BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಆಯುರ್ವೇದ ಶಲ್ಯ, ಶಾಲಕ್ಯ ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆರೋಗ್ಯ ಭಾರತಿ ಕರ್ನಾಟಕ ವತಿಯಿಂದ ಮೇ.14&15 ರಂದು ಹುಬ್ಬಳ್ಳಿಯ ಹೆಗ್ಗೇರಿಯಲ್ಲಿನ ಆಯುರ್ವೇದ ಮಹಾವಿದ್ಯಾಲಯದ ವೈದ್ಯ ಗುರು ಹಲಸಿಕರ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, …
Read More »
BigTv News
May 10, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ರ ಗಾಮನಗಟ್ಟೆ ಚೆಕ್ ಡ್ಯಾಮ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು . ಈ ಸಂದರ್ಭದಲ್ಲಿ , ಪಾಲಿಕೆ ಸದಸ್ಯರಾದ ಶ್ರೀ ಚಂದ್ರಶೇಖರ್ ಮುನಗುಂಡಿ , ಶ್ರೀಮತಿ ಜ್ಯೋತಿ ಪಾಟೀಲ್ , ಹಿರಿಯ ಮುಖಂಡರಾದ ಶ್ರೀ ಈಶ್ವರ್ ಮಾಳಣ್ಣನವರ್ , ಶ್ರೀ ಕರಿಯಪ್ಪ ಅವರಾಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .
Read More »
BigTv News
May 10, 2022
Breaking News, ಬೆಂಗಳೂರು, ಹುಬ್ಬಳ್ಳಿ
ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ, ಮೇ 14ರ ವರೆಗೆ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ನೆರೆಯ ರಾಜ್ಯಗಳಂತೆ ಭಾರೀ ಮಳೆಯಾಗದು ಎಂದು ಇಲಾಖೆ ತಿಳಿಸಿದೆ. ಒಂದು ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು, ಚಂಡಮಾರುತದ ಪರಿಣಾಮ ದಿಂದ …
Read More »
admin
May 9, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ರಾಜ್ಯಾದ್ಯಂತ ಇಂದು ಶ್ರೀರಾಮ್ ಸೇನೆ ಕೈಗೊಂಡಿರುವ ಸುಪ್ರಭಾತ ಅಭಿಯಾನವನ್ನ ಸ್ವಾಗತಿಸುವೆ ಆದರೆ ಒಂದು ಧರ್ಮದ ವಿರುದ್ಧ ಸುಪ್ರಭಾತ ಹಚ್ಚುತ್ತಿರುವುದು ತಪ್ಪು ಎಂದು ಕಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ಹೇಳಿದರು. ನಗರದಲ್ಲಿ ಇಂದು ಮಾತನಾಡಿದ ಅವರು ದೇವನೊಬ್ಬ ನಾಮ ಹಲವು, ಧರ್ಮ ದಿಂದ ವಿಶ್ವಕ್ಕೆ ಶಾಂತಿ ಸಿಗಲಿ . ಧರ್ಮ ಧರ್ಮಗಳ ನಡುವೆ ಒಡಕನ್ನು ಉಂಟುಮಾಡಬಾರದು ಎಂದರು. ನಾವು ಧರ್ಮ ಆಚರಣೆ ಮಾಡುವಾಗ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸ ಓದುವುದು …
Read More »
admin
May 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಹುಬ್ಬಳ್ಳಿಯ ಬೈಪಾಸಿನ ಕಾಮಾಗಾರಿ ನೋಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖುಷಿ ಪಟ್ಟರು.ಶಂಕರಪಾಟೀಲ ಮುನೇನಕೊಪ್ಪರವರ ವಿವಿಧ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಇಂದು ಹುಬ್ಬಳ್ಳಿಯ ವರ್ತುಲ ರಸ್ತೆಯ ಮುಖಾಂತರ ಹುಬ್ಬಳ್ಳಿಗೆ ಆಗಮಿಸುವ ಸಂದರ್ಭದಲ್ಲಿ , ಸಚಿವರು ಅನುಮೋದನೆ ಪಡೆದುಕೊಂಡು ತಂದ ಯೋಜನೆಯಲ್ಲಿ ಸಂಚರಿಸಿ ಸಂತೋಷ ಪಟ್ಟರು .
Read More »
admin
May 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಬೆಂಗೇರಿಯ ನೂತನ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಹಿರಿಯ ನಾಗರಿಕರ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗವಹಿಸಿ , ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎ. ಪಾಟೀಲ್ , ಶ್ರೀ ಮಹೇಂದ್ರ ಸಿಂಘ , ಶ್ರೀ ಮಲ್ಲಿಕಾರ್ಜುನ ಸಾವಕಾರ …
Read More »
admin
May 8, 2022
News, ಹುಬ್ಬಳ್ಳಿ
ಹುಬ್ಬಳ್ಳಿ : ನವನಗರದ ಮೈತ್ರಿ ಆಶ್ರಮದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗದ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆ ಆಚರಿಸಲಾಯಿತು.. ತಾಯಂದಿರ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಪಾದಗಳಿಗೆ ಹೂ ಏರಿಸಿ ಹಾಗೆ ಉದಿನಕಡ್ಡಿ ಬೆಳಗಿ ನಂತರ ಆಶೀರ್ವಾದ ಪಡೆದು ಹಾಗೆ ಸಿಹಿ ತಿನ್ನಿಸುವ ಮೂಲಕ ವಿಶ್ವತಾಯಂದಿರ ದಿನಾಚರಣೆ ಆಚರಿಸಲಾಯಿತು..ಇದಲ್ಲದೆ ಕೇಕ್ ಕತ್ತರಿಸಿ ತಾಯಂದಿರಿಗೆ ಡ್ಯಾನ್ಸ ಮಾಡಿಸುವ ಮೂಲಕ ತಾಯಂದಿರ ಮುಖದಲ್ಲಿ ಸಂತೋಷ ಕಂಡರು..ಶಂಕರಗೌಡ ಪಾಟೀಲ, ಮಹಾಂತೇಶ ವಾಲೀಕರ , …
Read More »
admin
May 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ಹು – ಧಾ ಮಹಾನಗರ ಜಿಲ್ಲಾ ಕಾರ್ಯಕರಣಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗವಹಿಸಿ , ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಅರವಿಂದ ಬೆಲ್ಲದ್ , ಪ್ರದೀಪ್ ಶೆಟ್ಟರ್ , ನಾಗೇಶ್ ಕಲಬುರಗಿ , ಸಂಜಯ ಕಪಟಕರ್ , ತಿಪ್ಪಣ್ಣ ಮಜ್ಜಗಿ , ದತ್ತಮೂರ್ತಿ ಕುಲಕರ್ಣಿ , ವೀರಭದ್ರಪ್ಪ ಹಾಲರವಿ , ಶ್ರೀಮತಿ ಸೀಮಾ ಮಸೂತಿ , …
Read More »
admin
May 8, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ ಹಾಗೂ ಗ್ರಾಮ ದೇವತೆಯರ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು . ಈ ಸಂದರ್ಭದಲ್ಲಿ ಪ ಪೂ . ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು , ಪ.ಪೂ. ಶ್ರೀ ಬಸವಾನಂದ ಮಹಾಸ್ವಾಮಿಗಳು ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು .
Read More »
admin
May 7, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕಾಂಗ್ರೆಸ್ಸಿನವರೇ ತನಿಖಾ ಸಂಸ್ಥೆಗಳಿಂದ ತನಿಖೆ ಬೇಡ ನ್ಯಾಯಂಗ ತನಿಖೆ ಬೇಕು ಎನ್ನುತ್ತಿದ್ದಾರೆ. ಇದರಿಂದ ಅವರು ಕೂಡ ಸಕ್ರೀಯವಾಗಿ ಭಾಗವಹಿಸಿರುವುದು ಗೊತ್ತಾಗುತ್ತದೆ. ನ್ಯಾಯಂಗ ತನಿಖೆಯಾದರೇ ಯಾರು ಜೈಲಿಗೆ ಹೋಗಲ್ಲ ಸುಮ್ಮನೆ ಎಲ್ಲರೂ ಕಾಲಹರಣ ಮಾಡಿದ್ರಾಯಿತು ಅಂತ ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಿಎಸ್ಐ ಅವ್ಯವಹಾರದ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ನಗರದಲ್ಲಿಂದು ಬಿಜೆಪಿ ಕಾರ್ಯಕಾರಣಿ ಸಭೆಗೆ ಆಗಮಿಸಿದ ವೇಳೆಯಲ್ಲಿ …
Read More »