Breaking News

Breaking News

ಲಘು ಯುದ್ಧ ಟ್ಯಾಂಕರ್ ಜೋರಾವರ್ ಯಶಸ್ವಿ ಪ್ರಯೋಗ

ನವದೆಹಲಿ: ಹೆಲಿಕಾಫ್ಟರ್ ನಲ್ಲಿ ಹೊತ್ತೊಯ್ಯಬಹುದಾದ ವೈವಿದ್ಯಮಯ ಲಘು ಯುದ್ಧ ಟ್ಯಾಂಕರ್ ಜೋರಾವರ್ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದ್ದು, ಶೀಘ್ರದಲ್ಲೇ ಗಡಿ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲಿದ್ದು, ಭಾರತದ ಬಲ ಹೆಚ್ಚಿಸಲಿದೆ. ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಮರುಭೂಮಿಯಲ್ಲಿ ಜೋರಾವರ್ ಹಗುರ ಯುದ್ಧ ಟ್ಯಾಂಕರ್ ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಹಲವು ಉದ್ದೇಶಿತ ಗುರಿಗಳನ್ನು ಯಶಸ್ವಿಯಾಗಿ ತಲುಪಿದ್ದೂ ಅಲ್ಲದೇ ನಿರೀಕ್ಷೆಗೂ ಮೀರಿದ ಕಾರ್ಯಕ್ಷಮತೆ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಕಡಿದಾದ ಪ್ರದೇಶಗಳಲ್ಲಿ, ಪರ್ವತಗಳ ನಡುವೆ ನಿರಾಯಸವಾಗಿ …

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣಗೆ ರೈತರ ಹಕ್ಕು ಒತ್ತಾಯ ಪತ್ರ ಸಲ್ಲಿಕೆ

ಮೈಸೂರು: ಅಕ್ರಮ ಸಕ್ರಮ ಯೋಜನೆ ಮರು ಜಾರಿ ಆಗಬೇಕು, ಕೇಂದ್ರ ಸರ್ಕಾರ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ರೈತರು ಹಕ್ಕು ಒತ್ತಾಯ ಪತ್ರ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮೈಸೂರಿಗೆ ಭೇಟಿ ನೀಡಿದ್ದು, ಈ ವೇಳೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ …

Read More »

ಕಲಬುರಗಿಯಲ್ಲಿ ಹಾಡಹಗಲೇ ಗ್ರಾ.ಪಂ. ಮಾಜಿ ಅಧ್ಯಕ್ಷನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಕಲಬುರಗಿ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾದಂತಹ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಾನಾಪುರದ ಬಳಿಯಲ್ಲಿ ಇಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾಗಿದ್ದ ವಿಶ್ವನಾಥ ಜಮಾದಾರ್ (50) ಎಂಬುವರನ್ನು ಬೈಕ್ ನಲ್ಲಿ ಬಂದಂತ ಇಬ್ಬರು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮೂರು ಬಾರಿ ಗುಂಡಿನ ದಾಳಿಯಿಂದಾಗಿ ವಿಶ್ವನಾಥ ಅವರು ಸ್ಥಳದಲ್ಲೇ …

Read More »

ನೀರು ಸರಬರಾಜು ಯೋಜನೆ ಪ್ರಗತಿಯನ್ನು ಪರಿಶೀಲಿಸಿದ ವಿಶ್ವಬ್ಯಾಂಕ್ ಪ್ರತಿನಿಧಿಗಳು

ಬೆಳಗಾವಿ: ನಗರ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿಯನ್ನು ವಿಶ್ವಬ್ಯಾಂಕ್ ತಂಡದ ಹಿರಿಯ ಸಾಮಾಜಿಕ ಅಭಿವೃದ್ಧಿ ಪರಿಣಿತರಾದ ಆರ್. ಆರ್. ಮೋಹನ್‌ರವರು ಬೆಳಗಾವಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶಿಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದರು. ಮುತ್ಯಾನಟ್ಟಿಯಲ್ಲಿ ಪಾಲಿಕೆಯಿಂದ ನೀರು ಸರಬರಾಜು ವ್ಯತ್ಯಯವಾಗಿದ್ದರಿಂದ ಅದರ ಬದಲಾಗಿ ಇಂಡಾಲ್ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿಯಿಂದ ಸರಬರಾಜು ಮಾಡುತ್ತಿದೆ. ಹೊಸ …

Read More »

ಕ್ವಾಡ್ ಸಭೆ: ಪ್ರಧಾನಿ ಮೋದಿಯನ್ನು ಆಹ್ವಾನಿಸಿದ ಅಮೇರಿಕಾ

ಅಮೇರಿಕಾ: ಅಧ್ಯಕ್ಷ ಜೋ ಬಿಡೆನ್ ಸೆಪ್ಟೆಂಬರ್ 21 ರಂದು ಡೆಲವೇರ್‌ನಲ್ಲಿ ನಾಲ್ಕನೇ ವ್ಯಕ್ತಿಗತ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಲು ಮುಂದಾಗಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಈ ಶೃಂಗಸಭೆ ಭಾರತ ಮತ್ತು ಅಮೆರಿಕಾ ನಡುವೆ ಹಲವು ಕಾರ್ಯತಂತ್ರದ ಏಕ ಅಭಿಪ್ರಾಯವನ್ನು ಹೆಚ್ಚಿಸುವುದರ ಮೇಲೆ ಸಂಪೂರ್ಣ ಕೇಂದ್ರೀಕರಿಸುತ್ತದೆ. ಮುಕ್ತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಪ್ರದೇಶದ ಹಂಚಿಕೆಯ ದೃಷ್ಟಿಕೋನದಲ್ಲಿ ಕೂಡ ಚರ್ಚೆ ನಡೆಯಲಿದೆ. …

Read More »

ಮೈಸೂರು ದಸರಾ: ದೀಪಾಲಂಕಾರಕ್ಕೆ ಮುಂಬೈ ಕೋಲ್ಕತ್ತಾ ಚೀನಾ ತಂತ್ರಜ್ಞಾನದ ಬಳಕೆ

ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು, ದಸರಾ ಅವಧಿಯೂ ಸೇರಿದಂತೆ ಸುಮಾರು ಒಂದು ತಿಂಗಳ ಕಾಲ ಇಡೀ ಮೈಸೂರು ನಗರ ದೀಪಧಾರಿಣಿಯಂತೆ ಕಂಗೊಳಿಸುತ್ತದೆ. ವರ್ಷದಿಂದ ವರ್ಷಕ್ಕೂ ಇದರ ಮಹತ್ವ, ಜನಾಕರ್ಷಣೆ ಹೆಚ್ಚುತ್ತಲೇ ಇದೆ. ಪಾರಂಪರಿಕ ಕಟ್ಟಡ, ವೃತ್ತ,ರಸ್ತೆಗಳಲ್ಲಿ ಅಳವಡಿಸುವ ದೀಪದ ಬಗೆಯಿಂದ ಇದು ಆಕರ್ಷಣೀಯ. ಈ ಬಾರಿ ಇನ್ನಷ್ಟು ವಿಭಿನ್ನವಾಗಿ ದೀಪಾಲಂಕಾರ ಆಯೋಜಿಸುವ ಚಟುವಟಿಕೆಗಳು ಶುರುವಾಗಿವೆ. ಚೀನಾದಲ್ಲಿ ದೀಪಾಲಂಕಾರಕ್ಕೆ ಬಳಸುವ ತಂತ್ರಜ್ಞಾನಗಳನ್ನು ಮೈಸೂರು ದಸರಾ ದೀಪಾಲಂಕರಾದಲ್ಲೂ ಹೇಗೆ …

Read More »

ಕರ್ನಾಟಕದ ಅತೀ ಎತ್ತರದ ಗಣೇಶ: ಹುಬ್ಬಳ್ಳಿ ಕಾ ಮಹಾರಾಜ್

ಹುಬ್ಬಳ್ಳಿ: ಕರ್ನಾಟಕದಲ್ಲಿಯೇ ಹುಬ್ಬಳ್ಳಿಯ ಗಣೇಶೋತ್ಸವವು ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿದ್ದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ದಾಜೀಬಾನಪೇಟ,‌ ಮರಾಠಾಗಲ್ಲಿಯಲ್ಲಿ 21 ಅಡಿಗೂ ಎತ್ತರವಾದ ಗಣೇಶ ವಿಗ್ರಹವನ್ನು ಇರಿಸಲಾಗುತ್ತದೆ. ಇದು 25 ಅಡಿ ಎತ್ತರವಿದ್ದು , ಸುಮಾರು 5ಟನ್ ಗೂ ಅಧಿಕ ತೂಕ ಹೊಂದಿದೆ. ಕರ್ನಾಟಕದಲ್ಲಿಯೇ ಅತಿ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಳೆದ 42 ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಇಲ್ಲಿ ಚಿಕ್ಕದಾದ ಮೂರ್ತಿಗಳನ್ನು …

Read More »

ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆ ರದ್ದುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಅಂತರರಾಷ್ಟ್ರೀಯ ಕೊರತೆಯ ಲಾಭವನ್ನ ಭಾರತೀಯ ರೈತರಿಗೆ ವರ್ಗಾಯಿಸಲು ಈರುಳ್ಳಿ ರಫ್ತಿಗೆ ಈ ಹಿಂದೆ ನಿಗದಿಪಡಿಸಿದ್ದ ಕನಿಷ್ಠ ಬೆಲೆ ಮಿತಿಯನ್ನ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ. ಸರ್ಕಾರವು ಈ ಹಿಂದೆ ಪ್ರತಿ ಟನ್ ಗೆ 550 ಡಾಲರ್ ಕನಿಷ್ಠ ರಫ್ತು ಬೆಲೆ ನಿಗದಿಪಡಿಸಿತ್ತು, ಇದರರ್ಥ ರೈತರು ತಮ್ಮ ಉತ್ಪನ್ನಗಳನ್ನು ಈ ದರಕ್ಕಿಂತ ಕಡಿಮೆ ಬೆಲೆಗೆ ವಿದೇಶದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಶುಕ್ರವಾರ ಹೊರಡಿಸಿದ ಡಿಜಿಎಫ್ಟಿ ಅಧಿಸೂಚನೆಯು ಎಂಇಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ …

Read More »

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಎಂಟಿಸಿಗೆ ಸೇರ್ಪಡೆಯಾದ 100 ನೂತನ ಬಿಎಸ್‌-6 ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಬಡವ ಮತ್ತು ಶ್ರೀಮಂತರ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ತಂದಿದೆ. ಶಕ್ತಿ ಯೋಜನೆ ಕಾರ್ಯಗತದ ನಂತರ ಸರ್ಕಾರಿ ಬಸ್‌ನಲ್ಲಿ ಓಡಾಡುವರ ಸಂಖ್ಯೆ ಹೆಚ್ಚಾಗಿದೆ. …

Read More »

ರಾಜ್ಯದಲ್ಲಿ ಸೋಲಾರ್ ಬೀದಿದೀಪ ಅಳವಡಿಸುವ ಹೊಂಬೆಳಕು ಯೋಜನೆ ಜಾರಿಗೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್‌ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸುವ ಹೊಂಬೆಳಕು ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 …

Read More »