Breaking News

ಧಾರವಾಡ

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ

ಧಾರವಾಡ: ಲಿಂಬಿ ಹಣ್ಣು ಹಾಗೂ ಕೋಳಿ ಮೋಟ್ಟೆ ಇಟ್ಟು ವಾಮಾಚಾರ ಮಾಡಿದ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದು. ಯಾವ ವಿಚಾರದಲ್ಲಿ ಈ ಮಾಟ ಮಂತ್ರ ಮಾಡಿದ್ದಾರೆ ಎಂದು ತಿಳಿದಿಲ್ಲ. ಆದರೆ ರಾತ್ರಿ ಹೊತ್ತು ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಭಾನುವಾರ ನಡೆದಿದೆ. ವಾಮಾಚಾರ ಮಾಡಿಸಿದ ಕಿಡಿಗೇಡಿಗಳು, ಲಿಂಬೆಹಣ್ಣು, ತತ್ತಿ ಜೋಡಿ ಇಟ್ಟು ವಾಮಾಚಾರ ಮಾಡಿಸಲಾಗಿದ್ದು ಸಂಪೂರ್ಣ ಲಿಂಬೆಹಣ್ಣಿನ ಮೇಲೆ ತಿಳಿಯದ ಅಕ್ಷರಗಳನ್ನು ಸಹ ನಮೂದಿಸಿ ಈ …

Read More »

ಗಂಡನನ್ನ ಬರ್ಬರವಾಗಿ ಕೊಲೆ ಮಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

ಧಾರವಾಡ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ್ ಎಂಬುವರೇ  ಗಂಡನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ (ಶುಕ್ರವಾರ) ರಾತ್ರಿ ಧಾರವಾಡ ತಾಲೂಕಿನ ಮರೆವಾಡ ಗ್ರಾಮದಲ್ಲಿ ನಡೆದ  ನಡೆದಿದೆ. . ಮಗಳೊಂದಿಗೆ ಸೇರಿ ಶೋಭಾ ಅಮರಗೋಳ್ ತನ್ನ ಪತಿಯನ್ನೇ ಕೊಲೆ ಮಾಡಿದ್ದಾಳೆ.ಕುಡಿದ ಮತ್ತಿನಲ್ಲಿ ಪತಿ ಗಲಾಟೆ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ.  ಘಟನಾ ಸ್ಥಳಕ್ಕೆ ಸಿಪಿಐ ಮಂಜುನಾಥ್ ಕುಸುಗಲ್‌ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮಿಣ ಪೋಲಿಸ್  ಠಾಣೆಯಲ್ಲಿ …

Read More »

ಹೆಂಡತಿಯನ್ನು ಕೊಂದು ತಾನೂ ನೇಣು ಹಾಕಿಕೊಂಡ ಪತಿ

ಧಾರವಾಡ: ಹೆಂಡತಿಯನ್ನು ಕೊಂದ ಪತಿರಾಯ ಕೊನೆಗೆ ತಾನೂ ನೇಣು ಹಾಕಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಗಣೇಶನಗರದಲ್ಲಿ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು, ಧಾರವಾಡದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಗಣೇಶನಗರದ ಗೌಳಿ ಜನಾಂಗದ ಮನಿಶಾ ಹಾಗೂ ಶೆಟ್ಟು ಎಂಬ ದಂಪತಿಯೇ ಸಾವಿಗೀಡಾದವರು. ಮೊದಲಿಗೆ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು …

Read More »

ಸಂಬಳಕ್ಕಾಗಿ ದಿನಗೂಲಿ ನೌಕರರು ಪ್ರತಿಭಟನೆ

ಧಾರವಾಡ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ 148 ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದು ಈ ಕೊಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಹಲವಾರು ದಿನಗೂಲಿ ನೌಕರರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕಾರರನ್ನುದ್ದೇಸಿಸಿ ಸಾಮಾಜಿಕ ಕಾರ್ಯಕರ್ತ ಸುರೇಶ, ಕೆ. ಮಾತನಾಡಿ,20 ಅಡುಗೆ ತಯಾರಕರರು, 128 ಅಡುಗೆ ಸಹಾಯಕರಿಗೆ ಕಳೆದ ಡಿಸೆಂಬರ್ ತಿಂಗಳಿಂದ ಸಂಬಳ ಮಾಡದಿರುವುದರಿಂದ ಅವರ …

Read More »

ಕೆ.ಎ.ಎಸ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣು

ಧಾರವಾಡ: ನಗರದ ಕೆ.ಎ.ಎಸ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಗರದಲ್ಲಿ ಜರುಗಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ ಊರಿನ ಗೀತಾ ಹೆಗ್ಗಣ್ಣವರ (23) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳೆಂದು ಗುರುತಿಸಲಾಗಿದೆ.     ನಗರದ ಖಾಸಗಿ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷೆ ತರಬೇತಿಯಲ್ಲಿ ಕೆ.ಎ ಎಸ್ ತರಬೇತಿ ಪಡೆಯುತ್ತಿದ್ದ ಗೀತಾ ಹೆಗ್ಗಣ್ಣವರ ಸಪ್ತಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿ ವಾಸಿಸುತ್ತದ್ದರು. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಪೊಲೀಸ್ ತನಿಖೆಯಿಂದ …

Read More »

ಉಕ್ರೇನ್‌ನಿಂದ ಧಾರವಾಡಕ್ಕೆ ಸುರಕ್ಷಿತವಾಗಿ ಬಂದ ಮಿಲನ್

ಧಾರವಾಡ: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದ ಧಾರವಾಡದ ಮಿಲನ್ ದೇವಮಾನೆ ನಿನ್ನೆ ಸಂಜೆ ಸುರಕ್ಷಿತವಾಗಿ ಧಾರವಾಡಕ್ಕೆ ಬಂದು ತಲುಪಿದ್ದಾರೆ. ಉಕ್ರೇನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ತೆರಳಿದ್ದ ಮಿಲನ್, ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆದ ಯುದ್ಧದಿಂದಾಗಿ ಉಕ್ರೇನ್ ದೇಶದಲ್ಲಿ ಸಿಲುಕಿ ವಾಪಸ್ ಭಾರತಕ್ಕೆ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದ. ಸುರಕ್ಷಿತವಾಗಿ ಧಾರವಾಡಕ್ಕೆ ಬರಲು ಅನುವು ಮಾಡಿಕೊಟ್ಟ ಭಾರತ ಸರ್ಕಾರಕ್ಕೆ ಮಿಲನ್ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಉಕ್ರೇನ್‌ನಲ್ಲಿ ನಡೆದ ಯುದ್ಧದ …

Read More »

ಮಹಿಳೆ ಎಂದರೆ ಒಂದು ಶಕ್ತಿ : ಆಯುಕ್ತ ಗೋಪಾಲಕೃಷ್ಣ

ಧಾರವಾಡ: ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ದೀನದಯಾಳ ಅಂತ್ಯೋಂದಯ ಯೋಜನೆಯ ಧಾರವಾಡದಲ್ಲಿ ಮದಿಹಾಳದ ಜೋಶಿ ಭವನದಲ್ಲಿ ಸ್ವ ಸಹಾಯ ಗುಂಪುಗಳ ಪ್ರದೇಶ ಮಟ್ಟದ ಮತ್ತು ನಗರ ಮಟ್ಟದ ಒಕ್ಕೂಟದ ಸದಸ್ಯರಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೋಳ್ಳಲಾಗಿತ್ತು . ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ಮಾತನಾಡಿ, ಮಹಿಳೆ ಎಂದರೆ ಒಂದು ಶಕ್ತಿ ಇಂತಹ ಅನೇಕ ಶಕ್ತಿ ಒಂದುಗೂಡಿ ಅಭಿವೃದ್ಧಿ ಹೊಂದಬೇಕು ಗುಜರಾತಿನ …

Read More »

ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಧಾರವಾಡ : ಅಪರಿಚಿತ ವ್ಯಕ್ತಿನೊಬ್ಬನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಎರಡಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಗೆ ಸುಮಾರು 30 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ವ್ಯಕ್ತಿ ರೈಲಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ವ್ಯಕ್ತಿಯ ತಲೆ ಭಾಗ ತುಂಡಾಗಿ ಬಿದ್ದಿದೆ.‌ವ್ಯಕ್ತಿ ಇಂದು ಮಧ್ಯಾಹ್ನ ಇಲ್ಲಿಗೆ ಬಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಸ್ಥಳಿಯರು ನೋಡಿ ಪೊಲೀಸರಿಗೆ ಮಾಹಿತಿ …

Read More »

ವಿದ್ಯಾಕಾಶಿಯಲ್ಲಿ ಬಾಲ ಪ್ರತಿಭೆಗಳ ಸಂಗೀತ ಕಲರವ

ಧಾರವಾಡ: ಸಪ್ತಸ್ವರ ಸಂಗೀತ ಶಾಲೆ ಮಾಳಮಡ್ಡಿ ಧಾರವಾಡದ ಬಾಲ ಪ್ರತಿಭೆಗಳ ಸಂಗೀತ ಪ್ರದರ್ಶನ ನಗರದ ಕರ್ನಾಟಕ ಪ್ರಾಚ್ಯ ಸಂಶೋಧನಾ ಮಂಡಳಿ ಭವನದಲ್ಲಿ ನೆರವೇರಿತು. ಡಾ. ಗಿರಿಧರ ಕಿನ್ನಾಳ ದಂಪತಿಗಳು, ಡಾ. ಮಧುಮತಿ ಶಿವಪೂಜಿ,ಶ್ರೀ ಸುರೇಶ ಕುಲ ಕರ್ಣಿಯವರುಶ್ರೀ ಗುರುರಾಯರ ಭಾವ ಚಿತ್ರಕ್ಕೆ ಜೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಗೀತ ಗುರುಮಾತೆ ಶ್ರೀಮತಿ ನಂದಿನಿ ಉಪಾಧ್ಯಾಯ, ಹಾಗೂ ವೃಂದ ಕಲಾವಿದರು ಭಕ್ತಿಗೀತೆಗಳ ಸ್ವರ ಸಾಗರ ಹರಿಸಿದರು. ತಬಲಾ ಸಾಥಿ ಬಾಲ …

Read More »

ಕೆಲಸ ಹೆಸರಿನಲ್ಲಿ ಅತ್ಯಾಚಾರ : ಧಾರವಾಡ ಖಾಸಗಿ ವಾಹಿನಿಯ ಪತ್ರಕರ್ತ ಬಂಧನ

ಧಾರವಾಡ: ಕೆಲಸ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಧಾರವಾಡದ ಖಾಸಗಿ ವಾಹಿನಿಯ ಪತ್ರಕರ್ತನನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಸೋಮಾಪೂರ ಗ್ರಾಮದ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಾಸಗಿ ವಾಹಿನಿ ಪತ್ರಕರ್ತ ಕೃಷ್ಣಮೂರ್ತಿ ಕುಲಕರ್ಣಿಯನ್ನು ಬಂಧಿಸಿದ್ದಾರೆ. ಮಹಿಳೆಗೆ ಕೆಲಸ ಕೊಡಿಸುವುದಾಗಿ ಮಹಿಷಿ ರಸ್ತೆಯಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದ ಆರೋಪಿ ಫೆಬ್ರವರಿ 27 ರಿಂದ ಮಾರ್ಚ್ 1ರ ನಡುವೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ …

Read More »