Breaking News

Breaking News

ನ.14 ರಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ ವಾರ್ಷಿಕ ಕೃಷಿ ಮೇಳ ಆಯೋಜನೆ

ಬೆಂಗಳೂರು: ಸುಸ್ಥಿರ ಕೃಷಿಯಲ್ಲಿ ಅತ್ಯಾಧುನಿಕ ಕ್ರಮಗಳನ್ನು ಗುರುತಿಸಲು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತನ್ನ ವಾರ್ಷಿಕ ಕೃಷಿ ಮೇಳವನ್ನು ನವೆಂಬರ್ 14 ರಿಂದ 17 ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಿದೆ. ಸರ್ಕಾರದ ಪ್ರಮುಖ ಇಲಾಖೆಗಳೊಂದಿಗೆ ಜಂಟಿಯಾಗಿ ಆಯೋಜಿಸಲಾಗುವ ಈ ವರ್ಷದ ಕಾರ್ಯಕ್ರಮ ಹವಾಮಾನ ಸ್ಮಾರ್ಟ್ ಡಿಜಿಟಲ್ ಕೃಷಿ ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗುವುದು. ಹೊಸದಾಗಿ ಅಭಿವೃದ್ಧಿಪಡಿಸಿದ ನಾಲ್ಕು ಬೆಳೆ ಪ್ರಬೇಧಗಳು, ಪ್ರಾತ್ಯಕ್ಷಿಕೆಗಳು ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯನ್ನು ಬೆಂಬಲಿಸಲು ತಜ್ಞರ …

Read More »

ಅಚಲವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ

ಧಾರವಾಡ: ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು. ಅವರು ಇಂದು ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನೇಚರ್ ಫಸ್ಟ್ ಇಕೋ ವಿಲ್ಹೇಜ್‍ನಲ್ಲಿ ಆಯೋಜಿಸಲಾಗಿದ್ದ ಬಾಲಮಂದಿರಗಳ ಮಕ್ಕಳಿಗೆ ರಾಜ್ಯ ಮಟ್ಟದ ಮಕ್ಕಳ ಕಥಾ …

Read More »

42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ

ಕುಂದಗೋಳ : ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಿನಹಳ್ಳಿ ಹಾಗೂ ವಿಠಲಾಪುರ ಗ್ರಾಮದ ಪ್ರತಿಶತ 5% ಅನುದಾನದಲ್ಲಿ 42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ ಉಪಾಧ್ಯಕ್ಷರಾದ ರತ್ನವ ಪಡೆಸೂರ ಹಾಗೂ ಗ್ರಾಪಂ ಸದಸ್ಯರು, ಎರಡು ಊರಿನ ಹಿರಿಯರು ಹಾಗೂ ಉಪಸ್ಥಿತರಿದ್ದರು.

Read More »

ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳಿಗೆ ಸಿವಿಲ್ ನ್ಯಾಯಾಧೀಶ ಭೇಟಿ

ಕುಂದಗೋಳ: ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆ ರಭಸಕ್ಕೆ ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳನ್ನು ಗೌರವಾನ್ವಿತ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದ‌ರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ವೀಕ್ಷಣೆ ಮಾಡಿದರು. ಕಂದಾಯ ಇಲಾಖೆ ಅಧಿಕಾರಿ ಅಶೋಕ್ ಮಲ್ಲೂರು ನೇತೃತ್ವದಲ್ಲಿ ಮುಳ್ಳೂಳ್ಳಿ, ಯರಗುಪ್ಪಿ ಬ್ರಿಡ್ಜ್ ಹಾನಿ ಪರಿಶೀಲನೆ ನಡೆಸಿದರು. ರೈತಾಪಿ ಜನರ ಜಮೀನಿನಲ್ಲಿ ಹಾನಿಯಾದ ಬೆಳೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಕರವೇ ಅಧ್ಯಕ್ಷರು, ರೈತಾಪಿ …

Read More »

ಎಐಟಿಯುಸಿ ಬಿಸಿಯೂಟ ತಯಾರಕರ ಎಲ್ಲಾ ಬೇಡಿಕೆ ಈಡೇರಿಕೆಗೆ ಸಚಿವ ಮಧು ಬಂಗಾರಪ್ಪ ಭರವಸೆ

ಬೆಂಗಳೂರು: ಎಐಟಿಯುಸಿ ಬಿಸಿಯೂಟ ತಯಾರಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವೇತನ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಬೆಂಗಳೂರಿನ ಸಮಗ್ರ ಶಿಕ್ಷಣ ಯೋಜನಾಧಿಕಾರಿಗಳ ಸಭಾಂಗಣದಲ್ಲಿ ಎಐಟಿಯುಸಿ ಬಿಸಿಯೂಟ ತಯಾರಕರ ಮತ್ತು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಸಿಯೂಟ ತಯಾರಕರ …

Read More »

ಅಮೆರಿಕದಲ್ಲಿ ಆತಂಕ ಸೃಷ್ಟಿಸಿದ ಮೆಕ್ ಡೊನಾಲ್ಡ್: ಹಲವಾರು ಜನರಿಗೆ ಆರೋಗ್ಯ ಸಮಸ್ಯೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೆಕ್‌ಡೊನಾಲ್ಡ್ ಬರ್ಗರ್ ಸೇವಿದ ಹಲವಾರು ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ತನ್ನ ಕ್ವಾರ್ಟರ್ ಪೌಂಡರ್ ಬರ್ಗರ್‌ಗಳು ಅಮೆರಿಕದ ಸುಮಾರು 10 ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೆ ಒಬ್ಬರು ಸಾವನ್ನಪ್ಪಿದ್ದು,ಹಲವಾರು ಮಂದಿ ಅನೇಕ ಕಾಯಿಲೆಗಳಿಗೆ ಒಳಗಾಗಿದ್ದು, ಅಧಿಕಾರಿಗಳು ಈಗ ಆಹಾರ ಸುರಕ್ಷತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ನಡುವೆ ಸಿಡಿಸಿ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಈರುಳ್ಳಿ, ದನದ ಕೊಬ್ಬು ಸೇರಿ ಕೆಲವು ಹಾನಿಕಾರಕ ಪದಾರ್ಥಗಳು ಮೆಕ್‌ಡೊನಾಲ್ಡ್ ಬರ್ಗರ್‌ನಲ್ಲಿ ಕಂಡುಬಂದಿದ್ದು, …

Read More »

ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ಸಹಾಯ ಹಸ್ತ

ಕಲಘಟಗಿ : ಮುತ್ತಗಿ ಗ್ರಾಮದ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಾರ್ಯಕರ್ತರೊಂದಿಗೆ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕರೆ ಮಾಡಿ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ಕೆಲವರೊಂದಿಗೆ ಮಾತನಾಡಿ ದೈರ್ಯಗೆಡದಂತೆ ತಿಳಿಸಿದರು. ಹಾಗೂ ಚಿಕಿತ್ಸೆ ಪಡೆಯುತ್ತಿರುವ ೪೪ ರೊಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ತಲಾ ಒಬ್ಬ ರೋಗಿಗೆ 2 ಸಾವಿರ ರೂಗಳಂತೆ ಸಹಾಯಧನವನ್ನು ವಿತರಣೆ ಮಾಡಲಾಯಿತು. ಈ …

Read More »

ರಸ್ತೆ ಗುಂಡಿ ಮುಚ್ಚುವ ಹಣವೂ ಮಾಯ, ನಾಳೆ ರಸ್ತೆಯು ಮಾಯ: ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಆರ್.ಅಶೋಕ್

ಬೆಂಗಳೂರು: ಝಣ-ಝಣಾ ಕಾಂಚಾಣದ ಕಾಂಗ್ರೆಸ್ ಸರ್ಕಾರದಲ್ಲಿ ರಸ್ತೆ ಗುಂಡಿ ಮುಚ್ಚುವ ಹಣವೂ ಮಾಯ ನಾಳೆ ರಸ್ತೆಯೂ ಮಾಯ ಎಲ್ಲಾ ಮಾಯಾ ನಾಳೆ ನಾವೂ ಮಾಯ ಎಂದು ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು …

Read More »

ಎಐಸಿಸಿ ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಳಿಸಿದ ಮಲ್ಲಿಕಾರ್ಜುನ ಖರ್ಗೆ: ಶುಭ ಕೋರಿದ ಪಕ್ಷದ ನಾಯಕರು

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ಎರಡು ವರ್ಷ ಪೂರ್ಣಗೊಳಿಸಿದ್ದು, ಪಕ್ಷದ ಬಲವರ್ಧನೆಗಾಗಿ ಅವರ ಕೊಡುಗೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿನ ಪಕ್ಷದ ನಾಯಕರು ಗುಣಗಾನ ಮಾಡಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಕ್ಟೋಬರ್ 26, 2022 ರಂದು ಅಧಿಕಾರ ಸ್ವೀಕರಿಸಿದ್ದರು. ಅವರು 24 ವರ್ಷಗಳಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಗಾಂಧಿಯೇತರ ನಾಯಕರಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ 82 ವರ್ಷದ ಖರ್ಗೆ ಅವರು …

Read More »

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಿವಾಸಕ್ಕೆ ಭೇಟಿ

ಬೆಂಗಳೂರು: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪತ್ನಿ ಸುದೇಶ್ ಧನಕರ್ ಅವರೊಂದಿಗೆ ಇಂದು ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ನಿವಾಸಕ್ಕೆ ಭೇಟಿ ನೀಡಿದರು. ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ಚನ್ನಮ್ಮಅವರ ಆರೋಗ್ಯದ ಬಗ್ಗೆ ದೇವೇಗೌಡರಲ್ಲಿ ವಿಚಾರಿಸಿದರು. ಚನ್ನಮ್ಮ ಅವರು ಆದಷ್ಟು ಬೇಗ ಗುಣಮಖರಾಗಲಿ, ಆ ನಂತರ ಅವರನ್ನು ತಾವು ದೆಹಲಿಗೆ ಕರೆದುಕೊಂಡು ಬನ್ನಿ ಎಂದು ತಿಳಿಸಿದರು. ಇದಕ್ಕೆ ಮಾಜಿ ಪ್ರಧಾನಿಗಳು ಸಮ್ಮತಿಸಿ, ತಮ್ಮ ಮೇಲೆ ತಾವು …

Read More »