Breaking News

ಅಪರಾಧ

ಅಕ್ರಮ ಮದ್ಯ ಸಾಗಾಟ! ರೆಡ್ ಹ್ಯಾಂಡ್ ಆಗಿ ಹಿಡಿದ ಅಬಕಾರಿ ಅಧಿಕಾರಿಗಳು

ಹುಬ್ಬಳ್ಳಿ : ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಕ್ರಮ ಮದ್ಯ ಸಾಗಾಟ ಜೋರಾಗಿ ಸಾಗಿದ್ದು, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಇಂದು ನಗರದ ಮಂಟೂರ ರಸ್ತೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೆರೆಗೆ ವಾಹನ ಸಂಖ್ಯೆ ಕೆಎ.63k.1560(ಹೊಂಡಾ ಡಿಯೋ ದ್ವಿಚಕ್ರ)ದಲ್ಲಿ ಅಕ್ರಮವಾಗಿ 30.24 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ಮಾಡಿದ ವೇಳೆ ಆರೋಪಿತ ಪರಾರಿಯಾಗಿದ್ದಾನೆ. …

Read More »

ಉಪ್ಪಿನ ಬೆಟಗೇರಿಯಲ್ಲಿ ನೇಣಿಗೆ ಕೊರಳೊಡ್ಡಿದ ಗೃಹಿಣಿ

ಧಾರವಾಡ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ. ನಿರ್ಮಲಾ ಕೋಟೂರ (40) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡವರು. ವಿವಾಹವಾಗಿದ್ದ ನಿರ್ಮಲಾ, ಮಾನಸಿಕವಾಗಿ ಅಸ್ವಸ್ಥಗೊಂಡ ನಂತರ ಗಂಡನ ಮನೆಯಾದ ಅಮ್ಮಿನಬಾವಿ ಗ್ರಾಮದಿಂದ ತನ್ನ ತವರು ಮನೆ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದಿದ್ದರು. ಇಂದು ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ …

Read More »

ವೈಯಕ್ತಿಕ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ತುಮಕೂರು : ವೈಯಕ್ತಿಕ ದ್ವೇಷದ ಹಿನ್ನೆಲೆ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ ಕೆ ಹಳ್ಳಿ ಕ್ರಾಸ್ ಬಳಿ ನಡೆದಿದೆ. ಪ್ರಸನ್ನ ಕುಮಾರ್(46) ಹತ್ಯೆಗೀಡಾದ ಕಾರ್ಯಕರ್ತ. ಇವರು ಪಾವಗಡ ತಾಲೂಕು ಬಿಜೆಪಿ ರೈತ ಮೋರ್ಚಾದ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಬೈಕ್​​ನಲ್ಲಿ ಪಾವಗಡದಿಂದ ತಮ್ಮ ಸ್ವಗ್ರಾಮ ಅಪ್ಪಾಜಿಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ …

Read More »

ಮಾಸ್ಕ್‌ ಹಾಕೊಳ್ಳಿ ಎಂದಿದ್ದಕ್ಕೆ ಕರ್ತವ್ಯ ನಿರತ ಪೋಲಿಸ್‌ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರು : ಮಾಸ್ಕ್ ಧರಿಸಿ ಎಂದು ಬುದ್ದಿವಾದ ಹೇಳಿದಕ್ಕೆ ಅಸಮಾಧಾನಗೊಂಡು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಅಲ್ಲದೇ, ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಚಿಗರಿ ಬಸ್‌ ಗುದ್ದಿದ್ದ ಪಾದಚಾರಿ ಕಿಮ್ಸ್ನಲ್ಲಿ ಸಾವು

ಹುಬ್ಬಳ್ಳಿ: ನಗರದ ರೇಲ್ವೆ ನಿಲ್ದಾಣದ ಸಮೀಪದಲ್ಲಿ ಬಿಆರ್ ಟಿಎಸ್ ಚಿಗರಿ ಬಸ್ ಹಾಯ್ದು ಅಣ್ಣಿಗೇರಿ ಮೂಲದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಈಗಷ್ಟೇ ಸಂಭವಿಸಿದೆ. ಧಾರವಾಡದಿಂದ ಬಂದು ಮತ್ತೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್, ರಸ್ತೆಯಲ್ಲಿ ಅಳಿಯನ ಮನೆಗೆ ಹೊರಟಿದ್ದ ವೃದ್ಧನಿಗೆ ಹಾಯ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ. ಘಟನೆ ನಡೆಯುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ನಾಗೇಶ ಕಾಡದೇವರಮಠ, ಶವವನ್ನ ಮರಣೋತ್ತರ …

Read More »

ದಾಖಲೆ ಬಳಸಿ ಹಣ ವಂಚನೆ : ಆನ್​ಲೈನ್​ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ!

ಹುಬ್ಬಳ್ಳಿ : ಆನ್‌ಲೈನ್‌ನಲ್ಲಿ 22 ಸಾವಿರ ರೂ. ಪಡೆದಿದ್ದ ಮಹಿಳೆಯ ದಾಖಲೆಗಳನ್ನು ಬಳಸಿಕೊಂಡು ವಿವಿಧ ಆ್ಯಪ್‌ಗಳ ಮೂಲಕ ಅವರ ಹೆಸರಲ್ಲಿ 1,78,425 ರೂ. ಸಾಲ ಪಡೆದು ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್​ಲೈನ್​ ಲೋನ್​ ಆ್ಯಪ್​​ ವಂಚನೆ : ಹಳೇ ಹುಬ್ಬಳ್ಳಿಯ ಪ್ರೀತಿ ಎಂಬುವರು ನ.21 ರಿಂದ ಡಿ. 5ರ ನಡುವೆ ಆ್ಯಪ್ ಒಂದರ ಮೂಲಕ 22,000 ರೂ . ಸಾಲ ಪಡೆದಿದ್ದರು.ಈ ವೇಳೆ …

Read More »

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ-ಧಾರವಾಡದ ಲೈನ್‌ ಬಜಾರನಲ್ಲಿ ಘಟನೆ

ಧಾರವಾಡದ : ಲೈನ್ ಬಜಾರ್ ಹನುಮಂತದೇವರ ದೇವಸ್ಥಾನದ ಹಿಂಭಾಗದಲ್ಲಿ ಇರುವಂತಹ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಧಾರವಾಡದ ಶಹರ ಪೊಲೀಸರು ಬಾವಿಯೊಳಗೆ ಇದ್ದಂತಹ ಅಪರಿಚಿತ ವ್ಯಕ್ತಿಯ ಮೃತದೇಹ ವನ್ನು ಹೊರತೆಗೆದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಪೋಸ್ಟ್ ಮಾಟಂಗಾಗಿ ಕಳುಹಿಸಿದ್ದಾರೆ.ಇನ್ನು ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು ಘಟನೆಯ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದು ವ್ಯಕ್ತಿಯ ಗುರುತು ಹಾಗೂ …

Read More »

ಬೈಕ್‌ ಹಾಗೂ ಟ್ರ್ಯಾಕ್ಟರ್ ಡಿಕ್ಕಿ- ಬೈಕ್‌ ಸವಾರ ಸಾವು

ಹುಬ್ಬಳ್ಳಿ : ಬೈಕ್‌ ಹಾಗೂ ಟ್ರ್ಯಾಕ್ಟರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಜಿಲ್ಲೆ ಶಿವಳ್ಳಿ ಗ್ರಾಮದ ಬಳಿ ನೆಡೆದಿದೆ. ಬೆಳಗಿನ ಜಾವ ಈ ಅಪಘಾತ ನೆಡೆದಿದ್ದು, 29 ವರ್ಷದ ಶ್ರೀಕಾಂತ ಎಂಬ ಯುವಕನೇ ಸಾವನ್ನಪ್ಪಿದ್ದು, ಸ್ಥಳದಲ್ಲಿದ್ದು ಜನರು ಶ್ರೀಕಾಂತನನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಾವು ಬದುಕಬೇಕೋ ಬೇಡ್ವೋ ? ಸಾಯಿ ಅಂದರೆ ಸತ್ತಿ ಬಿಡ್ತೀವಿ- ಪೋಲಿಸರ ಎದುರೇ ಯುವಕನ ಹುಚ್ಚಾಟ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಗಲಾಟೆ ಮಾಡಿದವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಮನು ಅಲಿಯಾಸ್ ಮನ್ಮಥ ಕೊರವರ ಎಂಬಾತನೂ ಆ ಗಲಾಟೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ಆತನನ್ನೂ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ವಿಚಾರಣೆಯಿಂದ ಮನು ತನ್ನ ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಅಸಮಾಧಾನ ಹೊರಹಾಕಿದ್ದಾನೆ. ನಾನು …

Read More »

ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಸಿಸಿಎಫ್ ಅಧಿಕಾರಿಯೊಬ್ಬರ ಮೇಲೆ ಮಹಿಳೆಯೊಬ್ಬಳು ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ವಿದ್ಯಾ ಹಿರೇಮಠ ದೂರು ದಾಖಲಿಸಿದ ಮಹಿಳೆ. ಧಾರವಾಡದಲ್ಲಿ ಚಿಫ್ ಕನ್ಸರ್ವೆಟಿವ್ ಫಾರೆಸ್ಟರ್ ಆಗಿದ್ದ ರವಿ ಶಂಕರ ಅವರು ವಿದ್ಯಾ ಅವರಿಗೆ ಫೆಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಸದ್ಯ ರವಿಶಂಕರ ಶಿವಮೊಗ್ಗದಲ್ಲಿ ಸಿಸಿಎಫ್ ಆಗಿದ್ದಾರೆ. ರವಿಶಂಕರ್ ಅವರು ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾಳನ್ನು ನಂಬಿಸಿ ಮೋಸ ಮಾಡಿದ್ದರು. ಮೋಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರವಿಶಂಕರ ಧಮ್ಕಿ …

Read More »