Shaikh BigTv
October 13, 2024
Breaking News, ಧಾರವಾಡ
ಧಾರವಾಡ : ಕರ್ನಾಟಕ ಅರ್ಚಕ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಿಳಾ ಮಂಡಳಗಳಿಗೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹಿಳೆಯರು ಎಂಬ ವಿಷಯದ ಕುರಿತು ರೂಪಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಿಳಾ ಮಂಡಳದವರು ಆಲೂರು ವೆಂಕಟರಾವ್ ಭವನ ಟ್ರಸ್ಟ್‌ನ ಕಛೇರಿಯಲ್ಲಿ ಅರ್ಜಿಯನ್ನು ತೆಗೆದುಕೊಂಡು ಅಕ್ಟೋಬರ್ 24, 2024 ರೊಳಗೆ ಸಲ್ಲಿಸಬೇಕು. ಕನ್ನಡ ಜಾತಿಯ ಅರ್ಚಕ ಆಲೂರು ವೆಂಕಟರವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ವೆಂಕಟೇಶ ದೇಸಾಯಿ …
Read More »
Shaikh BigTv
October 13, 2024
Breaking News, ಧಾರವಾಡ
ನವಲಗುಂದ: ಕಾಲವಾಡ ಗ್ರಾಮದ 45 ವರ್ಷದ ಲಕ್ಷ್ಮಣ ಹಣಮಂತಪ್ಪ ಬಾರಕೇರ ಎಂಬ ರೈತ ತನ್ನ ಜಮೀನಿಗೆ ಹೋದ ಸಮಯದಲ್ಲಿ ಏಕಾಏಕಿ ಬೆಣ್ಣೆಹಳ್ಳದ ನೀರು ಬಂದದ್ದರಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಕಲ್ಯಾಣ ಬಸವೇಶ್ವರ ದೇವಸ್ಥಾನ ಕಟ್ಟೆಯನ್ನೇರಿ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದ. ಮೂರು ದಿನಗಳ ಕಾಲ ಊಟ, ನೀರು ಇಲ್ಲದೆ ಕುಳಿತ ಜಾಗದಲ್ಲೇ ಕುಳಿತ ಹನುಮಂತಪ್ಪನನ್ನು ಇಂದು ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಗಿದೆ. ಘಟನೆ ತಿಳಿದ ತಕ್ಷಣ ಶಾಸಕ ಎನ್.ಎಚ್.ಕೋನರಡ್ಡಿ …
Read More »
Shaikh BigTv
October 12, 2024
Breaking News, ಧಾರವಾಡ
ಕಲಘಟಗಿ: ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಪಾದಚಾರಿ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೆ ಯುವಕ ಮೃತಪಟ್ಟಿದ್ದಾನೆ. ಡಿಕ್ಕಿಯಾದ ರಭಸಕ್ಕೆ ದೇಹದ ಅಂಗಾಂಗಗಳು ಛಿದ್ರವಾಗಿವೆ. ಯುವಕನ ಹೃದಯ ಬೇರ್ಪಟ್ಟು ರಸ್ತೆ ಮೇಲೆ ಬಿದ್ದರೂ ಮಿಡಿಯುತ್ತಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಮೃತಪಟ್ಟಿರುವ ಯುವಕ ಸುಭಾಸ್ ಗುಂಡಪ್ಪನವರ ಎಂದು ತಿಳಿದು ಬಂದಿದೆ. ಈತ ಕಲಘಟಗಿ ತಾಲ್ಲೂಕಿನ ಸುಲಿಕಟ್ಟಿ ಗ್ರಾಮದವನು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ …
Read More »
Shaikh BigTv
October 12, 2024
Breaking News, ಧಾರವಾಡ
ಕಲಘಟಗಿ : ತಾಲ್ಲೂಕಿನ ರಾಮನಳ ಕ್ರಾಸ್ ಬಳಿ ಇಂದು ರಾತ್ರಿ ಕಲ್ಲು ತುಂಬಿದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಹುಬ್ಬಳ್ಳಿ ಕಡೆ ಇಂದ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಪರಿಣಾಮ ಕಲ್ಲುಗಳು ಬೈಕ್ ಸವಾರರ ಮೇಲೆ ಬಿದ್ದಿರುವ ಕಾರಣ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಾರೋಗೇರಿ ಗ್ರಾಮದ ಈರಣ್ಣ ವಸಂತ್ ಶೆಟ್ಟಪ್ಪನವರ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಇನ್ನೊಬ್ಬ …
Read More »
Shaikh BigTv
October 12, 2024
Breaking News, ಧಾರವಾಡ
ಅಣ್ಣಿಗೇರಿ: ಶರನ್ನವರಾತ್ರಿಯ ನಿಮಿತ್ತ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಗ್ರಾಮ ದೇವತೆ ದ್ಯಾಮಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಯ ಪುರಾಣ ಪ್ರವಚನವು ನೆರವೇರಿತು. ಅಕ್ಟೋಬರ್ 3ರಿಂದ ನಿತ್ಯವೂ ಪುರಾಣ ಪ್ರಚನ ಕಾರ್ಯಕ್ರಮ ನೆರವೇರುತ್ತಾ ಬಂದಿದ್ದು, ಶುಕ್ರವಾರ ಗ್ರಾಮದ ಪ್ರಮುಖ ಬೀದಿಯಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ವೇಳೆ ಬಾಲಕಿಯರು ಕುಂಬ ಹೊತ್ತು ಸಾಗಿದರೆ, ಭಜನಾ ತಂಡವು ದೇವಿಯ ಆರಾಧನೆ ಮಾಡಿತು. ರಾತ್ರಿ ಶ್ರೀ ದೇವಿಯ ಪುರಾಣವನ್ನು ಗುರುಶಾಂತ ಬಡಿಗೇರ ಪಠಿಸಿದರೆ, …
Read More »
Shaikh BigTv
October 11, 2024
Breaking News, ಧಾರವಾಡ
ಧಾರವಾಡ: ಭಾರತೀಯ ಹವಾಮಾನ ಇಲಾಖೆ ವರದಿಯಂತೆ ವಾಯುಭಾರ ಕುಸಿತದಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಿದ್ದಾರೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯ ಎಲ್ಲ ತಾಲ್ಲೂಕಿನ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿಗಳಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ತಿಳಿಸಿದ್ದಾರೆ. …
Read More »
Shaikh BigTv
October 11, 2024
ಧಾರವಾಡ
ನವಲಗುಂದ: ಜಿಲ್ಲೆಯ ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬೈಕ್ ಸವಾರರು ಇಬ್ಬರು ದಾಟಲು ಹೋಗಿ ಗಿಡಕ್ಕೆ ಸಿಲುಕಿಕೊಂಡ ಘಟನೆ ನಡೆದಿದೆ. ತಾಲೂಕಿನ ಇನಾಮಹೊಂಗಲ ಹಾಗೂ ಶಿರೂರು ಗ್ರಾಮದ ಮಧ್ಯ ಇರುವ ಈ ಸೇತುವೆ ಮೇಲೆ ಹಳ್ಳ ತುಂಬಿ ಸಂಪರ್ಕ ಕಡಿತಗೊಂಡಿದೆ. ಬೈಕ್ ಸವಾರರು ದುಸ್ಸಾಹಸ ಮೆರೆಯಲು ಹೋಗಿ ನೀರಿನ ರಭಸಕ್ಕೆ ತಮ್ಮ ವಾಹನದೊಂದಿಗೆ ನೀರಿನಲ್ಲಿ ಹೋಗಿ ಮುಂದೆ ಇರುವ ಗಿಡವನ್ನು ಹಿಡಿದು …
Read More »
Shaikh BigTv
October 11, 2024
Breaking News, ಧಾರವಾಡ
ಅಳ್ಳಾವರ: ಭತ್ತದ ಬೆಳೆ ಸಂಪೂರ್ಣ ಜಲಾವೃತವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಳ್ಳಾವರ ತಾಲೂಕಿನಾದ್ಯಂತ ವರ್ಷದ ಸರಾಸರಿಗಿಂತ ಈ ಬಾರಿ ತುಸು ಹೆಚ್ಚೇ ಮಳೆಯಾಗಿದೆ. ಭಾರೀ ಪ್ರಮಾಣದ ಮಳೆಗೆ ಬೆಳೆಗಳೆಲ್ಲ ಮಳೆ ನೀರಿಗೆ ಆಹುತಿಯಾಗಿವೆ. ಕಟಾವಿಗೆ ಬಂದ ಭತ್ತದ ಬೆಳೆ ಮೇಲೆಯೇ ನೀರು ಹರಿಯುತ್ತಿದ್ದು, ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ಅಲ್ಪ ಸ್ವಲ್ಪ ಬಂದ ಬೆಳೆಯು ಕೈಗೆ …
Read More »
Shaikh BigTv
October 11, 2024
Breaking News, ಧಾರವಾಡ
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಸಿಕಂದರಾಬಾದ್ – ವಾಸ್ಕೋ ನಡುವೆ ಸಂಚರಿಸುವ ರೈಲು, ದಿನಾಂಕ 09/10/2024 ರಿಂದ ಬಳ್ಳಾರಿ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸುತ್ತಿದ್ದು, ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲು ಪ್ರಯಾಣಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ. ಇದರ ಜೊತೆಗೆ ಬೆಳಗಾವಿ – ಮಣಗೂರು (ಭದ್ರಾಚಲಂ) ನಡುವೆ ರೈಲು ಸಂಚಾರ ಒದಗಿಸಬೇಕೆಂಬ ಸಚಿವರ ಮನವಿಯ ಮೇರೆಗೆ ದಿನಾಂಕ 16/10/2024 ರಿಂದ ರೈಲು …
Read More »
Shaikh BigTv
October 11, 2024
Breaking News, ಧಾರವಾಡ
ಕುಂದಗೋಳ: ಗುಡೇನಕಟ್ಟಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಭಿಮಾನಿಗಳು ಬೀಡು ಬಿಟ್ಟಿದ್ದು, ಪ್ರತಿಷ್ಠಾಪಿಸಿದ ಮೂರ್ತಿ ತೆರವು ಮಾಡದಂತೆ ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದಾರೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ರಾಜು ಮಾವರಕರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಆದೇಶಕ್ಕೆ ಅನುಗುಣವಾಗಿ ಕ್ರಮ …
Read More »