Breaking News

ಕರ್ನಾಟಕ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆ..!

ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್‌ ಇದೀಗ ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಹೈಅಲರ್ಟ್‌ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರೋದು ಧೃಡವಾಗಿದೆ. ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ (Health Department) ಸರ್ವೆ ಕಾರ್ಯ ರ‍್ಯಾಂಡಮ್‌ ಚೆಕಪ್‌ ಮಾಡಲಾಗುತ್ತಿದೆ. …

Read More »

ವಿಷಾಹಾರ ಸೇವಿಸಿದ್ದ ಐದು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ವಿಷಾಹಾರ ಸೇವಿಸಿ ಐದು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತ ‌ಮೋರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಪಲಾವ್ ಸೇವಿಸಿದ್ದರಿಂದ 50 ಜನರ ಪೈಕಿ 5 ಜ‌ನ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದು, ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಬೇಕಿದೆ

Read More »

ರಮೇಶ್‌ ಜಾರಕಿಹೊಳಿ ವಿರುದ್ಧ ದೂರು…

ಬೆಂಗಳೂರು: ಬಿಜೆಪಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ಎಸ್.ಮನೋಹರ್ ಅವರು ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಜೊತೆಗೆ ಆಧಾರ ರಹಿತವಾಗಿ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಪುಕ್ಕಲ, ಮೋಸಗಾರ, ಸಿ.ಡಿ …

Read More »

ವಯಸ್ಸಾದ ವ್ಯಕ್ತಿ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್….

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಘಟನೆಯ ವಿಡಯೋವನ್ನು ನಿನ್ನೆ (ಭಾನುವಾರ) ಸಂಜೆ ಮಾಲ್‌ನಲ್ಲಿ ಸೆರೆಹಿಡಿಯಲಾಗಿದೆ. ಬೆಂಗಳೂರಿನ ಮಾಲ್‌ವೊಂದರಲ್ಲಿ ವಯಸ್ಸಾದ ವ್ಯಕ್ತಿ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಲ್‌ನಲ್ಲಿ ಯುವತಿಯೊಬ್ಬಳು ನಡೆದು ಬರುವಾಗ ಬೇಕಂತಲೇ ಹಿಂದಿನಿಂದ ಹೋಗಿ ಆಕೆಯ ಹಿಂಭಾಗಕ್ಕೆ ಡಿಕ್ಕಿ ಹೊಡೆಯುತ್ತಾನೆ. ಜೊತೆಗೆ ಆಕೆಯ ಹಿಂಭಾಗವನ್ನು ಅಶ್ಲೀಲವಾಗಿ ಮುಟ್ಟಿ ಆನಂದಿಸಿದ್ದಾನೆ. …

Read More »

ಬೆಂಗಳೂರು ನಗರದಲ್ಲಿ ವೈರಲ್‌ ಫೀವರ್‌ ಅಬ್ಬರ….

ಬೆಂಗಳೂರು: ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿ ರುವ ನಡುವೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ವೈರಲ್‌ ಫೀವರ್‌ ಬಿಟ್ಟು ಬಿಡದೇ ಕಾಡುತ್ತಿದೆ. ಸಾಮಾನ್ಯವಾಗಿ ವೈರಲ್‌ ಫೀವರ್‌ ಪ್ರಕರಣ ಗಳು ಜೂನ್‌-ಸೆಪ್ಟೆಂಬರ್‌ ತಿಂಗಳಲ್ಲಿ ವರದಿ ಯಾಗಿ, ಅಕ್ಟೋಬರ್‌ ಅಂತ್ಯಕ್ಕೆ ಕೊನೆಯಾಗುತ್ತದೆ. ಆದರೆ, ಈ ಬಾರಿ ಬೆಂಗಳೂರು ನಗರದಲ್ಲಿ ಬಿಸಿಲು ಹಾಗೂ ಚಳಿ, ಮಳೆಯ ಜತೆಯಾಟದಿಂದ ಮಳೆಗಾಲದ ಮುಕ್ತಾಯದ ಬಳಿಕವೂ ವೈರಲ್‌ ಫೀವರ್‌ ಅಬ್ಬರ ಹೆಚ್ಚಾಗಿದೆ. ಕುಟುಂಬ ಸದಸ್ಯನೊಬ್ಬನಿಗೆ ಕಾಣಿಸಿಕೊಂಡ ಜ್ವರ-ಶೀತ ಬಳಿಕ ಒಬ್ಬೊಬ್ಬರಿಗೆ ಹರಡುತ್ತಿದೆ.

Read More »

ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ಜ ಜಪಾನ್‌ಗೆ ತೆರಳಲು ಧನಸಹಾಯವನ್ನು ಮಾಡಿದ್ದರು

ಧಾರವಾಡ:ಧಾರವಾಡ ಜಿಲ್ಲೆಯ ಕುಂದಗೋಳ‌ ತಾಲೂಕಿನ ಕಳಸ ಗ್ರಾಮದ ವಿದ್ಯಾರ್ಥಿನಿ ಪುಟ್ಟವ್ವ ರಮೇಶ ಬಾಲ್ಕೆ ಅವರಿಗೆ ಕಾರ್ಮಿಕ ಇಲಾಖೆಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ‌ ಸಚಿವ ಸಂತೋಷ್ ಲಾಡ್ ಅವರು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ರೂ, 25,000 ಸಹಾಯಧನ ಮಾಡಿದರು. ವಿದ್ಯಾರ್ಥಿನಿಯು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸದ ಸರಕಾರಿ ಪ್ರೌಢಶಾಲೆಯಲ್ಲಿ10 ನೇ ತರಗತಿ ಓದುತ್ತಿದ್ದು, ಜಪಾನ್‌ನಲ್ಲಿ ನಡೆಯುತ್ತಿರುವ ʼಇನ್‌ಸ್ಪೈರ್ ಅವಾರ್ಡ್ 2023 ಸ್ಪರ್ಧೆʼ ಯಲ್ಲಿ ಭಾಗವಹಿಸುತ್ತಿದ್ದಾಳೆ. ಇದು ಇಡೀ …

Read More »

ರಜನಿ ಬಗ್ಗೆ ಹೇಳಿದ ಕವಿತಾ….

ಕವಿತಾ 11 ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ನಾಯಕಿಯಾಗಿ ನಟಿಸಿದರು. ರಜನಿ, ಶಿವಾಜಿ ಸೇರಿದಂತೆ ಪ್ರಮುಖ ನಟರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ತಮಿಳಿನಲ್ಲಿ ಸೆಂತಮಿಲ್ ಪಾಟ್ಟು, ವೈದೇಹಿ ಕಲ್ಯಾಣಂ, ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕವಿತಾ ತಮಿಳು ಮಾತ್ರವಲ್ಲದೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್ ನಲ್ಲಿ ಖ್ಯಾತ ನಟಿಯಾಗಿದ್ದಾರೆ. ಕವಿತಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. …

Read More »

ಬೆಂಗಳೂರಿನಲ್ಲಿ ಮತ್ತೊಂದು ಅವಘಡ…

ಬೆಂಗಳೂರು ಸೋಮವಾರ ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿಯಾಗಿದೆ. ಪಬ್, ಪಟಾಕಿ ಗೋದಾಮಿನಲ್ಲಿ ಬೆಂಕಿ ದುರಂತ ಬೆನ್ನಲ್ಲೆ ಇದೀಗ ಬಸ್‌ಗಳಿಗೆ ಬೆಂಕಿ ಬಿದ್ದಿದೆ. ಒಟ್ಟು ಹತ್ತಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿ ಆಗಿವೆ. ಬೆಂಗಳೂರಿನ ವೀರಭದ್ರ ನಗರದಲ್ಲಿ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ಈ ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿಯೇ ಶೆಡ್ ಗಳಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ನಿಖರ ಕಾರಣ ತಿಳಿದು ಬರಬೇಕಿದೆ. ಸ್ಥಳದಲ್ಲಿ ನಿಲ್ಲಿಸಿರುವ ಎರಡು ಬಸ್‌ಗಳಿಗೆ ಮೊದಲು ಬೆಂಕಿ …

Read More »

ಶೃತಿ ಹಾಸನ್ ಅರೋಗ್ಯ ಕೆಟ್ಟಿದೆ….

ನಟಿ ಶ್ರುತಿ ಹಾಸನ್ ದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಜನಪ್ರಿಯ ನಟಿಯರಲ್ಲಿ ಈಕೆ ಕೂಡ ಒಬ್ಬರಾಗಿ, ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ. ನಟ ಕಮಲ್ ಹಾಸನ್ ಪುತ್ರಿ ಮಾನಸಿಕ ಆರೋಗ್ಯ ಕೆಟ್ಟಿದ್ದು, ಆಲ್ಕೋಹಾಲ್‌ಗೆ ದಾಸಿಯಾಗಿದ್ದಾರೆ ಅನ್ನೋ ಸುದ್ದಿಗಳೆಲ್ಲ ಹಬ್ಬಿದ್ದವು. ಈ ವಿಚಾರವಾಗಿ ಈ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದಾಗ ‘ಕುಡಿತದ ಚಟಕ್ಕೆ ಬಿದ್ದಿದ್ದು ಅಪ್ಪ-ಅಮ್ಮನಿಂದಲೇ’ ಎಂದು ಮಾತನಾಡಿದ್ದು, ಸದ್ಯ ಹೇಳಿಕೆಗಳು ವೈರಲ್ ಆಗಿವೆ. 18 ವರ್ಷ …

Read More »

ಆಪರೇಷನ್ ಕಮಲದಿಂದ ಬಿಜೆಪಿ ಅಧಿಕಾರ…

ಆಪರೇಷನ್ ಕಮಲವನ್ನು ಅಸ್ತ್ರವನ್ನಾಗಿಸಿಕೊಂಡು ಏಳೆಂಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ, ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು ಬೆಳಗಾವಿ: ಆಪರೇಷನ್ ಕಮಲವನ್ನು ಅಸ್ತ್ರವನ್ನಾಗಿಸಿಕೊಂಡು ಏಳೆಂಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ, ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕ ಘಟಕದಲ್ಲಿ ನಾಯಕತ್ವದ ರೇಸ್ ಇಲ್ಲ, ಬಿಜೆಪಿಯವರಿಗೆ ಬೇರೆಯವರ …

Read More »