Breaking News

ಮಕರ ಸಂಕ್ರಾಂತಿ ಗಾಳಿ ಪಟದ ಮಾಂಜಾಗೆ ಬೈಕ್‌ ಸವಾರ ಬಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ

ಮಕರ ಸಂಕ್ರಾಂತಿ ನಿಮಿತ್ತ ಗಾಳಿ ಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೊಗುತ್ತಿದ್ದ ಯುವಕ ಗಾಳಿ ಪಟದ ಮಾಂಜಾ (ಚೀನಿ ಮಾಂಜಾ)ಕ್ಕೆ ಸಿಲುಕಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಈ ಮೃತ ದುರ್ದೈವಿಯನ್ನು ಸಂಜಿಕುಮಾರ್ ಎಂದು ಗುರುತಿಸಲಾಗಿದೆ.ಬೀದರ್ ತಾಲ್ಲೂಕಿನ ಬೊಂಬಳಗಿ ಗ್ರಾಮದ ಯುವಕ ಸಂಜಿವಕುಮಾರ್ ಬೈಕ್ ಮೇಲೆ ಹೋಗುವಾಗ ಗಾಳಿ ಪಟದ ಮಾಂಜಾ‌ ದಾರ ಕಾಣಿಸದೆ‌ ನೇರವಾಗಿ ಅವರ ಕುತ್ತಿಗೆ ಸಿಲುಕಿದೆ. ಮಾಂಜಾ ಸಿಲುಕಿದ ರಭಸಕ್ಕೆ ಬೈಕ್ ಮೇಲಿಂದ ಬಿದ್ದ ಯುವಕ ಸಂಕ್ರಾಂತಿ ಯಂದೆ ಸಾವಿನ ಮನೆಯ ಕದ ತಟ್ಟಿದ್ದಾನೆ.ಗಾಳಿಪಟ ಹಾರಿಸಲು ಚೀನಿ ಮಾಂಜಾ ಬಳಸುತ್ತಿದ್ದರಿಂದ ಕುತ್ತಿಗೆಗೆ ಮಾಂಜಾ ಸಿಲುಕಿದೊಡನೆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ‌ ಕುರಿತು ಮನ್ನಾಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲ ಬೀರುವಂತೆ ಗಾಳಿ ಪಟ ಹಾರಿಸುವುದು ಕೂಡ ಸಂಪ್ರದಾಯ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲು ಸಂಕ್ರಾಂತಿ ಸಂದರ್ಭದಲ್ಲಿ ಬೈಕ್ ಮೇಲೆ ಹೊರ ಹೋಗುವಾಗ ಎಚ್ಚರಿಕೆ ಕೈಗೊಳ್ಳುವುದು ಅಗತ್ಯ. ಇಲ್ಲವಾದರೆ ಗಾಳಿ‌ಪಟದ ಸೂತ್ರದ ದಾರ ಸಾವಿನ ದಾರವಾಗಲೂಬಹುದು.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *