Breaking News

ಧಾರವಾಡ

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್

ಧಾರವಾಡ:ಧಾರವಾಡದಲ್ಲಿ ಟಿಪ್ಪು ಧ್ವಜವನ್ನು ಮೇಲೆ ಹಾರಿಸಿ, ಅದರ ಕೆಳಗಡೆ ರಾಷ್ಟ್ರಧ್ವಜ ಕಟ್ಟಲಾಗಿದೆ. ಇಲ್ಲಿ ರಾಷ್ಟ್ರದ್ರೋಹದ ಕೆಲಸ ನಡೆದಿದೆ. ತಕ್ಷಣ ಅಂತಹ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ರಾಷ್ಟ್ರದ್ರೋಹಿ ಸೆಕ್ಷನ್ ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ. ಧಾರವಾಡದ ರಿಗಲ್ ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಡಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಕಟ್ಟಿ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ …

Read More »

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ಹಾರಾಟ: ಸ್ಥಳಕ್ಕೆ ಎನ್.ಶಶಿಕುಮಾರ್ ಭೇಟಿ

ಧಾರವಾಡ: ಧಾರವಾಡದ ಟಿಪ್ಪು ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ರಾಷ್ಟ್ರಧ್ವಜದ ಮೇಲ್ಬಾಗದಲ್ಲಿ ಹಾರಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ದಲಿತ ಪರ ಸಂಘಟನೆಗಳು ಇಂದು ಗಾಂಧಿ ಜಯಂತಿ ಆಚರಣೆ ಮಾಡಿವೆ. ಕೆಲವರು ಧ್ವಜಗಳನ್ನು ಅಲ್ಲಿಆರೋಹಣ ಮಾಡಿ ಹೋಗಿದ್ದರು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಕಟ್ಟಿದ್ದರು. ಅದು ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಮೇಲೆ …

Read More »

ಬ್ಯಾಂಕ್’ಗೆ ಹೋಗಿ ಬರುತ್ತೇನೆ ಎಂದು ಹೇಳಿ ಯುವತಿ ನಾಪತ್ತೆ

ಕುಂದಗೋಳ : ಯುವತಿಯೋರ್ವಳು ಬ್ಯಾಂಕ್’ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಕಾಣೆಯಾದ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ 24 ವರ್ಷದ ಯುವತಿಯೆ ಕಳೆದ ಸ.25 ರಂದು ಮನೆಯಿಂದ ಬ್ಯಾಂಕ್‌’ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಕಾಣೆ ಆಗಿದ್ದಾಳೆ.ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೋಷಕರು ಪತ್ತೆಗೆ ಮನವಿ ಮಾಡಿದ್ದಾರೆ.

Read More »

ಅದ್ದೂರಿಯಾಗಿ ನೆರವೇರಿದ ಹಿಂದೂ ಮಹಾ ಗಣಪತಿ ವಿಸರ್ಜನೆ

ಹುಬ್ಬಳ್ಳಿ: 21 ದಿನಗಳ ಹುಬ್ಬಳ್ಳಿ ಧಾರವಾಡ ಹಿಂದೂ ಮಹಾ ಗಣಪತಿ ಉತ್ಸವ ಮಂಡಳಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ವತಿಯಿಂದ, ಈ ಬಾರಿ ಈಶ್ವರನ ಅವತರಾದಲ್ಲಿ 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಈಗ ಅದ್ದೂರಿಯಾಗಿ ವಿಸರ್ಜನೆಗೊಂಡಿದೆ. ನವನಗರದ ಪಂಚಾಕ್ಷರಿ ನಗರದಲ್ಲಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಎರಡು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡ್ತಾ ಬಂದಿದ್ದಾರೆ. ಈ …

Read More »

ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯಾರ್ಥಿಯರ ಸಾಧನೆ

ಹುಬ್ಬಳ್ಳಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್‌ (ಸಿಬಿಎಸಿ) ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆ 2024-2025 ಬೆಳಗಾವಿಯ ಗುಡ್ ಶೆಪರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಇನ್ಸೆನ್ ವಿಭಾಗದ ಸ್ಕೆಟರ್ ಕುಮಾರಿ ಸಾನ್ವಿ ಸಾಂಬ್ರಾಣಿ ( ಕೆ. ಎಲ್. ಇ ಆಂಗ್ಲ ಮಾಧ್ಯಮ ಶಾಲೆ ಮಂಜುನಾಥ್ ನಗರ ) ಒಂದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಗೆದ್ದಿದ್ದು, ಹಾಗೂ …

Read More »

ಅಕಾಡೆಮಿ ಅಧ್ಯಕ್ಷ ಬಬಲೇಶ್ವರ ಅವರ ಮಕ್ಕಳ ಬಗೆಗಿನ ಕಾಳಜಿ ಅನನ್ಯವಾದದ್ದು : ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

ಧಾರವಾಡ: ಮಕ್ಕಳ ಸೇವೆಯಲ್ಲಿ ಭಗವಂತನನ್ನು ಕಾಣುವ, ಮಕ್ಕಳ ಬಗೆಗೆ ಅಪಾರ ಕಾಳಜಿ ಕಕ್ಕುಲತೆಯನ್ನು ಹೊಂದಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರ ಕಾರ್ಯ ಅನನ್ಯವಾದದ್ದು. ನಾಡಿನ ಬಾಲಮಂದಿರದ ಮಕ್ಕಳನ್ನು ನಿಸರ್ಗದ ಮಡಿಲಿನಲ್ಲಿ ಕರೆತಂದು, ಮಕ್ಕಳ ಸೃಜನಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಂಗಮೇಶ್ ಅವರದ್ದು ಇತರರಿಗೆ ಮಾದರಿಯಾದ ವ್ಯಕ್ತಿತ್ವವಾಗಿದೆ. ನಿಜವಾದ ಸಾಮಾಜಿಕ ಕಾಳಜಿ ಇರುವ ಇಂತವರಿಗೆ ಮತ್ತಷ್ಟು ಅವಕಾಶಗಳು ಸೀಗಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. …

Read More »

ಅದ್ಧೂರಿಯಾಗಿ ಸ್ವಾಗತಿದ ಕನ್ನಡ ಜ್ಯೋತಿ ರಥ

ಧಾರವಾಡ: ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವು ಧಾರವಾಡ ನಗರಕ್ಕೆ ಆಗಮಿಸಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಸಕಲ ವಾದ್ಯ ಮೇಳದ ಮೂಲಕ ಕನ್ನಡ ಜ್ಯೋತಿ ರಥವನ್ನು ಧಾರವಾಡ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಧಾರವಾಡ ಕನ್ನಡ ಸಾಹಿತ್ಯ ಪರಿಷತ್‌ ಸರ್ವ ಸದಸ್ಯರು ಅದ್ದೂರಿಯಾಗಿ ಕನ್ನಡ ಜ್ಯೋತಿ ರಥವನ್ನು ಸ್ವಾಗತ ಮಾಡಿಕೊಂಡು, ಕನ್ನಡ ತಾಯಿ ಭುವನೇಶ್ವರಿಗೆ ಜಯಘೋಷ …

Read More »

ಹೂವಿನ ದರ ದಿಢೀರ್ ಕುಸಿತ: ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ಹೂವಿನ ದರ ದಿಢೀರ್ ಕುಸಿತ ಕಂಡಿದ್ದು, ಧಾರವಾಡ ಸುಪರ್ ಮಾರುಕಟ್ಟೆಯಲ್ಲಿ ಹೂವು ಬೆಳೆದ ರೈತರು ಪ್ರತಿಭಟನೆ ನಡೆಸಿದರು. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಧಾರವಾಡದಲ್ಲಿ ಹೂವು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಹೂವು ಖರೀದಿಸಲು ಏಜೆಂಟರು ಕಡಿಮೆ ದರ ಹೇಳುತ್ತಾರೆ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು. ಸೇವಂತಿಗೆ ಹೂವು, ಗುಲಾಬಿ ಹೂವು, ಚೆಂಡು ಹೂವು, ಸುಗಂಧಿ ಹೂವು ಸೇರಿದಂತೆ ಎಲ್ಲ ಹೂವಿನ ಖರೀದಿಯಲ್ಲಿ ರೈತರಿಗೆ ನಷ್ಟ ಮಾಡಲಾಗುತ್ತಿದೆ ಎಂದು …

Read More »

ಮಳೆ ಬೆಳೆಗಾಗಿ ಸಿದ್ದರೂಢರ ಮಠದಲ್ಲಿ ಸ್ವಾಮೀಜಿಯಿಂದ ಗಾಳಿ ಸೇವನೆ ಮೂಲಕ ವ್ರತ

ಕಲಘಟಗಿ : ತಾಲ್ಲೂಕಿನ ಸಿದ್ದರೂಢರ ಮಠದಲ್ಲಿ ರಮಾನಂದ ಸ್ವಾಮೀಜಿಯವರು 11 ದಿನಗಳ ಕಾಲ ನೀರು ಅನ್ನ ಹಾಲು ಹಣ್ಣುಗಳು ಸೇವಿಸದೆ ಕೇವಲ ಗಾಳಿ ಸೇವನೆ ಮೂಲಕ ವಿಶೇಷ ವ್ರತವನ್ನು ಶ್ರದ್ದೆಯಿಂದ ಆಚರಿಸುವ ಮೂಲಕ ಮಳೆ ಬೆಳೆ ಚೆನ್ನಾಗಿ ಬರಲೇಂದು ದೇವರಲ್ಲಿ ಬೇಡಿಕೊಂಡರು. ಈ ಸಂದರ್ಭದಲ್ಲಿ ನಿನ್ನೆ ಕೊನೆ ದಿನ ಆಗಿರುವುದರಿಂದ ವಿವಿಧ ಮಠದ ಸ್ವಾಮೀಜಿಯವರಿಗೆ ಗ್ರಾಮಸ್ಥರು ಹಾಗೂ ತಾಲೂಕಿನ ಜನರು ವಿಶೇಷ ಗೌರವ ಹಾಗೂ ಸತ್ಕಾರ ಮಾಡಿ ಕಾರ್ಯಕ್ರಮಕ್ಕೆ ಮೆರಗು …

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಧಾರವಾಡ ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತ ನೌಕರರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ, ಏಳನೇ ವೇತನ ಆಯೋಗದ ನಿವೃತ್ತಿ ಸೌಲಭ್ಯ ಒದಗಿಸಿ, ನಿವೃತ್ತಿ ಸೌಲಭ್ಯ ಜೊತೆಗೆ ಆರ್ಥಿಕ ಸೌಲಭ್ಯ ನೀಡಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Read More »