Breaking News

ವಾರ್ಡ್ ನಂಬರ್ 36ಕ್ಕೆ ಭೇಟಿ ಕೊಟ್ಟ ಮಹಾನಗರ ಪಾಲಿಕೆಯ ನೂತನ ಆಯುಕ್ತರು

ಹುಬ್ಬಳ್ಳಿ13 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಈಶ್ವರ್ ಉಳ್ಳಾಗಡ್ಡಿ ಯವರು ವಾರ್ಡ್ ನಂಬರ್ 36 ಬೇಟಿ ನೀಡಿ ಉಣಕಲ್ ಸಂತೆ ಬಯಲಿನ ತೆರೆದ ಚರಂಡಿಯ ಸಮಸ್ಯೆ ಹಾಗೂ ಚನ್ನಪ್ಪನ ಕೆರೆಯಲ್ಲಿ ತುಂಬಿದ ಅಂತರಗಂಗೆಯನ್ನು ಸ್ವಚ್ಛಗೊಳಿಸುವ ಕುರಿತು ವೀಕ್ಷಣೆ ಮಾಡಿದರು. ಅವರೊಂದಿಗೆ ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಹನುಮಂತ್ ಎಲಿವಾಳ, ಬಸವರಾಜ ಮಾದಳ್ಳಿ, ಶಿವಯೋಗಿ ಬೆಂಕಿಶಟ್ಟರು, ವಿಶ್ವನಾಥ್ಗೆಣಿಮ, ಬಳಿಗೇರ್, ಗುರು ಹಿರೇಮಠ, ವಿಟ್ಟಲ್ ಸಿಂಗ್ ಹಜೇರಿ, ಶಂಕರಗೌಡ ಪಾಟೀಲ್, ಹಾಗೂ ಅನೇಕ ಗಣ್ಯ ನಾಗರಿಕರು ಉಪಸ್ಥಿತರಿದ್ದರು.
ನೂತನ ಆಯುಕ್ತರು ಪ್ರಥಮ ಬಾರಿಗೆ ವಾರ್ಡ್ ನಂಬರ್ 36ಕ್ಕೆ ಭೇಟಿ ಕೊಟ್ಟಿದ್ದ ನಿಮಿತವಾಗಿ ವಾರ್ಡಿನ ಜನತೆಯ ಪರವಾಗಿ ಸನ್ಮಾನಿಸಲಾಯಿತು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *