Breaking News

ಧಾರವಾಡ

ನವಲಗುಂದದಲ್ಲಿ ನಾಳೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ನವಲಗುಂದ: ಕಳೆದ 15ತಿಂಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ವಿಳಂಬದಿಂದಾಗಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೇ ಪುರಸಭೆ ಇಷ್ಟು ದಿನ ಉಪವಿಭಾಗಾಧಿಕಾರಿಗಳ ಹಿಡಿತದಲ್ಲಿ ಇತ್ತು. ಆದರೆ ಜಿಲ್ಲಾಡಳಿತ ಚುನಾವಣೆ ದಿನಾಂಕ ಘೋಷಣೆ ಮಾಡಿದ ಹಿನ್ನಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 23ಚುನಾಯಿತ ಪ್ರತಿನಿಧಿಗಳ ಪೈಕಿ ಕಾಂಗ್ರೆಸ್ 16 …

Read More »

ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಜಿಲ್ಲೆಯ 55 ಕೀ.ಮಿ ಉದ್ದದ ಮಾನವ ಸರಪಳಿ ನಿರ್ಮಾಣ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದರಂತೆ ರಾಜ್ಯ ಸರಕಾರವು ಅತ್ಯಂತ ವಿಶಿಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲು ನಿರ್ದೇಶಿಸಿದ್ದು, ಅಂದು ಬೀದರ್‍ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ತೇಗೂರ ಗ್ರಾಮದಿಂದ ಮಾವಿನಕೋಪ್ಪ ಗ್ರಾಮವರೆಗೆ ಸುಮಾರು 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ …

Read More »

ಸೆ.30 ರವರೆಗೆ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ಅಭಿಯಾನ

ಧಾರವಾಡ:: ಸೆಪ್ಟೆಂಬರ್ 30 ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿಂದ ರಾಷ್ಟ್ರವ್ಯಾಪಿ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸದಸ್ಯರಾದ ಸಾಜಿದುನಿಯಾ ಲಾಲಮಿಯಾ ಹೇಳಿದರು. ಧಾರವಾಡ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಕಾಲೀನ ಸಮಾಜದಲ್ಲಿ ಹಲವಾರು ಸವಾಲುಗಳು ನೈತಿಕತೆ ಮತ್ತು ಸ್ವಾತಂತ್ರ್ಯದ ನಡುವಿನ ಸಾಮರಸ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ ಎಂದರು.

Read More »

ಇಡಗುಂಜಿ ಗಣೇಶ ನಂತರ ಪ್ರಖ್ಯಾತಿ ಪಡೆದ ನವಲಗುಂದ ಗಣೇಶ ಗುಡಿ

ನವಲಗುಂದ: ನವಲಗುಂದ ನಗರದ ಗಣೇಶ ಗುಡಿ ಕರಾವಳಿ ಪ್ರದೇಶದಲ್ಲಿ ಇಡಗುಂಜಿ ಗಣೇಶ ಪ್ರಖ್ಯಾತಿ ಪಡೆದರೆ ನಂತರದ ಸ್ಥಾನ ಪಡೆದು ರಾಜ್ಯದಲ್ಲೇ ಪ್ರಖ್ಯಾತಿ ಹೊಂದಿದೆ. ಇಲ್ಲಿ ಇದೀಗ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಇಡೀ ರಾಜ್ಯದಲ್ಲೇ ಗಮನ ಸೆಳೆದ ನವಲಗುಂದ-ನರಗುಂದ ಬಂಡಾಯ ನೆಲದಲ್ಲಿ ಒಂದು ವಿಶಿಷ್ಟವಾದ ಚರಿತ್ರೆ ಇದೆ. ಅಜಾತ ನಾಗಲಿಂಗ ಸ್ವಾಮೀಜಿ ಅವರ ಪವಾಡ, ಗವಿಮಠದ ಶ್ರೀ ಬಸಲಿಂಗ ಸ್ವಾಮೀಜಿ ಅದೃಶ್ಯ – ಚರಿತ್ರೆ, ಯಮನೂರಿನ ರಾಜಾಭಾಗಸವಾರ ಹಾಗೂ ಬೇಡಿದ …

Read More »

ರೈತರಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಕೆ

ಧಾರವಾಡ: ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ಆರ್. ವಿ ದೇಶಪಾಂಡೆ ಅವರಿಗೆ ರೈತರು ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ರೈತರು ಶಾಸಕ ಆರ್. ವಿ ದೇಶಪಾಂಡೆ ಅವರನ್ನು ಬೇಟಿ ಮಾಡಿ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ರೈತರಾದ ನಿಂಗನಗೌಡ ಪಾಟೀಲ, ಮಹದೇವಪ್ಪ ಪೂಜಾರ, ಬಸವರಾಜ ಯರಗುಪ್ಪಿ, ಬಸವರಾಜ ಮಡಿವಾಳರ, ಶಂಕರಪ್ಪ ಚಿಲ್ಲೂರ, ಈರಣ್ಣ ಕುರುವಿನಶೆಟ್ಟಿ, ಬಸವರಾಜ ಮಡ್ಲಿ, ಮಂಜುನಾಥ ಕರಡಿ …

Read More »

ಈದ್ ಮಿಲಾದ್ ಗಣೇಶ ಹಬ್ಬದ ನಿಮಿತ್ತ ಕುಂದಗೋಳದಲ್ಲಿ ಶಾಂತಿ ಸಭೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಈದ್ ಮಿಲಾದ್ ಗಣೇಶ ಹಬ್ಬದ ಶಾಂತಿ ಸಭೆಯ ಕಾರ್ಯಕ್ರಮದಲ್ಲಿ ಕುಂದಗೋಳ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಇರ್ಫಾನ್ ಪಠಾಣ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಕೀರಪ್ಪ ಸಿದ್ದೂನವರ, ಯಲ್ಲಪ್ಪ ಕಟ್ಟಿಕಾರ್, ಬಸವರಾಜ ಯೋಗಪ್ಪನವರ, ಗುರುಪಾದಪ್ಪ ಹೊಸಳ್ಳಿ, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ್, ಶಿವಾನಂದ್‌ ಕಂಬಳಿ, ಶರೀಫ್’ಸಾಬ್ ಯಲಿಗಾರ್ ಮಕ್ತಮಸಾಬ ಯಲಿಗಾ‌ರ್ ಉಪಸ್ಥಿತರಿದ್ದರು.

Read More »

ನವಲಗುಂದ ಜನತೆಗೆ ಮನವಿ ಮಾಡಿದ ಇಂಜಿನೀಯರ್ ಪ್ರೀತಿ ಕೆ.

ನವಲಗುಂದ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ಶಹರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ನವಲಗುಂದ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರೀತಿ ಕೆ. ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯುತ್ ಲೈನ್‌ನ ಕೆಳಗೆ ಹಾಗೂ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್ ಹಾಕಬಾರದು ಮತ್ತು ಪೆಂಡಾಲು ಹಾಕುವಾಗ ಸುರಕ್ಷತಾ ಅಂತರವನ್ನು ಕಾಯ್ದುಕೊಳ್ಳಬೇಕು. …

Read More »

ನಗರ ಕೇಂದ್ರ ಗ್ರಂಥಾಲಯ ಗ್ರಂಥಾಲಯ ವಿಜ್ಞಾನ ತರಬೇತಿ ಉದ್ಘಾಟನಾ ಸಮಾರಂಭ

ಧಾರವಾಡ : ಧಾರವಾಡ ನಗರ ಕೇಂದ್ರ ಗ್ರಂಥಾಲಯ ಸಭಾಗಂಣದಲ್ಲಿ 19 ನೇ ತಂಡದ ಗ್ರಂಥಾಲಯ ವಿಜ್ಞಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜರುಗಿತು. ಸಮಾರಂಭವನ್ನು ಮಹಾಪೌರ ರಾಮಪ್ಪ ಬಡಿಗೇರ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಬಾಲ್ಯದಲ್ಲಿ ಗ್ರಂಥಾಲಯದ ಜೊತೆ ಹೆಚ್ಚು ಒಡನಾಟ ಹೊಂದ್ದಿದ್ದು, ಹಲವಾರು ಬಾರಿ ಗ್ರಂಥಾಲಯಕ್ಕೆ ಬೇಟಿ ನೀಡಿದ್ದೇನೆ, ಗ್ರಂಥಾಲಯಕ್ಕೆ ಎಲ್ಲಾ ಮೂಲಭೂತ ಸೌಲಭ್ಯ ಒಳಗೊಂಡ ಮಾದರಿಯ ಗ್ರಂಥಾಲಯವಾಗಿದ್ದು, ಪ್ರತಿ ಒಬ್ಬರು ಗ್ರಂಥಾಲಯದ ಸದುಪಯೋಗವನ್ನು ಪಡೆಯಬೇಕು. …

Read More »

ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಬಡಿಗೇರವ ಕುಟುಂಬ

ನವಲಗುಂದ: ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬಸ್ಥರು, ಪರಿಸರ ಸ್ನೇಹಿ ಬಣ್ಣ ಬಳಿಯುವ ಮೂಲಕ ಹಬ್ಬದ ಸಡಗರಕ್ಕೆ ಮನೆ ಮನೆಗೆ ಗಣೇಶಗಳನ್ನು ನವಲಗುಂದ ಪಟ್ಟಣದ ದೇವೇಂದ್ರಪ್ಪ ಬಡಿಗೇರ ಕುಟುಂಬದವರು ತಯಾರಿಸುತ್ತಾರೆ. ವಿಧ ವಿಧದ ಗಣೇಶ ಮೂರ್ತಿ ತಯಾರಿ ಮಾಡಿದ್ರೆ, ಅವುಗಳಿಗೆ ಇವರ ಮನೆಯವರು ಅಂದದ ಬಣ್ಣ ಲೇಪಿಸಿ ಹೊಸ ರೂಪ ನೀಡುತ್ತಿದ್ದಾರೆ.ಸುಮಾರು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಶ್ರೀ ಮೌನೇಶ್ವರ ಆರ್ಟ್ಸ್ ಎಂಬ ಶೀರ್ಷಿಕೆ ಅಂಗಡಿಯವರಾದ ಇವರು …

Read More »

ನಮ್ಮ ಜಿಲ್ಲೆಯ ಸಂಸ್ಕøತಿಯನ್ನು ಹೆಚ್ಚು ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ : ಜಿ.ಪಂ. ಸಿಇಓ ಸ್ವರೂಪ ಟಿ.ಕೆ.

ಧಾರವಾಡ: ಪ್ರಸಕ್ತ ಸಾಲಿನ ಮೈಸೂರು ದಸರಾದಲ್ಲಿ ಅಕ್ಟೋಬರ 12 ರಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯ ಪರಂಪರೆ, ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಸ್ಥಬ್ದಚಿತ್ರವನ್ನು ರೂಪಿಸಲಾಗುವುದು. ಮೈಸೂರು ದಸರೆಯಲ್ಲಿ ದೇಶ, ವಿದೇಶಗಳ ಜನರು ಭಾಗಬಹಿಸುವುದರಿಂದ ನಮ್ಮ ಜಿಲ್ಲೆಯ ಸಂಸ್ಕøತಿಯನ್ನು ಹೆಚ್ಚು ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಿಂದ ಮೈಸೂರು …

Read More »