Breaking News

ಧಾರವಾಡ

ಮೋದಿ ಆಗಮನಕ್ಕಾಗಿ ಪೂರ್ವಸಿದ್ಧತೆ- ಅಂತಿಮವಾಗಿ ಪರಿಶೀಲಿಸಿದ ಸಚಿವ ಪ್ರಹ್ಲಾದ ಜೋಶಿ

ಧಾರವಾಡ : ನಾಳೆ ಧಾರವಾಡದ ಐಐಟಿ ನೂತನ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಮೋದಿ ಐಐಟಿಗೆ ಆಗಮಿಸಲಿದ್ದು, ಅದರ ಕೊನೆಯ ಹಂತದ ಸಿದ್ಧತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಸಚಿವರೊಂದಿಗೆ ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿದ್ದರು. ಕಾರ್ಯಕ್ರಮದ ಮುಖ್ಯವೇದಿಕೆ, ಸಿರಿಧಾನ್ಯಗಳ ಚಿತ್ರಣ, ಮೋದಿ ಆಗಮಿಸುವ ರಸ್ತೆ, ಹೆಲಿಪ್ಯಾಡ್ ಸೇರಿದಂತೆ ಇತ್ಯಾದಿ …

Read More »

ಯಡಿಯೂರಪ್ಪನವರ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಪುಷ್ಠಿ

ಧಾರವಾಡ: ನಾಲೈದು ಜನ ಶಾಸಕರಿಗೆ ಈ ಬಾರಿ ಟಿಕೆಟ್ ತಪ್ಪಬಹುದು ಎಂಬ ಯಡಿಯೂರಪ್ಪನವರ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಕೂಡ ಪುಷ್ಠಿ ನೀಡಿದ್ದಾರೆ .ಧಾರವಾಡದಲ್ಲಿ ಮಾತನಾಡಿದ ಅವರು, ಹಳೆಯ ಹಾಗೂ ವಯಸ್ಸಾದ ಶಾಸಕರು ಕೂಡ ಇದ್ದಾರೆ. ವಯಸ್ಸಾದ ಕಾರಣ ಅವರು ಟಿಕೆಟ್ ಬೇಡ ಎನ್ನಬಹುದು ಅಥವಾ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರಬಹುದು. ತಾವಾಗಿಯೇ ಅವರು ಟಿಕೆಟ್ ಬೇಡ ಎನ್ನಬಹುದು. ಅಂತಹವರು 121 ಕ್ಷೇತ್ರದಲ್ಲಿ ನಾಲೈದು ಜನ ಇದ್ದೇ ಇರುತ್ತಾರೆ. …

Read More »

ಹೋಳಿ ಹಬ್ಬದ ನಿಮಿತ್ತ ಪೊಲೀಸ್ ಪಡೆಗಳ ರೂಟ್ ಮಾರ್ಚ

ಹುಬ್ಬಳ್ಳಿ-ಧಾರವಾಡ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಳೆ ನಡೆಯಲಿರುವ ಹೋಳಿ ಹಬ್ಬದ ನಿಮಿತ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಕ್ರಮವಾಗಿ ಅಧೀನ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿ ನಗರದ ಪ್ರಮುಖ ಸ್ಥಳಗಳಲ್ಲಿ ಮಾನ್ಯ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ ಪೊಲೀಸ್ ಪಡೆಗಳ ರೂಟ್ ಮಾರ್ಚ ನಡೆಸಲಾಯಿತು. ಪಥಸಂಚಲನದಲ್ಲಿ ಮಾನ್ಯ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Read More »

ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ (ರಿ) ವತಿಯಿಂದ ಹಳೆ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಮಂಜುನಾಥ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಬಿ.ಜೆ.ಪಿ. ರಾಜ್ಯ ಪ್ರಕೋಷ್ಟಗಳ ಸಹಸಂಯೋಜಕರಾದ ಶ್ರೀ ಜಯತೀರ್ಥ ಕಟ್ಟಿಯವರು ಮಾತನಾಡುತ್ತ ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೋ ಅಲ್ಲಿ ಯಶಸ್ಸು ಇದ್ದೇ ಇರುತ್ತದೆ‌ ಮತ್ತು ಅಲ್ಲಿ‌ ದೇವತೆಗಳು ಸುಪ್ರೀತರಾಗಿರುತ್ತಾರೆ ಎಂದು ಹೇಳಿದರು. ಇಂದು ಆಟೋ ಚಲಾಯಿಸುವುದರಿಂದ ಹಿಡಿದು ವಿಮಾನದ ಪೈಲಟ್ ವರೆಗೂ ಎಲ್ಲ ಕ್ಷೇತ್ರಗಳಲ್ಲೂ …

Read More »

ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ

ಹುಬ್ಬಳ್ಳಿ: ರಾಣಿ ಚೆನ್ನಮ್ಮ ಈದ್ಗಾ ಮೈದಾನಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿದ್ದಾರೆ. ಪಾಲಿಕೆಗೆ ಹೋಳಿ ಹುಣ್ಣಿಮೆ ಪ್ರಯುಕ್ತ ಕಾಮಣ್ಣನ ಪ್ರತಿಷ್ಠಾಪನೆ ಮಾಡಲು ಗಜಾನನ ಉತ್ಸವ ಮಹಾಮಂಡಳಿಯಿಂದ ಮನವಿಯನ್ನಾ ಕೊಟ್ಟಿದ್ರು. ಸೂಕ್ತ ಬಂದೋಬಸ್ತ ಕಲ್ಪಿಸಲು ಆಗದ ಕಾರಣ ನಾವು ಅನುಮತಿ ಕೊಟ್ಟಿಲ್ಲ. ಮೋದಿ ಅವರು IIT ಉದ್ಘಾಟನೆಗೆ ಬರಲಿದ್ದಾರೆ. ಮೋದಿ ಕಾರ್ಯಕ್ರಮ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ದಂದಿ ಧಾರವಾಡಕ್ಕೆ ಹೋಗ್ತಾರೆ. ಈ ಕಾರಣಕ್ಕೆ ಪೊಲೀಸ್ ಬಂದೋಬಸ್ತ್ …

Read More »

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ- ಸಾಧಕೀಯರಿಗೆ ಸನ್ಮಾನ

ಗದಗ :ತಿಮ್ಮಾಪುರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಪ್ರಿಯದರ್ಶಿನಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ ಇವರ ಸಂಯೋಗದಲ್ಲಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಗಟ್ಟುವಿಕೆ ಯೋಜನೆ ಅಡಿಯಲ್ಲಿ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಜಯಲಕ್ಷ್ಮಿ ಹುಡಿದವರು, ಅನ್ನಪೂರ್ಣ ಮಾದರಿ, ವಿಶಾಲಾಕ್ಷಿ ಕಮ್ಮಾರ್ ಹಾಗೂ ಕಾರ್ಯಕ್ರಮ ಮುಖ್ಯ …

Read More »

ರೈತ ವಿರೋಧಿ ನೀತಿ ಖಂಡಿಸಿ ಪಾದಯಾತ್ರೆ ನಡೆಸಿದ ಮಾಜಿ ಸಚಿವರ ಪತ್ನಿ

ಧಾರವಾಡ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಇಂದು ಧಾರವಾಡ ಗ್ರಾಮೀಣ ಕ್ಷೇತ್ರ 71, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕರೆಯ ಮೇರೆಗೆ ಪಾದಯಾತ್ರೆ ನಡೆಸಿದರು. ಶಿವಲೀಲಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆ ಉಪ್ಪಿನಬೆಟಗೇರಿ ಗ್ರಾಮದಿಂದ ಆರಂಭವಾಗಿ, ಅಮ್ಮಿನಭಾವಿ ಮೂಲಕ, ಮುರಘಾಮಠದ ಮುಂದೆ ಸಾಗಿ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ತಲುಪಿ ಅಂತ್ಯ ಗೊಂಡಿತು. ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ …

Read More »

ಚಿಗರಿ ಬಸ್-ಬೈಕ್ ನಡುವೆ ಡಿಕ್ಕಿ- ಸವಾರರಿಬ್ಬರಿಗೆ ಗಂಭೀರ ಗಾಯ

ಧಾರವಾಡ : ಚಿಗರಿ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಮಾಡರ್ನ್ ಹಾಲ್ ಮುಂಭಾಗದಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರೂ ಬೈಕ್ ಸವಾರರಿಗೆ ಗಂಭೀರವಾದ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡವರ ಹೆಸರು ವಿಳಾಸ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More »

ಅಗ್ನೀಪಥ ಯೋಜನೆಯಲ್ಲಿ 4 ಯುವಕರು, ಒಬ್ಬರು CISFಗೆ ಆಯ್ಕೆ : ವಿಶೇಷ ಗೌರವ ಸಲ್ಲಿಕೆ

ಧಾರವಾಡ: ಯಾದವಾಡ ಗ್ರಾಮ ಪಂಚಾಯತಿಯಿಂದ ಸೈನ್ಯಕ್ಕೆ ಆಯ್ಕೆಯಾದ ಊರಿನ ಹೆಮ್ಮೆಯ ಯುವಕರಿಗೆ ಪಂಚಾಯತ್ ಕಾಯಾ೯ಲಯದ ಆವರಣದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಮೆಹಬೂಬಸುಬಾನಿ ಮುಜಾವರ , ಕಾಸೀಮ ಕುತುಬುದ್ದೀನ ಭಾವಿಮನಿ‌, ರಾಘವೇಂದ್ರ ಯಲಿಗಾರ , ಮೃತ್ಯುಂಜಯ ಕುಸುಗಲ್ ಆರ್ಮಿಗೆ ಆಯ್ಕೆಯಾಗಿದ್ದಾರೆ. ಸಚಿನ ಕುಸುಗಲ್ ಎಂಜಿನೀಯರಿಂಗ್ ( CISF) ಈಗಾಗಲೇ ಹುದ್ದೆಗೆ ಸೇರ್ಪಡೆಯಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರು ಸನ್ಮಾನ ಸ್ವೀಕರಿಸಿದರು. ಅಂಗನವಾಡಿ ಕಾರ್ಯರ್ತೆಯಾಗಿ ಸೇವಾ ನಿವೃತ್ತಿ ಹೊಂದಿದ ಯಾದವಾಡ ಗ್ರಾಮದವರೇ ಆದ …

Read More »

ಡಿ.25ರಂದು ವಧು ವರರ ಬೃಹತ್ ಸಮಾವೇಶ

ಧಾರವಾಡ :ವಿಶ್ವ ಅಸೋಸಿಯೇಟ್ಸ್, ಧಾರವಾಡ ಇದರ ಸಂಚಾಲಕರಾದ  ಶಾಂತೇಶ ಸಿ. ಚಿಕ್ಕಲಕಿ ಗೆಳೆಯರ ಬಳಗದಿ. 25 ರವಿವಾರದಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಧಾರವಾಡ ಶಹರದ ಶ್ರೀಮತಿ ಗೌರಮ್ಯ ಹಿರೇಮಠ (ರಪಾಟಿ) ಕಲ್ಯಾಣಮಂಟಪದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡಗಳ 25 ನೇ (ರಜತಮಹೋತ್ಸವ) ಅಂಗವಾಗಿ  ವಧು ವರರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಾಂತೇಶ ಸಿ. ಚಿಕ್ಕಲಕಿ  ತಿಳಿಸಿದರು. ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು  …

Read More »