Breaking News

ಹುಬ್ಬಳ್ಳಿ

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿ : ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟರೇ ಧ್ವಜಾರೋಹಣ ಮಾಡುವುದಿಲ್ಲ ಎಂದು ಉದ್ಧಟತನ ಹೇಳಿಕರ ನೀಡಿದ್ದ, ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಬಿ.ಆರ್.ಅಂಬೇಡ್ಕರ್ ಸೈನ್ಯ ವತಿಯಿಂದ ನಗರದ ತಹಶಿಲ್ದಾರರ ಕಚೇರಿ ಆವರಣದ ಬಳಿ ಆಗ್ರಹಿಸಲಾಯಿತು. ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರದ ಮನವಿ ಸಲ್ಲಿಸಿ ಮಾತನಾಡಿದ ಸೈನ್ಯದ ಪ್ರಮುಖರು, ಮಲ್ಲಿಕಾರ್ಜುನಗೌಡ ತಮ್ಮ ವೃತ್ತಿಗೆ ಅವಮಾನ ಮಾಡಿದರಲ್ಲದೇ …

Read More »

ಎಲ್ಲಾ ವಿಚಾರಗಳನ್ನು ಮಾಧ್ಯಮ ಎದುರು ಹೇಳಲ್ಲ, ವೇಟ್ ಆ್ಯಂಡ್ ಸಿ : ಎಸ್ ಆರ್ ಪಾಟೀಲ್

ಹುಬ್ಬಳ್ಳಿ : ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ನಡುವಿನ ಚರ್ಚೆ ಆರಂಭ ಮಾಡುತ್ತಿರುವುದು ಎಲ್ಲರಿಗೆ ಕುತೂಹಲ ಮೂಡಿಸಿದೆ. ಆದರೆ ಕಾಂಗ್ರೆಸ್ ಹಿರಿಯ ನಾಯಕರ ಭೇಟಿ ಮುಕ್ತಾಯಗೊಂಡು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಚಾರಗಳನ್ನು ಮಾಧ್ಯಮ ಎದುರು ಹೇಳಲ್ಲ.ಸಮಯ ಸಂದರ್ಭದಲ್ಲಿ ಎಲ್ಲಾ ಹೇಳತ್ತೇನೆ ವೇಟ್ ಆ್ಯಂಡ್ ಸಿ. ನನಗೆ ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಮಾತನಾಡಲು ಯಾರೂ …

Read More »

ಯಾವ ಪಕ್ಷಕ್ಕೆ ಸೇರುತ್ತನೆ ಎನ್ನುವುದನ್ನು ಶೀಘ್ರದಲ್ಲೇ ತಿಳಿಸುವೆ : ಸಿಎಂ ಇಬ್ರಾಹಿಂ

ಹುಬ್ಬಳ್ಳಿ : ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ನಡುವಿನ ಚರ್ಚೆ ಆರಂಭ ಮಾಡುತ್ತಿರುವುದು ಎಲ್ಲರಿಗೆ ಕುತೂಹಲ ಮೂಡಿಸಿತ್ತು . ಆದರೆ ಇದೀಗ ರಹಸ್ಯ ಸಭೆ ನಂತರ. ಶೀಘ್ರದಲ್ಲೇ ಯಾವ ಪಕ್ಷಕ್ಕೆ ಹೋಗುತ್ತೇನೆ ಅನ್ನೋದನ್ನ ತಿಳಿಸುವೆ ಎಂದು ಸಿಎಂ ಇಬ್ರಾಹಿಂ ರೋಚಕ ತೀರುವು ನೀಡಿದ್ದಾರೆ. ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ ಸಧ್ಯ ಯಾರ ಹೆಸರು ಹೇಳಲ್ಲ. ಕಾಂಗ್ರೆಸ್ ನವರು ನನ್ನ ಜೊತೆಗಿದ್ದಾರೆ …

Read More »

ಸಿ.ಎಂ.ಇಬ್ರಾಹಿಂಗೆ ಮಾತ್ರವಲ್ಲ ಅವರ ಸಮುದಾಯಕ್ಕೂ ನಷ್ಟವಾಗಿದೆ: ಎಸ್. ಆರ್.ಪಾಟೀಲ

ಹುಬ್ಬಳ್ಳಿ: ಸಿ.ಎಂ.ಇಬ್ರಾಹಿಂ ಅವರನ್ನು ಸೌಹಾರ್ದ ಭೇಟಿಯಾಗಿ ಬಂದಿದ್ದೆನೆ. ಭೇಟಿಯ ನಂತರ ಏನೆಲ್ಲಾ ಚರ್ಚೆಯಾಗಿದೆ ಎನ್ನುವುದನ್ನು ಹೇಳುತ್ತೇ‌ನೆ. ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆ ಅಂತ ಹೇಳಿಲ್ಲ. ನಾನು ವಿಪಕ್ಷ ನಾಯಕನಿದ್ದಾಗ ಸಾಕಷ್ಟು ಬೆಂಬಲ‌ ನೀಡಿದ್ದರು.ಅವರಿಗೆ ವಿಪಕ್ಷ ನಾಯಕ ಸ್ಥಾನ ಸೀಗಬೇಕಿತ್ತು. ಕೇವಲ ಅದು ಅವರಿಗೆ ಆದ ನಷ್ಟ ಅಲ್ಲ. ಆ ಸಮೂದಾಯಕ್ಕೂ ನಷ್ಟ ಎಂದು ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು. ಸಿ.ಎಂ.ಇಬ್ರಾಹಿ ಭೇಟಿಗಾಗಿ ಆಗಮಿಸಿದ ವೇಳೆ ಹುಬ್ಬಳ್ಳಿಯ …

Read More »
Featured Video Play Icon

ಕಣ್ಣೀರು ಹಾಕಿದ ಸಿಎಂ ಇಬ್ರಾಹಿಂ

ಹುಬ್ಬಳ್ಳಿ: ಪಕ್ಷದಿಂದ ಹೊರಬಂದಿದ್ದು, ವಾಪಸ್ ಹೋಗೋ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ.ನನ್ನ ಶಾಪ ಭಾರಿ ಕೆಟ್ಟದ್ದು,ಇವಾಗ ತಟ್ತಿದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ ಎಂದು ನಾಳೆನೇ ರಾಜಿನಾಮೆ ಕೊಡ್ತಿನಿ ಎಂದು ಹುಬ್ಬಳ್ಳಿಯಲ್ಲಿ ಕಣ್ಣೀರುಹಾಕಿ ಸಿಎಂ ಇಬ್ರಾಹಿಂ ಭಾವುಕರಾದರು. ನಗರದಲ್ಲಿಯಿಂದು ಮಾತನಾಡಿದ ಅವರು,ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ.ಡಿಕೆಶಿ ಬಹಳ …

Read More »

ಜಿಲ್ಲಾಧಿಕಾರಿಯಿಂದ ಆರೋಗ್ಯ ಇಲಾಖೆಗೆ ಆಂಬ್ಯುಲೆನ್ಸ್ ಹಸ್ತಾಂತರ

ಹುಬ್ಬಳ್ಳಿ : ಫ್ಲೀಟ್‌ ಗಾರ್ಡ್ ಫಿಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಡಿಯಲ್ಲಿ ಮಹೀಂದ್ರಾ ಸುಪ್ರೊ ಝೆಡ್ ಎಕ್ಸ್ ಆಂಬ್ಯಲೇನ್ಸ್ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮೂಲಕ ಹುಬ್ಬಳ್ಳಿ ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಆಂಬ್ಯುಲೆನ್ಸ್ ಗೆ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಚಾಲನೆ …

Read More »

ಕೃಷಿಮಿತ್ರ ನಡಕಟ್ಟಿ‌ನ ‌ಕೂರಿ ಸಂಶೋಧನೆಗೆ ವಲಿದ ಪದ್ಮಶ್ರೀ ಪ್ರಶಸ್ತಿ

ಹುಬ್ಬಳ್ಳಿ: ಆತ ಕಲಿತದ್ದು 10 ನೆಯ ತರಗತಿ.ಅದರಲ್ಲೂ ಆತ ಫೇಲ್ ಆಗಿದ್ದ. ಆದರೆ ಈತನಿಗೆ ಒಲಿದಿದ್ದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ವಿಶೇಷ ತಂತ್ರಜ್ಞಾನದ ಮೂಲಕವೇ ಹೊಸ ಹೊಸ ಆವಿಷ್ಕಾರ ಮಾಡಿದಕ್ಕೆ ಸದ್ಯ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪಾತ್ರವಾದ ನಡಕಟ್ಟಿ ಅವರ ಸಾಧನೆಗೆ ಸ್ಫೂರ್ತಿ ಸಮಾಜಕ್ಕೆ ರೈತ ಸಮುದಾಯಕ್ಕೆ ಏನಾದರು ಕೊಡಬೇಕು ಎಂಬ ಹಂಬಲ ಅಂದರೆ ನೀವು ನಂಬಲೇಬೇಕು. ಹೀಗೆ ತಾವೇ ಸಿದ್ದ ಮಾಡಿರುವ ಕೃಷಿ ಉಪಕರಣಗಳನ್ನು …

Read More »

ಮಾಜಿ ಸಿಎಂ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ವಾಣಿಜ್ಯ ನಗರದ ಮನೆಯಲ್ಲಿ ನೀರವ ಮೌನ

ಹುಬ್ಬಳ್ಳಿ : ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ ಹಿನ್ನೆಲೆ ವಾಣಿಜ್ಯ ನಗರದ ಮನೆಯಲ್ಲಿ ನಿರ್ದಿಷ್ಟ ಮೌನ ಆವರಿಸಿದೆ. ನಗರದ ಮಧುರಾ ಎಸ್ಟೇಟ್​ನಲ್ಲಿ ಸೌಂದರ್ಯ ತಂದೆ ವಿ‌ ಬಿ ಯಮಕನಮರಡಿ ಅವರ ಮನೆ ಇದೆ. ಅವರು ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಯಮಕರನಮರಡಿ ಅವರ ಹಿರಿಯ ಮಗಳಾಗಿದ್ದು, ಹುಬ್ಬಳ್ಳಿಯ ಮನೆಗೆ ‘ಸೌಂದರ್ಯ’ ಅಂತಾ ಹೆಸರಿಟ್ಟಿದ್ದಾರೆ ಸೌಂದರ್ಯ ಹುಬ್ಬಳ್ಳಿಯ ನಿವಾಸದಲ್ಲಿ ಬಾಲ್ಯ ಜೀವನ ಕಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿದ್ದು, …

Read More »

ನರಗುಂದದ ಸಮೀರ್ ಶಹಾಪುರ ಹತ್ಯೆ ಕೇಸ್‌ : ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯ

ಹುಬ್ಬಳ್ಳಿ: ನರಗುಂದ ತಾಲೂಕಿನಲ್ಲಿ ನಡೆದ ಸಮೀರ್ ಶಹಾಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಹುತ್ವ ಕರ್ನಾಟಕ ಸಂಘಟನೆ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜ.16ರಂದು ಗಲಾಟೆ ಆದಾಗ ಸಂಜು ನಾಲವಾಡ ಎಂಬಾತನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಸಮೀರ ಹತ್ಯೆಯಾಗಿದೆ. ಕೊಲೆ ಬಳಿಕ ಯಾವ …

Read More »

3 ವರ್ಷದ ಬಾಲಕಿ ಮೇಲೆ ಕುಡಕನಿಂದ ಅತ್ಯಾಚಾರ ಯತ್ನ: ಆರೋಪಿ ಬಂಧನ

ಹುಬ್ಬಳ್ಳಿ: 3 ವರ್ಷದ ಮಗು ಮೇಲೆ 30 ವರ್ಷದ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಮೂವತ್ತು ವರ್ಷದ ವ್ಯಕ್ತಿಯೊಬ್ಬ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮನೆಯ ಸಮೀಪದಲ್ಲೇ ವಾಸವಾಗಿರುವ ಪರಿಚಯದವರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಲ್ಲದೆ ಮಗುವಿನ ಕಾಲಿಗೆ ಕಚ್ಚಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ.‌ ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ …

Read More »