Breaking News

Breaking News

ರೀಲ್ಸ್​​ ನೋಡಬೇಡ..! ಅಮ್ಮನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಮಗಳು!

ಧಾರವಾಡ: ರೀಲ್ಸ್ ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಮೇಘಾ ಗೂಬ್ಬನ್ನವರ್ ಎಂದು ಗುರುತಿಸಲಾಗಿದೆ. ಮೇಘಾ ಖಾಸಗಿ ಕಾಲೇಜಿನಲ್ಲಿ ಡಿಎಡ್ ವ್ಯಾಸಂಗ ಮಾಡುತ್ತಿದ್ದಳು. ಮೊಬೈಲ್‌ನಲ್ಲಿ ದಿನವಿಡೀ ರೀಲ್ಸ್ ನೋಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಆಕೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು …

Read More »

ಫೇಸ್ ಬುಕ್ ನಲ್ಲಿ ಬಂದ ಹೂಡಿಕೆ ಮಾಹಿತಿ ನಂಬಿ 28 ಲಕ್ಷಕ್ಕೂ ಕಳೆದುಕೊಂಡ ಮೈಸೂರಿಗರು

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಬಂದ ಹೂಡಿಕೆ ಜಾಹೀರಾತುಗಳನ್ನು ನಂಬಿದ ನಗರದ ಇಬ್ಬರು ನಿವಾಸಿಗಳು ಅಪಾರ ಲಾಭದ ಆಸೆಯಿಂದ ₹28.23 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಜೆ.ಪಿ.ನಗರದ 72 ವರ್ಷದ ರಾಜೇಶ್‌ ಅವರು ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಹರಿದಾಡಿದ ನಕಲಿ ಹೂಡಿಕೆ ವಿಡಿಯೊ ನಂಬಿ ₹12.93 ಲಕ್ಷ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ₹65 ಸಾವಿರ ವಾಪಸ್‌ ಬಂದಿದ್ದು, ಬಳಿಕ ಹಣ ಪಡೆಯಲು ಮತ್ತಷ್ಟು ಠೇವಣಿ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ …

Read More »

ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್​ ವಶಕ್ಕೆ

ಕಲಬುರಗಿ: ಪಾಕಿಸ್ತಾನ ಹಾಗೂ ಐಸಿಸ್‌ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಎಟಿಎಸ್‌ ತಂಡ ಇಬ್ಬರು ಶಂಕಿತರನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದಿದೆ. ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಹಾಗೂ ಸಲ್ಮಾನ್‌ ಅವರನ್ನು ಮಾಲಗತ್ತಿ ಮತ್ತು ಉಪಳಾಂವ್‌ ಗ್ರಾಮದ ಹೊರವಲಯದಲ್ಲಿ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಬೀಫ್‌ ರಫ್ತು ಮಾಡುವ ಫೇರ್ ಎಕ್ಸ್‌ಪೋರ್ಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವಾಟ್ಸಾಪ್‌ ಕರೆ ಹಾಗೂ ಫೇಸ್‌ಬುಕ್‌ ಮೂಲಕ …

Read More »

8 ಲಕ್ಷ ರೂ. ಲಾಟರಿ ಹೊಡೆದಿದೆ ಎಂದು ನಂಬಿಸಿ ಮಹಿಳೆಗೆ 2.34 ಲಕ್ಷ ವಂಚನೆ

ಚಿಕ್ಕಮಗಳೂರು, ಆ.13- ಕೇರಳ ಲಾಟರಿಯಲ್ಲಿ ₹8 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ₹2.34 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸೀಮಾ ಬಾನು ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿ, ಪ್ರೊಸೆಸಿಂಗ್‌ ಶುಲ್ಕ, ಜಿಎಸ್‌ಟಿ, ಟಿಡಿಎಸ್‌ ಹಾಗೂ ಆರ್‌ಬಿಐ ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಸೀಮಾ ಬಾನು ಒಟ್ಟು ₹2,34,200 …

Read More »

ಕೇವಲ ₹20 ವಿದ್ಯುತ್ ಬಿಲ್ ಪಾವತಿಸಲು ಹೋಗಿ ₹1.99 ಲಕ್ಷ ಕಳೆದುಕೊಂಡ 71 ವರ್ಷದ ವ್ಯಕ್ತಿ!

ಬೆಂಗಳೂರು: ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸಂದೇಶ ನಂಬಿ ನಕಲಿ ಆಯಪ್ ಡೌನ್‌ಲೋಡ್ ಮಾಡಿದ ಬಳಿಕ ಅವರ ಎಸ್‌ಬಿಐ ಖಾತೆಯಿಂದ ಅನಧಿಕೃತ ವಹಿವಾಟು ನಡೆದಿದೆ. ವಂಚನೆ ಗೊತ್ತಾದ ತಕ್ಷಣ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ, ಎಸ್‌ಬಿಐ ₹1.99 ಲಕ್ಷ ಮರುಪಾವತಿಸಲು ನಿರಾಕರಿಸಿತ್ತು. ಗ್ರಾಹಕ ಆಯೋಗಗಳು …

Read More »

ಯಲಹಂಕ ಭಾಗದಲ್ಲಿ ನಕಲಿ ನೋಟುಗಳ ಹಾವಳಿ

ಯಲಹಂಕ: ರಾಜಾನುಕುಂಟೆ ಹಾಗೂ ದೊಡ್ಡಬಳ್ಳಾಪುರ ಭಾಗದಲ್ಲಿ ₹100 ಮತ್ತು ₹500 ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪೆಟ್ರೋಲ್‌ ಬಂಕ್‌, ತರಕಾರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ನಕಲಿ ನೋಟು ಚಲಾವಣೆಯಾಗುತ್ತಿದೆ. ವಹಿವಾಟಿನ ವೇಳೆ ಅಸಲಿ ನೋಟಿನಂತೆ ಕಂಡುಬರುವುದರಿಂದ ವ್ಯಾಪಾರಿಗಳಿಗೆ ತಕ್ಷಣ ಗುರುತಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗೆ ಹಣ ಠೇವಣಿ ಮಾಡುವಾಗ ನಕಲಿ ನೋಟು ಎಂಬುದು ಪತ್ತೆಯಾಗುತ್ತಿದ್ದು, ಇದರಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ನಕಲಿ ನೋಟುಗಳು …

Read More »

ಕರ್ನಾಟಕ ಬಂದ್‌ಗೆ ಕರೆ: ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

ಬೆಂಗಳೂರು: ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಿಂದ ಹೊರಬರುತ್ತಿದ್ದ ವೇಳೆ ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಜೆಸ್ಟಿಕ್‌ಗೆ ತೆರಳಿ ಪ್ರತಿಭಟನೆ ನಡೆಸಲು ಅವರು ಸಜ್ಜಾಗಿದ್ದರು. ಬಾಯಿಗೆ ಟೇಪ್ ಅಂಟಿಸಿಕೊಂಡು ಮೌನ ಪ್ರತಿಭಟನೆ ನಡೆಸಲು ವಾಟಾಳ್ ನಾಗರಾಜ್ ಸಿದ್ಧರಾಗಿದ್ದರು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಆ.13ರಂದು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಂಗಳೂರು …

Read More »

ತಂದೆಯನ್ನೇ ಕೊಂದು ಮೃತದೇಹ ಬಾವಿಗೆ ಎಸೆದ ಪುತ್ರ

ಶಿವಮೊಗ್ಗ: ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಗೊರಗೋಡು ಗ್ರಾಮದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿ, ಮೃತದೇಹವನ್ನು ಬಾವಿಗೆ ಎಸೆದಿರುವ ಘಟನೆ ನಡೆದಿದೆ. ಸುಬ್ರಾಯ (55) ಮೃತರು. ಮಗ ಜಯಂತ್‌ ಆರೋಪಿಯಾಗಿದ್ದು, ಜಗಳದ ವೇಳೆ ಕೈ ಹಾಗೂ ಕೋಲಿನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಸುಬ್ರಾಯ ಅವರು 2010ರಲ್ಲಿ ತನ್ನ ತಂದೆ ಹಾಗೂ ತಂಗಿಯನ್ನು ಕೊಲೆ ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿಸಿ 2023ರಲ್ಲಿ ಬಿಡುಗಡೆಯಾಗಿದ್ದರು. ಬಳಿಕ ಪತ್ನಿಯನ್ನು ಕೊಲೆ …

Read More »

ಪಿಗ್ಮಿ ಏಜೆಂಟ್ ಕೊಲೆ ಪ್ರಕರಣ, ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ವಿಜಯಪುರ: ಪಿಗ್ಮಿ ಏಜೆಂಟ್‌ ಶರಣಬಸಪ್ಪ ಮಲ್ಲೇಶಪ್ಪ ಜೇವರ್ಗಿ (43) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆ.7ರಂದು ಮುಬಾರಕ್‌ ಚೌಕ್‌ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶರಣಬಸಪ್ಪ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸರ್ಫರಾಜ್‌ ಸಿಕಂದರ್‌ ಶೇಖ (35) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅನೈತಿಕ …

Read More »

ಬೀದರ್‌ನ SBI ಎಟಿಎಂ ಲೂಟಿ: ಬಿಹಾರದಲ್ಲಿ ದರೋಡೆಕೋರರ ಸೆರೆ; ಪಟಾಕಿ ಸಿಡಿಸಿ ಸಂಭ್ರಮ

ಬೀದರ್‌: ನಗರದ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣವನ್ನು ಬೀದರ್‌ ಜಿಲ್ಲಾ ಪೊಲೀಸರು 20 ತಿಂಗಳ ಬಳಿಕ ಭೇದಿಸಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ದಾಮೋದರ್‌ ಗ್ರಾಮದಲ್ಲಿ ಅಮನ್‌ಕುಮಾರ್‌ ಸಿಂಗ್‌ ಹಾಗೂ ಅಲೋಕ್‌ ಕುಮಾರ್‌ ಎಂಬ ಆರೋಪಿಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಎಸ್‌ಪಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ 20 ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 2025ರ ಜನವರಿ …

Read More »