admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಐಪಿಎಲ್ ಟಿ–20 ಕ್ರಿಕೆಟ್ ಟೂರ್ನಿ ಮೇಲೆ ಹೊಸೂರ ಕ್ರಾಸ್ ಬಳಿ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ, ಮೂರು ಮೊಬೈಲ್ ಹಾಗೂ 6,100 ವಶಪಡಿಸಿಕೊಂಡಿದ್ದಾರೆ. ಹೊಸೂರಿನ ಸಂಜು ರೋಣದ, ಮನೀಷ ಕೊರವರ ಬಂಧಿತ ಆರೋಪಿಗಳು. ಅರುಣ ಕಠಾರೆ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಪ್ರಖ್ಯಾತ ಜನತಾ ಬಜಾರ ಸುಪರ್ ಮಾರ್ಕೇಟ್ ಹತ್ತಿರದ ಅಂಚಟಗೇರಿ ಓಣಿಯಲ್ಲಿ ಹಲವು ಭಾರಿ ಸ್ಥಳೀಯರಿಂದ ಮತ್ತು ಅಲ್ಲಿ ವ್ಯಾಪಾರ ಮಾಡುವ ಅಂಗಡಿ ಮುಗ್ಗಟ್ಟಿನ ವ್ಯಾಪಾರಸ್ಥರಿಂದ ಪ್ರತಿಭಟನೆಗಳು ನಡೆದರು ಕೂಡ ಇಲ್ಲಿ ರಸ್ತೆಯ ಕಾಮಗಾರಿ ಮಾತ್ರ ಇನ್ನು ಪ್ರಾರಂಭವೆ ಅಗಿಲ್ಲ. ಈ ಕುರಿತು ಅನೇಕ ಸಲ ಹು-ಧಾ ನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹಿತ ಪಾಲಿಕೆ ಅಧಿಕಾರಿಗಳು ಮಾತ್ರ ಈ ರಸ್ತೆ ಯ ಕಾಮಗಾರಿಯನ್ನು ಪ್ರಾರಂಭಿಸದೆ …
Read More »
admin
March 30, 2022
Breaking News, ಹುಬ್ಬಳ್ಳಿ
ಧಾರವಾಡ:ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿ ಶಾಲೆಗೆ 6000 ರೂ ಮೌಲ್ಯದ ವಿವಿಧ ವಸ್ತುಗಳನ್ನು ದಾನದ ರೂಪದಲ್ಲಿ ಕೊಡುಗೆ ನೀಡಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವ್ಯಾಕ್ಯೂಮ್ ಕ್ಲೀನರ್(ದೂಳು ಹಿರುವ ಯಂತ್ರ) ಹಾಗೂ ಕಂಪ್ಯೂಟರ್ ಸ್ಪೀಕರ್ ಮತ್ತು ಮೌಸ್ ದಾನವಾಗಿ ನೀಡಿದ ನವನಗರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಧಾನಗುರು ಆಯ್.ಆಯ್.ಮುಲ್ಲಾನವರ ,ಹೆಬ್ಬಳ್ಳಿಯ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ಐ.ಲಕ್ಕಮ್ಮನವರ ರವರಿಗೆ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಹಾಗೂ ಶಾಲಾ ಪ್ರಧಾನಗುರುಗಳು …
Read More »
admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ನಾಟ್ಯಾಂಜಲಿ ಕಲಾ ಮಂದಿರ ಪ್ರಸ್ತುತ ಪಡಿಸುವ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಿಂದಿಗೆ ನೃತ್ಯಾರ್ಪಣ-೨೦೨೨ ರ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸಮ್ಮೇಳನ ಇದೇ ದಿ. ೨೯ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅದ್ದುರಿಯಾಗಿ ಜರುಗಿತು. ದಿ. ೨೯ ರಂದು ನಡೆದ ಕಾರ್ಯಕ್ರಮದಲ್ಲಿ ೧೫೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಭರ …
Read More »
admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದಲ್ಲಿ ಇಂದು ವಾರ್ಡ್ ನಂ . 56 ರ ತೊರವಿ ಹಕ್ಕಲದಲ್ಲಿ , ನಲ್ಮಯ ಯೋಜನೆಯಡಿ ಫಲಾನುಭವಿಗಳಿಗೆ ಆಟೋ ರಿಕ್ಷಾಗಳನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಸುಭಾಷ್ ಅಕ್ಕಲಕೋಟೆ , ಸೀಮಾ ಲದ್ವಾ , ವೆಂಕಟೇಶ್ ಮೇಸ್ತ್ರಿ , ದೇವೇಂದ್ರ ಅಲಕೋಟಿ , ಕೇಶವ ಸಾ ಜಿತೋರಿ , ನಾಗರಾಜ ಕಲಾಲ ಸೇರಿದಂತೆ ಇನ್ನಿತರೆ ಪ್ರಮುಖರು ಹಾಜರಿದ್ದರು .
Read More »
admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮಾ .30 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ . ಮಾ .30 ರಂದು ಬೆಳಿಗ್ಗೆ 10 ಗಂಟೆಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ 3 ಗಂಟೆಗೆ ಹುಬ್ಬಳ್ಳಿಯ ಸರ್ಕ್ಯೂ ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬೆಂಗಳೂರುಗೆ ತೆರೆಳುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
Read More »
admin
March 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಭಂಡಾರ ಈ ಜಾತ್ರೆಯಲ್ಲಿ ಅಪ್ಪುಗೆ ವಿಶೇಷ ನಮನ ಸಲ್ಲಿಸಿದ್ದಾರೆ . ಇನ್ನೂ ಗ್ರಾಮದೇವತೆಯ ಜಾತ್ರೆಯಲ್ಲಿ ದಿ.ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಹಿಡಿದುಕೊಂಡ ಅಭಿಮಾನಿ ಅಪ್ಪುವಿನ ಪೋಟೋಗೆ ಭಂಡಾರ ತೂರುವ ಮೂಲಕ ವಿನೂತನವಾಗಿ ಅಭಿನಂದನೆ ಸಲ್ಲಿಸಿದರು .
Read More »
admin
March 30, 2022
Breaking News, ಹುಬ್ಬಳ್ಳಿ
ಧಾರವಾಡ: ದಿ. ಡಾ. ಚೆನ್ನವೀರ ಕಣವಿ ನೆನಪಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‍ಡಿಎಂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕಗಳನ್ನು ಸ್ಥಾಪಿಸಲಾಗುವುದು ಎಂದು ಚೆನ್ನವೀರ ಕಣವಿ ಪುತ್ರಿ ಪ್ರಿಯದರ್ಶಿ ಕಣವಿ ಹೇಳಿದ್ದಾರೆ. ಸರ್ಕಾರ ಕಣವಿ ಅವರ ಚಿಕಿತ್ಸಾ ವೆಚ್ಚ ಭರಿಸಿದ ಕಾರಣ ಕುಟುಂಬವು ಭರಿಸಲು ಸಿದ್ಧವಿದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.
Read More »
admin
March 29, 2022
Breaking News, ಹುಬ್ಬಳ್ಳಿ
ಹುುಬ್ಬಳ್ಳಿ: ನಗರದ ಚೇತನ್ ಫೌಂಡೇಶನ್ ಏಳನೇ ವರ್ಷದಂಗವಾಗಿ ನಡೆದ ‘ಚೇತನ ಸಂಭ್ರಮ’ ದಲ್ಲಿ ಡಾ. ಪುನೀತ್ ರಾಜಕುಮಾರ್ ನೆನಪಿನ ರಾಜರತ್ನ ಪ್ರಶಸ್ತಿಯನ್ನು ಉದ್ಯಮಿ, ಸಮಾಜ ಸೇವಕ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್. ಶೆಟ್ಟಿ ನೀಡಿ ಗೌರವಿಸಲಾಯಿತು. ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಹಿರಿಯ ಸಾಹಿತಿ ಸುರೇಶ ಕೋರಕೊಪ್ಪ, ಸಾಹಿತಿ ಬೇಲೂರ ರಘುನಂದನ್, ಸವಿತಾ ಕುಸುಗಲ್, ಕು. ಖುಷಿ ಟಿಕರೆ, ವಿ.ಜಿ. ಪಾಟೀಲ್, …
Read More »
admin
March 29, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಾಟಾ ಆಪರೇಟರ್ ಗಳಾಗಿ ಕಾರ್ಯನಿರ್ವಹಿಸೋ ಸಿಬ್ಬಂದಿ. ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 150 ಕ್ಕೂ ಅಧಿಕ ಜನ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಕಳೆದ ಹತ್ತಾರು ವರ್ಷಗಳಿಂದಲೂ ಕಾರ್ಯನಿರ್ವಹಿಸೋ ಇವ್ರಿಗೆ ಸರ್ಕಾರ ಮಾತ್ರ ಇನ್ನೂ ಯಾವುದೇ ಸೇವಾ ಭದ್ರತೆ ನೀಡದೇ ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತಿರೋ ನಮಗೆ ಹೊರಗುತ್ತಿಗೆ ಆಧಾರದಿಂದ …
Read More »