BigTv News
August 22, 2023
ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಕುಂದಗೋಳ: ತಾಲೂಕಿನ ಮಳೆ ಇಲ್ಲದೆ ಬಾಯಿ ಬಿಟ್ಟ ಭೂಮಿ ಕಂಗಾಲ ಅನ್ನದಾತ ಕಳೆದ ಒಂದು ತಿಂಗಳ ಹಿಂದೆ ಬಿಟ್ಟುಬಿಡದೆ ಸುರಿದ ಮಳೆಗೆ ಮುಂಗಾರು ಹೆಸರು ಶೇಂಗಾ ಬಿಟಿ ಹತ್ತಿ ಸುಯಾಬಿನ್ ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದು ಬಾಯಿ ಬಿಡುತ್ತಿರುವ ಭೂಮಿ ತಲೆಯ ಮೇಲೆ ಕೈ ಹೊತ್ತು ಕುಳಿತ ರೈತ ಈ ಪರಸ್ಥಿತಿ ರಾಜ್ಯದಲ್ಲಿ ಎದುರಾದರೂ ಸರ್ಕಾರವು ಹಲವಾರು ಯೋಜನೆಗಳ ಮೊರೆ ಹೋಗುತ್ತಿತ್ತು ರೈತನ ನೆರವಿಗೆ ಬರುತ್ತಿಲ್ಲ ಹೀಗಾಗಿ ಬೀಜ ಗೊಬ್ಬರ ಔಷಧಿಗಳಿಗೆ …
Read More »
BigTv News
August 22, 2023
ಕರ್ನಾಟಕ, ವಿಜಯಪುರ, ಸುದ್ದಿ
ವಿಜಯಪುರ: ಅಂಗಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಎರಡು ಅಂಗಡಿಗಳಿಗೆ ಮಹಾನಗರ ಪಾಲಿಕೆಯು ಅಧಿಕಾರಿಗಳು ಅಂಗಡಿಗಳಿಗೆ ಬೀಗ್ ಹಾಕಿರುವ ಘಟನೆ ವಿಜಯಪುರ ನಗರದ ಬಾಗಲಕೋಟ ಕ್ರಾಸ್ ಬಳಿ ನಡೆದಿದೆ. ಮಹಾನಗರ ಪಾಲಿಕೆ ಅರೋಗ್ಯ ನಿರೀಕ್ಷಕರಿಗೆ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡದ ಚಿಕನ್ ಮಾರಾಟ ಅಂಗಡಿ ಮೇಲೆ ದಾಳಿ ಮಾಡಿ 2 ಅಂಗಡಿ ಸೀಜ್ ಮಾಡಿದ್ದಾರೆ. ಇನ್ನೂ ಪಾಲಿಕೆ ಆಯುಕ್ತ ಸೌದಾಗರ್ ಆದೇಶದ ಮೇಲೆ ಈ ಕ್ರಮ ಕೈಗೊಂಡಿದ್ದಾರೆ. ಇದಕ್ಕೂ …
Read More »
BigTv News
August 22, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು,ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಗೆ ಗಾಳ ಹಾಕಿದ್ದು, ಭರ್ಜರಿ ಅನುದಾನವನ್ನ ಸಿದ್ದರಾಮಯ್ಯ ನೀಡಿದ್ದಾರೆ. ಹೌದು, ಈಗಾಗಲೇ ಬಿಜೆಪಿಯಲ್ಲಿ ಎಸ್ ಟಿ ಸೋಮಶೇಖರ್ ಪಕ್ಷ ತ್ಯಜಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮುಖ್ಯಮಂತ್ರಿ …
Read More »
BigTv News
August 22, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಯಲಹಂಕ:- ಬಸ್ ಗಳಲ್ಲಿ ಬೆಲೆಬಾಳುವ ವಸ್ತು ಕೊಂಡೊಯ್ಯೊ ಪ್ರಯಾಣಿಕರೇ ಎಚ್ಚರ..ತಣ್ಣನೆ ಗಾಳಿ ಬರ್ತಿದೆ ಅಂತಾ ನಿದ್ದೆಗೆ ಜಾರಿದ್ರೆ ನಿಮ್ಮ ವಸ್ತು ಕ್ಷಣದಲ್ಲೇ ಮಾಯವಾಗಿಬಿಡತ್ತೆ ಹುಷಾರ್. ಹೌದು, ಬಸ್ ಪ್ರಯಾಣಿಕರನ್ನೆ ಟಾರ್ಗೆಟ್ ಮಾಡಿ ಖದೀಮರು ತಮ್ಮ ಕೈಚಳಕ ತೋರುತ್ತಾರೆ. ಅದರಂತೆ ಇದೀಗ ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ಟಾಪ್ ಕಳ್ಳತನ ಮಾಡ್ತಿದ್ದ ಇಬ್ಬರು ಖದೀಮರನ್ನು ಅರೆಸ್ಟ್ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಂದ್ರದ ಮದನಪಲ್ಲಿಯ …
Read More »
BigTv News
August 22, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕೋಮಾರನಹಳ್ಳಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವರ ಕಾರ್ಣಿಕ ಪ್ರಸಿದ್ಧಿ ಪಡೆದಿದ್ದು, ಪ್ರತಿ ನಾಗರಪಂಚಮಿ ಹಬ್ಬದ ಬಳಿಕ ಜರಗುವ ಕಾರ್ಣಿಕವನ್ನು ಭಕ್ತರು ಭಕ್ತಿಯಿಂದ ನಂಬುತ್ತಾರೆ. ಪ್ರತಿ ವರ್ಷದಂತೆ ಸೋಮವಾರ ನಡೆದ ಕಾರ್ಣಿಕದಲ್ಲಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವರು ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ, ಸರ್ಪಕ್ಕೆ ಹದ್ದುಕಾದೀತಲೇ ಎಚ್ಚರ ಎಂದು ನುಡಿಯವ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ಅವಿವಾಹಿತ ವ್ಯಕ್ತಿ ಈ ಕಾರ್ಣಿಕವನ್ನು ನುಡಿದಿದ್ದಾರೆ. …
Read More »
BigTv News
August 22, 2023
News, ಕರ್ನಾಟಕ, ಜಿಲ್ಲೆ, ವಿಜಯಪುರ
ವಿಜಯಪುರ: ಅನೈತಿಕ ಸಂಬಂಧದ ಸಂಶಯ ಹಿನ್ನೆಲೆ ಹೆಂಡತಿಯನ್ನು ಬರ್ಬರವಾಗಿಗಂಡನೋರ್ವ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಲಂಗೋಟಿ ತೋಟದ ವಸ್ತಿಯಲ್ಲಿ ನಡೆದಿದೆ. ಶಾಂತಾಬಾಯಿ ಲಂಗೋಟಿ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಸಪ್ಪ ಲಂಗೋಟಿ ಹತ್ಯೆಗೈದಿರುವ ಪಾಪಿ ಗಂಡ, ಹೆಂಡತಿ ಶಾಂತಾಬಾಯಿ ಅನೈತಿಕ ಸಂಬಂಧದ ಸಂಶಯ ವ್ಯಕ್ತಪಡಿಸಿ, ಕುತ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಕುತ್ತಿಗೆ ಕಟ್ ಮಾಡಿದ್ದಾನೆ. ಇದರಿಂದ ಹೆಂಡತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ …
Read More »
BigTv News
August 22, 2023
News, ಕರ್ನಾಟಕ, ಕೊಪ್ಪಳ, ಜಿಲ್ಲೆ
ಕೊಪ್ಪಳ ಬಿಜೆಪಿ ತೊರೆಯುವದಾಗಿ ವದಂತಿ ಹಬ್ಬಿದ್ದು, ಪಕ್ಷ ತೊರೆಯುವ ಪ್ರಶ್ನೆಯೆ ಇಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ.ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತೀನಿ, ಪಕ್ಷ ಬಿಡಲ್ಲ ಎಂದಿದ್ದಾರೆ. ಈ ಬಾರಿಯೂ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧೆ ಮಾಡುವದಾಗಿ ತಿಳಿಸಿದ ಅವರು, ಪಕ್ಷ ಟಿಕೇಟ್ ಕೊಡದೆ ಹೋದರು, ಪಕ್ಷ ಸೂಚಿಸಿದ ಅಭ್ಯರ್ಥಿ ಪರ ದುಡಿಯುವದಾಗಿ ಸಂಗಣ್ಣ ಕರಡಿ ತಿಳಿಸಿದ್ದಾರೆ
Read More »
BigTv News
August 21, 2023
ಕರ್ನಾಟಕ, ಚಿಕ್ಕಮಗಳೂರು, ಸುದ್ದಿ
ಚಿಕ್ಕಮಗಳೂರು : ಕಳೆದ ಎರಡು ದಿನಗಳಿಂದ ಈ ಟಿವಿ ಭಾರತ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರ್ಲೆ ಹಾಗೂ ಜೇಡಿಕೊಂಡ ಎಂಬ ಕುಗ್ರಾಮಗಳಲ್ಲಿ ಯಾವುದೇ ರೀತಿಯ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರದಾಟ ನಡೆಸುತ್ತಿದ್ದ ಸುದ್ದಿಯೊಂದನ್ನು ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೊನೆಗೂ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲ ಮೂಲ ಸೌಕರ್ಯ ನೀಡುವ ಭರವಸೆ ನೀಡಿದ್ದಾರೆ. ಪಟ್ಟಣದಿಂದ ತುಂಬಾ ದೂರ ಇರುವಂತಹ …
Read More »
BigTv News
August 21, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು : 70 ವರ್ಷದ ವೃದ್ದನೊಬ್ಬ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ನಂತರ ಮದುವೆಗೆ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 63 ವರ್ಷದ ವೃದ್ದೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನೊಂದ ವೃದ್ದೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆಯ ಪತಿ ಹಾಗೂ ಆರೋಪಿತನ ಪತ್ನಿ ಸಾವನ್ನಪ್ಪಿದ್ದು, ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಆರೋಪಿ ತನ್ನ …
Read More »
BigTv News
August 21, 2023
ಕರ್ನಾಟಕ, ಕೊಪ್ಪಳ, ಸುದ್ದಿ
ಗಂಗಾವತಿ(ಕೊಪ್ಪಳ): ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿನ ವಿತರಣಾ ಕಾಲುವೆಗಳ ಸಮೀಪ ಅನಧಿಕೃತವಾಗಿ ಪೈಪ್ಲೈನ್ ಅಳವಡಿಸಿ, ನೀರು ಕಳ್ಳತನವಾಗುತ್ತಿರುವ ಪ್ರದೇಶಗಳನ್ನು ಪತ್ತೆ ಹಚ್ಚಿದ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಇಂದು ಪೈಪ್ಲೈನ್ಗಳ ತೆರವು ಕಾರ್ಯಾಚರಣೆ ನಡೆಸಿತು. ನೀರು ಕಳ್ಳತನ ತಡೆಯುವ ಉದ್ದೇಶಕ್ಕೆ ಕೊಪ್ಪಳ ಜಿಲ್ಲಾಧಿಕಾರಿ, ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮುಖ್ಯ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಕೂಡಿದ ಕಾರ್ಯಾಚರಣೆ ಪಡೆ ರಚಿಸಿದ್ದಾರೆ.ಈ ಹಿನ್ನೆಲೆ ಇಲ್ಲಿನ ವಡ್ಡರಹಟ್ಟಿ ನಂಬರ್-2 ವಿಭಾಗದ ವ್ಯಾಪ್ತಿಗೆ …
Read More »