Shaikh BigTv
September 11, 2024
Breaking News, ಧಾರವಾಡ
ಧಾರವಾಡ: ನಗರದ ವಿವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ಜನರ ಸಮಸ್ಯೆಗಳನ್ನು ಸಚಿವ ಸಂತೋಷ ಲಾಡ್ ಆಲಿಸಿದರು. ಅದರಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ, ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಕೂಡಲೇ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಸಹ ನೀಡಿದರು. ಜನರಿಗೆ ಸಮಸ್ಯೆ ನಿವಾರಣೆಗೆ ಏನು ಪ್ರಯತ್ನ ಮಾಡಬೇಕು. ಅದನ್ನು ಕಾನೂನು ಅನ್ವಯ ಮಾಡಲಾಗುವುದು ಎಂದು ಧೈರ್ಯ ತುಂಬಿದರು.
Read More »
Shaikh BigTv
September 11, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಟೋಲ್ ಡಿವೈಡರ್ ಗೆ ಕಾರು ಡಿಕ್ಕಿ ಮಗು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನೆಲವಡಿ ಟೋಲ್ ಬಳಿ ಘಟನೆ ನಡೆದಿದೆ. ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಟೋಲ್ ಹತ್ತಿರ ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡ ಕಾರು, ಟೋಲ್ ನ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಹುಬ್ಬಳ್ಳಿಯಿಂದ ಮುಂಡರಗಿ ಗೆ ಹೊರಟಿದ್ದ ಕಾರು. …
Read More »
BigTv News
September 11, 2024
Breaking News, ಬಾಗಲಕೋಟೆ
ಬಾಗಲಕೋಟೆ: ಅದು ಪಕ್ಕಾ ಕನ್ನಡ ನೆಲ, ಅದರಲ್ಲೂ ಜವಾರಿ ನಾಡು ಉತ್ತರ ಕರ್ನಾಟಕ. ಇಂತಹ ನಾಡಲ್ಲಿ ಕೇರಳ ಕುಟ್ಟಿಗಳು ಒಂದೇ ಸಮನೆ ಹೆಜ್ಜೆ ಹಾಕುತ್ತಿದ್ದರು. ಚಂಡೆ ಮದ್ದಳೆ ಸದ್ದಿಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು. ಉತ್ತರ ಕರ್ನಾಟಕದಲ್ಲಿ ಕೇರಳ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದರು. ಹುರುಪಿನಿಂದ ಚಂಡೆ ಬಾರಿಸುತ್ತಿರುವ ಕಲಾವಿದರು ಚಂಡೆ ಮದ್ದಳೆ ಸದ್ದಿಗೆ ಯುವತಿಯರ ಭರ್ಜರಿ ಕುಣಿತ. ಕೇರಳ ಸಾಂಪ್ರದಾಯಿಕ ಉಡುಗೆಯಲ್ಲಿ ಕಲರ್ ಪುಲ್ ಸಂಭ್ರಮ. ಈ ದೃಶ್ಯ …
Read More »
BigTv News
September 11, 2024
Breaking News
ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕೇಂದ್ರದ ನಿರ್ದೇಶನದಂತೆ ಅಸ್ಸಾಂ ರೈಫಲ್ಸ್ ಘಟಕಗಳ ಜಾಗಕ್ಕೆ ತಲಾ 1,000 ಸಿಬ್ಬಂದಿಯನ್ನೊಳಗೊಂಡ ಸಿ ಆರ್ ಪಿ ಎಫ್ ಎರಡು ಹೊಸ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ. ತೆಲಂಗಾಣದ ವಾರಂಗಲ್‌ನಿಂದ ಬೆಟಾಲಿಯನ್ ಸಂಖ್ಯೆ 58 ಮತ್ತು ಜಾರ್ಖಂಡ್‌ನ ಲತೇಹರ್‌ನಿಂದ ಬೆಟಾಲಿಯನ್ ಸಂಖ್ಯೆ 112 ಅನ್ನು ಸ್ಥಳಾಂತರಿಸಲಾಗುತ್ತದೆ. ಮೊದಲ ಘಟಕವು ಮಣಿಪುರದ ಕಾಂಗ್ವೈ (ಚುರಾಚಂದಪುರ) ದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ ಮತ್ತು ಎರಡನೇ ಘಟಕವು ಇಂಫಾಲ್ ಸುತ್ತಲೂ …
Read More »
BigTv News
September 11, 2024
Breaking News, ಕಲಬುರಗಿ
ಕಲಬುರಗಿ: ರೈತರು, ರೈತ ಸಂಘಟನೆಗಳ ಒತ್ತಾಯದ ಬಳಿಕ ಹೆಸರು ಕಾಳು ಖರೀದಿಗೆ ಸರ್ಕಾರ ಮುಂದಾಗಿದೆ. ಆದರೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವಿಧಿಸಿರುವ ನಿಯಮದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಮಾರಾಟ ನೋಂದಣಿ ಮಾಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾವಿರಾರು ರೈತರು ತಾವು ಬೆಳೆದ ಹೆಸರು ಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡುವ ಬದಲು ಅಗ್ಗದ ಬೆಲೆಗೆ ಅಡತಿ ಅಂಗಡಿಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 55,444 …
Read More »
BigTv News
September 11, 2024
Breaking News, ಬೆಂಗಳೂರು
ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ನಾಗಾವಿ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಅದರಂತೆ ಸ್ಮಾರಕಗಳನ್ನು ಉಳಿಸಿಕೊಂಡು ಸುಂದರ ಪ್ರವಾಸಿ ತಾಣವಾಗಿ ರೂಪಿಸಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು. ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕಾರ್ಯಯೋಜನೆ ಪರಿಶೀಲಿಸಿದ ಅವರು, ನಾಗಾವಿಯಲ್ಲಿ 10-13 ಶತಮಾನಗಳ ನಡುವೆ ಘಟಿಕಾಸ್ಥಾನವಿದ್ದು 400ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಠ-ಪ್ರವಚನಗಳಲ್ಲಿ ನಿರತರಾಗಿದ್ದರು, ಅವರಿಗೆ ಉಳಿದುಕೊಳ್ಳಲು ವಸತಿ ನಿಲಯಗಳ ವ್ಯವಸ್ಥೆಯಿದ್ದು, …
Read More »
BigTv News
September 11, 2024
Breaking News, ಬೆಂಗಳೂರು
ಬೆಂಗಳೂರು: ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಚರ್ಚೆ ನಡೆಸಿದ ಸಿಎಂ, ರೈತರ ಬೇಡಿಕೆಗಳನ್ನು ಪರಿಶೀಲಿಸಿ ಬಹು ಮುಖ್ಯವಾದ ಸಮಸ್ಯೆಗಳಿಗೆ ಶೀಘ್ರ …
Read More »
Shaikh BigTv
September 11, 2024
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಸಂಚರಿಸುವ ಮೊದಲು ವಿಚಾರಿಸಿ ಮುಂದೆ ಸಾಗಿ!!! ಆರಕ್ಷಕನ ಹೆಲ್ಮೆಟ್ ಒಡೆದು ಮೆದಳಿಗೆ ಪೆಟ್ಟು!! ಕ್ರೇನ್ ಆಪರೇಟರ್ ಎಸ್ಕೇಪ್… ಸ್ಮಾರ್ಟ್ ಸಿಟಿಗೆ ಇನ್ನೇಷ್ಟು ಬಲಿ ಬೇಕು..??
Read More »
BigTv News
September 10, 2024
Breaking News, ಬೆಂಗಳೂರು
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗಳ ಮೊದಲ ಹಂತದ ಕಾಮಗಾರಿ 2026 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಮಾಹಿತಿ ನೀಡಿದರು. ಉಪನಗರ ರೈಲ್ವೆ ಯೋಜನೆ ಮತ್ತು ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (25 ಕಿ.ಮೀ- ಕಾರಿಡಾರ್-2 ) …
Read More »
BigTv News
September 10, 2024
Breaking News, ಬೀದರ್
ಬೀದರ್: ಕಾಮಗಾರಿಯ ಬಿಲ್ ಗಾಗಿ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದ ಘಟನೆ ಸೆ.10ರ ಮಂಗಳವಾರ ನಡೆದಿದೆ. ತಾಲೂಕಿನ ಕೋಸಂ ಗ್ರಾ.ಪಂ. ಪಿಡಿಒ ರಾಹುಲ್ ದಂಡೆ ಹಾಗೂ ತಾ.ಪಂ. ತಾಂತ್ರಿಕ ಸಹಾಯಕ (ನರೇಗಾ) ಸಿದ್ರಾಮೇಶ್ವರ ಬಂಧಿತರು. ಕೋಸಂ ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರ ಸುನೀಲ ಸಕಾರಾಮ ಪಡೆದಿದ್ದರು. ಅನ್ಯ ಕೆಲಸದಲ್ಲಿ ನಿರತರಾಗಿದ್ದರಿಂದ ಸುನೀಲ ಸೂಚನೆ ಮೇರೆಗೆ 15 ಕಾಮಗಾರಿಗಳನ್ನು ಗುತ್ತಿಗೆದಾರ ಅರವಿಂದ ಮಾಧವರಾವ …
Read More »