Breaking News

ಹುಬ್ಬಳ್ಳಿ

ಹಳೆಯ ಎಪಿಎಂಸಿ ಕಾಯಿದೆ ಜಾರಿಗೊಳಿಸಿ ರಾಜ್ಯಾದ್ಯಂತ ಬಿಜೆಪಿ ರೈತ ಮೋರ್ಚ ಪ್ರತಿಭಟನೆ ಉಪಾಧ್ಯಕ್ಷ ಷಣ್ಮುಗ ಗುರಿಕಾರ ಅಗ್ರಹ

ಹುಬ್ಭಳ್ಳಿ: ಬಜೆಟ್ ಈಗ ಸದ್ಯ ಜಾರಿಯಲ್ಲಿರುವ ಕೃಷಿ ಕಾನೂನನ್ನು ವಾಪಸ್ ಪಡೆದು, ಹಳೆಯ ಎಪಿಎಂಸಿ ಕಾನೂನು ಜಾರಿಗೆ ತರುತ್ತೇವೆ ಹೇಳಿಕೆ ಕೊಟ್ಟಿದ್ದರು. ಅದು ರೈತ ವಿರೋಧಿ ಆಗಿರುವ ಕ್ರಮವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕೃಷಿ ಕಾನೂನು ರೈತರಿಗೆ ಪೂರಕವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಕೃಷಿ ಕಾಯ್ದೆಯನ್ನು ರದ್ದು ಮಾಡಬಾರದೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಆಗ್ರಹಿಸುತ್ತದೆ ಎಂದು ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು. ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ …

Read More »

ವಾರ್ಡ್ ನಂಬರ್ 36ಕ್ಕೆ ಭೇಟಿ ಕೊಟ್ಟ ಮಹಾನಗರ ಪಾಲಿಕೆಯ ನೂತನ ಆಯುಕ್ತರು

ಹುಬ್ಬಳ್ಳಿ13 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಈಶ್ವರ್ ಉಳ್ಳಾಗಡ್ಡಿ ಯವರು ವಾರ್ಡ್ ನಂಬರ್ 36 ಬೇಟಿ ನೀಡಿ ಉಣಕಲ್ ಸಂತೆ ಬಯಲಿನ ತೆರೆದ ಚರಂಡಿಯ ಸಮಸ್ಯೆ ಹಾಗೂ ಚನ್ನಪ್ಪನ ಕೆರೆಯಲ್ಲಿ ತುಂಬಿದ ಅಂತರಗಂಗೆಯನ್ನು ಸ್ವಚ್ಛಗೊಳಿಸುವ ಕುರಿತು ವೀಕ್ಷಣೆ ಮಾಡಿದರು. ಅವರೊಂದಿಗೆ ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಹನುಮಂತ್ ಎಲಿವಾಳ, ಬಸವರಾಜ ಮಾದಳ್ಳಿ, ಶಿವಯೋಗಿ ಬೆಂಕಿಶಟ್ಟರು, ವಿಶ್ವನಾಥ್ಗೆಣಿಮ, ಬಳಿಗೇರ್, ಗುರು ಹಿರೇಮಠ, ವಿಟ್ಟಲ್ ಸಿಂಗ್ ಹಜೇರಿ, …

Read More »

ಟೊಮೇಟೊ ಬೆಳೆಗೆ ಬೆಂಕಿ ರೋಗ: ಚಿಂತಾ ಕ್ರಾಂತನಾದ ರೈತ.

ಹುಬ್ಬಳ್ಳಿ: ರಾಜ್ಯಾದ್ಯಂತ ಟೊಮೊಟೋ ಬೆಳೆ ಬೆಲೆ ಗಗನಕ್ಕೇರಿದೆ. ಇತಿಹಾಸದಲ್ಲಿಯೇ ಇಷ್ಟೊಂದು ಬೆಲೆ ಬಂದಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಅನ್ನದಾತರಿಗೆ ಚಿನ್ನದ ಬೆಲೆ. ಒಂದೆಡೆ ಬೆಳೆಗಾರರು ಲಾಭದಲ್ಲಿದ್ರೆ, ಕೊಳ್ಳುವವರು ಜೇಬಿಗೆ ಮಾತ್ರ ಬರೆ ಬೀಳುತ್ತಿದೆ. ಆದ್ರೆ ಧಾರವಾಡದ ರೈತ ಟೊಮೊಟೋ ಬೆಳೆದರೂ ಸಹ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪ್ರಕಾಶ ಸುಣಗಾರ ಎಂಬಾತರು ತಮ್ಮ ಒಂದೂವರೆ ಎಕರೆಯಲ್ಲಿ …

Read More »

ಹು-ದಾ ನಗರದಲ್ಲಿ ಹಲವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಹೃದಯಾಘಾತದಿಂದ ನಿಧನ.

ಹುಬ್ಬಳ್ಳಿ: ಅವಳಿನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. 1993 ರ ಬ್ಯಾಚಿನ‌ 58 ವರ್ಷದ ಹಾಜಪ್ಪ ಕಬಾಡೆ ಎಂಬ ಪಿಎಸ್ಐ ಅವರೇ ನಿಧನರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಧಾರವಾಡದ ವಿದ್ಯಾಗಿರಿ ಠಾಣೆಯಿಂದ ಪದನ್ನೋತಿ ಹೊಂದಿ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕಬಾಡೆ ಅವರ ಪಾರ್ಥಿವ ಶರೀರವನ್ನ ಕೆಲಕಾಲ ಆಸ್ಪತ್ರೆಯಲ್ಲಿಟ್ಟು ನಂತರ ಅವರ ಹುಟ್ಟೂರಾದ …

Read More »

ಪೌರ ಕಾರ್ಮಿಕರು ಮತ್ತು ನೌಕರ ಸಂಘದ ವತಿಯಿಂದ ನೂತನ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸನ್ಮಾನ

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಈಶ್ವರ್ ಉಳ್ಳಾಗಡ್ಡಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಾಗೂ ಪೌರಕಾರ್ಮಿಕರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಲಾಯಿತು. ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ್, ಯಮನವ್ವ ಬೆನಸಮಟ್ಟಿ, ರೇಣವ್ವ ನಾಗರಾಳ್, ಶರೀಫ್ ಮಸರಕಲ್, ಪದ್ಮಕ್ಕ ಚಿಕಣ್ಣವರ ಕಮಲವ್ವ ಕಳಕನ್ನವರ, …

Read More »

‌ಧಾರವಾಡದಲ್ಲಿ ವಿಭಿನ್ನ ಪ್ರತಿಭಟನೆ

ಧಾರವಾಡ : ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ಧಾರವಾಡದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಬರ್ಟ್ …

Read More »

ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನ

ಹುಬ್ಬಳ್ಳಿ: ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ, ಹುಬ್ಬಳ್ಳಿಯ ಇದ್ದಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು, ಈದ್ಧಾ ಮೈದಾನದಲ್ಲಿ ನಮಾಝ್ ಮಾಡುವುದರ ಮೂಲಕ ತಮ್ಮ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.ಅಷ್ಟೇ ಅಲ್ಲೆ ಈ ಪ್ರಾರ್ಥನೆಯಲ್ಲಿ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು

Read More »

ಹು-ಧಾ ಪೊಲೀಸ್ ಕಮೀಷನರ್ ಆಗಿ ಸಂತೋಷ್ ಬಾಬು ಪ್ರಭಾರಿಯಾಗಿ ನೇಮಕ

ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಹುದ್ದೆಗೆ ಪೊಲೀಸ್ ಇಲಾಖೆಯಿಂದ 2011 ಬ್ಯಾಚಿನ್ IPS ಅಧಿಕಾರಿಯಾದ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ರಮನ್ ಗುಪ್ತ ಅವರ ವರ್ಗಾವಣೆ ನಂತರ ಹು-ಧಾ ಪೊಲೀಸ್ ಕಮೀಷನರ್ ಸ್ಥಾನ ತೆರುವಾಗಿ ದಿನಗಳು ಕಳೆದರು ರಾಜ್ಯ ಸರ್ಕಾರ ಯಾವೊಬ್ಬ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಿರಲಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಹು-ಧಾ ಪೊಲೀಸ್ ಕಮೀಷನರ್ ಆಗಿ …

Read More »

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಆಕ್ರಮಿಸಿದ ಅಂಗಡಿಗಳ ತೆರವು ಕಾರ್ಯಾಚರಣೆಯಲ್ಲಿ ಮುಂದಾದ ಮಹಾನಗರ ಪಾಲಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಅಕ್ರಮ ತೆರವು ಕಾರ್ಯಾಚರಣೆ ಚುರುಕಾಗಿ ನಡೆದಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅವಳಿನಗರದ ಸೌಂದರ್ಯಕ್ಕೆ ಆದ್ಯತೆ ನೀಡಿದ್ದು, ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಹಾಗೂ ಜನತಾ ಬಜಾರ್ ಪ್ರದೇಶದಲ್ಲಿ ಫುಟ್ ಪಾತ್ ಅತಿಕ್ರಮಣವಾಗಿ ನಿರ್ಮಾಣವಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ವಲಯ ಕಚೇರಿ 9ರ ಸಹಾಯಕ ಆಯುಕ್ತರಾದ ಕಟಗಿಯವರ ನೇತೃತ್ವದಲ್ಲಿ ವಾರ್ಡ್ 65ರ ಚನ್ನಮ್ಮ ವೃತ್ತ ಜನತಾ ಬಜಾರ ಪ್ರದೇಶದಲ್ಲಿ ಫುಟ್‌ಪಾತ್ ಮೇಲೆ ಅತಿಕ್ರಮಣವಾಗಿದ್ದ ಅಂಗಡಿಗಳು ಹಾಗೂ ಕಟ್ಟಡಗಳ …

Read More »

ಬ್ರಕೀದ್‌ ಹಬ್ಬದ ಹಿನ್ನಲೆ ನಾಳೆ ಹುಬ್ಬಳ್ಳಿಯಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ

ನಾಳೆ ಬ್ರಕೀದ್‌ ಹಬ್ಬದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಂಚಾರ ಮಾಡುವ ದಿನನಿತ್ಯದ ರಸ್ತೆ ಸಂಚಾರದಲ್ಲಿ ಕೆಲ ಬದಲಾಣೆ ಮಾಡಲಾಗಿದೆ, ಹಲವಾರು ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಯಾವ ಯಾವ ಮಾರ್ಗದಲ್ಲಿ ಸಂಚಾರ ಮಾಡಬೇಕು ಎನ್ನುವ ಮಾಹಿತಿಯನ್ನು ಸಂಚಾರಿ ಪೋಲಿಸ್‌ ಠಾಣೆಯ ಅಧಿಕಾರಿಗಳ ಸಮ್ಮೂಖದಲ್ಲಿ ಚರ್ಚೆಸಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ. ಹುಬ್ಬಳ್ಳಿ ಪ್ರಮುಖ ರಸ್ತಗಳಲ್ಲಿ ನಾಳೆ ಸಂಚಾರ ಮಾಡಲು ಅವಕಾಶ ಇರುವುದಿಲ್ಲ ಆದ್ದರಿಂದ ವಾಹನ ಸವಾರರು ಈ ಕೆಳಗಿನ ಮಾರ್ಗಗಳ ಮೂಲಕ ಸಂಚಾರ …

Read More »