Breaking News

Breaking News

ಲೈಂಗಿಕ ಕಿರುಕುಳ ಪ್ರಕರಣಗಳ ವಿರುದ್ಧ ಸಮಿತಿ ರಚಿಸಲು ಸಿಎಂ ಗೆ ಮನವಿ ಸಲ್ಲಿಸಿದ ಫೈರ್ ಸಂಸ್ಥೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿದ್ದು, ಚಿತ್ರರಂಗದ ಮಹಿಳೆಯರ ರಕ್ಷಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಟ ಚೇತನ್ ನೇತೃತ್ವದಲ್ಲಿ ಫೈರ್ ಸಂಸ್ಥೆಯ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇರಳದಲ್ಲಿ ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸುವಂತೆ ಮನವಿ ಮಾಡಿದರು. 150ಕ್ಕೂ ಹೆಚ್ಚು ನಟ ನಟಿಯರು, ತಂತ್ರಜ್ಞರು, ನಿರ್ದೇಶಕರು, ಸಾಹಿತಿಗಳ …

Read More »

ಉತ್ತರ ಜಾರ್ಜಿಯಾ: ಗುಂಡಿನ ದಾಳಿಗೆ ನಾಲ್ವರು ಬಲಿ

ವಾಷಿಂಗ್ಟನ್: ಉತ್ತರ ಜಾರ್ಜಿಯಾದ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ, ಒಂಬತ್ತು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಶಂಕಿತನನ್ನು 14 ವರ್ಷದ ಕೋಲ್ಟ್ ಗ್ರೇ ಎಂದು ಗುರುತಿಸಲಾಗಿದೆ. ಬಲಿಯಾದವರನ್ನು ಮೇಸನ್ ಶೆರ್ಮರ್‌ಹಾರ್ನ್ (14), ಕ್ರಿಶ್ಚಿಯನ್ ಅಂಗುಲೋ (14), ಮತ್ತು ಶಿಕ್ಷಕರಾದ ರಿಚರ್ಡ್ ಆಸ್ಪಿನ್‌ವಾಲ್ (39), ಮತ್ತು ಕ್ರಿಸ್ಟಿನಾ ಇರಿಮಿ (53), ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಎಲ್ಲಾ ಒಂಬತ್ತು ಜನರಿಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆಪಾದಿತ …

Read More »

ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಜಿಲ್ಲೆಯ 55 ಕೀ.ಮಿ ಉದ್ದದ ಮಾನವ ಸರಪಳಿ ನಿರ್ಮಾಣ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದರಂತೆ ರಾಜ್ಯ ಸರಕಾರವು ಅತ್ಯಂತ ವಿಶಿಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲು ನಿರ್ದೇಶಿಸಿದ್ದು, ಅಂದು ಬೀದರ್‍ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ತೇಗೂರ ಗ್ರಾಮದಿಂದ ಮಾವಿನಕೋಪ್ಪ ಗ್ರಾಮವರೆಗೆ ಸುಮಾರು 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ …

Read More »

ಹುಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸಭೆ

ಹುಬ್ಬಳ್ಳಿ: ರೇಣುಕಾ ನಗರದ ಬಾಲಮಾರುತಿ ದೇವಸ್ಥಾನದಲ್ಲಿ ಇಂದು ಮೇಯತ್ ರಾಮಣಗಣ ಬಡಗೇರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನವನ್ನು ಭೂತ್ ಮಟ್ಟದಲ್ಲಿ ಪ್ರಾರಂಭಿಸಲು ಸಭೆ ನಡೆಸಿದರು. ಈ ವೇಳೆಯಲ್ಲಿ ಸದಸ್ಯತಾ ಅಭಿಯಾನದ ಮಂಡಲ ಸಂಚಾಲಕರು ಹನುಮಂತ. ಹರಿವಾಣ ಅಶೋಕ ವಾಲೀಕಾರ ವಾರ್ಡ್ ಅಧ್ಯಕ್ಷರು ರಾಚಯ್ಯ. ಮಠಪತಿ ಹಾಗೂ ಭೂತ್‌ ಅಧ್ಯಕ್ಷರುಗಳು ಹಾಗೂ ಸದಸ್ಯರು ಇದ್ದರು.

Read More »

ಸೆ.30 ರವರೆಗೆ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ಅಭಿಯಾನ

ಧಾರವಾಡ:: ಸೆಪ್ಟೆಂಬರ್ 30 ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿಂದ ರಾಷ್ಟ್ರವ್ಯಾಪಿ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸದಸ್ಯರಾದ ಸಾಜಿದುನಿಯಾ ಲಾಲಮಿಯಾ ಹೇಳಿದರು. ಧಾರವಾಡ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಕಾಲೀನ ಸಮಾಜದಲ್ಲಿ ಹಲವಾರು ಸವಾಲುಗಳು ನೈತಿಕತೆ ಮತ್ತು ಸ್ವಾತಂತ್ರ್ಯದ ನಡುವಿನ ಸಾಮರಸ್ಯಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ ಎಂದರು.

Read More »

ಚಿನ್ನಾಭರಣ ಅಂಗಡಿ ಕಳ್ಳತನ : 5ಜನ ಬಂಧನ, 77 ಲಕ್ಷ ರೂ ಮೌಲ್ಯದ ಆಭರಣ ವಶ

ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಅಂಗಡಿ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 77 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ರಮೇಶ ಮುಂಭಾಗದಲ್ಲಿರುವ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಳ್ಳತನವಾಗಿರುವ ಚಿನ್ನಾಭರಣಗಳಲ್ಲಿ 780 ಗ್ರಾಂ ಚಿನ್ನ, 23.3 ಕೆಜಿ ಮೌಲ್ಯದ ಬೆಳ್ಳಿ ಆಭರಣ, ಕಳ್ಳತನ ಕೃತ್ಯಕ್ಕೆ …

Read More »

ಇಡಗುಂಜಿ ಗಣೇಶ ನಂತರ ಪ್ರಖ್ಯಾತಿ ಪಡೆದ ನವಲಗುಂದ ಗಣೇಶ ಗುಡಿ

ನವಲಗುಂದ: ನವಲಗುಂದ ನಗರದ ಗಣೇಶ ಗುಡಿ ಕರಾವಳಿ ಪ್ರದೇಶದಲ್ಲಿ ಇಡಗುಂಜಿ ಗಣೇಶ ಪ್ರಖ್ಯಾತಿ ಪಡೆದರೆ ನಂತರದ ಸ್ಥಾನ ಪಡೆದು ರಾಜ್ಯದಲ್ಲೇ ಪ್ರಖ್ಯಾತಿ ಹೊಂದಿದೆ. ಇಲ್ಲಿ ಇದೀಗ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಇಡೀ ರಾಜ್ಯದಲ್ಲೇ ಗಮನ ಸೆಳೆದ ನವಲಗುಂದ-ನರಗುಂದ ಬಂಡಾಯ ನೆಲದಲ್ಲಿ ಒಂದು ವಿಶಿಷ್ಟವಾದ ಚರಿತ್ರೆ ಇದೆ. ಅಜಾತ ನಾಗಲಿಂಗ ಸ್ವಾಮೀಜಿ ಅವರ ಪವಾಡ, ಗವಿಮಠದ ಶ್ರೀ ಬಸಲಿಂಗ ಸ್ವಾಮೀಜಿ ಅದೃಶ್ಯ – ಚರಿತ್ರೆ, ಯಮನೂರಿನ ರಾಜಾಭಾಗಸವಾರ ಹಾಗೂ ಬೇಡಿದ …

Read More »

ನಿವೃತ್ತ ನೌಕರರ ಸೆ.18 ಕ್ಕೆ ಬೆಂಗಳೂರು ಛೆಲೋ ಹೋರಾಟ

ಹುಬ್ವಳ್ಳಿ: ರಾಜ್ಯ ಸರ್ಕಾರ ನಿವೃತ್ತ ನೌಕರರಿಗೆ ಸರ್ಕಾರದಿಂದ ತಾರತಮ್ಯ ಮಾಡಿದೆಂದು ಹೋರಾಟ ಮಾಡುಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 7 ನೇ ವೇತನ ಆಯೋಗವನ್ನು ಹೊರಡಿಸಿದೆ. ಆದ್ರೆ ಪರಿಷ್ಕರಣೆಯಂತೆಯೇ ನೀಡಬೇಕಿದ್ದ ಆರ್ಥಿಕ ಸೌಲಭ್ಯದಲ್ಲಿ ತಾರತಮ್ಯ ಮಾಡಿದೆ. ಇದೇ 18 ರಂದು ಬೆಂಗಳೂರು ಛೆಲೋ ಹೋರಾಟ ಮಾಡಲು ಮುಂದಾಗಿದ್ದಾರೆ. 7 ನೇ ವೇತನ ಆಯೋಗದಂತೆ ನಿವೃತ್ತಿ ವೇತನ ಪಡೆಯಬೇಕಿದ್ದ ನಿವೃತ್ತಿ ಶಿಕ್ಷಕರು, ಆದ್ರೆ ಇವರು ಇನ್ನೂ 6 ನೇ ವೇತನ ಆಯೋಗದ …

Read More »

ಅನ್ನಭಾಗ್ಯ ಯೋಜನೆ: ಹಣದ ಬದಲು ಆಹಾರ ಕಿಟ್‌ ವಿತರಿಸಲು ಚಿಂತನೆ

ಬೆಂಗಳೂರು: ಪಡಿತರದಾರರಿಗೆ ಹೆಚ್ಚುವರಿ 5kg ಅಕ್ಕಿಗೆ ಪರ್ಯಾಯವಾಗಿ ನೇರ ನಗದು ವರ್ಗಾವಣೆ ವ್ಯವಸ್ಥೆ ಬದಲು ಆಹಾರ ಕಿಟ್‌ ನೀಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರವಾಗುವ ಸಾಧ್ಯತೆಯಿದೆ. ಅನ್ನಭಾಗ್ಯ ಯೋಜನೆಯಡಿ 10 kg ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದರೆ ಮೊದಲಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆಗೆ ಒಪ್ಪಿಗೆ ನೀಡದ ಕಾರಣ ಕಾರ್ಡ್‌ದಾರರಿಗೆ ಹೆಚ್ಚುವರಿ ಅಕ್ಕಿ ಬೆಲೆಯಷ್ಟು ಹಣ ನೀಡಲಾಗುತ್ತಿತ್ತು. …

Read More »

ಹೆಣ್ಣು ಭ್ರೂಣ ಹತ್ಯೆ ಪ್ರಕರಣ:12 ಆರೋಪಿಗಳು ಬಂಧನ

ಮಂಡ್ಯ: ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್​ ಎಂಬಾತನನ್ನು ಬಂಧಿಸಲಾಗಿದೆ. ಸಾವಿರಾರು ಕರುಳಬಳ್ಳಿ ಕೊಂದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಐಡಿಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಅಭಿಷೇಕ್​ ಪ್ರಮುಖ ಆರೋಪಿಯಾಗಿದ್ದಾನೆ. ಅಭಿಷೇಕ್ ಜೊತೆ ವಿರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದ್ದು ಈಗಾಗಲೇ ಭ್ರೂಣ ಹತ್ಯೆ ಕೇಸ್ ​ನಲ್ಲಿ ವಿರೇಶ್​ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್, …

Read More »