BigTv News
August 8, 2026
Breaking News
ಹಾವೇರಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಅಣ್ಣನನ್ನು ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾನಗಲ್‌ನಲ್ಲಿ ನಡೆದಿದೆ. ಸಂತೋಷ್ ಮುರೇಗಪ್ಪ (30) ಕೊಲೆಯಾದವರು. ಅವರ ತಮ್ಮ ಕುಮಾರ್ (27) ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಹಾಗೂ ಕುಮಾರ್ ನಡುವೆ 1 ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ಕೆಲ ದಿನಗಳಿಂದ ಗಲಾಟೆ ನಡೆಯುತ್ತಿತ್ತು. ಸಂತೋಷ್ ಊರಿಗೆ ಬಂದಾಗ ಇದೇ ವಿಚಾರಕ್ಕೆ ಮತ್ತೆ …
Read More »
BigTv News
August 8, 2026
Breaking News
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಐಟಿ ಉದ್ಯೋಗಿಗಳ ಮೇಲೆ ವ್ಯಕ್ತಿಯೊಬ್ಬ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಂತ್ರಸ್ತರಾದ ಸಂದೀಪ್ ಮತ್ತು ಪ್ರಶಾಂತ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಆರೋಪಿ ಅರುಣ್ ಎಸ್‌ಯುವಿ ನಿಲ್ಲಿಸಿ ಅವರನ್ನು ತಡೆದು, ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿದ್ದಾನೆ. ಇಬ್ಬರೂ ತಾವು ಭಾರತೀಯರು ಎಂದು ಉತ್ತರಿಸಿದರೂ, ಆರೋಪಿ ಐಡಿ ಕಾರ್ಡ್ ತೋರಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಅವರು ಪ್ರಶ್ನಿಸಿದಾಗ, ಅರುಣ್ ಬ್ಯಾಟ್‌ನಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ …
Read More »
BigTv News
August 8, 2026
Breaking News
ಮಡಿಕೇರಿ: 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ್ದ 60 ವರ್ಷದ ಅಪರಾಧಿಗೆ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಬಾಲಕಿಯ ತಂದೆ, ತಾಯಿ ಮೃತಪಟ್ಟ ಬಳಿಕ ಆಕೆಯನ್ನು ಮಲತಂದೆ ಮಕ್ಕಳ ಗೃಹದಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಬಾಲಕಿಯನ್ನು ನೋಡಿಕೊಳ್ಳುವುದಾಗಿ ಹೇಳಿ ಮನೆಗೆ ಕರೆದೊಯ್ದಿದ್ದ ತಾತ, 2024ರ ನವೆಂಬರ್‌ನಿಂದ 2025ರ ಮಾರ್ಚ್‌ವರೆಗೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಬಾಲಕಿ ಶಿಕ್ಷಕಿಗೆ …
Read More »
BigTv News
August 8, 2026
Breaking News
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ತಮಕೂರು ಜಿಲ್ಲೆಯ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಹಳಿಲ್ ಗದ್ದೆ ನಿವಾಸಿಗಳಾದ ಜ್ಞಾನೇಶ್(28), ಮೋಹನ್(30) ಮತ್ತು ಗುರುಕಿರಣ್(28) ಮೃತಪಟ್ಟವರು. ಪ್ರೇಮಕುಮಾರ್ ಮತ್ತು ಹೃತಿಕ್ ಗಾಯಗೊಂಡಿದ್ದಾರೆ. ಒಂದೇ ಊರಿನ ಯುವಕರು ಧರ್ಮಸ್ಥಳಕ್ಕೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊರಟಿದ್ದರು. ಬೆಳಗಿನ ಜಾವ ಕೊಟ್ಟಿಗೆಹಾರ ಬಳಿ ಬಂದಾಗ ಚಾಲಕ ನಿದ್ರೆಯಲ್ಲಿ ಇದ್ದಿದ್ದರಿಂದ …
Read More »
BigTv News
August 8, 2026
Breaking News
ಬೆಂಗಳೂರು (ಆ.08): ಹೊಸದಾಗಿ ನಿರ್ಮಿಸಲಾದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ₹1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂನ ಎಇಇ ಹಾಗೂ ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹುಳಿಮಾವು ಬೆಸ್ಕಾಂ ಕಚೇರಿಯ ಎಇಇ ನಾಗರತ್ನ ಹಾಗೂ ಜೆಇ ಸ್ವಾಮಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಅರ್ಷದ್ ಉಲ್ಲಾ ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದ್ದು, …
Read More »
BigTv News
August 8, 2026
Breaking News
ಉಡುಪಿ: ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಕೊಲೆ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಮೂಲದ ಶೂಟರ್ ರಾಜು ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೈಂದೂರು ತಾಲೂಕಿನ ಒತ್ತಿನಣೆ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಜು ಬಲಗಾಲಿಗೆ ಗುಂಡೇಟು ತಗುಲಿದೆ. ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಎಸ್‌ಐ ತೇಜಸ್ವಿ ಮತ್ತು ಪ್ರಸನ್ನ ನೇತೃತ್ವದ ತಂಡ …
Read More »
BigTv News
August 7, 2026
Breaking News
ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕುರಿತು ಆಧಾರರಹಿತ ಹಾಗೂ ಅವಹೇಳನಕಾರಿಯಾಗಿ ಮಾತನಾಡಿ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಯ ಪೊಲೀಸರು ಹೇಳಿದ್ದಾರೆ. ಬಾಂಗ್ಲಾದ ಪ್ರಜೆಗಳನ್ನು ನಾನು ಬೆಂಗಳೂರಿಗೆ ಕಳುಹಿಸಿರುವೆ, ಪೊಲೀಸರ ಕೈಯಲ್ಲಿ ಅವರನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆಯ ಕುರಿತು ಆಧಾರರಹಿತ ಹಾಗೂ ಅವಹೇಳನಕಾರಿಯಾಗಿ ಮಾತನಾಡಿ ವಿಡಿಯೊ ಪೋಸ್ಟ್ ಹಂಚಿಕೊಂಡಿದ್ದ. ಈ ವ್ಯಕ್ತಿಯ ವಿರುದ್ಧ …
Read More »
BigTv News
August 7, 2026
Breaking News
ಮಂಗಳೂರು: ಮನೆಗೆ ನುಗ್ಗಿ 76 ವರ್ಷದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಸುಮಾರು ₹3 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಕೇವಲ ಮೂರು ದಿನಗಳಲ್ಲಿ ಬಂಧಿಸಿದ್ದಾರೆ. ಆ.3ರಂದು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಪ್ರವೇಶಿಸಿದ ಆರೋಪಿಗಳು, ವೃದ್ಧೆಯ ಮೇಲೆ ಹಲ್ಲೆ ನಡೆಸಿ ಅವರು ಧರಿಸಿದ್ದ ಚಿನ್ನದ ಸರ ಹಾಗೂ ಬಳೆಯನ್ನು ಕಿತ್ತು ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ರಚಿಸಿದ್ದ ವಿಶೇಷ ತಂಡ …
Read More »
BigTv News
August 7, 2026
Breaking News
ಬೆಂಗಳೂರು: ಭೈರಸಂದ್ರದ ರೌಡಿಶೀಟರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಗ್ಯಾಂಗ್‌ವೊಂದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ, ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಆರು ಮಚ್ಚುಗಳು ಹಾಗೂ ಕೃತ್ಯಕ್ಕೆ ಬಳಸಲು ಸಿದ್ಧವಾಗಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರಮುಖ ಆರೋಪಿ ಶಿವ ಅಲಿಯಾಸ್ ಕಲ್ಕಿ, ಅಣ್ಣಮ್ಮ ಜಾತ್ರೆಯಲ್ಲಿ ನಡೆದ ಜಗಳದ ದ್ವೇಷದಿಂದ ರೌಡಿಶೀಟರ್ ಲಕ್ಷ್ಮೀ ನಾರಾಯಣನನ್ನು ಕೊಲೆ ಮಾಡಿ ಏರಿಯಾದಲ್ಲಿ ತಾನೇ ದೊಡ್ಡ ರೌಡಿ ಆಗಬೇಕೆಂದು ಸಂಚು ರೂಪಿಸಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ತಾನು ದಕ್ಷಿಣ …
Read More »
BigTv News
August 7, 2026
Breaking News
ಬಳ್ಳಾರಿ: ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದ ಬಳಿ ಗಣಿ ಲಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಮಾರ್ (34) ಹಾಗೂ ಮಂಜುನಾಥ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿ ವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು, ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಶಿವಮೊಗ್ಗದ ಚೋರಡಿ ಸೇತುವೆ ಬಳಿ ಕಾರು ಮೂರು ಬಾರಿ ಪಲ್ಟಿಯಾದರೂ, ಅದರಲ್ಲಿದ್ದ ಆರು ಮಂದಿ ಸ್ನೇಹಿತರು …
Read More »