Breaking News

ಬಸ್ ನಲ್ಲಿ ನಿದ್ದೆ ಮಾಡೋ ಪ್ರಾಯಾಣಿಕರೇ ಇದು ನೀವು ನೋಡಲೇಬೇಕಾದ ಸುದ್ದಿ..

ಯಲಹಂಕ:- ಬಸ್ ಗಳಲ್ಲಿ ಬೆಲೆಬಾಳುವ ವಸ್ತು ಕೊಂಡೊಯ್ಯೊ ಪ್ರಯಾಣಿಕರೇ ಎಚ್ಚರ..ತಣ್ಣನೆ ಗಾಳಿ ಬರ್ತಿದೆ ಅಂತಾ ನಿದ್ದೆಗೆ ಜಾರಿದ್ರೆ ನಿಮ್ಮ ವಸ್ತು ಕ್ಷಣದಲ್ಲೇ ಮಾಯವಾಗಿಬಿಡತ್ತೆ ಹುಷಾರ್. ಹೌದು, ಬಸ್ ಪ್ರಯಾಣಿಕರನ್ನೆ ಟಾರ್ಗೆಟ್ ಮಾಡಿ ಖದೀಮರು ತಮ್ಮ ಕೈಚಳಕ ತೋರುತ್ತಾರೆ. ಅದರಂತೆ ಇದೀಗ ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ಟಾಪ್ ಕಳ್ಳತನ ಮಾಡ್ತಿದ್ದ ಇಬ್ಬರು ಖದೀಮರನ್ನು ಅರೆಸ್ಟ್ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆಂದ್ರದ ಮದನಪಲ್ಲಿಯ ಶಬರೀಶ್(32), ಬೆಂಗಳೂರು ಜಯನಗರ ವಾಸಿ ಫಜಲ್ ಪಾಷಾ(29) ಬಂಧಿತ ಕಳ್ಳರು. ಆಂಧ್ರ ದಿಂದ ಬೆಂಗಳೂರು, ಬೆಂಗಳೂರು ನಿಂದ ಆಂಧ್ರಕ್ಕೆ ಹೊರಡೊ ಬಸ್ಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಕಳ್ಳರು ರಿಸರ್ವ್ ಬಸ್ಗಳ ಬಳಿ ವಾಚ್ ಮಾಡುತ್ತಾ ನಿಲ್ತಿದ್ದರು. ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ ಟಾಪ್ ಪ್ರಯಾಣಿಕರು ಕಂಡ್ರೆ ಇವರು ಬಸ್ ಹತ್ತುತ್ತಿದ್ರು. ಬಸ್ ಹತ್ತಿ ಮೊಬೈಲ್, ಲ್ಯಾಪ್‌ಟಾಪ್ ಕಳ್ಳತನ ಮಾಡಿ ಮಾರ್ಗಮಧ್ಯೆ ಇಳಿದು ಎಸ್ಕೇಪ್ ಆಗುತ್ತಿದ್ದರು. ಲ್ಯಾಪ್‌ಟಾಪ್ ತೆಗೆದುಕೊಂಡು ಖಾಲಿ ಲ್ಯಾಪ್‌ಟಾಪ್ ಬ್ಯಾಗ್ ಇಟ್ಟು ಖದೀಮರು ಇಳಿಯುತ್ತಿದ್ದರು. ಇದೀಗ ಇಬ್ಬರು ಆಂಧ್ರ ಮೂಲದ ಕಳ್ಳರನ್ನ ಕೊಡಿಗೇಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಬರೋಬ್ಬರಿ 39ಲ್ಯಾಪ್‌ಟಾಪ್ಸ್ ವಶಕ್ಕೆ ಪಡೆಯಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share News

About BigTv News

Check Also

ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧನ ಮಾಡಿದ ಹಳೇ ಹುಬ್ಬಳ್ಳಿ ಪೊಲೀಸರು..

ಹುಬ್ಬಳ್ಳಿ: ಈಗಾಗಲೇ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ …

Leave a Reply

Your email address will not be published. Required fields are marked *

You cannot copy content of this page