BigTv News
September 17, 2024
Breaking News, ಧಾರವಾಡ
ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಕಚೇರಿ ಧಾರವಾಡದಲ್ಲಿ ಉದ್ಘಾಟನೆಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಸಿನಿಮಾ ನಿರ್ಮಾಣಕ್ಕೆ ಪುಷ್ಠಿ ನೀಡುವ ಸಲುವಾಗಿ ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪಿತವಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಹಲವು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದೆ. ಟೈಟಲ್ ರಿಜಿಸ್ಟ್ರೇಷನ್ ಇಂದ ಹಿಡಿದು ಚಿತ್ರರಂಗದ ಸಮ್ಯಸ್ಯೆಗಳಿಗೆ ಸ್ಪಂದಿಸುವುದು ಇನ್ನಿತರೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ. …
Read More »
BigTv News
September 17, 2024
Breaking News, ಧಾರವಾಡ
ಉಪ್ಪಿನಬೆಟಗೇರಿ: ಗಣೇಶ ವಿಸರ್ಜನೆಯ ಮರುದಿನ ಜೋಕುಮಾರಸ್ವಾಮಿ ಅಷ್ಟಮಿಯ ಗಡಗಿಯೊಳಗೆ ಹುಟ್ಟುತ್ತಾನೆ, ಆತನ ಆಯುಷ್ಯ ಏಳು ದಿನ. ಆ ಏಳು ದಿನಗಳಲ್ಲಿ ಬಾಲ್ಯ, ಯೌವ್ವನ, ಸಾವು ಎಲ್ಲವೂ ಸಂಭವಿಸುತ್ತದೆ. ಉತ್ತರ ಕರ್ನಾಟಕ ಸೇರಿ ನಾಡಿನ ಹಲವು ಹಳ್ಳಿಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಇಂದಿಗೂ ಆಚರಿಸಲಾಗುತ್ತದೆ. ಬಡಿಗೇರ ಮನೆಯವರು ತಯಾರಿಸುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಅಂಬಿಗೇರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಇಟ್ಟು ಬೇವಿನ ತಪ್ಪಲಿನಿಂದ ಸಿಂಗರಿಸುತ್ತಾರೆ. ಸುಣಗಾರ ಮನೆ ಮಹಿಳೆಯರು ಜೋಕುಮಾರನನ್ನು …
Read More »
BigTv News
September 17, 2024
Breaking News, ಧಾರವಾಡ
ಧಾರವಾಡ: ಧಾರವಾಡದ ಅಲೂರು ವೆಂಟರಾವ್ ಸಭಾಭವನದಲ್ಲಿ ಜಿಲ್ಲಾಮಟ್ಟದ ವಿಶ್ವಕರ್ಮ ಜಯಂತಿ ಸಮಾರಂಭ ನಡೆಯಿತು. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಭಾಗಿಯಾಗಿದ್ದರು.
Read More »
Shaikh BigTv
September 16, 2024
Breaking News, ಧಾರವಾಡ
ಧಾರವಾಡ : ಧಾರವಾಡದಲ್ಲೂ ಅಂಜುಮನ್ ಸಂಸ್ಥೆ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಧಾರವಾಡದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಜಮಾವಣೆಗೊಂಡ ನಗರದ ಎಲ್ಲ ಮುಸ್ಲಿಂರು ಅಲ್ಲಿಂದ ಮೆರವಣಿಗೆ ಆರಂಭಿಸಿದರು. ಈ ಮೆರವಣಿಗೆಯಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೂಡ ಪಾಲ್ಗೊಂಡಿದ್ದರು. ಅಂಜುಮನ್ ಸಂಸ್ಥೆಯಿಂದ ಆರಂಭಗೊಂಡ ಮೆರವಣಿಗೆಯು, ಧಾರವಾಡದ ಸುಭಾಷ ರಸ್ತೆ, ಕಾಮನಕಟ್ಟಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚರಿಸಿ ಮರಳಿ ಅಂಜುಮನ್ ಸಂಸ್ಥೆಗೆ ಬಂದು …
Read More »
Shaikh BigTv
September 16, 2024
Breaking News, ಧಾರವಾಡ
ಕಲಘಟಗಿ :ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಲಘಟಗಿ ಪಟ್ಟಣದಲ್ಲಿ ಮುಸಲ್ಮಾನ್ ಬಾಂಧವರು ವಿಜೃಂಭಣೆಯಿಂದ ಹಬ್ಬ ಆಚರಿಸಿದರು. ಈ ಸಂಧರ್ಭದಲ್ಲಿ ಮದರಸಾ ಮಕ್ಕಳು ಪಾದಯಾತ್ರೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣದ ಹಲವು ಬೀದಿಗಳಲ್ಲಿ ಎಲ್ಲರ ಗಮನ ಸೆಳೆದರು. ಅದೇ ರೀತಿ ಯುವಕರು ಹಾಗೂ ಮಕ್ಕಳು ಡಿಜೆ ಹಾಡಿಗೆ ಕೈಯಲ್ಲಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಸಾವಿರಾರು ಮುಸಲ್ಮಾನ್ ಭಾಂದವರು ಸೇರಿದ್ದರು. ಗಣೇಶನ ಹಬ್ಬ …
Read More »
BigTv News
September 16, 2024
Breaking News, ಧಾರವಾಡ
ಧಾರವಾಡ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರನಿಂದ ಚಾಮರಾಜನಗರದ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ ಮಾನವ ಸರಪಳಿಯನ್ನು ರಚಿಸಲಾಯಿತು. ಜಿಲ್ಲೆಯ ಧಾರವಾಡ ತಾಲೂಕಿನ ತೇಗೂರದಿಂದ ಮಾವಿನಕೊಪ್ಪ ಗ್ರಾಮದ ವರಗೆ ಅಂದಾಜು 55 ಕಿಲೋ ಮೀಟರ್ ಉದ್ಧದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಪ್ರತಿ ಮೀಟರಗೆ ಒಬ್ಬರಂತೆ ಸುಮಾರು 60 ಸಾವಿರ ಜನ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರ ಪ್ರದೇಶದಲ್ಲಿ ಡಬಲ್ ಲೈನ್ ಮಾಡಲಾಗಿತ್ತು. ಮಾನವ ಸರಪಳಿ …
Read More »
BigTv News
September 16, 2024
Breaking News, ಧಾರವಾಡ
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹವಾಮಾನ ವೈಪರೀತ್ಯ ನಿವ೯ಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಸೆಪ್ಟೆಂಬರ್ 21 ರಿಂದ 24 ರವರೆಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮುಖ್ಯ ಉದ್ದೇಶವಾಗಿದ್ದು, ಮೇಳದಲ್ಲಿ ಸುಮಾರು 14-16 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದೆ. ನೋಂದಣಿ ಮಾಡುವ ವ್ಯವಸ್ಥೆಯನ್ನು ಈ ಕೃಷಿ ಮೇಳದಲ್ಲಿ ಕಲ್ಪಿಸಲಾಗಿದೆ. ಮೇಳದಲ್ಲಿ …
Read More »
Shaikh BigTv
September 16, 2024
Breaking News, ಧಾರವಾಡ
ಧಾರವಾಡ: ಮಸೀದಿ ಎದುರು ಗಣಪತಿ ಮೂರ್ತಿಯ ಮೆರವಣಿಗೆ ಬಂದಾಗ ಮುಸ್ಲಿಮ್‌ರು ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ನಿನ್ನೆ 9 ದಿನದ ಗಣೇಶನ ಮೂರ್ತಿಗಳ ವಿಸರ್ಜಣೆ ಕಾರ್ಯಕ್ರಮ ನಡೆಯಿತು. ಧಾರವಾಡದ ಮೆಹಬೂಬ್‌ನಗರದ ಮಸೀದಿ ಎದುರು ಗಣೇಶನ ಮೂರ್ತಿಯ ಮೆರವಣಿಗೆ ಹಾದು ಹೊರಟಿತ್ತು. ಈ ವೇಳೆ ಮುಸ್ಲಿಮ್‌ರು ಮೆರವಣಿಗೆ ಬರುತ್ತಿದ್ದಂತೆ ಗಣೇಶನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಭಾವೈಕ್ಯತೆಯ ಸಂದೇಶ ಸಾರಿದರು. ಮಸೀದಿ ಎದುರು ಮೆರವಣಿಗೆ ಹಾದು …
Read More »
Shaikh BigTv
September 15, 2024
Breaking News, ಧಾರವಾಡ
ಹುಬ್ಬಳ್ಳಿ:ಇಲ್ಲಿನ ಉಣಕಲ್ಲಿನ ಆರ್.ಕೆ.ಕೊಕಾಟಿ ಪ್ರೌಢಶಾಲೆ ತರಳಬಾಳು ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪದವಿ ಪೂರ್ವ ವಿಭಾಗವು ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಧಾರವಾಡ ಕೆಎಲ್‌ಇ ಆರ್.ಎಲ್.ಎಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಬಸವರಾಜ ಡೊಳ್ಳಿನ ಅವರು ಧಾರವಾಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿ ನಿರ್ದೇಶಕರು,ಸದಸ್ಯರು,ಪ್ರಾಚಾರ್ಯರು,ದೈಹಿಕ …
Read More »
Shaikh BigTv
September 15, 2024
Breaking News, ಧಾರವಾಡ
ಅಣ್ಣಿಗೇರಿ: ಗಣೇಶ ಚತುರ್ಥಿಯ ನಿಮಿತ್ಯ ಅಣ್ಣಿಗೇರಿಯ ಶ್ರೀ ಮಹಾನ್ ಮಹಾತ್ಮಾ ಗಾಂಧಿಜಿ ಯುವಕ ಮಂಡಳದ ವತಿಯಿಂದ ಇಂದು ದಾಸೋಹಮಠದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಶಾಸಕ ಕೋನರಡ್ಡಿ ಅವರು ನೆರವೇರಿಸಿ,ರಕ್ತ ದಾನ ಮಾಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮಾಯಣ್ಣವರ, ಮಾಜಿ ಪುರಸಭಾ ಅಧ್ಯಕ್ಷರಾದ ಮುತ್ತು ದ್ಯಾವನೂರ, ಹಿರಿಯರಾದ ಬಸವರಾಜ ಕುಬಸದ, ನಾಗಪ್ಪ ಗಾಣಗೇರ, ಅರುಣಕುಮಾರ ಮಜ್ಜಗಿ, ಸಾಗರ ಕಾಳಪ್ಪನವರ …
Read More »