ಬೆಂಗಳೂರು: ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿ ರುವ ನಡುವೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ವೈರಲ್ ಫೀವರ್ ಬಿಟ್ಟು ಬಿಡದೇ ಕಾಡುತ್ತಿದೆ. ಸಾಮಾನ್ಯವಾಗಿ ವೈರಲ್ ಫೀವರ್ ಪ್ರಕರಣ ಗಳು ಜೂನ್-ಸೆಪ್ಟೆಂಬರ್ ತಿಂಗಳಲ್ಲಿ ವರದಿ ಯಾಗಿ, ಅಕ್ಟೋಬರ್ ಅಂತ್ಯಕ್ಕೆ ಕೊನೆಯಾಗುತ್ತದೆ. ಆದರೆ, ಈ ಬಾರಿ ಬೆಂಗಳೂರು ನಗರದಲ್ಲಿ ಬಿಸಿಲು ಹಾಗೂ ಚಳಿ, ಮಳೆಯ ಜತೆಯಾಟದಿಂದ ಮಳೆಗಾಲದ ಮುಕ್ತಾಯದ ಬಳಿಕವೂ ವೈರಲ್ ಫೀವರ್ ಅಬ್ಬರ ಹೆಚ್ಚಾಗಿದೆ. ಕುಟುಂಬ ಸದಸ್ಯನೊಬ್ಬನಿಗೆ ಕಾಣಿಸಿಕೊಂಡ ಜ್ವರ-ಶೀತ ಬಳಿಕ ಒಬ್ಬೊಬ್ಬರಿಗೆ ಹರಡುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





