Breaking News

Breaking News

ಲಾರಿಗೆ ಹಿಂಬದಿಯಿಂದ ಟಿಟಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರವಾಗಿ ಗಾಯ

ಧಾರವಾಡ: ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ತೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ದಾವಣಗೆರೆ ಕಡೆಗೆ ಹೊರಟಿದ್ದ ಟಿಟಿ ಬಸ್‌ನಲ್ಲಿ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಟಿ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ …

Read More »

ಫೋನ್ ಪೇ ಮೂಲಕ ಹಣ ನೀಡಿ ‘ಡ’ ಉತಾರ ಪಡೆದ ವ್ಯಕ್ತಿ

ಕುಂದಗೋಳ : ವ್ಯಕ್ತಿ 2600 ರೂಪಾಯಿ ಫೋನ್ ಪೇ ಮಾಡಿ ‘ಡ’ ಉತಾರ ಪಡೆದಿದ್ದು ಇದೀಗ ವಿಷಯ ಬಹಿರಂಗವಾದ ಘಟನೆ ಕುಂದಗೋಳ ತಹಶೀಲ್ದಾರ್ ಸರ್ಕಾರಿ ಕಚೇರಿಯಲ್ಲಿ ನಡೆದಿದೆ. ತುರ್ತು ಅವಶ್ಯಕತೆಗೆ ‘ಡ’ ಉತಾರ ಮತ್ತು ಎಂ.ಆ‌ರ್ ಪೂರೈಸುತ್ತೇನೆ ಎಂದು ತಹಶೀಲ್ದಾರ್ ಕಚೇರಿಯಲ್ಲಿ ಓಡಾಡುವ ವ್ಯಕ್ತಿಯೋರ್ವ ಹಂತ ಹಂತವಾಗಿ 2600 ರೂಪಾಯಿ ತನ್ನ ಕುಟುಂಬದ ಸದಸ್ಯರ ಮೊಬೈಲಿಗೆ ಫೋನ್ ಪೇ ಮಾಡಿಸಿಕೊಂಡು ರೈತರಿಗೆ ಉತಾರ ನೀಡಿದ್ದಾನೆ. ಜಾಸ್ತಿ ಹಣ ಕೊಟ್ಟರೇ ತಮ್ಮ …

Read More »

ಹುಬ್ಬಳ್ಳಿಯಲ್ಲಿಯೂ ಸಿಎಂ ರಾಜಿನಾಮೆ ಕೊಡುವಂತೆ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಮುಡಾ ಹಗರಣದಲ್ಲಿ ಹೈಕೋರ್ಟ್ ಸಿಎಂ ಅರ್ಜಿ ವಜಾ ಮಾಡಿದ್ದು, ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಸಿಎಂ ರಾಜಿನಾಮೆ ಕೂಗು ದಟ್ಟವಾಗಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಅರ್ಜಿ ವಜಾ ಆಗಿದೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಂ …

Read More »

ರಾಷ್ಟ್ರೀಯ ರಕ್ಷಣಾ ಅಕಾಡೆವಿ (NDA) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಸೆಪ್ಟೆಂಬರ್ 2024ರಲ್ಲಿ ನಡೆಸಿದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ನೆವಲ್ ಅಕಾಡೆಮಿ ಪರೀಕ್ಷೆಯಲ್ಲಿ ಇಲ್ಲಿಯ ಅರ್ಜುನ ಎಜುಕೇಶನಲ್ ಇನ್ಸಿಟ್ಯೂಷನ್ ಇವರ ಶಾಂತಿನಿಕೇತನ (ಅರ್ಜುನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡದ ಐದು ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಸಮರ್ಥ ಪ್ರಭು, ಸಮರ್ಥ್ ಪಿ ಹೆಗಡೆ, ನಂದನ್ ಹೆಗಡೆ, ಆದಿತ್ಯ ಆರ್ ಜೋಶಿ ಹಾಗೂ ಶ್ರೀಲಕ್ಷ್ಮಿ ಹೆಗಡೆ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ …

Read More »

ಫ್ರೆಂಚ್ ವಿಷಯದಲ್ಲಿ ಪಿಎಚ್ ಡಿ ಪಡೆದ ರೋಸೆಟ್ ರಾಬರ್ಟ್ ದದ್ದಾಪುರಿ

ಧಾರವಾಡ: ರೆಗ್ಯುಲರ್ ಪಿಎಚ್‌ಡಿಯನ್ನೇ ಫ್ರೆಂಚ್ ವಿಷಯದಲ್ಲಿ ಮಾಡಿದ ರೋಸೆಟ್ ರಾಬರ್ಟ್ ದದ್ದಾಪುರಿ ಚಿನ್ನದ ಪದಕ ಲಭಿಸಿವೆ. 74ನೇ ಘಟಿಕೋತ್ಸವ ಸಮಾರಂಭದಲ್ಲಿ ರೋಸೆಟ್‌ಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ರೋಸೆಟ್ ದದ್ದಾಪುರಿ ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾದ ರಾಬರ್ಟ್ ದದ್ದಾಪುರಿ ಅವರ ಪುತ್ರಿಯಾಗಿದ್ದಾಳೆ.

Read More »

ಸಾಲಗಾರರ ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ

ಕಲಘಟಗಿ:ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಸದ್ದಾಂ ಕಟನೂರ್ ಎಂಬ 23 ವಯಸ್ಸಿನ ಯುವಕ ಸಾಲದ ಕಿರುಕುಳ ತಾಳಲಾರದೆ ನಿನ್ನೆ (ಮಂಗಳವಾರ) ಆತ್ಮಹತ್ಯೆ ದಿ ಮಾಡಿಕೊಂಡಿರುವ ಘಟನೆ ಜರುಗಿದೆ. ಸದ್ದಾಂ ಕಟನೂರ್” ಮನೆ ಕಟ್ಟಲು ಬ್ಯಾಂಕ್ ಹಾಗೂ ಗ್ರಾಮದಲ್ಲಿ ಬಡ್ಡಿ ಸಾಲ ತೆಗೆದುಕೊಂಡಿದ್ದ. ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮೃತನ ಪತ್ನಿ ತಿಳಿಸಿದ್ದಾರೆ. ಕಲಘಟಗಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸಂಜೆ …

Read More »

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

ಧಾರವಾಡ : ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು ರಂದು ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 2 ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ …

Read More »

ಮಕ್ಕಳ ಪಾಲಕರು ಅಥವಾ ಪೋಷಕರ ಪತ್ತೆ

ಧಾರವಾಡ : ಬಾಲನ್ಯಾಯ ಕಾಯ್ದೆ 2015 ರ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡದಡಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ, ಪೋಷಣೆಗೆಂದು ದಾಖಲಾಗಿರುವ ಮಕ್ಕಳ ಪಾಲಕರು ಅಥವಾ ಪೋಷಕರ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಹುಬ್ಬಳ್ಳಿಯ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದ ಯಲ್ಲಮ್ಮ, ಮೌನಾ, ಶೃತಿ, ಪ್ರಿಯಾ, ಹಾಗೂ ರೂಪಾ ಎಂಬ ಮಕ್ಕಳ ಪಾಲಕರು ಅಥವಾ ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 4 ತಿಂಗಳ ಅವಧಿ ಮುಗಿಯುವದರ ಒಳಗಾಗಿ …

Read More »

ಎನ್ ಎಸ್ ಐ ಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ನವದೆಹಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿಗೆ ಉದ್ಯಮದ ಬೇಡಿಕೆ ಆಧಾರಿತ ಎನ್‌ಎಸ್‌ಐಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡುವಂತೆ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರದ ಸಣ್ಣ, ಮದ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದಾರೆ. ಮಂಗಳವಾರ ನವದೆಹಲಿಯ ಇಎಸ್‌ಐಸಿ ಭವನದಲ್ಲಿ ಕೇಂದ್ರದ ಸೂಕ್ಷ್ಮ ಮತ್ತು ಸಣ್ಣ ,ಮದ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವರಾದ ಶೋಭಾ ಕರಂದ್ಲಾಜೆ …

Read More »

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಕುರಿತು ಸಮಿತಿ ರಚಿಸಿ ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಗಮನಹರಿಸಿದ್ದು, ವಿವಿಧ ಬೇಡಿಕೆಗಳನ್ನು ಶಿಕ್ಷಕರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸಿ ಆದೇಶಿಸಿದೆ. ಒಂದು ತಿಂಗಳಿನಲ್ಲಿ ವರದಿ ಸಲ್ಲಿಸಬೇಕು ಎಂದು ಸಮಿತಿಗೆ ಗಡುವು ನಿಗದಿ ಮಾಡಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಎ. ಮಹಾಲಕ್ಷ್ಮಿ ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ …

Read More »