Breaking News

Breaking News

ಬಸ್‌ನಲ್ಲಿ ಅಶ್ಲೀಲ ವರ್ತನೆ ಆರೋಪ; ಪ್ರಕರಣ ದಾಖಲು

ಬಂಟ್ವಾಳ: ಬಿ.ಸಿ.ರೋಡ್‌ನಿಂದ ಮೆಲ್ಕಾರ್ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣದ ವೇಳೆ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಖಾಸಗಿ ಅಂಗಾಂಗವನ್ನು ಪ್ರದರ್ಶಿಸಿ ಅಶ್ಲೀಲ ವರ್ತನೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬಸ್ ನಲ್ಲಿ ಸುಮಾರು 60ರಿಂದ 70 ವರ್ಷದೊಳಗಿನ ವ್ಯಕ್ತಿಯೊಬ್ಬರು ಬಿ.ಸಿ. ರೋಡ್ ನಲ್ಲಿ ಬಸ್ ಹತ್ತಿ ಚಾಲಕರ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತು ಬಳಿಕ ಮೆಲ್ಕಾರ್ …

Read More »

ಸತ್ತವರ ಕುಣಿ ಅಗೆಯಲು ನಿರಾಕರಣೆ : ದಲಿತರ ಮೇಲೆ ಹಲ್ಲೆ, ಬಹಿಷ್ಕಾರದ ಬೆದರಿಕೆ !

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಖಾಪುರ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆಗಾಗಿ ಕುಣಿ ಅಗೆಯಲು ನಿರಾಕರಿಸಿದ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಡಿಯುವ ನೀರು, ಜಮೀನಿಗೆ ಹೋಗುವ ದಾರಿ ತಡೆ, ದಲಿತ ಓಣಿಯಲ್ಲಿ ಕಾರ್ಯಕ್ರಮ ನಡೆದಾಗ ವಿದ್ಯುತ್ ಸಂಪರ್ಕ ಕಡಿತ ಹಾಗೂ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಕುರಿತು ಪೊಲೀಸರು …

Read More »

ಐರಾವತ-ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು

ಕಲಬುರಗಿ: ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಸಮೀಪ ಐರಾವತ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳ ನಡುವೆ ಶನಿವಾರ ಸಂಜೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಚಾಲಕರು ಮೃತಪಟ್ಟಿದ್ದಾರೆ. ಮೃತರನ್ನು ಕೆಎಸ್ಸಾರ್ಟಿಸಿ ಬಸ್ ಚಾಲಕ ತುಕಾರಾಮ ಹಾಗೂ ಐರಾವತ ಬಸ್ ಚಾಲಕ ಶಿವಾನಂದ ರೆಡ್ಡಿ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …

Read More »

ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕರಿಗೆ ಹಿಗ್ಗಾಮುಗ್ಗಾ ಹಲ್ಲೆ ಆರೋಪ -ದಾವಣಗೆರೆಯಲ್ಲಿ ಇವತ್ತು ಏನಾಯ್ತು?

ದಾವಣಗೆರೆ: ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶ ವಿಚಾರವಾಗಿ ದಲಿತ ಯುವಕರ ಮೇಲೆ ಹಲ್ಲೆ ನಡೆದ ಆರೋಪ ಕೇಳಿಬಂದಿದ್ದು, ಈ ಸಂಬಂಧ 42 ಜನರ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆ ಬಳಿಕ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಎಸ್‌ಪಿ ಶೇಖರ್ ಹೆಚ್.ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು. ಅವರ ಸಮ್ಮುಖದಲ್ಲೇ ದಲಿತ ಸಮುದಾಯದ ಮಹಿಳೆಯರು …

Read More »

ಹಾವೇರಿಯಲ್ಲಿ ಅಮಾನವೀಯ ಕೃತ್ಯ: 9ಕ್ಕೂ ಹೆಚ್ಚು ಶ್ವಾನಗಳನ್ನ ಹತ್ಯೆಗೈದು ವಾಮಾಚಾರ ಮಾಡಿದ ದುಷ್ಕರ್ಮಿಗಳು!

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳ ಸಂಪರ್ಕ ರಸ್ತೆಗಳ ಬಳಿ 9ಕ್ಕೂ ಹೆಚ್ಚು ಶ್ವಾನಗಳನ್ನು ಕೊಂದು ಅವುಗಳ ಮೇಲೆ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶ್ವಾನಗಳ ಬಾಯಿಯನ್ನು ದಾರದಿಂದ ಕಟ್ಟಿ, ಕೋಳಿಯ ರೆಕ್ಕೆ ಹಾಗೂ ಕುಂಕುಮ ಬಳಸಿ ಕೃತ್ಯ ಎಸಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಐದು ಹೆಣ್ಣು ಹಾಗೂ ನಾಲ್ಕು ಗಂಡು ಶ್ವಾನಗಳನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಜಮೀನಿಗೆ ತೆರಳಿದ್ದ ರೈತರು …

Read More »

ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಕಾರ್ಯದರ್ಶಿ ಜ್ಯೋತಿಗೆ ಸಿಐಡಿ ನೋಟಿಸ್ ಜಾರಿ!

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದ್ದು, ಕಾರ್ಯದರ್ಶಿ ಜ್ಯೋತಿ ಅವರಿಗೆ ನೋಟಿಸ್ ನೀಡಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ವೈರಲ್ ಆದ ಭ್ರಷ್ಟಾಚಾರದ ಆಡಿಯೋ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಈ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎಬಿವಿಪಿ ಒತ್ತಾಯಿಸಿದ್ದು, ಆಗಸ್ಟ್‌ 4ರೊಳಗೆ ಕ್ರಮ ಕೈಗೊಳ್ಳದಿದ್ದರೆ ಆಗಸ್ಟ್‌ 5ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ, ಆಯ್ಕೆಯಾದ ಅಭ್ಯರ್ಥಿಗಳು …

Read More »

ದುಷ್ಟಶಕ್ತಿ ನಿವಾರಣೆಗಾಗಿ ಪೂಜೆ, 2.5 ಕೋಟಿ ಕಳೆದುಕೊಂಡ ಮಹಿಳೆ! ಮನೆ ಮಾರಿದ ದುಡ್ಡು ತಗೊಂಡು ಬಾಬಾ ಎಸ್ಕೇಪ್!

ಬೆಂಗಳೂರು: ದುಷ್ಟಶಕ್ತಿ ನಿವಾರಣೆ ಹೆಸರಿನಲ್ಲಿ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹2.5 ಕೋಟಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಹೂಡಿದರೆ ₹10 ಕೋಟಿ ನೀಡುವುದಾಗಿ ಆಮಿಷ ಒಡ್ಡಿ ವಂಚಕರು ಮೋಸ ಮಾಡಿದ್ದಾರೆ. ಬೈಕ್ ಅಪಘಾತದಲ್ಲಿ ಮಗ ಗಾಯಗೊಂಡಿದ್ದನ್ನು ದುಷ್ಟಶಕ್ತಿಯ ಪರಿಣಾಮ ಎಂದು ನಂಬಿಸಿದ ಆರೋಪಿಗಳು, ನಕಲಿ ಬಾಬಾ ಮೂಲಕ ಪೂಜೆ ಮಾಡಿಸಿ ಮೊದಲು ₹8 ಲಕ್ಷ ಪಡೆದು, ಬಳಿಕ ಮಹಿಳೆಯಿಂದ ₹2.5 ಕೋಟಿ ಹಣ ಪಡೆದಿದ್ದಾರೆ. ಹಣ …

Read More »

ಕೈಯಲ್ಲಿ ಗನ್ ಹಿಡಿದು ರೀಲ್ಸ್ ಮಾಡಿದ ಯುವತಿ! ಠಾಣೆಗೆ ಕರೆಸಿ ಪೊಲೀಸರಿಂದ ಖಡಕ್ ವಾರ್ನಿಂಗ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೈಯಲ್ಲಿ ಗನ್ ಹಿಡಿದು ವಿಡಿಯೋ ವೈರಲ್ ಮಾಡಿದ ಯುವತಿ ಅಲಿಶಾ ಅನ್ಸಾರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಗನ್ ಪ್ರದರ್ಶನ ಹಾಗೂ ಬೈಕ್ ಸ್ಟಂಟ್ ವಿಡಿಯೋಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಗನ್ ಹಿಡಿದ ವಿಡಿಯೋ ಹಾಗೂ ನಕಾರಾತ್ಮಕ ಕಾಮೆಂಟ್‌ಗಳಿಗೆ ಪ್ರತಿಯಾಗಿ ಮತ್ತೊಂದು ಬೆದರಿಕೆ ರೀತಿಯ ವಿಡಿಯೋ ಪೋಸ್ಟ್ ಮಾಡಿದ್ದಳು. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಬೈಕ್ ಸ್ಟಂಟ್ ಮಾಡಿದ ವಿಡಿಯೋ ಕೂಡ ವೈರಲ್ …

Read More »

ಬಸ್ ಅಡ್ಡಗಟ್ಟಿ ಕಂಡಕ್ಟರ್‌ ಮೇಲೆ ಭೀಕರ ಹಲ್ಲೆ, ಪ್ರಯಾಣಿಕನ ಮೇಲೂ ಕಿಡಿಗೇಡಿ ಅಟ್ಯಾಕ್!

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಕರ್ತವ್ಯನಿರತ ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಬಸ್ ನಿರ್ವಾಹಕ ಮಲ್ಲು ಲಮಾಣಿ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿದೆ. ಹಳೆಯ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಶುಕ್ರವಾರ ಆಟೋವನ್ನು ರಸ್ತೆ ಬದಿಗೆ ಸರಿಸಿದ ವಿಚಾರಕ್ಕೆ ಆಟೋ ಚಾಲಕ ಸಂತೋಷ ದೇವೂರ ನಿರ್ವಾಹಕರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಶನಿವಾರ ಬಸ್ ಅಡ್ಡಗಟ್ಟಿ ಸಹಚರರೊಂದಿಗೆ ಬಸ್ ಒಳಗೆ ನುಗ್ಗಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ …

Read More »

ಮನೆ ಬಾಡಿಗೆ ವಿಚಾರಕ್ಕೆ ಮಾವ-ಅಳಿಯನ ನಡುವೆ ಗಲಾಟೆ, ಇಬ್ಬರೂ ಆಸ್ಪತ್ರೆಗೆ ದಾಖಲು, ಪರಸ್ಪರ ದೂರು

ಭಟ್ಕಳ: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾವ ಮತ್ತು ಅಳಿಯನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿಕೊಂಡು ಇಬ್ಬರೂ ಆಸ್ಪತ್ರೆ ಸೇರಿದ ಘಟನೆ ಆ.1ರ ಶನಿವಾರ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ದೂರಿನಲ್ಲಿ, ಆಜಾದ್ ನಗರದ ಶೇಡಕುಳಿಹೊಂಡ ಪ್ರದೇಶದ ನಿವಾಸಿ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (34) ಅವರು ತಮ್ಮ ಮಾವ ಅಮೀರ್ …

Read More »