Breaking News

ಹುಬ್ಬಳ್ಳಿ

ಉಣಕಲ್ ರಾಮಲಿಂಗೇಶ್ವರ ದೇವಸ್ಥಾನದ ಜಾಗೆಯನ್ನು BRTS ವಶಕ್ಕೆ

ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ ಬಳಿ ಇರುವ ಶ್ರೀ ರಾಮಲಿಂಗೇಶ್ವರ ನಗರವನ್ನು ಭಾರೀ ಪೊಲೀಸ್ ಭದ್ರತೆಯಲ್ಲಿಂದು ಬಿಆರ್ ಟಿಎಸ್ ಸುಪರ್ದಿಗೆ ಪಡೆಯಲಾಯಿತು . ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾದ ಝುಬೇರ್ ಅಹ್ಮದ್ ಹಾಗೂ ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರ ನೇತೃತ್ವದಲ್ಲಿ ರಸ್ತೆಯ ಉಣಕಲ್ ರಾಮಲಿಂಗೇಶ್ವರ ದೇವಸ್ಥಾನದ CTS NO.3448 ರಲ್ಲಿರುವ ಜಾಗೆಯನ್ನು ಕೋರ್ಟ್ ಆದೇಶದ ಮೇರೆಗೆ ಹುಧಾ BRTS ಕಂಪನಿ ಒಡೆತನಕ್ಕೆ ಸೇರಿರುತ್ತದೆ …

Read More »

ಮುನೇನಕೊಪ್ಪ ಅವರ ಸಹೋದರ ಡಾ.ಮಲ್ಲನಗೌಡ ಪಾಟೀಲ ನಿಧನ

ಹುಬ್ಬಳ್ಳಿ: ಸಹೃದಯಿಯಾಗಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ ಡಾ.ಮಲ್ಲನಗೌಡ ಪಾಟೀಲ ಮುನೇನಕೊಪ್ಪ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ನವಲಗುಂದ ಕ್ಷೇತ್ರದ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಹಿರಿಯ ಸಹೋದರರಾಗಿದ್ದ ಡಾ.ಮಲ್ಲನಗೌಡರು, ಕ್ಷೇತ್ರದಲ್ಲಿ ‘ಡಾಕ್ಟರ್ ಅಣ್ಣಾರ’ ಎಂದೇ ಗುರುತಿಸಿಕೊಂಡಿದ್ದರು. ಬಡವರ ಪರವಾದ ಮನಸ್ಥಿತಿ ಹೊಂದಿದ್ದ ಅವರು, ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಜನಪರ ಸೇವೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಕಿಮ್ಸನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಅವರು, ಅಲ್ಲಿಯೇ …

Read More »

ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಸಹೋದರ ನಿಧನ, ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ ಎಂ ಬಿ ಮುನೇನಕೊಪ್ಪ.!

ಹುಬ್ಬಳ್ಳಿ: ಸಹೃದಯಿಯಾಗಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ ಡಾ.ಮಲ್ಲನಗೌಡ ಪಾಟೀಲ ಮುನೇನಕೊಪ್ಪ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ನವಲಗುಂದ ಕ್ಷೇತ್ರದ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಹಿರಿಯ ಸಹೋದರರಾಗಿದ್ದ ಡಾ.ಮಲ್ಲನಗೌಡರು, ಕ್ಷೇತ್ರದಲ್ಲಿ ‘ಡಾಕ್ಟರ್ ಅಣ್ಣಾರ’ ಎಂದೇ ಗುರುತಿಸಿಕೊಂಡಿದ್ದರು. ಬಡವರ ಪರವಾದ ಮನಸ್ಥಿತಿ ಹೊಂದಿದ್ದ ಅವರು, ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಜನಪರ ಸೇವೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಕಿಮ್ಸನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಅವರು, ಅಲ್ಲಿಯೇ …

Read More »

ಹುಬ್ಬಳ್ಳಿಯಲ್ಲಿ ಕಾರು ಪಲ್ಟಿ, ಮೂವರು ದುರ್ಮರಣ, ಓರ್ವ ಮಹಿಳೆ ಸ್ಥಿತಿ ಗಂಭೀರ..!

ಹುಬ್ಬಳ್ಳಿ: ಕಾರು ಪಲ್ಟಿಯಾಗಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಗಣೇಶ ಹೋಟೆಲ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾಗಿದೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೋಹೆಲ್​(26) ಮತ್ತು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಎಚ್.ಕೆ. ಸುಶೀಲಾ (38) ಮೃತರು. ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ಮಂಗಳವಾರ ರಾತ್ರಿ ಹುಬ್ಬಳ್ಳಿ …

Read More »

ಶಾಲಾ ಆವರಣದಲ್ಲಿ ದುಶ್ಚಟ- ಬುದ್ದಿ ಹೇಳಿದವರ ಮೇಲೆಯೇ ಪುಂಡರಿಂದ ಹಲ್ಲೆಗೆ ಯತ್ನ

ಹುಬ್ಬಳ್ಳಿ : ಖಾಸಗಿ ಶಾಲೆಯ ಮೈದಾನದಲ್ಲಿ ದುಶ್ಚಟ ಮಾಡಬೇಡಿ ಅಂತ ಬುದ್ಧಿ ಹೇಳಿದಕ್ಕೆ ಶಿಕ್ಷಕರ ಮೇಲೆ ನಶೆಯಲ್ಲಿದ್ದ ಯುವಕರು ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿಯ ವಿವೇಕಾನಂದ ಸ್ಕೂಲ್‌ನಲ್ಲಿ ನಡೆದಿದೆ. ವಿವೇಕಾನಂದ ಶಾಲೆಯ ಮೈದಾನದಲ್ಲಿ ಕೆಲವು ಯುವಕರು ಹಲವು ದಿನಗಳಿಂದ ದುಶ್ಚಟವನ್ನು ಮಾಡುತ್ತಿದ್ದರು . ಈ ಹಿನ್ನೆಲೆಯಲ್ಲಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಶಿಕ್ಷಕರು ಬುದ್ಧಿವಾದ ಹೇಳಿದಕ್ಕೆ ಅವರ ಮೇಲೆಯೇ ನಶೆಯಲ್ಲಿದ್ದ ಯುವಕರು ಚೇರ್ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ …

Read More »

ಗಣೇಶನಗರದ ಜನರನ್ನು ಗಣಪತಿಯೇ ಕಾಯಬೇಕು: ರಸ್ತೆ ನೋಡ್ರಿ ಕೆಸರು ಗದ್ದೆ ಆಗಿದೆ ನೋಡ್ರಿ…!

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ಸಮಸ್ಯೆ ಹೇಗಾಗಿದೆ ಅಂದರೆ. ಕೆಸರಲ್ಲಾದರೂ ಹಾಕು, ಗುಂಡಿಯಲ್ಲಾದರೂ ಹಾಕು ಮೊದಲು ಮನೆಗೆ ಸಾಗಾಕು ಎಂಬುವಂತಾಗಿದೆ. ಯಾಕೆ ಅಂದರೆ ಈ ಕೆಸರು ತುಂಬಿದ ರಸ್ತೆಯಲ್ಲಿ ಬಿದ್ದು ಮೂಳೆ ಮುರಿದುಕೊಳ್ಳುವ ಮನೆ ಮುಟ್ಟಿಸು ಅಂತ ದೇವರಲ್ಲಿ ಪ್ರಾರ್ಥನೆ ಮಾಡುವಂತಾಗಿದೆ. ಸತತ ಮಳೆ ಹಿನ್ನೆಲೆ ಕೆಸರು ಗದ್ದೆಯಂತಾದ ಗಣೇಶ್ ನಗರದ ರಸ್ತೆಗಳು. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಹಿಂಬದಿಯಲ್ಲಿರುವ ಗಣೇಶ ನಗರ. ಹೌದು.. ಗಣೇಶ ನಗರದ ಬಹುತೇಕ ರಸ್ತೆಗಳಲ್ಲಿ …

Read More »

ಮಳೆಯಿಂದ ಹರಿಯುತ್ತಿದೆ ಕಣ್ಣೀರು: ಓ ಮೇಘರಾಜನೇ ಕಣ್ಣು ತೆರೆದು ನೋಡು ವೃದ್ಧರ ಜೀವನದ ಜಂಜಾಟ

ಹುಬ್ಬಳ್ಳಿ: ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎಂಬುವಂತ ಹಾಡು ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಬಿಡದೇ ಸುರಿಯುವ ಮಳೆಯಿಂದ ಕಣ್ಣೀರಿನ ಕೊಡಿ ಮಾತ್ರ ಹರಿಯುತ್ತಿದೆ. ತಾವೇ ದುಡಿದು ತಿನ್ನುವ ವೃದ್ಧ ಜೀವಗಳಿಗೆ ಈ ಮಳೆಯು ನರಕಯಾತನೆ ಉಂಟು ಮಾಡಿದೆ. ಅಷ್ಟಕ್ಕೂ ಏನಿದು ಮಳೆ ಹನಿಯ ಕಣ್ಣೀರ ಕಹಾನಿ ಅಂತೀರಾ ಈ ಸ್ಟೋರಿ ನೋಡಿ… ನೀರಿನಲ್ಲಿ ನಿಂತಿರುವ ಮಡಿಕೆ ಕುಡಿಕೆಗಳು. ಈಗಲೋ ಆಗಲೋ ಕರಗಿ ನೀರಾಗುವ ಮಣ್ಣಿನ ಉಪಕರಣಗಳು. …

Read More »

ಇಲ್ಲದವರ ಹೊಟ್ಟೆಗೆ ಈದ್ಗಾ ವಿವಾದದ ಕೊಡಲೆ ಪೆಟ್ಟು: ಪಾರ್ಕಿಂಗ್ ಇಲ್ಲ ದುಡಿಮೆಯೂ ಇಲ್ಲ…!

ಹುಬ್ಬಳ್ಳಿ: ಅದು ಸಾಕಷ್ಟು ವಿವಾದ ಸೃಷ್ಟಿಸಿದ್ದ ಮೈದಾನ. ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಸದ್ದು ಮಾಡಿದ್ದ ಆ ಒಂದು ಮೈದಾನ ಈಗ ನೂರಾರು ಕುಟುಂಬದ ಕಣ್ಣೀರಿಗೆ ಕಾರಣವಾಗಿದೆ. ಅಷ್ಟಕ್ಕೂ ಯಾವುದು ಆ ಮೈದಾನ ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ ನೋಡಿ.. ಹೀಗೆ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿಕೊಂಡ ವಾಹನ ಚಾಲಕರು ಹಾಗೂ ಮಾಲೀಕರು. ಮೊದಲಿದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕೋರುತ್ತಿರುವ ಸಾರಥಿಗಳು. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, …

Read More »

ಕ್ಯೂಆರ್‌ ಕೋಡ್‌ ಕಳುಹಿಸಿ ₹8.98 ಲಕ್ಷ ವಂಚನೆ

ಹುಬ್ಬಳ್ಳಿ: ಮೀಸೋ ಆ್ಯಪ್‌ನಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ಲಿಂಗರಾಜ ನಗರದ ಲಕ್ಷ್ಮಿಬಾಯಿ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.98 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಮೀಸೋ ಆ್ಯಪ್‌ನಲ್ಲಿ ಲಕ್ಷ್ಮಿಬಾಯಿ ತರಕಾರಿ ಖರೀದಿಸುತ್ತಿದ್ದರು. ಅಲ್ಲಿಂದ ಅವರ ಮಾಹಿತಿ ಪಡೆದ ವಂಚಕ, ಆ್ಯಪ್‌ನಿಂದ ₹12 ಲಕ್ಷ ಲಕ್ಕಿ ಡ್ರಾ ಬಂದಿದ್ದು, ಖಾತೆಗೆ ವರ್ಗಾಯಿಸಲು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ನಂತರ, ಅವರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿ ಸ್ಕ್ಯಾನ್‌ ಮಾಡುವಂತೆ …

Read More »

ಹಾಡಹಗಲೇ ಬಂಗಾರದ ಅಂಗಡಿಗೆ ಕನ್ನ;ಬೆಚ್ಚಿ ಬಿದ್ದ ಕುಸುಗಲ್ ಜನತೆ!

ಹುಬ್ಬಳ್ಳಿ- ಹಾಡಹಗಲೇ ಬಂಗಾರದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಕಳ್ಳತನಕ್ಕೆ ಯತ್ನಿಸಿದ ದೃಶ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸಗಲ್ ಗ್ರಾಮದ ಪಂಚಾಯತಿ ಹತ್ತಿರ ನಡೆದಿದೆ. ಹೌದು,,, ಇತ್ತೀಚಿನ ದಿನಗಳಲ್ಲಿ ಕುಸಗಲ್ ಗ್ರಾಮದಲ್ಲಿ ಕಳ್ಳತನ ಹಾವಳಿ ಹೆಚ್ಚಾಗಿದೆ. ಕುಸಗಲ್ ಗ್ರಾಮದಲ್ಲಿ ಗುರುನಾಥ ಕಮ್ಮಾರ ಎಂಬುವವರಿಗೆ ಸೇರಿದ ಈ ಬಂಗಾರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಗಲ್ಲೆಗೆ ಕೈ ಹಾಕಿ ಕಳ್ಳತನಕ್ಕೆ ಯತ್ನ ಮಾಡಿರುವ ಸಿಸಿ ಕ್ಯಾಮರಾದಲ್ಲಿ …

Read More »