Breaking News

Breaking News

ರಾಯಚೂರು: ಸಾಲಕ್ಕೆ ಸಿಗರೇಟ್‌ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!

ರಾಯಚೂರು: ಸಾಲವಾಗಿ ಸಿಗರೇಟ್ ನೀಡದ ವಿಚಾರಕ್ಕೆ ಟೀ ಸ್ಟಾಲ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಎಲ್‌ಬಿಎಸ್ ನಗರದಲ್ಲಿ ನಡೆದಿದೆ. ಮೃತರನ್ನು ನರಸಿಂಹಯ್ಯ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಎಲ್‌ಬಿಎಸ್ ನಗರ ಸರ್ಕಲ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಅವರು, ಅಂಗಡಿ ಬಳಿ ಕಸ ಸ್ವಚ್ಛಗೊಳಿಸುತ್ತಿದ್ದ ವೇಳೆ ಆರೋಪಿ ತಿಲಕ್ ಸಿಂಗ್ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಸಿಗರೇಟ್‌ಗೆ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ನರಸಿಂಹಯ್ಯ ಶೆಟ್ಟಿ ಮೇಲೆ …

Read More »

ಕಾಸರಗೋಡು : ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯ ಸಹಿತ ಇಬ್ಬರು ಪೊಲೀಸರ ವಶಕ್ಕೆ!

ಕಾಸರಗೋಡು: ಲಾಡ್ಜ್‌ವೊಂದರಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶೆರೀಫಾ (35) ಮತ್ತು ಮುಹಮ್ಮದ್ ರಾಫಿ (31) ಎಂದು ಗುರುತಿಸಲಾಗಿದೆ. ಕಾಸರಗೋಡು ಟೌನ್ ಸಬ್‌ಇನ್ಸ್‌ಪೆಕ್ಟರ್ ಪಿ.ವಿ. ಮನು ನೇತೃತ್ವದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿರೋಧಕ ವಿಶೇಷ ಕಾರ್ಯಪಡೆ ಹಾಗೂ ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Read More »

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ ಕೊಲೆಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಮಹೇಂದ್ರ ಮತ್ತು ತರುಣ್ ಅವರನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದು, ಒಬ್ಬನನ್ನು ಕೊಲೆ ಮಾಡಿ ಮತ್ತೊಬ್ಬನಿಂದ ಡೆತ್‌ನೋಟ್ ಬರೆಸಿ ಆತ್ಮಹತ್ಯೆಯಂತೆ ಬಿಂಬಿಸಲು ಸಂಚು ರೂಪಿಸಿದ್ದರು …

Read More »

ಸ್ನೇಹಿತನ ಗರ್ಲ್‌ಫ್ರೆಂಡ್‌ ರೇಪ್ ಮಾಡಿದವನಿಗೆ ಬುದ್ದಿಕಲಿಸಲು ಹೋಗಿ 11 ಮಂದಿ ಅಂದರ್

ಬೆಂಗಳೂರು: ಸ್ನೇಹಿತನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮಹೇಂದ್ರ ಹಾಗೂ ಆತನ ಸ್ನೇಹಿತ ತರುಣ್‌ನನ್ನು ಅಪಹರಿಸಿದ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಸೇರಿದಂತೆ 11 ಮಂದಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ವಿಷಯ ತಿಳಿದ ಬಳಿಕ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಅ.28ರಂದು ಇಬ್ಬರನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಮಹೇಂದ್ರನ ತಂದೆಗೆ ಕರೆ ಮಾಡಿ ₹10 ಲಕ್ಷ ಹಣಕ್ಕೆ ಬೇಡಿಕೆ …

Read More »

ಹಳೇ ದ್ವೇಷ: ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದ ಬಾಲಕ!

ಬೆಂಗಳೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಬಾಲಕರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದಲ್ಲಿ 16 ವರ್ಷದ ಬಾಲಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಸಂದ್ರದಲ್ಲಿ ಅ.21ರಂದು ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ನಡೆದ ಸಣ್ಣ ಗಲಾಟೆಯ ದ್ವೇಷದಿಂದ ಆರೋಪಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದಾನೆ. ಜಗಳ ಬಿಡಿಸಲು ಬಂದ ಸ್ನೇಹಿತನಿಗೂ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು …

Read More »

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ ನಾಗರತ್ನ (42) ಹಾಗೂ ಹೇಮಂತ್ (41) ಎಂಬವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿ ಆಪ್ ಮೂಲಕ ಪರಿಚಯವಾದ ನಾಗರತ್ನಳ ಮದುವೆ ಪ್ರಸ್ತಾಪವನ್ನು ಪ್ರದೀಪ್ ನಿರಾಕರಿಸಿದ್ದರು. ಬಳಿಕ ತನ್ನ ಕಷ್ಟಗಳನ್ನು ಹೇಳಿಕೊಂಡು 2024ರ ಜನವರಿಯಿಂದ 2026ರ ಜನವರಿವರೆಗೆ ಹಂತ ಹಂತವಾಗಿ ಹಣ ಪಡೆದಿದ್ದಾಳೆ. ಹಣ ವಾಪಸ್ ಕೇಳಿದಾಗ ಅಕ್ರಮ …

Read More »

ಹಿರಿಯೂರು | ಹಣ ಸಂಗ್ರಹಿಸಿ ವಂಚನೆ; ಕಾರ್ಯದರ್ಶಿ ವಿರುದ್ಧ ದೂರು ದಾಖಲು

ಹಿರಿಯೂರು: ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಸಹಕಾರಿ ಸಂಘದ ಹೆಸರಿನಲ್ಲಿ ನೂರಾರು ಜನರಿಂದ ಉಳಿತಾಯ ಹಾಗೂ ಪಿಗ್ಮಿ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಸಂಘದ ಕಾರ್ಯದರ್ಶಿ ತಮ್ಮಿಂದ ₹35 ಲಕ್ಷ ಪಡೆದು ಮರಳಿಸಿಲ್ಲ. ಭಾನುಪ್ರಕಾಶ್ ಎಂಬುವವರಿಂದಲೂ ₹20 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಜಿ. ದೇವರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ 12 ಮಂದಿ ವಂಚನೆಗೆ ಒಳಗಾಗಿದ್ದು, ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಗರ …

Read More »

ಪೌರ ಕಾರ್ಮಿಕರ ಜೊತೆ ಕಿರಿಕ್‌ ಮಾಡಿಕೊಂಡ ಮಹಿಳೆ : ಮನೆ ಮುಂದೆ ಲೋಡ್‌ ಕಸ ಸುರಿದ ಸಿಬ್ಬಂದಿ!

ಬೆಂಗಳೂರು: ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ಮನೆಯ ಮುಂದಿನ ಕಸವನ್ನು ಮೊದಲು ತೆರವುಗೊಳಿಸುವಂತೆ ಪುಟ್ಟಮ್ಮ ಎಂಬ ಮಹಿಳೆ ಪೌರಕಾರ್ಮಿಕರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪೌರಕಾರ್ಮಿಕ ಅಶೋಕ್ ಕುಮಾರ್ ಹಾಗೂ ಇತರ ಸಿಬ್ಬಂದಿ ಸೇರಿ ಮಹಿಳೆಯ ಮನೆ ಮುಂದೆ ಒಂದು ಲೋಡ್ ಕಸ ಸುರಿದಿದ್ದಾರೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯ ವರ್ತನೆ ಹಾಗೂ ಪೌರಕಾರ್ಮಿಕರ ಸೇಡಿನ ಕ್ರಮ ಎರಡಕ್ಕೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

Read More »

ಶ್ರೀನಿವಾಸಪುರ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

ಶ್ರೀನಿವಾಸಪುರ: ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ಮಜರ ಮಲ್ಲಂಪಲ್ಲಿಯಲ್ಲಿ ಅರಣ್ಯ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಘರ್ಷಣೆ ನಡೆದಿದೆ. ಮೂವರು ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಡಿಆರ್‌ಎಫ್‌ಒ ನವೀನ್, ವಾಚರ್ ಸೋಮಶೇಖರ್ ಹಾಗೂ ಗಾರ್ಡ್ ಜಮೀರ್ ಅವರನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ವಾಹನಗಳನ್ನೂ ಜಖಂಗೊಳಿಸಲಾಗಿದೆ ಎಂದು ಡಿಸಿಎಫ್ ಸರೀನಾ ಸಿಕ್ಕಲಿಗಾರ್ ಆರೋಪಿಸಿದ್ದಾರೆ. ಹಲ್ಲೆ ನಡೆಯುತ್ತಿದ್ದರೂ ಪೊಲೀಸರು …

Read More »

ಅರಕೇರ ತಾಲ್ಲೂಕಿನಲ್ಲಿ 51 ಗಾಂಜಾ ಗಿಡ ಜಪ್ತಿ, ಆರೋಪಿ ಬಂಧನ

ರಾಯಚೂರು: ಅರಕೇರ ತಾಲ್ಲೂಕಿನ ದೇವರಗುಡ್ಡ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ 51 ಗಾಂಜಾ ಗಿಡಗಳನ್ನು ಜಾಲಹಳ್ಳಿ ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ. ಸಿಪಿಐ ಪುಂಡಲೀಕ ಪಟ್ಟೆದಾರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ₹11,94,500 ಮೌಲ್ಯದ 23 ಕೆ.ಜಿ 890 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಬೆಳೆದ ಆರೋಪದಡಿ ಮದರಕಲ್ ಗ್ರಾಮದ ಸಾಬಣ್ಣ ಮಹಾದೇವಪ್ಪ ಎಂಬಾತನನ್ನು ಬಂಧಿಸಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »