತ್ತೆಯಾಗಿದ್ದ ಬಾಲಕಿ ನಂತರ ಶಹದೋಲ್ ಜಿಲ್ಲೆಯ ಪ್ರಮುಖ ಹೋಟೆಲ್‌ನ ಕೋಣೆಯಲ್ಲಿ ಬಂಧಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅಪಹರಣ ಮತ್ತು ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಉಪ ಜೈಲರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ದಿನಗಳ ಕಾಲ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಉಪ ಜೈಲರ್ ನನ್ನನ್ನು ಅಪಹರಿಸಿದ್ದು, ಹೋಟೆಲ್ ಕೋಣೆಯೊಳಗೆ ಬಲವಂತವಾಗಿ ಕೂಡಿಹಾಕಿದ್ದಾರೆ ಎಂದು ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ …

Read More »