BigTv News
September 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಮ್ಮ ಜೊತೆಗೆ ಆತ್ಮೀಯವಾದ ಸಂಬಂಧ ಇತ್ತು. ನೇರವಾಗಿ ಮಾತನಾಡುವಂತ ವ್ಯಕ್ತಿತ್ವ ಅವರದ್ದು. ಮನಸ್ಸಿಗೆ ಬಂದಂತೆ, ಸ್ಪಷ್ಟವಾಗಿ ಹೇಳುವಂತ ವ್ಯಕ್ತಿ ಅವರು ಎಂದು ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿ ಬಗ್ಗೆ ಕನಸುಗಳನ್ನು ಕಂಡವರು ಅವರು. ಅವರ ಅಗಲಿಕೆ ರಾಜ್ಯಕ್ಕೆ ಬಹಳಷ್ಟು ನಷ್ಟವಾಗಿದೆ. ಅವರು ಸಾವು ನಮಗೆ ನೋವು ತಂದಿದೆ ಎಂದರು. …
Read More »
BigTv News
September 5, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಪಟಾಕಿ ಹಚ್ಚುತ್ತಿದ್ದ ವೇಳೆಯಲ್ಲಿ ಪಟಾಕಿಯೊಂದು ಆಕಸ್ಮಿಕವಾಗಿ ಯುವಕನ ಎದೆಗೆ ತಾಗಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಈಗಷ್ಟೇ ನಡೆದಿದೆ . ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಕಳಿಸುವಾಗ ಹಚ್ಚಿದ ಪಟಾಕಿ ಮಂಜುನಾಥ ಎಂಬ ಯುವಕನ ಎದೆಗೆ ತಾಗಿದ ಪರಿಣಾಮ ತೀವ್ರವಾಗಿ ಅಶ್ವಸ್ಥನಾಗಿದ್ದಾನೆ . ಕೂಡಲೇ ಮಂಜುನಾಥನನ್ನು ಕುಂದಗೋಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ …
Read More »
BigTv News
September 4, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅರವಿಂದ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಪ್ರಕರಣ ಕುರಿತಂತೆ ಅವರ ಜೊತೆ ನಾನು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ನಾನೂ ಊರಲ್ಲಿ ಇರಲಿಲ್ಲ, ಈ ಕುರಿತು ಅರವಿಂದ ಲಿಂಬಾವಳಿಯವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು. ಸಿಇಟಿ 50-50 ಜಾರಿಗೆ ತರುವ ಮುನ್ನ ಸರಿಯಾಗಿ ಅಧ್ಯಯನ ಮಾಡುತ್ತೇವೆ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೆವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ …
Read More »
BigTv News
September 4, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ;ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಬಳಿ ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಇಂದು ಪತ್ತೆಯಾಗಿದೆ. ತಡಹಾಳ ಗ್ರಾಮದ ಸದಾನಂದ ಮಾದರ (32) ಎಂಬಾತ ಕಳೆದ ಶುಕ್ರವಾರ ಬೈಕ್ ನಲ್ಲಿ ಹಳ್ಳ ದಾಟಲು ಹೋದಾಗ ನಡೆದ ಘಟನೆ ನಡೆದಿತ್ತು. ಬೈಕ್ ಸಮೇತ ಕೊಚ್ಚಿ ಹೋಗಿದ್ದ ಸದಾನಂದ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ನಿರಂತರ ಕಾರ್ಯಾಚರಣೆ ಆರಂಭಿಸಿದ್ದ ಎನ್ ಡಿ ಆರ್ ಎಫ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿತ್ತು. …
Read More »
BigTv News
September 3, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸರ್ಕಾರ ಅನೇಕ ಯೋಜನೆಗಳನ್ನು ಜನರಿಗೆ ಸದುಪಯೋಗವಾಗಲಿ ಅಂತಾ ಜಾರಿಗೆ ತರುತ್ತಾರೆ ಆದರೆ ಅದರಲ್ಲಿ ಅಧಿಕಾರಿಗಳು ಹಾಗೂ ಕೇಲ ಜನಪ್ರತಿನಿಧಿಗಳು ಸೇರಿಕೊಂಡು ಆ ಇಡೀ ಯೋಜನೆ ಯಾವುದೇ ರೀತಿಯ ಉಪಯೋಗಕ್ಕೆ ಬಾರದೇ ಹಾಳಾಗುವಂತೆ ಮಾಡುವ ಅನೇಕ ಉದಾಹರಣೆಗಳಲ್ಲಿ ಇದು ಒಂದು. ರಾಜ್ಯ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಅಮೃತ ಸರೋವರ ಯೋಜನೆ ಮೂಲಕ ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಪ್ರತಿ ಕೆರೆಗೆ 39 ಲಕ್ಷ ರೂ. …
Read More »
BigTv News
September 3, 2022
Breaking News, ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಮನನೊಂದ ಯುವಕನೊಬ್ಬ ತನ್ನ ಕುತ್ತಿಗೆಗೆ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದಿದೆ.ಗಿರಣಿಚಾಳದ ನಿರೂಪಾದಿ ಬಂಡಾರಿ ಎಂಬ ಯುವಕ ತನ್ನ ಮನೆಯಲ್ಲಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮನೆಯ ಅಕ್ಕಪಕ್ಕದವರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಒಂದೇ ಬೈಕನಲ್ಲಿ ತನ್ನ ಸ್ನೇಹಿತನ ಜೊತೆಗೆ ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡಿದ್ದಾನೆ ಹಾಗೂ ಮದುವೆಗೆ ಹೆಣ್ಣು ಸಿಕ್ಕಿಲ್ಲ …
Read More »
BigTv News
September 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಮೂರು ದಿನಗಳವರೆಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಪೊಲೀಸರ ಸರ್ಪಗಾವಲಿನಲ್ಲಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು. ನಗರದ ಈದ್ಗಾ ಮೈದಾನದಿಂದ ಬೆ.11.30 ರ ಸುಮಾರಿಗೆ ನೂರಾರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಮೂರ್ತಿ ಮೆರವಣಿಗೆ ಆರಂಭವಾಯಿತು. ಅದ್ದೂರಿಯಾಗಿ ವಿಸರ್ಜನಾ ಮೆರವಣಿಗೆ ಮೂಲಕ ಚೆನ್ನಮ್ಮ ವೃತ್ತ ಮಾರ್ಗವಾಗಿ ಯಾವುದೇ ಪಾಶ್ಚಾತ್ಯ ಸಂಸ್ಕೃತಿ ವಾದ್ಯಗಳಿಗೆ ಮಾರು ಹೋಗದೇ, ಕೇವಲ ದೇಶಿಯ ಹಿಂದೂ …
Read More »
BigTv News
September 1, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಈದ್ಗಾ ಮೈದಾನ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಹು-ಧಾ ಮಹಾನಗರ ಪಾಲಿಕೆ ತೆರೆ ಎಳೆದಿದ್ದು, ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ತೆರವುಗೊಳಿಸುವ ಮೂಲಕ ವಿವಾದಕ್ಕೆ ಬ್ರೇಕ್ ಹಾಕಿದೆ. ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಗಣೇಶ ಮೂರ್ತಿ ಹಿಂದುಗಡೆ ಹಾಕಿದ್ದ ಫ್ಲೆಕ್ಸ್ ತೆರವು ಮಾಡಿದ್ದು, ಮುಂದಿನ ದಿನಗಳಲ್ಲಿ ಅನುಮತಿಗೆ ತೊಂದರೆ ಆಗಬಹುದು ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೊನೆಗೂ ಗಣೇಶ ಪೆಂಡಾಲ್ ನಲ್ಲಿದ್ದ ಸಾವರ್ಕರ್ ಫೋಟೋ ತೆರವು ಮಾಡಿದ್ದಾರೆ. ನಿನ್ನೆಯಷ್ಟೇ …
Read More »
BigTv News
August 29, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಗಣೇಶ ಚತುರ್ಥಿ ಅಂಗವಾಗಿ ಹುಧಾ ಪೊಲೀಸ್ ಕಮಿಷನರೇಟ್ ಘಟಕದ ಸಿಬ್ಬಂದಿ ನಗರದ ವಿವಿಧೆಡೆ ಪಥಸಂಚಲನ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಪಥಸಂಚಲನದಲ್ಲಿ ಪೋಲಿಸ್ ಹಲವು ತುಕಡಿಗಳು ಶಿಸ್ತು ಬದ್ದವಾಗಿ ನಡೆದು ಸಾರ್ವಜನಿಕರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಟ್ಟಿನಲ್ಲಿ ಜಾಗೃತಿ ನಡಿಗೆ ನಡೆದರು. ಇದರೊಂದಿಗೆ ನಗರದ ನಾಗರಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ ಮಾಡಿದರು. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಪಥಸಂಚಲನ ಚನ್ನಮ್ಮ ವೃತ್ತದಿಂದ ಆರಂಭವಾಗಿ, ಈದ್ಗಾ ಮೈದಾನ, …
Read More »
BigTv News
August 29, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಏಕಾಏಕಿಯಾಗಿ ತುಂಬಿ ಬಂದ ಬೆಣ್ಣೆ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡ 25 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದ ಸುತ್ತಮುತ್ತ ಅತೀ ಹೆಚ್ಚು ಮಳಯಾದ ಪರಿಣಾಮ ಬೆಣ್ಣೆ ಹಳ್ಳ ತುಂಬಿ ಬಂದಿದೆ. ಕೃಷಿ ಕೆಲಸಕ್ಕೆ ತೆರಳಿದ್ದ 25 ಕ್ಕೂ ಹೆಚ್ಚು ಜನ ಸಿಲುಕಿಕೊಂಡಿದ್ದರು.ವಿಷಯ ತಿಳಿಯುತ್ತಿದಂತೆ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ ಪ್ರಕಾಶ ನಾಶಿ …
Read More »