ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಹುದ್ದೆಗೆ ಪೊಲೀಸ್ ಇಲಾಖೆಯಿಂದ 2011 ಬ್ಯಾಚಿನ್ IPS ಅಧಿಕಾರಿಯಾದ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ರಮನ್ ಗುಪ್ತ ಅವರ ವರ್ಗಾವಣೆ ನಂತರ ಹು-ಧಾ ಪೊಲೀಸ್ ಕಮೀಷನರ್ ಸ್ಥಾನ ತೆರುವಾಗಿ ದಿನಗಳು ಕಳೆದರು ರಾಜ್ಯ ಸರ್ಕಾರ ಯಾವೊಬ್ಬ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಿರಲಿಲ್ಲ.
ಹೀಗಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಹು-ಧಾ ಪೊಲೀಸ್ ಕಮೀಷನರ್ ಆಗಿ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





